ಆರೋಪಿ ರಿತೇಶ್ ಕುಮಾರ್ 
ರಾಜ್ಯ

ಹುಬ್ಬಳ್ಳಿ ಬಾಲಕಿ ಕೊಲೆ ಪ್ರಕರಣ: ಆರೋಪಿ ನಮ್ಮ ಏರಿಯಾದಲ್ಲಿ ಎರಡು ಬಾರಿ ಕಾಣಿಸಿಕೊಂಡಿದ್ದ; ಸ್ಥಳೀಯ ನಿವಾಸಿಗಳು

ರಿತೇಶ್ ಕುಮಾರ್ ತಮ್ಮ ಪ್ರದೇಶದಲ್ಲಿ ಎರಡು ಬಾರಿ ಕಾಣಿಸಿಕೊಂಡಿದ್ದ, ಮತ್ತೊಮ್ಮೆ ಅವನೊಂದಿಗೆ ಇನ್ನೊಬ್ಬ ವ್ಯಕ್ತಿ ಇದ್ದನು ಎಂದು ಶ್ರೇಯಾ ನಗರದ ನಿವಾಸಿಗಳು ತಿಳಿಸಿದ್ದಾರೆ

ಹುಬ್ಬಳ್ಳಿ: ಹುಬ್ಬಳ್ಳಿ ಬಾಲಕಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ಥಳೀಯ ನಿವಾಸಿಗಳು ಮತ್ತೊಂದು ಮಾಹಿತಿ ಹೊರಹಾಕಿದ್ದಾರೆ. ಬಾಲಕಿ ಕೊಲೆ ಮಾಡಿದ್ದ ಆರೋಪಿ ರಿತೇಶ್ ಕುಮಾರ್ ನನ್ನು ಕೆಲವು ದಿನಗಳ ಮೊದಲು ನೋಡಿದ್ದೇವೆ ಎಂದು ಹೇಳಿಕೊಂಡಿದ್ದಾರೆ.

ರಿತೇಶ್ ತಮ್ಮ ಪ್ರದೇಶದಲ್ಲಿ ಎರಡು ಬಾರಿ ಕಾಣಿಸಿಕೊಂಡಿದ್ದ, ಮತ್ತೊಮ್ಮೆ ಅವನೊಂದಿಗೆ ಇನ್ನೊಬ್ಬ ವ್ಯಕ್ತಿ ಇದ್ದನು ಎಂದು ಶ್ರೇಯಾ ನಗರದ ನಿವಾಸಿಗಳು ತಿಳಿಸಿದ್ದಾರೆ. ಏಪ್ರಿಲ್ 13 ರಂದು ಅಪರಾಧ ಮಾಡಿದ್ದ ರಿತೇಶ್ ಅದೇ ಸಂಜೆ ಪೊಲೀಸರಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸಿದಾಗ ಪೊಲೀಸರು ಗುಂಡು ಹಾರಿಸಿದ್ದರು.

ರಿತೇಶ್ ಮಕ್ಕಳು ಆಟವಾಡುತ್ತಿದ್ದ ಮನೆಯ ಗೇಟ್ ಒಳಗೆ ಅನುಮಾನಾಸ್ಪದವಾಗಿ ನೋಡುತ್ತಿದ್ದುದನ್ನು ಶ್ರೇಯಾ ನಗರದ ನಿವಾಸಿಯೊಬ್ಬರು ತಿಳಿಸಿದ್ದಾರೆ. ಮಧ್ಯಾಹ್ನವಾಗಿತ್ತು ಮತ್ತು ನಾನು ಊಟಕ್ಕೆ ಮನೆಗೆ ಮರಳಿದ್ದೆ. ಅವನು ಗೇಟ್ ಒಳಗೆ ಇಣುಕಿ ನೋಡುತ್ತಿದ್ದ, ಅವನಿಗೆ ಏನು ಬೇಕು ಮತ್ತು ಏಕೆ ಒಳಗೆ ಇಣುಕಿ ನೋಡುತ್ತಿದ್ದೀಯಾ ಎಂದು ನಾನು ಕೇಳಿದೆ. ಅವನು ಹಿಂದಿಯಲ್ಲಿ ಕೆಲಸ ಬೇಕು ಎಂದು ಹೇಳಿದನು. ನಾನು ಅವನಿಗೆ ಮನೆಗಳಲ್ಲಿ ಅಲ್ಲ, ಕಾರ್ಖಾನೆಗಳಲ್ಲಿ ಕೆಲಸ ಹುಡುಕಲು ಹೇಳಿದೆ. ನಾನು ಅವನ ಫೋಟೋವನ್ನು ಸಹ ತೆಗೆದುಕೊಂಡೆ ಎಂದು ಅವರು ಹೇಳಿದರು.

ವರಮಹಾಲಕ್ಷ್ಮಿ ಹಬ್ಬದ ನಂತರ ಶ್ರೇಯಾ ನಗರದಲ್ಲಿ ಮನೆ ಕಳ್ಳತನಗಳ ಹೆಚ್ಚಾಗಿದೆ. ನಿವಾಸಿಗಳು ಜಾಗರೂಕರಾಗಿದ್ದು ಅನುಮಾನಾಸ್ಪದವಾಗಿ ಯಾರೇ ಕಂಡರೂ ಫೋನಿನಲ್ಲಿ ದಾಖಲಿಸಿಕೊಳ್ಳುತ್ತಾರೆ ಎಂದು ಹೇಳಿದ್ದಾರೆ.

