ಸಂಗ್ರಹ ಚಿತ್ರ 
ರಾಜ್ಯ

ರಾಜ್ಯದ ಶೇ.75ರಷ್ಟು ಮಂದಿಯಲ್ಲಿ ಬೊಜ್ಜು, ಅಧಿಕ ತೂಕ ಸಮಸ್ಯೆ...!

ರಾಜ್ಯದಲ್ಲಿ 2024ರಲ್ಲಿ ತಪಾಸಣೆಗೆ ಒಳಗಾದ ಜನಸಂಖ್ಯೆಯಲ್ಲಿ ಶೇ.75ರಷ್ಟು ಮಂದಿ ಬೊಜ್ಜು ಹಾಗೂ ಅಧಿಕ ತೂಕ ಸಮಸ್ಯೆಯಿಂದ ಬಳಲುತ್ತಿದ್ದಾರೆ.

ಬೊಜ್ಜು ಅಥವಾ ಅಧಿಕ ತೂಕದ ಸಮಸ್ಯೆ ಇತ್ತೀಚಿನ ದಿನಗಳಲ್ಲಂತೂ ಹೆಚ್ಚಾಗಿದೆ. ವ್ಯಕ್ತಿಯ ಆಹಾರ ಕ್ರಮ ಹಾಗೂ ಕೆಟ್ಟ ಜೀವನಶೈಲಿಯಿಂದ ದೇಹದ ಆರೋಗ್ಯದ ಮೇಲೆ ನೇರ ಪರಿಣಾಮ ಉಂಟಾಗುತ್ತಿದೆ. ಸಣ್ಣ ಮಕ್ಕಳು ಸೇರಿದಂತೆ ಸಾಕಷ್ಟು ಮಂದಿ ಹೊಟ್ಟೆಯ ಸುತ್ತಲಿನ ಕೊಬ್ಬಿನ ಸಮಸ್ಯೆಗಳಿಂದ ಬಳಲುತ್ತಿದ್ದಾರೆ. ರಾಜ್ಯದಲ್ಲಿ ಒಟ್ಟಾರೆ ಜನಸಂಖ್ಯೆಯ ಪೈಕಿ ಶೇ.75ರಷ್ಟು ಮಂದಿ ಬೊಜ್ಜು ಹಾಗೂ ಅಧಿಕ ತೂಕದಿಂದ ಬಳಲುತ್ತಿದ್ದಾರೆಂದು ಸಮೀಕ್ಷಾ ವರದಿಯೊಂದು ತಿಳಿಸಿದೆ.

ಅಪೊಲೊ ಆಸ್ಪತ್ರೆಗಳ ಇತ್ತೀಚಿನ ಹೆಲ್ತ್ ಆಫ್ ದಿ ನೇಷನ್ 2025 ವರದಿ ಈ ಮಾಹಿತಿಯನ್ನು ಬಹಿರಂಗಪಡಿಸಿದೆ. ರಾಜ್ಯದಲ್ಲಿ 2024ರಲ್ಲಿ ತಪಾಸಣೆಗೆ ಒಳಗಾದ ಜನಸಂಖ್ಯೆಯಲ್ಲಿ ಶೇ.75ರಷ್ಟು ಮಂದಿ ಬೊಜ್ಜು ಹಾಗೂ ಅಧಿಕ ತೂಕ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಈ ಪೈಕಿ ಶೇ.56 ರಂದು ಮಂದಿ ಬೊಜ್ಜು ಸಮಸ್ಯೆ ಹಾಗೂ ಶೇ.21ರಷ್ಟು ಮಂತಿ ಅಧಿಕ ತೂಕ ಸಮಸ್ಯೆಯಿಂದ ಬಳಲುತ್ತಿದ್ದಾರೆಂದು ತಿಳಿಸಿದೆ.

ಜಡ ಜೀವನಶೈಲಿ, ಕಳಪೆ ಪೋಷಣೆ ಮತ್ತು ರೋಗನಿರ್ಣಯ ಮಾಡದ ದೀರ್ಘಕಾಲದ ಪರಿಸ್ಥಿತಿಗಳಿಂದ ಸಮಸ್ಯೆ ಉಲ್ಭಣಿಸಿದ್ದು, ಇದು ಸಾರ್ವಜನಿಕ ಆರೋಗ್ಯ ಬಿಕ್ಕನ್ನು ಸೂಚಿಸುತ್ತದೆ. ಈ ಪರಿಸ್ಥಿತಿಯನ್ನು ಗಮನಿಸಿದರೆ ರೋಗಲಕ್ಷಣ ಆಧಾರಿತ ಆರೋಗ್ಯ ರಕ್ಷಣೆ ಇನ್ನು ಮುಂದೆ ಸಾಕಾಗುವುದಿಲ್ಲ ಎಂದು ಹೇಳಿದೆ.

