ಸಂಗ್ರಹ ಚಿತ್ರ 
ರಾಜ್ಯ

ಪ್ರಿಯಕರನೊಂದಿಗೆ ಪತ್ನಿ ವಿವಾಹ: ಇನ್‌ಸ್ಟಾಗ್ರಾಮ್‌ ವಿಡಿಯೋ ನೋಡಿ ಪತಿ ಶಾಕ್; ದೂರು ದಾಖಲು

ಪತ್ನಿ 50 ಲಕ್ಷ ರೂ. ಮೌಲ್ಯದ ಆಸ್ತಿ ದಾಖಲೆಗಳು ಸೇರಿದಂತೆ ಎಲ್ಲಾ ಬೆಲೆಬಾಳುವ ವಸ್ತುಗಳನ್ನು ತೆಗೆದುಕೊಂಡು ಹೋಗಿದ್ದಾಳೆ ಎಂದು ಆರೋಪಿಸಿದ್ದಾರೆ.

ಬೆಂಗಳೂರು: ಇನ್ಸ್ಟಾಗ್ರಾಮ್​ನಲ್ಲಿ ಪರಿಚಯವಾದ ವ್ಯಕ್ತಿಗಾಗಿ ಗಂಡ, ಮಕ್ಕಳನ್ನೇ ಬಿಟ್ಟು ಓಡಿ ಹೋದ ಮಹಿಳೆಯೊಬ್ಬಳು ಆತನನ್ನು ವಿವಾಹವಾಗಿದ್ದು, ಪ್ರಿಯಕರ ಜೊತೆ ಮದುವೆಯಾದ ಫೋಟೋ ಹಾಗೂ ವಿಡಿಯೋವನ್ನು ಇನ್‌ಸ್ಟಾಗ್ರಾಮ್‌ ನಲ್ಲಿ ಹಂಚಿಕೊಂಡಿದ್ದಾಳೆ. ಈ ವಿಡಿಯೋವನ್ನು ನೋಡಿದ ಪತಿ ಆಘಾತಗೊಂಡಿದ್ದು, ಪೊಲೀಸರಿಗೆ ದೂರು ನೀಡಿರುವ ಘಟನೆ ನೆಲಮಂಗಲದಲ್ಲಿ ನಡೆದಿದೆ.

ಈ ಸಂಬಂಧ ನೆಲಮಂಗಲ ಪಟ್ಟಣ ಪೊಲೀಸರಿಗೆ ರಮೇಶ್ ಎಂಬುವವರು ದೂರು ನೀಡಿದ್ದಾರೆ. 12 ವರ್ಷಗಳ ಹಿಂದೆ ನೇತ್ರಾವತಿಯನ್ನು ವಿವಾಹವಾಗಿದ್ದು, ನಮಗೆ 11 ವರ್ಷಗ ಗಂಡು ಮಗುವಿದೆ. ಇನ್‌ಸ್ಟಾಗ್ರಾಮ್'ನಲ್ಲಿ ಪರಿಚಯವಾದ ವ್ಯಕ್ತಿಯೊಂದಿಗೆ ಪತ್ನಿ ವಿವಾಹವಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಪೋಸ್ಟ್ ಮಾಡಿದ ಬಳಿಕವೇ 2ನೇ ವಿವಾಹದ ವಿಚಾರ ತಿಳಿದುಬಂದಿದೆ ಎಂದು ಹೇಳಿದ್ದಾರೆ.

ಪತ್ನಿ 50 ಲಕ್ಷ ರೂ. ಮೌಲ್ಯದ ಆಸ್ತಿ ದಾಖಲೆಗಳು ಸೇರಿದಂತೆ ಎಲ್ಲಾ ಬೆಲೆಬಾಳುವ ವಸ್ತುಗಳನ್ನು ತೆಗೆದುಕೊಂಡು ಹೋಗಿದ್ದಾಳೆ ಎಂದು ಆರೋಪಿಸಿದ್ದಾರೆ.

