ವಿಧಾನಸೌಧ 
ರಾಜ್ಯ

ಸಾರ್ವಜನಿಕರಿಗೆ ವಿಧಾನಸೌಧ 'ಗೈಡೆಡ್‌ ಟೂರ್‌': ಸರ್ಕಾರದಿಂದ ಶೀಘ್ರವೇ 'ಪ್ರವಾಸ ಮಾರ್ಗದರ್ಶಿ' ಯೋಜನೆ

ವಿಧಾನಸೌಧವನ್ನು ಒಳಗಿನಿಂದ ನೋಡಬೇಕು ಮತ್ತು ಕಟ್ಟಡದ ಇತಿಹಾಸ ಮತ್ತು ಮಹತ್ವವನ್ನು ಸಾರ್ವಜನಿಕರು ತಿಳಿದುಕೊಳ್ಳಬೇಕು ಎಂಬುದು ಸರ್ಕಾರದ ಬಯಕೆಯಾಗಿದೆ ಎಂದು ಸರ್ಕಾರಿ ಮೂಲಗಳು ತಿಳಿಸಿವೆ.

ಬೆಂಗಳೂರು: ಸಾರ್ವಜನಿಕರು ಭವ್ಯವಾದ ವಿಧಾನಸೌಧದ ಪ್ರವಾಸಕ್ಕೆ ಹೋಗಲು ರಾಜ್ಯ ಸರ್ಕಾರವು ಶೀಘ್ರದಲ್ಲೇ ಅವಕಾಶ ನೀಡಲಿದೆ. ರಾಷ್ಟ್ರಪತಿ ಭವನ ಮತ್ತು ನವದೆಹಲಿಯ ಸಂಸತ್ತಿನ ಮಾದರಿಯಲ್ಲಿ ಪ್ರವಾಸ ಮಾರ್ಗದರ್ಶಿ ನಡೆಸಲಾಗುವುದು.

ಪ್ರವಾಸಿಗರನ್ನು ಆಕರ್ಷಿಸಲು ಕಳೆದ ಭಾನುವಾರದಿಂದ ಸಾರ್ವಜನಿಕ ರಜಾದಿನಗಳಲ್ಲಿ ವಿಧಾನಸೌಧಕ್ಕೆ ದೀಪಾಲಂಕಾರ ಮಾಡಲಾಗುತ್ತಿದೆ. ವಿದೇಶಗಳು ಮತ್ತು ಕರ್ನಾಟಕದ ಹೊರಗಿನಿಂದ ಅನೇಕ ಪ್ರವಾಸಿಗರು ವಿಧಾನಸೌಧಕ್ಕೆ ಭೇಟಿ ನೀಡಿ ಸೌಧದ ಮುಂದೆ ಛಾಯಾಚಿತ್ರಗಳಿಗೆ ಪೋಸ್ ನೀಡಿದರೂ, ಅವರನ್ನು ಒಳಗೆ ಬಿಡಲು ಅನುಮತಿ ಇರುವುದಿಲ್ಲ. ಗೈಡೆಡ್ ಟೂರ್ ನಿಂದ ಈಗ ಪ್ರವಾಸಿಗರು 70 ವರ್ಷಗಳಷ್ಟು ಹಳೆಯದಾದ ಭವ್ಯವಾದ ಕಟ್ಟಡದ ಒಳಗೆ ಹೋಗಲು ಅನುವು ಮಾಡಿಕೊಡುತ್ತದೆ.

ವಿಧಾನಸೌಧವನ್ನು ಒಳಗಿನಿಂದ ನೋಡಬೇಕು ಮತ್ತು ಕಟ್ಟಡದ ಇತಿಹಾಸ ಮತ್ತು ಮಹತ್ವವನ್ನು ಸಾರ್ವಜನಿಕರು ತಿಳಿದುಕೊಳ್ಳಬೇಕು ಎಂಬುದು ಸರ್ಕಾರದ ಬಯಕೆಯಾಗಿದೆ ಎಂದು ಸರ್ಕಾರಿ ಮೂಲಗಳು ತಿಳಿಸಿವೆ.

ಪ್ರವಾಸೋದ್ಯಮ ಇಲಾಖೆಯು ಅಂತಹ ಪ್ರವಾಸಗಳನ್ನು ನಡೆಸಲು ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಯಿಂದ (DPAR) ಅನುಮತಿಯನ್ನು ಕೋರಿತ್ತು ಮತ್ತು ಅನುಮೋದನೆ ನೀಡಲಾಗಿದೆ. ಸರ್ಕಾರಿ ಕೆಲಸಕ್ಕೆ ಅಡ್ಡಿಯಾಗದಂತೆ, ಭಾನುವಾರ, ಎರಡನೇ ಶನಿವಾರ ಮತ್ತು ಇತರ ಸರ್ಕಾರಿ ರಜಾದಿನಗಳಲ್ಲಿ ಬೆಳಿಗ್ಗೆ 8 ರಿಂದ ಸಂಜೆ 6 ರವರೆಗೆ ಪ್ರವಾಸಗಳನ್ನು ನಡೆಸಬಹುದು ಎಂದು ಡಿಪಿಎಆರ್ ತನ್ನ ಆದೇಶದಲ್ಲಿ ತಿಳಿಸಿದೆ.

