ಸಿಎಂ ಸಿದ್ದರಾಮಯ್ಯ TNIE Photo: Nagaraja Gadekal
ರಾಜ್ಯ

MUDA Case ತನಿಖೆ ಎದುರಿಸಲು ಸಿದ್ಧ: ವಿಶೇಷ ಕೋರ್ಟ್ ಆದೇಶದ ಬೆನ್ನಲ್ಲೇ ಸಿಎಂ ಸಿದ್ದರಾಮಯ್ಯ ಮೊದಲ ಪ್ರತಿಕ್ರಿಯೆ!

ಮುಡಾ ಹಗರಣ ಸಂಬಂಧ ಹೈಕೋರ್ಟ್​​ನಲ್ಲಿ ಸಿದ್ದರಾಮಯ್ಯ ಅರ್ಜಿ ವಜಾಗೊಂಡ ಬೆನ್ನಲ್ಲೇ ಇತ್ತ ಜನಪ್ರತಿನಿಧಿಗಳ ವಿಶೇಷ ಕೋರ್ಟ್​ನಲ್ಲೂ ಸಹ ಸಿಎಂಗೆ ಹಿನ್ನೆಡೆಯಾಗಿದೆ.

ಬೆಂಗಳೂರು: ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ಜನಪ್ರತಿನಿಧಿಗಳ ಕೋರ್ಟ್ ಸಿಎಂ ಸಿದ್ದರಾಮಯ್ಯ ವಿರುದ್ಧ ಲೋಕಾಯುಕ್ತ ತನಿಖೆಗೆ ಆದೇಶ ಹೊರಡಿಸಿದ ಬೆನ್ನಲ್ಲೇ ತಾವು ತನಿಖೆಗೆ ಸಿದ್ಧ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.

ಮುಡಾ ಹಗರಣ ಸಂಬಂಧ ಹೈಕೋರ್ಟ್​​ನಲ್ಲಿ ಸಿದ್ದರಾಮಯ್ಯ ಅರ್ಜಿ ವಜಾಗೊಂಡ ಬೆನ್ನಲ್ಲೇ ಇತ್ತ ಜನಪ್ರತಿನಿಧಿಗಳ ವಿಶೇಷ ಕೋರ್ಟ್​ನಲ್ಲೂ ಸಹ ಸಿಎಂಗೆ ಹಿನ್ನೆಡೆಯಾಗಿದೆ.

ಹೈಕೋರ್ಟ್​ ಆದೇಶವನ್ನು ಉಲ್ಲೇಖಿಸಿ ಜನಪ್ರತಿನಿಧಿಗಳ ಕೋರ್ಟ್​, ಸಿಎಂ ಸಿದ್ದರಾಮಯ್ಯ ವಿರುದ್ಧ ಲೋಕಾಯುಕ್ತ ತನಿಖೆಗೆ ಆದೇಶಿಸಿದೆ. ಈ ಬಗ್ಗೆ ಸಿಎಂ ಮೊದಲ ಪ್ರತಿಕ್ರಿಯೆ ನೀಡಿದ್ದಾರೆ.

'ನಿನ್ನೆ ಹೈಕೋರ್ಟ್ 17ಎ ಅನ್ವಯ ತನಿಖೆ ನಡೆಸುವಂತೆ ಆದೇಶಿಸಿತ್ತು. ಹೈಕೋರ್ಟ್​ ಆದೇಶ ಮೇಳೆ ಜನಪ್ರತಿನಿಧಿಗಳ ಕೋರ್ಟ್​ ತೀರ್ಪು ನೀಡಿದೆ/ ಕೋರ್ಟ್​ ತೀರ್ಪಿನ ಪ್ರತಿ ಸಿಕ್ಕಿದ ಬಳಿಕ ಪ್ರತಿಕ್ರಿಯೆ ನೀಡುತ್ತೇನೆ. ತನಿಖೆ ಎದುರಿಸಲು ನಾವು ತಯಾರಿದ್ದೇವೆ' ಎಂದು ಹೇಳಿದ್ದಾರೆ.

'ಕೋರ್ಟ್​ ತೀರ್ಪಿನ ಪ್ರತಿ ಸಿಕ್ಕಿದ ಬಳಿಕ ಪ್ರತಿಕ್ರಿಯೆ ನೀಡುತ್ತೇನೆ. ತನಿಖೆ ಎದುರಿಸಲು ನಾವು ತಯಾರಿದ್ದೇವೆ ತನಿಖೆ ಮಾಡಲು ಮೈಸೂರು ಲೋಕಾಯುಕ್ತಗೆ ಕೋರ್ಟ್​ ಸೂಚನೆ. ಪೂರ್ಣ ಆದೇಶದ ಪ್ರತಿ ಸಿಕ್ಕಿದ ಬಳಿಕ ಮುಂದಿನ ತೀರ್ಮಾನ ಮಾಡುತ್ತೇವೆ. ನಾವು ಯಾವುದಕ್ಕೂ ಹೆದರಲ್ಲ, ತನಿಖೆಗೆ ನಾವು ತಯಾರಿದ್ದೇವೆ. ಆದ್ರೆ ಈಗ ಕೊಟ್ಟಿರುವ ಆದೇಶವನ್ನು ಇನ್ನೂ ಓದಿಲ್ಲ.

ಕೇರಳದಿಂದ ಬಂದ ಮೇಲೆ ಆದೇಶದಲ್ಲಿ ಏನಿದೆ ನೋಡುತ್ತೇನೆ. ಕೋರ್ಟ್​ ಆದೇಶ ಸಿಕ್ಕಿದ ಮೇಲೆ ವಕೀಲರ ಜತೆ ಚರ್ಚಿಸ್ತೇನೆ ಆ ನಂತರ ಸುಪ್ರೀಂಕೋರ್ಟ್​​ಗೆ ಮೇಲ್ಮನವಿ ಸಲ್ಲಿಸುತ್ತೇವೆ ಎಂದು ಸಿದ್ದರಾಮಯ್ಯ ಸ್ಪಷ್ಟಪಡಿಸಿದರು.

ತನಿಖೆಗೆ ನಾನು ಹೆದರುವುದಿಲ್ಲ. ದೂರುದಾರರು ಮೈಸೂರಿನವರು, ಹೀಗಾಗಿ ಅಲ್ಲೇ ತನಿಖೆ ಆಗುತ್ತೆ. ಆದೇಶ ಓದಿದ ನಂತರ ಸಂಪೂರ್ಣ ಪ್ರತಿಕ್ರಿಯೆ ನೀಡಬೇಕು. ಆದೇಶದ ಪ್ರತಿಯನ್ನು ಓದಿದ ಮೇಲೆ ಪ್ರತಿಕ್ರಿಯೆ ನೀಡುತ್ತೇನೆ ಎಂದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

'ನಮ್ಮ ಪಾತ್ರವಿಲ್ಲ': ಆಫ್ಘನ್ ಸಚಿವರ ಸುದ್ದಿಗೋಷ್ಠಿ ವೇಳೆ ಮಹಿಳಾ ಪತ್ರಕರ್ತೆಯರಿಗೆ ನಿರ್ಬಂಧ ಕುರಿತು 'ಕೇಂದ್ರ' ಸ್ಪಷ್ಟನೆ

ಬ್ಯಾಂಕ್‌ಗೆ ನಕಲಿ ಗ್ಯಾರಂಟಿ: ರಿಲಯನ್ಸ್‌ ಪವರ್‌ನ ಮುಖ್ಯ ಹಣಕಾಸು ಅಧಿಕಾರಿ ಅಶೋಕ್ ಪಾಲ್ ಬಂಧನ

2nd test, Day 2: 518 ರನ್ ಗಳಿಗೆ ಭಾರತ ಇನ್ನಿಂಗ್ಸ್ ಡಿಕ್ಲೇರ್!

CM ಆಗುವ ಕಾಲ ಹತ್ತಿರ ಬಂದಿದೆ ಎಂದು ನಾನು ಹೇಳಿಲ್ಲ: ಸುದ್ದಿ ತಿರುಚಿ ಪ್ರಸಾರ ಮಾಡಿದರೆ ಮಾನನಷ್ಟ ಮೊಕದ್ದಮೆ ಅನಿವಾರ್ಯ; ಡಿ ಕೆ ಶಿವಕುಮಾರ್

2nd test, Day 2: 2ನೇ ದಿನದಾಟದ ಆರಂಭದಲ್ಲೇ ಭಾರತಕ್ಕೆ ಆಘಾತ, ಭೋಜನ ವಿರಾಮದ ವೇಳೆಗೆ 427/4

SCROLL FOR NEXT