ಬೆಂಗಳೂರು: ಬನ್ನೇರುಘಟ್ಟದ ಜೈವಿಕ ಉದ್ಯಾನವನದ ಸಫಾರಿ ವೇಳೆ ಚಿರತೆಯೊಂದು ಬಾಲಕನ ಮೇಲೆ ದಾಳಿ ಮಾಡಿರುವ ಘಟನೆ ನಡೆದಿದೆ. 79ನೇ ಸ್ವಾತಂತ್ರೋತ್ಸವ ದಿನದ ಹಿನ್ನೆಲೆಯಲ್ಲಿ ಕುಟುಂಬವೊಂದು ಸಫಾರಿಗೆ ತೆರಳಿತ್ತು. ಇಂದು ಮಧ್ಯಾಹ್ನ ರಸ್ತೆಯಲ್ಲಿ ಚಿರತೆಯನ್ನು ನೋಡಿದ ಚಾಲಕ ಬೊಲೆರೋ ಕಾರುನ್ನು ನಿಲ್ಲಿಸಿದ್ದಾನೆ. ನಂತರ ನಿಧಾನವಾಗಿ ಬೊಲೆರೋ ಮುಂದಕ್ಕೆ ಹೋಗುತ್ತಿದ್ದಾಗ ಹಿಂಬಾಲಿಸಿದ ಚಿರತೆ ಕಿಟಕಿಯ ಮೂಲಕ ಕೈ ಹಾಕಿ ಉಗುರಿನಿಂದ 13 ವರ್ಷದ ಬಾಲಕನಿಗೆ ಮಾಂಸ ಕಿತ್ತು ಬರುವಂತೆ ಕೈಗೆ ಪರಚಿದೆ. ಸದ್ಯ ಗಾಯಾಳು ಬಾಲಕನಿಗೆ ಸ್ಥಳೀಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ. ಇನ್ನು ಚಿರತೆ ದಾಳಿಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.