ದಂಪತಿಗಳ ನಡುವೆ ವೈವಾಹಿಕ ಕಲಹಗಳಿದ್ದು, ಈ ಹಿಂದೆ ಕೂಡ ರಮೇಶ್ ಪತ್ನಿಯ ವಿರುದ್ಧ ದೂರು ನೀಡಿದ್ದರು. ಒಂದು ವರ್ಷದ ಹಿಂದೆ ಮನೆ ಬಿಟ್ಟು ಹೋಗಿದ್ದ ನೇತ್ರಾವತಿ ಯಾರೊಂದಿಗೂ ಸಂಪರ್ಕದಲ್ಲಿರಲಿಲ್ಲ. ಪೋಷಕರ ಮನೆಗೆ ಹೋಗಿರಬೇಕೆಂದು ತಿಳಿದಿದ್ದೆ. ಅಲ್ಲೂ ಇಲ್ಲ ಎಂದು ತಿಳಿದ ಬಳಿಕ ನಾಪತ್ತೆ ದೂರು ದಾಖಲಿಸಿದ್ದೆ. ಇದೀಗ ಪತ್ನಿ ಇನ್‌ಸ್ಟಾಗ್ರಾಮ್ ಮೂಲಕ ಪರಿಚಯವಾದ ಸಂತೋಷ್ ಎಂಬ ವ್ಯಕ್ತಿಯೊಂದಿಗೆ ಓಡಿಹೋಗಿದ್ದಾಳೆ. ನಾನು ಚೆನ್ನಾಗಿಯೇ ನೋಡಿಕೊಂಡಿದ್ದರೂ ನನಗೆ ಮೋಸ ಮಾಡಿದ್ದಾಳೆ. ಮತ್ತೊಂದು ವಿವಾಹವಾಗಲು ಕೌಂಟುಬಿಕ ಹಿಂಸಾಚಾರ ದೂರು ದಾಖಲಿಸಿದ್ದಾಳೆ. ಮನೆಯಲ್ಲಿದ್ದ ಎಲ್ಲಾ ಬೆಲೆ ಬಾಳುವ ವಸ್ತುಗಳನ್ನು ತೆಗೆದುಕೊಂಡು ಹೋಗಿದ್ದಾಳೆಂದು ರಮೇಶ್ ಹೇಳಿದ್ದಾರೆ.

ಈ ಮಧ್ಯೆ ನೇತ್ರಾವತಿ ಮೊದಲ ಪತಿಯ ಬಳಿಕೆ ನಿರಾಕರಿಸಿದ್ದು, ಆತ ಕುಡಿತದ ಚಟಕ್ಕೆ ಬಿದ್ದಿದ್ದು, ದೈಹಿಕ ಹಾಗೂ ಮಾನಸಿಕ ಹಿಂಸೆ ನೀಡಿರುವುದಾಗಿ ಹೇಳಿದ್ದಾಳೆ, ಅಲ್ಲದೆ, ತನ್ನ ಬಟ್ಟೆ ಹಾಗೂ ಇತರೆ ವಸ್ತುಗಳನ್ನು ಪಡೆಯಲು ಪೊಲೀಸರ ನೆರವು ಕೋರಿದ್ದಾಳೆ. ಈ ಸಂಬಂಧ ನೆಲಮಂಗಲ ಪೊಲೀಸರು ದೂರು ದಾಖಲಿಸಿಕೊಂಡಿದ್ದು, ವಿಚಾರಣೆ ನಡೆಸುತ್ತಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಕಾವೇರಿ' ವಿಚಾರದಲ್ಲಿ ಕರ್ನಾಟಕಕ್ಕೆ ಮತ್ತೆ ಶಾಕ್: ತಮಿಳುನಾಡಿಗೆ ನೀರು ಬಿಡಬೇಕೆಂಬ CWRC ಆದೇಶ ಎತ್ತಿಹಿಡಿದ CWMA

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಪ್ರದೋಶ್ ಮಾಫಿ ಸಾಕ್ಷಿ ಅರ್ಜಿ ಅಂಗೀಕರಿಸಿದ ಕೋರ್ಟ್; 'ದಾಸ'ನಿಗೆ ಬಿಗ್ ಶಾಕ್!

'ಕಾಂಗ್ರೆಸ್ ಸರ್ಕಾರದ ವೈಫಲ್ಯ' ವಿರೋಧಿಸಿ ಸೆಪ್ಟೆಂಬರ್ 1 ರಿಂದ 10ರವರೆಗೆ ರಾಯಚೂರಿನಿಂದ ಬಳ್ಳಾರಿಗೆ BJP-JDS ಪಾದಯಾತ್ರೆ!

Uorfi Javed: ಮದ್ವೆ ಆಗ್ತೀನೋ ಇಲ್ಲವೋ ಗೊತ್ತಿಲ್ಲ, ಆದ್ರೆ ತಾಯಿ ಆಗ್ತೀನಿ; ಸೀಕ್ರೆಟ್‌ ರಿವೀಲ್ ಮಾಡಿದ ಉರ್ಫಿ ಜಾವೇದ್

ಡಿಕೆಶಿ ಸಂಪುಟಕ್ಕೆ ಮತ್ತೆ ಸರ್ಜರಿ? ಭಾರಿ ಬದಲಾವಣೆ, 3-5 ಸಚಿವರಿಗೆ ಕೊಕ್?; ಮಹಿಳೆ ಸೇರಿ ಕೆಲ ರೆಬೆಲ್ ನಾಯಕರಿಗೆ ಅವಕಾಶ ಸಾಧ್ಯತೆ