ಇನ್ನು ರಾಜ್ಯದಲ್ಲಿ ಪರೀಕ್ಷಿಸಲ್ಪಟ್ಟ ಒಟ್ಟಾರೆ ಜನಸಂಖ್ಯೆಯ ಪೈಕಿ ಶೇ.28 ರಷ್ಟು ಮಂದಿ ಅಧಿಕ ರಕ್ತದೊತ್ತಡ, ಶೇ.20ರಷ್ಟು ಮಂದಿ ಮಧುಮೇಹದಿಂದ ಬಳಲುತ್ತಿದ್ದಾರೆ. ಶೇ.84ರಷ್ಟು ಮಂದಿಯಲ್ಲಿ ಮೂಳೆ ಸಮಸ್ಯೆ ಹಾಗೂ ರೋಗನಿರೋಧಕ ಶಕ್ತಿಯ ಮೇಲೆ ಪರಿಣಾಮ ಬೀರುವ ವಿಟಮಿನ್ ಡಿ ಸಮಸ್ಸೆಯಿಂದ ಬಳಲುತ್ತಿದ್ದಾರೆಂದು ತಿಳಿಸಿದೆ.

ಇದಲ್ಲದೆ, ಫ್ಯಾಟಿ ಲಿವರ್, ಋತುಬಂಧದ ನಂತರದ ಆರೋಗ್ಯ ಅಪಾಯಗಳು ಮತ್ತು ಬಾಲ್ಯದ ಸ್ಥೂಲಕಾಯತೆ ಸಮಸ್ಯೆಗಳು ಕಂಡು ಬಂದಿದ್ದು, ಬಾಲ್ಯದಲ್ಲಿಯೇ ಬೊಜ್ಜು ಹೆಚ್ಚುತ್ತಿರುವ ಕಳವಳಕಾರಿ ಅಂಶವಾಗಿದ್ದು, ಶೇ. 28 ರಷ್ಟು ಕಾಲೇಜು ವಿದ್ಯಾರ್ಥಿಗಳು ಅಧಿಕ ತೂಕ ಅಥವಾ ಬೊಜ್ಜು ಸಮಸ್ಯೆ ಹೊಂದಿರುವುದು ಮತ್ತು ಶೇ. 19 ರಷ್ಟು ಮಂದಿ ಅಧಿಕ ರಕ್ತದೊತ್ತಡದ ಸಮಸ್ಯೆಯಿಂದ ಬಳಲುತ್ತಿರುವುದು ಕಂಡು ಬಂದಿದೆ.

ಮಾನಸಿಕ ಆರೋಗ್ಯದಲ್ಲಿ ರಾಷ್ಟ್ರೀಯವಾಗಿ ಪರೀಕ್ಷಿಸಲಾದ ಶೇ. 7 ರಷ್ಟು ಮಹಿಳೆಯರು ಮತ್ತು ಶೇ. 5 ರಷ್ಟು ಪುರುಷರು ಕ್ಲಿನಿಕಲ್ ಖಿನ್ನತೆಯ ಲಕ್ಷಣಗಳಿಂದ ಬಲುತ್ತಿರುವುದು ಕಂಡು ಬಂದಿದೆ. ಮಧ್ಯವಯಸ್ಕರಲ್ಲಿ ಈ ಸಮಸ್ಯೆ ಹೆಚ್ಚಾಗಿ ಕಂಡು ಬಂದಿದೆ ಎಂದು ತಿಳಿಸಿದೆ.

ಅಪೋಲೋ ಆಸ್ಪತ್ರೆಗಳ ಅಧ್ಯಕ್ಷ ಡಾ. ಪ್ರತಾಪ್ ಸಿ ರೆಡ್ಡಿ ಅವರು ಮಾತನಾಡಿ, ಭಾರತವು ಬೊಜ್ಜು ಹಾಗೂ ಅಧಿಕ ತೂಕ ಸಮಸ್ಯೆ ನಿವಾರಣಂ ಸಂಸ್ಕೃತಿಯತ್ತ ಸಾಗಬೇಕು. ಆರಂಭಿಕ ತಪಾಸಣೆ, ಮಧ್ಯಸ್ಥಿಕೆಗಳು ಮತ್ತು ಆರೋಗ್ಯ ಶಿಕ್ಷಣವು ನಮ್ಮ ಮನೆಗಳು, ಶಾಲೆಗಳು ಮತ್ತು ಕೆಲಸದ ಸ್ಥಳಗಳಲ್ಲಿ ಅವಿಭಾಜ್ಯ ಅಂಗವಾಗಬೇಕು ಎಂದು ಹೇಳಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT