ಶ್ರೀ ಗಣೇಶ ಶರ್ಮಾ ದ್ರಾವಿಡ್ 
ರಾಜ್ಯ

ಕಂಚಿ ಕಾಮಕೋಟಿ ಪೀಠದ ಕಿರಿಯ ಮಠಾಧೀಶರಾಗಿ ಶ್ರೀ ಶ್ರೀ ಗಣೇಶ ಶರ್ಮಾ ದ್ರಾವಿಡ್ ಸನ್ಯಾಸ ದೀಕ್ಷೆ ಸ್ವೀಕಾರ

ಆಂಧ್ರಪ್ರದೇಶದ ಅಣ್ಣಾವರಂ ಕ್ಷೇತ್ರದ ಋಗ್ವೇದ ವಿದ್ವಾಂಸ (ಸಲಕ್ಷಣ ಘನಪತಿ) ಶ್ರೀ ಗಣೇಶ ಶರ್ಮಾ ದ್ರಾವಿಡ್ ಅವರು ತೆಲಂಗಾಣದ ನಿಜಾಮಾಬಾದ್‌ನ ಬಸರಂನಲ್ಲಿರುವ ಶ್ರೀ ಜ್ಞಾನ ಸರಸ್ವತಿ ದೇವಸ್ಥಾನದಲ್ಲಿ ಸೇವೆ ಸಲ್ಲಿಸಿದ್ದಾರೆ.

ಬೆಂಗಳೂರು: ತಮಿಳುನಾಡಿನ ಕಾಂಚೀಪುರಂನಲ್ಲಿ ಶ್ರೀ ದುಡ್ಡು ಸತ್ಯ ವೆಂಕಟ ಸೂರ್ಯ ಸುಬ್ರಹ್ಮಣ್ಯ ಗಣೇಶ ಶರ್ಮ ದ್ರಾವಿಡ್ ಅವರಿಗೆ ಕಂಚಿ ಕಾಮಕೋಟಿ ಪೀಠಾಧಿಪತಿ ಜಗದ್ಗುರು ಶ್ರೀ ಶಂಕರ ವಿಜಯೇಂದ್ರ ಸರಸ್ವತಿ ಶಂಕರಾಚಾರ್ಯ ಸ್ವಾಮಿಗಳು ಅಕ್ಷಯ ತೃತೀಯ ಸಂದರ್ಭದಲ್ಲಿ ಸನ್ಯಾಸ ದೀಕ್ಷೆ ನೀಡಲಿದ್ದಾರೆ ಎಂದು ಕಂಚಿ ಕಾಮಕೋಟಿ ಪೀಠದ ಪ್ರಕಟಣೆ ತಿಳಿಸಿದೆ.

ಕಾಂಚೀಪುರಂನಲ್ಲಿ ಶ್ರೀ ಕಂಚಿ ಕಾಮಕೋಟಿ ಪೀಠವನ್ನು ಸ್ಥಾಪಿಸಿದ ಜಗದ್ಗುರು ಆದಿ ಶಂಕರಾಚಾರ್ಯರ 2534 ನೇ ಜಯಂತಿ ಮಹೋತ್ಸವ (ಮೇ 2) ರಂದು ಇದೆ ಎಂದು ಪ್ರಕಟಣೆ ತಿಳಿಸಿದೆ.

ಆಂಧ್ರಪ್ರದೇಶದ ಅಣ್ಣಾವರಂ ಕ್ಷೇತ್ರದ ಋಗ್ವೇದ ವಿದ್ವಾಂಸ (ಸಲಕ್ಷಣ ಘನಪತಿ) ಶ್ರೀ ಗಣೇಶ ಶರ್ಮಾ ದ್ರಾವಿಡ್ ಅವರು ತೆಲಂಗಾಣದ ನಿಜಾಮಾಬಾದ್‌ನ ಬಸರಂನಲ್ಲಿರುವ ಶ್ರೀ ಜ್ಞಾನ ಸರಸ್ವತಿ ದೇವಸ್ಥಾನದಲ್ಲಿ ಸೇವೆ ಸಲ್ಲಿಸಿದರು. 2006 ರಲ್ಲಿ ವೇದಾಧ್ಯಯನ ಆರಂಭಿಸಿದಂದಿನಿಂದ, ಅವರಿಗೆ ಶ್ರೀ ಕಾಂಚಿ ಕಾಮಕೋಟಿ ಪೀಠದ ಶ್ರೀ ಶಂಕರಾಚಾರ್ಯ ಸ್ವಾಮಿಗಳ ಆಶೀರ್ವಾದ ಮತ್ತು ಅನುಗ್ರಹ ದೊರೆತಿದೆ.

ಶ್ರೀ ಗಣೇಶ್ ಶರ್ಮಾ ದ್ರಾವಿಡ್ ಅವರು ಋಗ್ವೇದದ ಜೊತೆಗೆ ಯಜುರ್ವೇದ, ಸಾಮವೇದ, ಷಡಂಗಗಳು, ದಶೋಪನಿಷತ್ತುಗಳನ್ನು ಸಹ ಪೂರ್ಣಗೊಳಿಸಿದ್ದಾರೆ ಮತ್ತು ಶಾಸ್ತ್ರಿ ಅಧ್ಯಯನವನ್ನು ಮುಂದುವರಿಸಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ನಾವು ದಾಳಿ ಮಾಡದೇ ಹೋಗಿದ್ದರೆ ಇಷ್ಟು ಹೊತ್ತಿಗೆ Iran ಅಣ್ವಸ್ತ್ರ ರಾಷ್ಟ್ರವಾಗಿರುತ್ತಿತ್ತು': ಇಸ್ರೇಲ್ ಪ್ರಧಾನಿ ಬೆಂಜಮಿನ್ ನೇತನ್ಯಾಹು

IPL 2026: ತವರಿನಲ್ಲಿ ಮುಂಬೈ ಗೆ ಮುಖಭಂಗ; RCB ಗೆ 18 ರನ್ ಭರ್ಜರಿ ಗೆಲುವು!

7 ತಿಂಗಳ ಮಗುವಿಗಾಗಿ ಕೆಲಸದ ಸಮಯದ ಹೊಂದಾಣಿಕೆ ಕೋರಿದ ಭಾರತೀಯ ಉದ್ಯೋಗಿ; US ಮ್ಯಾನೇಜರ್ ಪ್ರತಿಕ್ರಿಯೆ ಬಗ್ಗೆ ಜಾಲತಾಣಗಳಲ್ಲಿ ಭಾರಿ ಚರ್ಚೆ!

ಗುರಿ ಇಟ್ಟಿದ್ದು ಜಿಹಾದಿ ಬಂಡುಕೋರರಿಗೆ, ಗುರಿಯಾಗಿದ್ದು ಸ್ಥಳೀಯ ಮಾರ್ಕೆಟ್; 100 ಕ್ಕೂ ಹೆಚ್ಚು ನಾಗರಿಕರ ಮಾರಣಹೋಮ!

IPL 2026: ಮುಂಬೈ ವಿರುದ್ದ ಭರ್ಜರಿ ಬ್ಯಾಟಿಂಗ್; ಬಾಬರ್ ಆಜಂ, ಕ್ರಿಸ್ ಗೇಯ್ಲ್ ದಾಖಲೆ ಮುರಿದ Virat Kohli!

SCROLL FOR NEXT