ಸರಕಾರಿ ನೌಕರರ ದಿನಾಚರಣೆ ಕಾರ್ಯಕ್ರಮದಲ್ಲಿ ಸಿಎಂ ಮತ್ತು ಡಿಸಿಎಂ 
ರಾಜ್ಯ

ಸರಕಾರ-ಜನರ ನಡುವಣ ಅರ್ಚಕರು ನೀವು; ಆಗುವ ಕೆಲಸಕ್ಕೂ ಸುಮ್ಮನೇ ಕೊಕ್ಕೆ ಹಾಕಬೇಡಿ, ಪದೇಪದೇ ಅಲೆಸಬೇಡಿ: ಡಿ.ಕೆ ಶಿವಕುಮಾರ್

ಕೆಲಸ ಆಗುವಂತಿದ್ದರೂ ಆ ದಾಖಲೆ, ಈ ದಾಖಲೆ ತೆಗೆದುಕೊಂಡು ಬಾ ಎಂದು ತಿರುಗಿಸುತ್ತಾರೆ. ಸಾರ್ವಜನಿಕರು ಸಲಾಂ ಹೊಡೆಯಬೇಕು, ಕಡಲೆ ಕಾಯಿ, ಹಣ್ಣು, ಕೋಳಿ ತಂದುಕೊಡಬೇಕು ಎನ್ನುವ ಧೋರಣೆ ಹೊಂದಿರುತ್ತಾರೆ.

ಬೆಂಗಳೂರು: ದೇವರು ಹಾಗೂ ನಮ್ಮ ಮಧ್ಯೆ ಅರ್ಚಕ ಇರುತ್ತಾನೆ. ಅದೇ ರೀತಿ ಸರ್ಕಾರ ಹಾಗೂ ಜನರ ನಡುವೆ ಸರ್ಕಾರಿ ನೌಕರರು ಇರುತ್ತಾರೆ. ನೀವು ಕೆಲಸಕ್ಕಾಗಿ ಜನರನ್ನು ಪದೇ, ಪದೇ ಕಚೇರಿಗೆ ತಿರುಗಿಸುವ ಕೆಲಸ ಮಾಡಬಾರದು. ಧನಾತ್ಮಕವಾಗಿ ಕೆಲಸ ಮಾಡಬೇಕು ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಸರ್ಕಾರಿ ನೌಕರರಿಗೆ ಕಿವಿಮಾತು ಹೇಳಿದರು.

ಬೆಂಗಳೂರಿನ ವಿಧಾನಸೌಧದಲ್ಲಿ ಸೋಮವಾರ ನಡೆದ ರಾಜ್ಯ ಸರಕಾರಿ ನೌಕರರ ದಿನಾಚರಣೆ- 2025 ಮತ್ತು ರಾಜ್ಯ ಮಟ್ಟದ ʼಸರ್ವೋತ್ತಮ ಸೇವಾʼ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಡಿಸಿಎಂ ಡಿ ಕೆ ಶಿವಕುಮಾರ್ ಅವರು ಮಾತನಾಡಿದರು. ಸರ್ಕಾರಿ ನೌಕರನಿಗೆ ಕೆಲಸವಾಗುವ ಬಗ್ಗೆ ತಿಳಿದಿರುತ್ತದೆ. ಆದರೂ ಸಾರ್ವಜನಿಕರನ್ನು ತಿರುಗಿಸುತ್ತಾರೆ. ಕೆಲವರಿಗೆ ಬರೀ ಕೊಕ್ಕೆ ಹಾಕುವುದೇ ಕೆಲಸ.

ಕೆಲಸ ಆಗುವಂತಿದ್ದರೂ ಆ ದಾಖಲೆ, ಈ ದಾಖಲೆ ತೆಗೆದುಕೊಂಡು ಬಾ ಎಂದು ತಿರುಗಿಸುತ್ತಾರೆ. ಸಾರ್ವಜನಿಕರು ಸಲಾಂ ಹೊಡೆಯಬೇಕು, ಕಡಲೆ ಕಾಯಿ, ಹಣ್ಣು, ಕೋಳಿ ತಂದುಕೊಡಬೇಕು ಎನ್ನುವ ಧೋರಣೆ ಹೊಂದಿರುತ್ತಾರೆ. ಇಂತಹ ಸನ್ನಿವೇಶಗಳನ್ನು ಈ ಹಿಂದೆ ಗ್ರಾಮೀಣ ಭಾಗದಲ್ಲಿ ನೋಡಿದ್ದೇನೆ. ಇದರ ಬಗ್ಗೆ ರಾಜಕಾರಣದ ಜೀವನದಲ್ಲಿರುವ ನನಗೂ ಅನುಭವಕ್ಕೆ ಬಂದಿದೆ. ನೀವು ಈ ರೀತಿ ಕೆಲಸ ಮಾಡಬಾರದು” ಎಂದರು.

