ಕೆಪಿಎಸ್ ವಿದ್ಯಾರ್ಥಿಗಳ ತಂಡ 
ರಾಜ್ಯ

ಮಡಿಕೇರಿ: ದೈಹಿಕ ಶಿಕ್ಷಕರಿಲ್ಲದಿದ್ದರೂ ರಾಷ್ಟ್ರೀಯ ಫುಟ್ಬಾಲ್ ಚಾಂಪಿಯನ್‌ಶಿಪ್‌ಗೆ ಅರ್ಹತೆ ಪಡೆದ KPS ವಿದ್ಯಾರ್ಥಿಗಳು

ಕೆಪಿಎಸ್ ನ ಒಟ್ಟು ಏಳು ವಿದ್ಯಾರ್ಥಿಗಳು ರಾಜ್ಯವನ್ನು ಪ್ರತಿನಿಧಿಸಲಿದ್ದಾರೆ ಮತ್ತು ಶೀಘ್ರದಲ್ಲೇ ಮಹಾರಾಷ್ಟ್ರದಲ್ಲಿ ರಾಷ್ಟ್ರೀಯ ಪಂದ್ಯಗಳನ್ನು ಆಡಲಿದ್ದಾರೆ.

ಮಡಿಕೇರಿ: ದೈಹಿಕ ತರಬೇತುದಾರರು ಇಲ್ಲದಿದ್ದರೂ ನೆಲ್ಲಿಹುದಿಕೇರಿಯ ಕರ್ನಾಟಕ ಪಬ್ಲಿಕ್ ಶಾಲೆಯ ವಿದ್ಯಾರ್ಥಿಗಳು 14 ವರ್ಷದೊಳಗಿನವರ ಫುಟ್ಬಾಲ್ ತಂಡದಲ್ಲಿ ಸ್ಥಾನ ಗಳಿಸಿದ್ದಾರೆ. ಕೆಪಿಎಸ್ ನ ಒಟ್ಟು ಏಳು ವಿದ್ಯಾರ್ಥಿಗಳು ರಾಜ್ಯವನ್ನು ಪ್ರತಿನಿಧಿಸಲಿದ್ದಾರೆ ಮತ್ತು ಶೀಘ್ರದಲ್ಲೇ ಮಹಾರಾಷ್ಟ್ರದಲ್ಲಿ ರಾಷ್ಟ್ರೀಯ ಪಂದ್ಯಗಳನ್ನು ಆಡಲಿದ್ದಾರೆ.

ಹಿಂದೆ ಇದ್ದ ದೈಹಿಕ ತರಬೇತುದಾರರು ಎರಡು ವರ್ಷಗಳ ಹಿಂದೆ ವರ್ಗಾವಣೆಯಾದರು, ಅವರ ವರ್ಗಾವಣೆ ನಂತ ಹುದ್ದೆ ಭರ್ತಿಯಾಗದೆ ಉಳಿದಿದೆ. ಹೀಗಿದ್ದರೂ ಕೆಪಿಎಸ್ ನೆಲ್ಲಿಹುದಿಕೇರಿ ಶಾಲೆಯಲ್ಲಿ 14 ವರ್ಷದೊಳಗಿನವರ ಫುಟ್ ಬಾಲ್ ತಂಡ ಪ್ರತಿನಿತ್ಯ ಅಭ್ಯಾಸ ಮಾಡುತ್ತಿತ್ತ ಎಂದು ಮೂಲಗಳು ತಿಳಿಸಿವೆ. ಕ್ಯಾಪ್ಟನ್ ಮೊಹಮ್ಮದ್ ಶಿಹಾಲ್ ನೇತೃತ್ವದ 11 ವಿದ್ಯಾರ್ಥಿಗಳ ತಂಡವು ಆರ್ಥಿಕವಾಗಿ ದುರ್ಬಲವಾಗಿರುವ ಕುಟುಂಬದಿಂದ ಬಂದಿದೆ. ಆದಾಗ್ಯೂ, ಪಟ್ಟುಬಿಡದ ಅಭ್ಯಾಸದಿಂದ ಅವರಿಗೆ ಉತ್ತಮ ಅವಕಾಶ ತಂದಕೊಟ್ಟಿದೆ. ಈ ತಂಡದಿಂದ ಏಳು ಮಂದಿ ಈಗ ರಾಷ್ಟ್ರೀಯ ಪಂದ್ಯಗಳನ್ನು ಆಡಲಿದ್ದಾರೆ.

