ಬೆಂಗಳೂರು: ತಿನ್ನಲು ಯೋಗ್ಯವಲ್ಲ ಎಂದು ಎರಡು ನಾಟಿ ಹಸುಗಳ ಕತ್ತು ಕೊಯ್ದು ರಸ್ತೆ ಬದಿಯಲ್ಲಿ ಬಿಸಾಡಿದ್ದ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. 35 ವರ್ಷದ ಸೈಯದ್ ನವಾಜ್ ಮತ್ತು 30 ವರ್ಷದ ಇಮ್ರಾನ್ ಸೇರಿದಂತೆ ಮೂವರು ಆರೋಪಿಗಳನ್ನು ನೆಲಮಂಗಲ ಗ್ರಾಮಾಂತರ ಠಾಣೆಯ ಪೊಲೀಸರು ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ. ನೆಲಮಂಗಲದ ಅರಳಸಂದ್ರ ಗ್ರಾಮದ ಸೇತುವೆಯ ಮೇಲೆ ಎರಡು ನಾಟಿ ಹಸುಗಳ ಮೃತದೇಹ ಪತ್ತೆಯಾಗಿತ್ತು. ಹಸು ಕಡಿದು ಮಾಂಸ ಮಾರಲು ಕೇರಳಕ್ಕೆ ಹಸುಗಳನ್ನು ಬಂಧಿತರು ಸಾಗಿಸುತ್ತಿದ್ದರು ಎನ್ನಲಾಗಿದೆ.