ಸಾಂದರ್ಭಿಕ ಚಿತ್ರ 
ರಾಜ್ಯ

ರಾಜ್ಯದಲ್ಲಿನ ಶೇ. 23ಕ್ಕೂ ಹೆಚ್ಚು ಭೂ ದಾಖಲೆಗಳು ಮೃತ ಮಾಲೀಕರ ಹೆಸರಿನಲ್ಲಿ!

ಕಂದಾಯ ಇಲಾಖೆಯು 2.25 ಕೋಟಿ ಭೂಮಾಲೀಕರ ಆಧಾರ್ ಸಂಖ್ಯೆಯನ್ನು ಅವರ ಆರ್‌ಟಿಸಿಗಳೊಂದಿಗೆ ಜೋಡಿಸುವುದನ್ನು ಪೂರ್ಣಗೊಳಿಸಿದೆ.

ಬೆಂಗಳೂರು: ಭೂಮಿ ಹಕ್ಕುಗಳು, ಹಿಡುವಳಿ ಮತ್ತು ಬೆಳೆಗಳ ದಾಖಲೆ (ಆರ್‌ಟಿಸಿ) ಯೊಂದಿಗೆ ಆಧಾರ್ ಲಿಂಕ್ ಮಾಡುವ ಅಭಿಯಾನವನ್ನು ರಾಜ್ಯ ಸರ್ಕಾರ ಆರಂಭಿಸಿದೆ, ಇದೇ ವೇಳೆ ಭೂ ಮಾಲೀಕತ್ವಕ್ಕೆ ಸಂಬಂಧಿಸಿದ ಶೇ. 23% ಕ್ಕಿಂತ ಹೆಚ್ಚು ದಾಖಲೆಗಳು ಮೃತ ಮಾಲಿಕರ ಹೆಸರಿನಲ್ಲಿವೆ ಎಂದು ತಿಳಿದು ಬಂದಿದೆ.

ಮೇ ಅಂತ್ಯದ ವೇಳೆಗೆ ಸರ್ಕಾರವು ಪಿತ್ರಾರ್ಜಿತ ದಾಖಲೆ ಅಭಿಯಾನವನ್ನು ಪ್ರಾರಂಭಿಸುತ್ತದೆ. ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್‌ನಲ್ಲಿ ಲಭ್ಯವಿರುವ ದಾಖಲೆಗಳ ಪ್ರಕಾರ, 4.20 ಕೋಟಿ ಭೂ ಮಾಲೀಕರು ಅವರ ಆಧಾರ್ ಸಂಖ್ಯೆಯನ್ನು RTC ಗಳೊಂದಿಗೆ ಲಿಂಕ್ ಮಾಡಬೇಕಾಗಿದೆ.

ಕಂದಾಯ ಇಲಾಖೆಯು 2.25 ಕೋಟಿ ಭೂಮಾಲೀಕರ ಆಧಾರ್ ಸಂಖ್ಯೆಯನ್ನು ಅವರ ಆರ್‌ಟಿಸಿಗಳೊಂದಿಗೆ ಜೋಡಿಸುವುದನ್ನು ಪೂರ್ಣಗೊಳಿಸಿದೆ. ಅವರಲ್ಲಿ 52.40 ಲಕ್ಷ ಮಾಲೀಕರು ಸಾವನ್ನಪ್ಪಿದ್ದಾರೆ ಎಂದು ವರದಿಯೊಂದು ತಿಳಿಸಿದೆ.

ತುಮಕೂರು ಜಿಲ್ಲೆಯಲ್ಲಿ ಅತಿ ಹೆಚ್ಚು ಪ್ರಕರಣಗಳಿದ್ದು, 5.61 ಲಕ್ಷ ಮಾಲೀಕರು ಮೃತಪಟ್ಟಿದ್ದಾರೆ ಎಂದು ಘೋಷಿಸಲಾಗಿದೆ, ನಂತರದ ಸ್ಥಾನದಲ್ಲಿ 4.7 ಲಕ್ಷ ಮಾಲೀಕರೊಂದಿಗೆ ಬೆಳಗಾವಿ, 3.7 ಲಕ್ಷ ಮಂಡ್ಯ ಮತ್ತು ಕೊಡಗು ಮತ್ತು ಕೋಲಾರದಲ್ಲಿ ತಲಾ 2.8 ಲಕ್ಷ ದಾಖಲೆಗಳು ಸತ್ತ ಮಾಲೀಕರ ಹೆಸರಲ್ಲಿಯೇ ಮುಂದುವರಿಯುತ್ತಿವೆ.