“ಹಣ ಇದ್ದರೆ ಕುಟುಂಬವನ್ನು ಮಾತ್ರ ಪೋಷಿಸುತ್ತೇವೆ. ಅಧಿಕಾರ ಇದ್ದರೆ ಜನಸಾಮಾನ್ಯರಿಗೂ ಸಹಾಯ ಮಾಡುವ ಅವಕಾಶ ದೊರೆಯತ್ತದೆ. ಇಂತಹ ಸದಾವಕಾಶ ಸರ್ಕಾರಿ ನೌಕರರಿಗೆ ದೊರೆತಿದೆ. ರಾಜ್ಯದಲ್ಲಿ ಸುಮಾರು 12.5 ಲಕ್ಷ ಸರ್ಕಾರಿ ನೌಕರರು ಇದ್ದೀರಿ. ಯಾರಿಗೂ ಸಿಗದಂತಹ ಅವಕಾಶ ನಿಮಗೆ ಸಿಕ್ಕಿದೆ. 50-100 ಹುದ್ದೆಗಳಿಗೆ ಲಕ್ಷಾಂತರ ಜನರು ಅರ್ಜಿ ಹಾಕುತ್ತಾರೆ. ಇಂತಹ ಸ್ಪರ್ಧೆಯ ನಡುವೆ ನಿಮಗೆ ಸಿಕ್ಕಿರುವ ಅವಕಾಶ ಸರಿಯಾಗಿ ಬಳಸಿಕೊಳ್ಳಿ” ಎಂದು ಹೇಳಿದರು.

ನಮ್ಮೆಲ್ಲರ ಬದುಕಿಗೆ ಪೋಷಕರು, ಶಿಕ್ಷಕರು ಸೇರಿದಂತೆ ಅನೇಕರು ಅವಕಾಶಗಳನ್ನು ಮಾಡಿಕೊಡುತ್ತಾರೆ. ಪ್ರಜಾಪ್ರಭುತ್ವದ ಅಡಿ ನಾವು ಕೆಲಸ ಮಾಡುತ್ತಿದ್ದೇವೆ. ಶಾಸಕಾಂಗ ತೀರ್ಮಾನ ಮಾಡಿದ್ದನ್ನು ಜಾರಿಗೆ ತರುವ ಕಾರ್ಯಾಂಗ ಸರ್ಕಾರಿ ನೌಕರರು. ನೀವು, ನಾವು ತಪ್ಪು ಮಾಡಿದರೆ ನಮ್ಮನ್ನು ತಿದ್ದುವುದು ನ್ಯಾಯಾಂಗ. ನ್ಯಾಯಾಂಗ, ಕಾರ್ಯಾಂಗ, ಶಾಸಕಾಂಗ ಈ ಮೂರು ಕೂಡ ಒಂದೇ ಕಡೆ ಇರುವುದು ಪ್ರಪಂಚದಲ್ಲಿ ಬೇರೆ ಎಲ್ಲಿಯೂ ಇಲ್ಲ.

ಜೊತೆಗೆ ಪತ್ರಿಕಾಂಗ ಕೂಡ ತಪ್ಪು ಮಾಡಿದಾಗ ತಿದ್ದುತ್ತದೆ. ನಮ್ಮ ತಪ್ಪು ಹೇಳಿದಾಗ ಕೋಪ ಮಾಡಿಕೊಳ್ಳಬಾರದು. ಬದಲಾಗಿ ನಮ್ಮ ತಪ್ಪನ್ನು ತಿದ್ದಿಕೊಳ್ಳಬೇಕು. ನಾವು ತಪ್ಪು ಮಾಡಿದರೆ ತಾನೇ ಅವರು ಬರೆಯವುದು. ನಾವು ತಪ್ಪೇ ಮಾಡದೇ ಇದ್ದರೆ ಯಾರು ನಮ್ಮ ಬಗ್ಗೆ ಬರೆಯುವುದಿಲ್ಲ” ಎಂದರು.

