ಶಿವರಾಮ ಕಾರಂತ ಬಡಾವಣೆ 
ರಾಜ್ಯ

ಶಿವರಾಮ ಕಾರಂತ ಬಡಾವಣೆಗೆ ಅಭಿವೃದ್ಧಿ ಶುಲ್ಕ ನಿಗದಿಗೆ BDA ಮುಂದು

ಯಾವುದೇ ಪ್ರದೇಶದಲ್ಲಿ ಬಿಡಿಎ ಯೋಜನೆ ಕಾರ್ಯಗತಗೊಳಿಸಿದಾಗ ಸುತ್ತಮುತ್ತಲಿನ ಆಸ್ತಿಯ ಮೌಲ್ಯವು ಹೆಚ್ಚಾಗುತ್ತದೆ. ಆದ್ದರಿಂದ, ಬಿಡಿಎ ಕಾಯಿದೆ ಸೆಕ್ಷನ್ 20 ಮತ್ತು 21 ರ ಅಡಿಯಲ್ಲಿ ಅಭಿವೃದ್ಧಿ ಶುಲ್ಕ ನಿಗದಿಪಡಿಸಲು ಮುಂದಾಗಲಾಗಿದೆ.

ಬೆಂಗಳೂರು: ಡಾ. ಶಿವರಾಮ ಕಾರಂತ ಬಡಾವಣೆಯ 17 ಹಳ್ಳಿಗಳಲ್ಲಿ ನ್ಯಾಯಮೂರ್ತಿ ಚಂದ್ರಶೇಖರ್ ಸಮಿತಿಯು ಸಕ್ರಮಗೊಳಿಸಿರುವ 5171 ಕಟ್ಟಡಗಳಿಗೆ ಅಭಿವೃದ್ದಿ ಶುಲ್ಕ ನಿಗದಿುಪಡಿಸಲು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ಮುಂದಾಗಿದೆ.

ಬಿಡಿಎಯ ಉನ್ನತ ಅಧಿಕಾರಿಯೊಬ್ಬರು ಮಾತನಾಡಿ, ಯಾವುದೇ ಪ್ರದೇಶದಲ್ಲಿ ಬಿಡಿಎ ಯೋಜನೆ ಕಾರ್ಯಗತಗೊಳಿಸಿದಾಗ ಸುತ್ತಮುತ್ತಲಿನ ಆಸ್ತಿಯ ಮೌಲ್ಯವು ಹೆಚ್ಚಾಗುತ್ತದೆ. ಆದ್ದರಿಂದ, ಬಿಡಿಎ ಕಾಯಿದೆ ಸೆಕ್ಷನ್ 20 ಮತ್ತು 21 ರ ಅಡಿಯಲ್ಲಿ ಅಭಿವೃದ್ಧಿ ಶುಲ್ಕ ನಿಗದಿಪಡಿಸಲು ಮುಂದಾಗಲಾಗಿದೆ ಎಂದು ಹೇಳಿದ್ದಾರೆ.

ಇದೇ ವೇಳೆ ಶುಲ್ಕವನ್ನು ಹೇಗೆ ನಿಗದಿಪಡಿಸಲಾಗುತ್ತದೆ ಎಂದು ವಿವರಿಸಿರುವ ಅಧಿಕಾರಿಗಳು, ಭೂಮಿಗೆ ಬಿಡಿಎ ಲೇಔಟ್ ನಿರ್ಮಾಣದ ಮೊದಲು ಇದ್ದ ಮಾರುಕಟ್ಟೆ ಮೌಲ್ಯ ಮತ್ತು ನಂತರ ಇರುವ ಮೌಲ್ಯವನ್ನು ನಿರ್ಣಯಿಸಲಾಗುತ್ತದೆ. ನಂತರ ಎರಡು ಮೌಲ್ಯಗಳ ನಡುವಿನ ವ್ಯತ್ಯಾಸದ ಮೂರನೇ ಒಂದು ಭಾಗವಾಗದಷ್ಟು ಶುಲ್ಕವನ್ನು ನಿಗದಿ ಮಾಡಲಾಗುತ್ತದೆ ಎಂದು ತಿಳಿಸಿದ್ದಾರೆ.