ಈ ಸಂಬಂಧ ಡಿಪಿಎಆರ್ ಅಧೀನ ಕಾರ್ಯದರ್ಶಿ ಆದೇಶ ಹೊರಡಿಸಿದ್ದು, ಪ್ರವಾಸೋದ್ಯಮ ಇಲಾಖೆಯು ಪ್ರವಾಸಿಗರು ಆನ್‌ಲೈನ್‌ನಲ್ಲಿ ಟಿಕೆಟ್ ಬುಕ್ ಮಾಡಲು ಸಾಫ್ಟ್‌ವೇರ್ ಅಭಿವೃದ್ಧಿಪಡಿಸಬೇಕು ಎಂದು ಹೇಳಿದ್ದಾರೆ. ಟಿಕೆಟ್ ದರವನ್ನು ಇನ್ನೂ ಅಂತಿಮಗೊಳಿಸಲಾಗಿಲ್ಲ, ಆದರೆ ಅದು ಜನಸ್ನೇಹಿಯಾಗಿರುತ್ತದೆ ಎಂದು ತಿಳಿಸಿದೆ.

ಪ್ರವಾಸೋದ್ಯಮ ಇಲಾಖೆ ಅಧಿಕಾರಿಗಳು ಸಾರ್ವಜನಿಕ ಕಾರ್ಯ ಕ್ರಮಗಳು ಮತ್ತು ಭದ್ರತಾ ಇಲಾಖೆ ಅಧಿಕಾರಿಗಳ ಸಹಾಯದಿಂದ ಸೌಧದ ಒಳಗೆ ಮಾರ್ಗ ನಕ್ಷೆಯನ್ನು ಇನ್ನೂ ವಿನ್ಯಾಸಗೊಳಿಸಬೇಕಾಗಿದೆ. ನೀಲನಕ್ಷೆ ರೂಪುಗೊಂಡ ನಂತರ, ಪ್ರವಾಸಗಳು ಪ್ರಾರಂಭವಾಗುತ್ತವೆ, ಅದಕ್ಕೂ ಮೊದಲು ಪ್ರವಾಸ ಮಾರ್ಗವನ್ನು ಡಿಪಿಎಆರ್ ಅನುಮೋದಿಸಬೇಕು.

ಇದಲ್ಲದೆ, ಪ್ರವಾಸದ ಸಂಪೂರ್ಣ ಕಾರ್ಯವಿಧಾನವನ್ನು ಮೇಲ್ವಿಚಾರಣೆ ಮಾಡಲು ಪ್ರವಾಸೋದ್ಯಮ ಇಲಾಖೆಯು ಪ್ರವಾಸಿ ಅಧಿಕಾರಿಯನ್ನು ನಿಯೋಜಿಸಬೇಕು. ಪ್ರವಾಸಿಗರ ತಂಡಗಳನ್ನು ರಚಿಸುವ ಜವಾಬ್ದಾರಿಯನ್ನು ಇಲಾಖೆ ಹೊಂದಿರುತ್ತದೆ, ಪ್ರತಿ ತಂಡದಲ್ಲಿ 30 ಕ್ಕಿಂತ ಹೆಚ್ಚು ಸದಸ್ಯರು ಇರಬಾರದು. ಎಲ್ಲಾ ಸಂದರ್ಶಕರ ವಿವರಗಳನ್ನು ಪ್ರತಿದಿನ ಡಿಪಿಎಆರ್ ಮತ್ತು ಭದ್ರತಾ ಅಧಿಕಾರಿಗಳಿಗೆ ಸಲ್ಲಿಸಬೇಕು ಎಂದು ಆದೇಶದಲ್ಲಿ ಹೇಳಲಾಗಿದೆ.

ನೀರಿನ ಬಾಟಲಿಗಳನ್ನು ಹೊರತುಪಡಿಸಿ ಯಾವುದೇ ಪ್ಲಾಸ್ಟಿಕ್ ವಸ್ತುಗಳನ್ನು ಕೊಂಡೊಯ್ಯುವಂತಿಲ್ಲ. ವಿಧಾನಸೌಧ ಆವರಣದಲ್ಲಿ ಯಾವುದೇ ತಿನ್ನಬಹುದಾದ ವಸ್ತುಗಳು ಇಡುವಂತಿಲ್ಲ. ಪ್ರತಿಮೆಗಳು ಅಥವಾ ಇತರ ರಚನೆಗಳಿಗೆ ಹಾನಿಯಾಗದಂತೆ ಅಧಿಕಾರಿಗಳು ನೋಡಿಕೊಳ್ಳಬೇಕು. ಪ್ರವಾಸೋದ್ಯಮ ಇಲಾಖೆಯು ಪ್ರವಾಸಿಗರಿಗೆ ತಿಳಿಸಲು ಆಯಕಟ್ಟಿನ ಸ್ಥಳಗಳಲ್ಲಿ ಸೂಚನಾ ಫಲಕಗಳನ್ನು ಇರಿಸಬೇಕು. ಪ್ರವಾಸೋದ್ಯಮ ಇಲಾಖೆಯು ಆಂಬ್ಯುಲೆನ್ಸ್ ನಿಲುಗಡೆ, ಅಗ್ನಿಶಾಮಕ ಸಾಧನಗಳನ್ನು ಇಡುವುದು ಮತ್ತು ಇತರ ಸುರಕ್ಷತಾ ಮುನ್ನೆಚ್ಚರಿಕೆಗಳಂತಹ ವ್ಯವಸ್ಥೆಗಳನ್ನು ಸಹ ಮಾಡಬೇಕು. ಡ್ರೋನ್‌ಗಳನ್ನು ಹಾರಿಸುವುದನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT