ತುಮಕೂರು: 27 ವರ್ಷಗಳ ಹಿಂದೆ ಪತ್ನಿಗೆ ಬೆಂಕಿ ಹಚ್ಚಿದ ಆರೋಪದ ಮೇಲೆ 70 ವರ್ಷದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ.
ನೊಣವಿನಕೆರೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿತ್ತು. 1997ರಿಂದ ನಿಂಗಪ್ಪ ತಲೆಮರೆಸಿಕೊಂಡಿದ್ದರು. ಸುದೀರ್ಘ ಬಾಕಿ ಉಳಿದಿರುವ ಪ್ರಕರಣಗಳನ್ನು ಪರಿಹರಿಸುವ ಭಾಗವಾಗಿ ಈ ಬಂಧನ ಮಾಡಲಾಗಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಮನೆಯ ವಿಚಾರವಾಗಿ ನಂಜಪ್ಪ ತನ್ನ ಪತ್ನಿಯ ಮೇಲೆ ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಿದ್ದನು. ಗಂಭೀರವಾಗಿ ಗಾಯಗೊಂಡಿದ್ದ ಮಹಿಳೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಬಹಳ ಕಾಲದಿಂದ ಪ್ರಕರಣ ಬಾಕಿ ಉಳಿದಿತ್ತು. ಈಗ ನಾವು ಆರೋಪಿಯನ್ನು ಹಿಡಿದಿದ್ದೇವೆ. ತನ್ನ ಮಗನ ಜೊತೆ ಸಂಪರ್ಕದಲ್ಲಿದ್ದ ನಿಂಗಣ್ಣ ಹಳ್ಳಿಗೆ ಹಿಂತಿರುಗಿದ್ದನು. ಆ ಸಂಪರ್ಕದ ಮೂಲಕ ನಾವು ಅವನನ್ನು ಹಿಡಿದಿದ್ದೇವೆ. ಇದು ಕೌಟುಂಬಿಕ ದೌರ್ಜನ್ಯ ಪ್ರಕರಣವಾಗಿತ್ತು. ಆಸ್ಪತ್ರೆ ದಾಖಲಾಗಿದ್ದ ಮಹಿಳೆ ಪತಿ ತನಗೆ ಥಳಿಸಿ ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಿದ್ದನು ಎಂದು ಮಹಿಳೆ ಸಾಯುವ ಮುನ್ನ ಹೇಳಿಕೆ ನೀಡಿದ್ದು ಎಂದು ತುಮಕೂರು ಪೊಲೀಸ್ ವರಿಷ್ಠಾಧಿಕಾರಿ ಅಶೋಕ್ ಕೆ ವಿ ತಿಳಿಸಿದ್ದಾರೆ.
ಸಾಯುವ ಮುನ್ನ ಕೊಡುವ ಹೇಳಿಕೆಗಳನ್ನು ನಿರಾಕರಿಸಲಾಗದು. ಅಂತಹ ಪ್ರಕರಣಗಳಲ್ಲಿ ಆರೋಪಿಯನ್ನು ಯಾರೂ ರಕ್ಷಿಸಲು ಸಾಧ್ಯವಿಲ್ಲ. ಆರಂಭದಲ್ಲಿ ಇದು ಕೊಲೆಗೆ ಯತ್ನದ ಪ್ರಕರಣವಾಗಿತ್ತು. ಆದರೆ ಸಾವನ್ನಪ್ಪಿದನ ನಂತರ ಕೊಲೆಯ ಪ್ರಕರಣವಾಗಿ ಪರಿವರ್ತಿಸಲಾಯಿತು ಎಂದು ಅವರು ಹೇಳಿದರು.