4.2 ಕೋಟಿ ಮಾಲೀಕರ ಆಧಾರ್ ಸಂಖ್ಯೆಯನ್ನು ಆರ್‌ಟಿಸಿಯೊಂದಿಗೆ ಲಿಂಕ್ ಮಾಡಿದರೆ ಸತ್ತ ಭೂ ಮಾಲೀಕರ ಸಂಖ್ಯೆ ಹೆಚ್ಚಾಗುವ ನಿರೀಕ್ಷೆಯಿದೆ. ಭೂಮಾಲೀಕನ ಮರಣದ ನಂತರ, ಭೂಮಿಯನ್ನು ಅವನ ಕಾನೂನುಬದ್ಧ ಉತ್ತರಾಧಿಕಾರಿಗಳಿಗೆ ವರ್ಗಾಯಿಸಬೇಕು. ಸರ್ಕಾರ ಗ್ರಾಮ ಅದಾಲತ್‌ಗಳನ್ನು ಆರಂಭಿಸಿದ್ದು, ನ್ಯಾಯಾಲಯದಲ್ಲಿ ಇಲ್ಲದ ಪ್ರಕರಣಗಳನ್ನು ಕಂದಾಯ ಇಲಾಖೆಯ ನಿಯೋಜಿತ ಅಧಿಕಾರಿ ವಿಲೇವಾರಿ ಮಾಡುತ್ತಾರೆ.

ಹಕ್ಕುಗಳ ದಾಖಲೆ, ಹಿಡುವಳಿ ಮತ್ತು ಬೆಳೆಗಳು ಇನ್ನೂ ಸತ್ತ ವ್ಯಕ್ತಿಗಳ ಹೆಸರಿನಲ್ಲಿರುವುದರಿಂದ (ಹೆಚ್ಚಾಗಿ ಪೋಷಕರು), ನೈಸರ್ಗಿಕ ವಿಪತ್ತುಗಳ ಸಂದರ್ಭದಲ್ಲಿ ಪರಿಹಾರ ಅಥವಾ ಬ್ಯಾಂಕ್‌ಗಳಿಂದ ಸಾಲ ಸೇರಿದಂತೆ ಅನೇಕ ಪ್ರಯೋಜನಗಳನ್ನು ಪಡೆಯಲು ಸಾಧ್ಯವಾಗುವುದಿಲ್ಲ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಅಫ್ಘಾನಿಸ್ತಾನ ನಮ್ಮೊಂದಿಗೆ ಗಡಿ ಹಂಚಿಕೊಂಡಿರುವ ನೆರೆ ರಾಷ್ಟ್ರ- S Jaishankar; ಭಾರತದೊಂದಿಗೆ POK ವಿಲೀನದ ಸುಳಿವು; ಚೀನಾಗೂ ಶಾಕ್!

ಅಬ್ಬಬ್ಬಾ ರೋಮಾಂಚನ: ಅದ್ಭುತ ಸೃಷ್ಟಿಸಿದ ರಿಷಬ್ ಶೆಟ್ಟಿಗೆ ರಾಷ್ಟ್ರಪ್ರಶಸ್ತಿ ಕೊಡಲೇಬೇಕು - ತಮಿಳು ನಿರ್ದೇಶಕ ಅಟ್ಲೀ

Pakistan: ಇಸ್ರೇಲ್ ವಿರೋಧಿ ಪ್ರತಿಭಟನಾ ಜಾಥಾ, ಪೋಲೀಸರ ಗುಂಡೇಟಿಗೆ 11 ಮಂದಿ ಬಲಿ! Video

ಉತ್ತರ ಪ್ರದೇಶಕ್ಕೆ ಭೇಟಿ ನೀಡಿದ ತಾಲಿಬಾನ್ ಸಚಿವನಿಗೆ ಅದ್ಧೂರಿ ಸ್ವಾಗತ, ಸರ್ಕಾರದ ಭದ್ರತೆ; ಯೋಗಿಗೆ ನಾಚಿಕೆಯಾಗಬೇಕು- SP ಸಂಸದ ಶಫೀಕರ್

Aligarh Businessman Murder: ಹಿಂದೂ ಮಹಾಸಭಾ ನಾಯಕಿ ಪೂಜಾ ಶಕುನ್ ಪಾಂಡೆ ಬಂಧನ! ಉದ್ಯಮಿಗೆ ಲೈಂಗಿಕ ಕಿರುಕುಳ ನೀಡಿದ್ರಾ?

SCROLL FOR NEXT