ಸುಜಾತ ಭಟ್ 
ರಾಜ್ಯ

ಧರ್ಮಸ್ಥಳದಲ್ಲಿ MBBS ವಿದ್ಯಾರ್ಥಿನಿ ಅನನ್ಯಾ ಭಟ್​ ನಾಪತ್ತೆ ಪ್ರಕರಣ: SITಗೆ ಹಸ್ತಾಂತರ!

2003ರಲ್ಲಿ ಧರ್ಮಸ್ಥಳಕ್ಕೆ ಬಂದಿದ್ದ ಅನನ್ಯಾ ಭಟ್​ ನಾಪತ್ತೆಯಾಗಿದ್ದಳು. ಆಕೆಯನ್ನು ಹುಡುಕಿಕೊಡಿ ಎಂದು ಸುಜಾತ ಭಟ್​ ಆರೋಪ ಮಾಡಿದ್ದರು.

ಮಂಗಳೂರು: ಧರ್ಮಸ್ಥಳ ಬುರುಡೆ ಪ್ರಕರಣ ದೇಶಾದ್ಯಂತ ಸಾಕಷ್ಟು ಚರ್ಚೆಗೆ ಗ್ರಾಸವಾಗಿತ್ತು. ಇದರ ಬೆನ್ನಲ್ಲೇ ನನ್ನ ಮಗಳು ಎಂಬಿಬಿಎಸ್ ವಿದ್ಯಾರ್ಥಿನಿ ಅನನ್ಯಾ ಭಟ್ 2003ರಲ್ಲಿ ನಾಪತ್ತೆಯಾಗಿದ್ದಾಳೆ ಎಂದು ಸುಜಾತ ಭಟ್ ಎಂಬುವರು ಧರ್ಮಸ್ಥಳ ಪೊಲೀಸ್​ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಈ ಪ್ರಕರಣವನ್ನು ಇದೀಗ ಎಸ್​ಐಟಿಗೆ ಹಸ್ತಾಂತರಿಸಲಾಗಿದೆ.

2003ರಲ್ಲಿ ಧರ್ಮಸ್ಥಳಕ್ಕೆ ಬಂದಿದ್ದ ಅನನ್ಯಾ ಭಟ್​ ನಾಪತ್ತೆಯಾಗಿದ್ದಳು. ಆಕೆಯನ್ನು ಹುಡುಕಿಕೊಡಿ ಎಂದು ಸುಜಾತ ಭಟ್​ ಆರೋಪ ಮಾಡಿದ್ದರು. ಈ ಸಂಬಂಧ ಅನನ್ಯಾ ಭಟ್ ಕುರಿತಂತೆ ಸಾಕಷ್ಟು ಅನುಮಾನಗಳು ಎದ್ದಿದ್ದವು. ಇದರ ಬೆನ್ನಲ್ಲೇ ಸುಜಾತ ಭಟ್ ಈಕೆ ನನ್ನ ಮಗಳು ಎಂದು ಫೋಟೋವೊಂದನ್ನು ತೋರಿಸಿದ್ದರು. ಆದರೆ ಅವರು ತೋರಿಸಿದ ಫೋಟೋ ಬಗ್ಗೆ ಗುಮಾನಿಗಳು ಎದ್ದಿದ್ದವು. ಯಾರದ್ದೋ ಫೋಟೋ ಕೊಟ್ಟು ಸುಜಾತ ಭಟ್ ಈಗ ಸಿಕ್ಕಿಹಾಕಿಕೊಂಡ್ರಾ ಎಂಬ ಪ್ರಶ್ನೆಗಳು ಎದ್ದಿವೆ.

ಹೌದು... ಈ ವಿಚಾರವಾಗಿ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಚರ್ಚೆಗಳು ಆಗಿದ್ದವು. ಅಸಲಿಗೆ ಸುಜಾತ ಭಟ್ ಗೆ ಮಕ್ಕಳೆ ಇಲ್ಲ ಎಂದು ಅವರ ಸಂಬಂಧಿಗಳು ತಿಳಿಸಿದ್ದರು. ಹೀಗಾಗಿ ಸುಜಾತ ಭಟ್ ಒತ್ತಡಕ್ಕೆ ಸಿಲುಕ್ಕಿದ್ದು ತಾನು ಮಾಡಿದ್ದ ಆರೋಪಕ್ಕೆ ಯಾವುದಾದರೊಂದು ಸಾಕ್ಷಿ ಕೊಡಲೇಬೇಕಾದ ಪರಿಸ್ಥಿತಿ ನಿರ್ಮಾಣವಾಗಿತ್ತು. ಹೀಗಾಗಿ ಇದರ ಬೆನ್ನಲ್ಲೇ ಲಾಯರ್ ಜೊತೆ ಕಾಣಿಸಿಕೊಂಡಿದ್ದ ಸುಜಾತ ಭಟ್. ಇವಳೇ ನನ್ನ ಮಗಳು ಅನನ್ಯಾ ಭಟ್​ ಎಂದು ಫೋಟೋ ರಿಲೀಸ್ ಮಾಡಿದ್ದರು. ಆದರೆ ಈ ಫೋಟೋದಲ್ಲಿ ಇರೋದು ಅನನ್ಯಾ ಭಟ್ ಅಲ್ಲ. ನನ್ನ ತಂಗಿ ವಾಸಂತಿ ಎಂದು ಕೊಡಗಿನ ವಿಜಯ್ ಎಂಬುವರು ಹೇಳಿದ್ದಾರೆ. ಅಲ್ಲದೆ ಆಕೆ ನನ್ನ ತಂಗಿ ವಾಸಂತಿ. ಆಕೆ 2007ರಲ್ಲಿ ಮೃತಪಟ್ಟಿದ್ದಳು ಎಂದು ವಿಜಯ್ ಹೇಳಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ತೀವ್ರ ವಿರೋಧದ ನಡುವೆಯೂ ಬಾನು ಮುಷ್ತಾಕ್ ಗೆ ದಸರಾ ಉದ್ಘಾಟನೆಗೆ ಅಧಿಕೃತ ಆಹ್ವಾನ ನೀಡಿದ ಜಿಲ್ಲಾಡಳಿತ!

ಪಾಕ್ ಹುಟ್ಟಡಗಿಸಿದ್ದ 'Game-Changer': ಭಾರತದ ಬತ್ತಳಿಕೆ ಸೇರಲಿವೆ ಮತ್ತಷ್ಟು S-400 ಏರ್ ಡಿಫೆನ್ಸ್ ಸಿಸ್ಟಮ್ಸ್!

Dharmasthala: ಸೌಜನ್ಯಾ ಪ್ರಕರಣದಲ್ಲಿ SIT ಮುಂದೆ ಹಾಜರಾದ Uday jain ಹೇಳಿದ್ದೇನು?

ವಿದೇಶಿಗರಿಂದ ಧರ್ಮೋಪದೇಶ ನಿಷೇಧ: ಮಿಲಾದ್-ಉನ್-ನಬಿ ಆಯೋಜಕರಿಗೆ ಪರಮೇಶ್ವರ ಸ್ಪಷ್ಟನೆ

Operation Sindoor ವೇಳೆ ಪಾಕಿಸ್ತಾನಕ್ಕೆ ನೆರವು, Azerbaijan ಶಾಕ್ ಕೊಟ್ಟ ಭಾರತ, SCO ಸದಸ್ಯತ್ವಕ್ಕೆ ತಡೆ! ಅಧ್ಯಕ್ಷ Ilham Aliyev ಹೇಳಿದ್ದೇನು?

SCROLL FOR NEXT