“ನಾವು ದೇವಸ್ಥಾನಕ್ಕೆ ಹೋಗಿ ದೇವರ ಬಳಿ ನಮ್ಮ ಕುಟುಂಬ, ಮಕ್ಕಳಿಗೆ ಒಳ್ಳೆಯದಾಗಬೇಕು ಎಂದು ಬೇಡಿಕೊಳ್ಳುತ್ತೇವೆ. ಜನರಿಗೆ ಏನಾದರೂ ತೊಂದರೆ ಉಂಟಾದಾಗ ಮಾತ್ರ ನಿಮ್ಮ ಬಳಿ ಬರುತ್ತಾರೆ. ತೊಂದರೆ ಇಲ್ಲದೇ ಹೋದರೆ ಕೆಲಸ ಸರಾಗವಾಗಿ ಹೋಗುತ್ತದೆ” ಎಂದು ಹೇಳಿದರು.

“ಸರ್ಕಾರಿ ನೌಕರರು ಕೇವಲ ಸೇವಕರಲ್ಲ, ಸಮಾಜ ಸೇವೆ ಮಾಡಲು ಸಿಕ್ಕಿರುವ ಅವಕಾಶ ಎಂದು ನೀವು ತಿಳಿಯಬೇಕು. ಮರಕ್ಕೆ ಬೇರಿನ ಮೇಲೆ, ಮಕ್ಕಳಿಗೆ ತಾಯಿಯ ಮೇಲೆ, ಭಕ್ತನಿಗೆ ದೇವರ ಮೇಲೆ ನಂಬಿಕೆ, ಅದೇ ರೀತಿ ನಾವು ನಿಮ್ಮ ಮೇಲೆಯೇ ನಂಬಿಕೆ ಇಟ್ಟಿರುತ್ತೇವೆ. ನಾವು ಏನೇ ತೀರ್ಮಾನ ಮಾಡಬಹುದು ಆದರೆ ಅದನ್ನು ಜಾರಿಗೆ ತರುವವರು, ನಾವು ಮಾಡಿರುವ ತೀರ್ಮಾನದಲ್ಲಿರುವ ಲೋಪಗಳನ್ನು ತಿಳಿಸುವವರು ನೀವು” ಎಂದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ರಾಜ್ಯದಲ್ಲಿ ಸಿಎಂ ಗದ್ದುಗೆ ಗುದ್ದಾಟ: ಎಲ್ಲ ಗೊಂದಲಗಳಿಗೆ ಹೈಕಮಾಂಡ್ ತೆರೆ ಎಳೆಯಬೇಕು- ಸಿಎಂ ಸಿದ್ದರಾಮಯ್ಯ

ಸ್ಮೃತಿ ಮಂಧಾನ ಮದುವೆ ಮುಂದೂಡಿಕೆಗೆ ಅಸಲಿ ಕಾರಣ? ಪರಸ್ತ್ರೀ ಮೋಹ, ನಂಬಿಕೆ ದ್ರೋಹ: ಬಯಲಾಯ್ತು ಪಲಾಶ್'ನ ಅಸಲಿ ರಂಗಿನಾಟ!

ಪಶ್ಚಿಮ ಬಂಗಾಳದಲ್ಲಿ ವಿವಾದಿತ SIR ಕುರಿತು ಮಾತುಕತೆಗೆ ಟಿಎಂಸಿಗೆ ಚುನಾವಣಾ ಆಯೋಗ ಆಹ್ವಾನ

ಇದು ಕೇವಲ ಧ್ವಜವಲ್ಲ ಭಾರತೀಯ ನಾಗರಿಕತೆಯ ಪುನರ್‌ ಜಾಗೃತಿಯ ಧ್ವಜ, ಶತಮಾನಗಳಷ್ಟು ಹಳೆಯ ಗಾಯ ಈಗ ವಾಸಿಯಾಗುತ್ತಿದೆ: ಪ್ರಧಾನಿ ಮೋದಿ

ಕೆಲಸದ ಹೊರೆ ಖಂಡಿಸಿ ಪಶ್ಚಿಮ ಬಂಗಾಳ CEO ಕಚೇರಿ ಮುಂದೆ BLOಗಳಿಂದ ಅಹೋರಾತ್ರಿ ಧರಣಿ!

SCROLL FOR NEXT