ನಮ್ಮ ಶಾಲೆಯ ತಂಡವು ವಲಯ, ತಾಲೂಕು, ಜಿಲ್ಲೆ ಮತ್ತು ಪ್ರಾದೇಶಿಕ ಮಟ್ಟದಲ್ಲಿ ಅರ್ಹತೆ ಪಡೆದಿದೆ. ಕಲ್ಬುರ್ಗಿ, ಬೆಳಗಾವಿ, ದಕ್ಷಿಣ ಕನ್ನಡ ಮತ್ತು ಇತರ ತಂಡಗಳ ವಿರುದ್ಧ ಜಯಗಳಿಸಿದ ಅವರ ಆಟವು ಗಮನಾರ್ಹವಾಗಿತ್ತು ಎಂದು ಸಂಸ್ಥೆ ಶಿಕ್ಷಕರಾಗಿರುವ ಆದರೆ ಚಾಂಪಿಯನ್‌ಶಿಪ್‌ನಲ್ಲಿ ತಂಡದ ವ್ಯವಸ್ಥಾಪಕರಾಗಿರುವ ಶಶಿಕುಮಾರ್ ವಿವರಿಸಿದರು. ರಾಜ್ಯಮಟ್ಟದಲ್ಲಿ ಕೆಪಿಎಸ್ ನೆಲ್ಲಿಹುದಿಕೇರಿ ತಂಡ ಬೆಂಗಳೂರು ವಿರುದ್ಧ ಸೋಲನುಭವಿಸಿತು. ಆದರೆ, ಕೆಪಿಎಸ್ ನೆಲ್ಲಿಹುದಿಕೇರಿ ಪ್ರಥಮ ರನ್ನರ್ ಅಪ್ ಆಗಿದ್ದು, ತಂಡದಿಂದ ಒಟ್ಟು ಏಳು ವಿದ್ಯಾರ್ಥಿಗಳು ರಾಜ್ಯ ತಂಡವನ್ನು ಸೇರಿ ಮಹಾರಾಷ್ಟ್ರದಲ್ಲಿ ನಡೆಯಲಿರುವ ಸ್ಕೂಲ್ ಗೇಮ್ಸ್ ಫೆಡರೇಷನ್ ಆಫ್ ಇಂಡಿಯಾ ರಾಷ್ಟ್ರೀಯ ಫುಟ್ ಬಾಲ್ ಚಾಂಪಿಯನ್ ಷಿಪ್ ನಲ್ಲಿ ಕರ್ನಾಟಕವನ್ನು ಪ್ರತಿನಿಧಿಸಲಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಅಮೆರಿಕ ನಿಯೋಜಿತ ರಾಯಭಾರಿ ಸೆರ್ಗಿಯೊ ಗೋರ್- ಮೋದಿ, ಜೈಶಂಕರ್ ಭೇಟಿ; Tariff ಒತ್ತಡದ ನಡುವೆ ಭಾರತ-ಅಮೆರಿಕ ಸಂಬಂಧ ಸುಧಾರಣೆಯ ಸೂಚನೆ?

ಅಫ್ಘಾನಿಸ್ತಾನ ನಮ್ಮೊಂದಿಗೆ ಗಡಿ ಹಂಚಿಕೊಂಡಿರುವ ನೆರೆ ರಾಷ್ಟ್ರ- S Jaishankar; ಭಾರತದೊಂದಿಗೆ POK ವಿಲೀನದ ಸುಳಿವು; ಚೀನಾಗೂ ಶಾಕ್!

ಅಬ್ಬಬ್ಬಾ ರೋಮಾಂಚನ: ಅದ್ಭುತ ಸೃಷ್ಟಿಸಿದ ರಿಷಬ್ ಶೆಟ್ಟಿಗೆ ರಾಷ್ಟ್ರಪ್ರಶಸ್ತಿ ಕೊಡಲೇಬೇಕು - ತಮಿಳು ನಿರ್ದೇಶಕ ಅಟ್ಲೀ

Pakistan: ಇಸ್ರೇಲ್ ವಿರೋಧಿ ಪ್ರತಿಭಟನಾ ಜಾಥಾ, ಪೋಲೀಸರ ಗುಂಡೇಟಿಗೆ 11 ಮಂದಿ ಬಲಿ! Video

ಉತ್ತರ ಪ್ರದೇಶಕ್ಕೆ ಭೇಟಿ ನೀಡಿದ ತಾಲಿಬಾನ್ ಸಚಿವನಿಗೆ ಅದ್ಧೂರಿ ಸ್ವಾಗತ, ಸರ್ಕಾರದ ಭದ್ರತೆ; ಯೋಗಿಗೆ ನಾಚಿಕೆಯಾಗಬೇಕು- SP ಸಂಸದ ಶಫೀಕರ್

SCROLL FOR NEXT