ಶ್ರೇಯಾ ನಗರ ಮುಖ್ಯ ರಸ್ತೆಯಲ್ಲಿ ರಿತೇಶ್ ಮತ್ತು ಇನ್ನೊಬ್ಬ ವ್ಯಕ್ತಿಯನ್ನು ನೋಡಿದ್ದಾಗಿ ಮತ್ತೊಬ್ಬ ನಿವಾಸಿ ನೆನಪಿಸಿಕೊಳ್ಳುತ್ತಾರೆ. ಇಲ್ಲಿ ಬೀದಿ ನಾಯಿಗಳ ಮೇಲೆ ಕಲ್ಲು ಎಸೆಯುತ್ತಿದ್ದ ವೇಳೆ ಅವರ ಮುಖಗಳು ನನಗೆ ನೆನಪಿವೆ. ಮಹಿಳೆಯರ ಗುಂಪೊಂದು ನಡೆದುಕೊಂಡು ಹೋಗುವುದನ್ನು ಕಂಡ ಇಬ್ಬರೂ ಕಲ್ಲು ಎಸೆಯುವುದನ್ನು ನಿಲ್ಲಿಸಿ ಸ್ಥಳದಿಂದ ಹೊರಟುಹೋದರು ಎಂದು ಅವರು ಹೇಳಿದರು.

ಬುಧವಾರ, ಹುಬ್ಬಳ್ಳಿ-ಧಾರವಾಡ ಪೊಲೀಸರು ರಿತೇಶ್ ಅವರ ಛಾಯಾಚಿತ್ರವನ್ನು ಬಿಡುಗಡೆ ಮಾಡಿದರು. ಫೋಟೋ ವೈರಲ್ ಆದ ನಂತರ, ನಿವಾಸಿಗಳು ರಿತೇಶ್ ಅವರನ್ನು ತಮ್ಮ ಬಡಾವಣೆಯಲ್ಲಿ ನೋಡಿದ್ದಾಗಿ ತಿಳಿಸಿದ್ದಾರೆ. ಅವನು ಮಾನಸಿಕ ಅಸ್ವಸ್ಥನ ರೀತಿ ಕಾಣುತ್ತಿದ್ದರು ಮತ್ತು ನನ್ನ ಪ್ರಶ್ನೆಗಳಿಗೆ ಸರಿಯಾಗಿ ಉತ್ತರಿಸುತ್ತಿರಲಿಲ್ಲ. ನಾನು ಅವನ ಫೋಟೋವನ್ನು ನನ್ನ ಮೊಬೈಲ್‌ನಿಂದ ತೆಗೆದುಕೊಂಡಾಗ, ಆತ ಆ ಪ್ರದೇಶದಿಂದ ಹೊರಟುಹೋಗಿದ್ದ ಎಂದು ನಿವಾಸಿಯೊಬ್ಬರು ತಿಳಿಸಿದ್ದಾರೆ. ರಿತೇಶ್ ಹೇಳಿಕೆಯ ಪ್ರಕಾರ, ಆತ ಬಿಹಾರದ ಪಾಟ್ನಾದವನಾಗಿದ್ದಾನೆ. ಆತ ಹುಬ್ಬಳ್ಳಿಯ ತಾರಿಹಾಲ್ ಕೈಗಾರಿಕಾ ಪ್ರದೇಶದ ಬಳಿಯ ಪಾಳುಬಿದ್ದ ಮನೆಯಲ್ಲಿ ವಾಸಿಸುತ್ತಿದ್ದಾಗಿ ಹೇಳಿಕೊಂಡಿದ್ದಾನೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ನಾವು ದಾಳಿ ಮಾಡದೇ ಹೋಗಿದ್ದರೆ ಇಷ್ಟು ಹೊತ್ತಿಗೆ Iran ಅಣ್ವಸ್ತ್ರ ರಾಷ್ಟ್ರವಾಗಿರುತ್ತಿತ್ತು': ಇಸ್ರೇಲ್ ಪ್ರಧಾನಿ ಬೆಂಜಮಿನ್ ನೇತನ್ಯಾಹು

IPL 2026: ತವರಿನಲ್ಲಿ ಮುಂಬೈ ಗೆ ಮುಖಭಂಗ; RCB ಗೆ 18 ರನ್ ಭರ್ಜರಿ ಗೆಲುವು!

7 ತಿಂಗಳ ಮಗುವಿಗಾಗಿ ಕೆಲಸದ ಸಮಯದ ಹೊಂದಾಣಿಕೆ ಕೋರಿದ ಭಾರತೀಯ ಉದ್ಯೋಗಿ; US ಮ್ಯಾನೇಜರ್ ಪ್ರತಿಕ್ರಿಯೆ ಬಗ್ಗೆ ಜಾಲತಾಣಗಳಲ್ಲಿ ಭಾರಿ ಚರ್ಚೆ!

ಗುರಿ ಇಟ್ಟಿದ್ದು ಜಿಹಾದಿ ಬಂಡುಕೋರರಿಗೆ, ಗುರಿಯಾಗಿದ್ದು ಸ್ಥಳೀಯ ಮಾರ್ಕೆಟ್; 100 ಕ್ಕೂ ಹೆಚ್ಚು ನಾಗರಿಕರ ಮಾರಣಹೋಮ!

IPL 2026: ಮುಂಬೈ ವಿರುದ್ದ ಭರ್ಜರಿ ಬ್ಯಾಟಿಂಗ್; ಬಾಬರ್ ಆಜಂ, ಕ್ರಿಸ್ ಗೇಯ್ಲ್ ದಾಖಲೆ ಮುರಿದ Virat Kohli!

SCROLL FOR NEXT