ಬೆಂಗಳೂರು: ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ (ಬಿಡಬ್ಲ್ಯೂಎಸ್ಎಸ್ಬಿ), ಆರ್ಥಿಕವಾಗಿ ಸಂಕಷ್ಟದಲ್ಲಿದ್ದು ಅದನ್ನು ಸರಿಪಡಿಸಲು ಪ್ರಯತ್ನಗಳನ್ನು ಮಾಡುತ್ತಿದೆ ಎಂದು ಹೇಳಿಕೊಂಡಿದೆ.
ಹೀಗಾಗಿ ಅನಧಿಕೃತ ನೀರಿನ ಸಂಪರ್ಕ ಹೊಂದಿದ್ದ 383 ಮನೆಗಳು ಮತ್ತು ಅಪಾರ್ಟ್ಮೆಂಟ್ ಸಂಕೀರ್ಣಗಳಿಗೆ ನೋಟಿಸ್ ಕಳುಹಿಸಲು ಪ್ರಾರಂಭಿಸಿದೆ. ದಂಡದ ಜೊತೆಗೆ ಶುಲ್ಕವನ್ನು ಪಾವತಿಸುವ ಮೂಲಕ ಸಂಪರ್ಕಗಳನ್ನು ಕ್ರಮಬದ್ಧಗೊಳಿಸುವಂತೆ ಸೂಚಿಸಿದೆ.
ಅಪಾರ್ಟ್ಮೆಂಟ್ ಗಳಿಂದ ಸಂಸ್ಕರಿಸದ ನೀರು ಮಂಡಳಿಗೆ ದೊಡ್ಡ ಸವಾಲಾಗಿದೆ, ಆದ್ದರಿಂದ ಸಂಕೀರ್ಣದ ಗಾತ್ರವನ್ನು ಅವಲಂಬಿಸಿ ಲಕ್ಷಗಳಿಂದ 1 ಕೋಟಿ ರೂ.ಗಳವರೆಗೆ ದಂಡ ವಿಧಿಸಲಾಗಿದೆ ಎಂದು ಮಂಡಳಿಯ ಅಧ್ಯಕ್ಷ ರಾಮ್ ಪ್ರಸಾತ್ ಮನೋಹರ್ ತಿಳಿಸಿದ್ದಾರೆ.
ಈ ಸಂಪರ್ಕಗಳನ್ನು ಕ್ರಮಬದ್ಧಗೊಳಿಸುವುದು ಅಥವಾ ದಂಡ ವಿಧಿಸುವ ಮೂಲಕ, ಬಿಡಬ್ಲ್ಯೂಎಸ್ಎಸ್ಬಿ 200 ಕೋಟಿ ರೂ.ಗಳ ಆದಾಯವನ್ನು ಗಳಿಸುವ ಗುರಿಯನ್ನು ಹೊಂದಿದೆ ಎಂದು ಅವರು ಹೇಳಿದರು, ಕಳೆದ 15 ದಿನಗಳಿಂದ ಬಿಡಬ್ಲ್ಯೂಎಸ್ಎಸ್ ಬಿ ಸೇವೆಗಳನ್ನು ಕಡಿತಗೊಳಿಸುತ್ತಿದೆ ಮತ್ತು ಮುಂದಿನ 15 ದಿನಗಳಲ್ಲಿ ಕ್ರಮಬದ್ಧಗೊಳಿಸುವ ಪ್ರಕ್ರಿಯೆ ಆರಂಭಿಸಲಾಗುವುದು ಎಂದು ಹೇಳಿದರು.
ಬಿಡಬ್ಲ್ಯೂಎಸ್ಎಸ್ಬಿ ತಂಡವು ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ (ಬೆಸ್ಕಾಮ್) ಸಂಪರ್ಕ ಡೇಟಾವನ್ನು ಬಳಸಿದೆ ಮತ್ತು ಅನಧಿಕೃತ ಬಿಡಬ್ಲ್ಯೂಎಸ್ಎಸ್ಬಿ ಸಂಪರ್ಕಗಳ ಬಗ್ಗೆ ತನಿಖೆ ನಡೆಸಿದೆ ಎಂದು ಅಧ್ಯಕ್ಷರು ಹೇಳಿದರು.
ನೀರಿನ ಸಂಪರ್ಕ ಪಡೆಯದೇ ಅಕ್ರಮವಾಗಿ ನೀರಿನ ಸಂಪರ್ಕ ಪಡೆದು 383 ಅಪಾರ್ಟ್ಮೆಂಟ್ ಗಳು 43 ಸಾವಿರ ಮನೆಗಳು ಅಕ್ರಮವಾಗಿ ನೀರಿನ ಸಂಪರ್ಕ ಪಡೆದಿರೋದು ಜಲಮಂಡಳಿ ತನಿಖೆಯಲ್ಲಿ ಬಯಲಾಗಿದೆ.
ಒಟ್ಟಾರೆ ಬೆಂಗಳೂರಿನಲ್ಲಿ ಕಾವೇರಿ ನೀರಿನ ಸಂಪರ್ಕವನ್ನ ಅಕ್ರಮವಾಗಿ ಪಡೆಯುತ್ತಿರುವ ಮನೆಗಳಿಗೆ ಅಪಾರ್ಟ್ಮೆಂಟ್‌ಗಳಿಗೆ ಜಲಮಂಡಳಿ ಬಿಸಿ ಮುಟ್ಟಿಸಿದೆ. ಅಧಿಕೃತವಾಗಿ ನೀರಿನ ಸಂಪರ್ಕ ಪಡೆಯದೇ ಅಕ್ರಮವಾಗಿ ಪಡೆಯುತ್ತಿರುವುದು ಬಯಲಾಗಿದ್ದು, ಯಾರೇ ತಪ್ಪು ಮಾಡಿದ್ರು ನೀರಿನ ಸಂಪರ್ಕ ಕಡಿತವಾಗೋದು ಕಟ್ಟಿಟ್ಟಬುತ್ತಿಯಾಗಿದೆ.