ಪ್ರತಿ ಚದರ ಅಡಿಗೆ ವಿಧಿಸಬೇಕಾದ ಶುಲ್ಕವನ್ನು ಅಧಿಕಾರಿಗಳು ವಿವರಿಸಿದ್ದು, ಈ ಕುರಿತು ಮಾಹಿತಿ ಈ ಕೆಳಗಿನಂತಿದೆ... ಪ್ರತಿ ಚದರ ಮೀಟರ್ (ಸಾವಿರ ರೂ.ಗಳಲ್ಲಿ) ಪ್ರತಿ ಚದರ ಅಡಿ (ರೂ.ಗಳಲ್ಲಿ)

  • ಬೈಲಕೆರೆ – 1,833 – 170

  • ಜೆ.ಬಿ. ಕಾವಲ್- 2000 -186

  • ಸೋಮಶೆಟ್ಟಿಹಳ್ಳಿ -5,000- 465

  • ಗಾಣಿಗರಹಳ್ಳಿ – 5000 – 465

  • ಆವಲಹಳ್ಳಿ- 6042 – 561

  • ಹಾರೋಹಳ್ಳಿ- 1790 – 166

  • ಮೇಡಿ ಅಗ್ರಹಾರ- 667 – 62

  • ಕಾಳತಮ್ಮನಹಳ್ಳಿ- 1,167 – 180

  • ಕೆಂಪಾಪುರ – 12,367 – 1,149

  • ರಾಮಗೊಂಡನಹಳ್ಳಿ- 11,067- 1,028

  • ಕೆಂಪನಹಳ್ಳಿ- 465 – 43

  • ಲಕ್ಷ್ಮೇಪುರ- 5000 -465

  • ದೊಡ್ಡಬೆಟ್ಟಹಳ್ಳಿ – 8,667 -805

  • ವಡೇರಹಳ್ಳಿ- 833 – 77

  • ಗುಣಿ ಅಗ್ರಹಾರ- 2,333 – 217

  • ಶಾಮರಾಜಪುರ- 1833 – 170

  • ವೀರಸಾಗರ- 733 – 68

ಅಭಿವೃದ್ಧಿ ಶುಲ್ಕಗಳು ಜಾರಿಗೆ ಬರುವ ದಿನಾಂಕವನ್ನು ಇನ್ನೂ ಅಂತಿಮಗೊಳಿಸಲಾಗಿಲ್ಲ. ಶೀಘ್ರದಲ್ಲೇ ಈ ಬಗ್ಗೆ ನಿರ್ಧಾರ ಕೈಗೊಳ್ಳಲಾಗುತ್ತದೆ ಎಂದು ಮತ್ತೊಬ್ಬ ಅಧಿಕಾರಿ ತಿಳಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಭಾರತ-ರಷ್ಯಾ ಆರ್ಥಿಕ ಬಾಂಧವ್ಯಕ್ಕೆ ಹೊಸ ಬಲ; ಪುಟಿನ್ ಭೇಟಿಯಾದ ಜೈಶಂಕರ್, ಪರಮಾಣು ಸಹಕಾರ ಸೇರಿ ಹಲವು ಅಂಶಗಳ ಕುರಿತು ಚರ್ಚೆ!

3 ದಿನ ಮೊದಲೇ ಮುಂಗಾರು ಅಧಿವೇಶನಕ್ಕೆ ತೆರೆ: 'ವಿರೋಧ ಪಕ್ಷಕ್ಕೆ ಹೆದರಿ ಅಧಿವೇಶನ ರದ್ದು'; ರಾಜ್ಯಪಾಲರಿಗೆ BJP ದೂರು!

Video: ಕುದಿಯುತ್ತಿದ್ದ ಬೆಲ್ಲದ ಪಾಕಕ್ಕೆ ಬಿದ್ದ ಯುವಕ; ಅಣ್ಣನ ಸಾಲ ತೀರಿಸಲು ಕೆಲಸಕ್ಕೆ ಹೋಗಿದ್ದವನ ದಾರುಣ ಅಂತ್ಯ

'ಕಿವಿಲಿ ಹೊಗೆ ಬರುವಂತಿದೆ': ಲಂಕಾ-ಭಾರತ ಟೆಸ್ಟ್ ಪಂದ್ಯದಲ್ಲಿ ಮತ್ತೊಂದು ವಿವಾದ, ಗ್ಲೌಸ್ ಕಿತ್ತೆಸೆದ ಬ್ಯಾಟರ್, ಆಗಿದ್ದೇನು?

ಬಿಜೆಪಿ MLC ಎನ್. ರವಿಕುಮಾರ್‌ ವಿರುದ್ಧ ಜಾಮೀನು ರಹಿತ ಬಂಧನ ವಾರಂಟ್