ಬೆಂಗಳೂರು: ಭಾರತದ 432 ಸಂಸ್ಥೆಗಳ 1,400ಕ್ಕೂ ಹೆಚ್ಚು ವಿದ್ಯಾರ್ಥಿಗಳನ್ನು ಆಕರ್ಷಿಸಿದ 10ನೇ ವಾರ್ಷಿಕ ಬೋಯಿಂಗ್ ರಾಷ್ಟ್ರೀಯ ಏರೋ ಮಾಡೆಲಿಂಗ್ ಸ್ಪರ್ಧೆಯಲ್ಲಿ ಮೈಸೂರಿನ ನಿಟ್ಟೆ ಮಹಾಲಿಂಗ ಕಾಲೇಜು ತಂಡ ಚಾಂಪಿಯನ್ ಆಗಿ ಹೊರಹೊಮ್ಮಿದೆ.
ಬೋಯಿಂಗ್ ರಾಷ್ಟ್ರೀಯ ಏರೋಮಾಡೆಲಿಂಗ್ ಸ್ಪರ್ಧೆಯ ಗ್ರ್ಯಾಂಡ್ ಫಿನಾಲೆ ಬೆಂಗಳೂರಿನಲ್ಲಿ ನಡೆದಿದ್ದು, ಸ್ಪರ್ಧೆಯಲ್ಲಿ ಮೈಸೂರಿನ ನಿಟ್ಟೆ ಮಹಾಲಿಂಗ ಕಾಲೇಜಿನ ಪ್ರಜ್ವಲ್ ಬಿಟಿ, ಆಶಿಕ್, ಪ್ರದ್ಯುಮ್ನ ಭಟ್ ಮತ್ತು ಆದರ್ಶ್ ಎಚ್‌ಎನ್ ಅವರ ತಂಡವನ್ನು ವಿಜೇತರೆಂದು ಘೋಷಿಸಲಾಯಿತು.
ಸ್ಪರ್ಧೆಯ ವಲಯ ಸುತ್ತುಗಳು ಐಐಟಿ ಕಾನ್ಪುರ, ಐಐಟಿ ಬಾಂಬೆ, ಐಐಟಿ ಖರಗ್ಪುರ ಮತ್ತು ಐಐಟಿ ಮದ್ರಾಸ್ನಲ್ಲಿ ನಡೆದವು. ಸ್ಪರ್ಧೆಯ ಗ್ರ್ಯಾಂಡ್ ಫಿನಾಲೆ ಬೆಂಗಳೂರಿನಲ್ಲಿ ನಡೆದಿದ್ದು, ಮೈಸೂರಿನ ನಿಟ್ಟೆ ಮಹಾಲಿಂಗ ಕಾಲೇಜು ತಂಡ ಚಾಂಪಿಯನ್ ಆಗಿ ಹೊರಹೊಮ್ಮಿದೆ.
ಬೋಯಿಂಗ್ ಇಂಡಿಯಾದ ಮುಖ್ಯ ಎಂಜಿನಿಯರ್ ಸ್ಟೇಸಿ ಸೈರ್ ಅವರ ಮಾತನಾಡಿ. "ಈ ಸ್ಪರ್ಧೆಯು ವಿದ್ಯಾರ್ಥಿಗಳಿಗೆ ಏರೋಸ್ಪೇಸ್ ವಿನ್ಯಾಸ ಮತ್ತು ಕಾರ್ಯಗತಗೊಳಿಸುವಿಕೆಯ ಕಠಿಣತೆಯನ್ನು ಪರಿಚಯಿಸುತ್ತದೆ. ಸಮಯಸೂಚಿಗಳು ಮತ್ತು ಕಾರ್ಯಕ್ಷಮತೆಯ ನಿಯತಾಂಕಗಳೊಂದಿಗೆ ಕೆಲಸ ಮಾಡುವುದು ಭಾಗವಹಿಸುವವರನ್ನು ಉದ್ಯಮದ ಪ್ರಾಯೋಗಿಕ ಬೇಡಿಕೆಗಳಿಗೆ ಸಿದ್ಧಪಡಿಸುತ್ತದೆ, ನಾವೀನ್ಯತೆ ಮತ್ತು ಸಮಸ್ಯೆ-ಪರಿಹರಿಸುವ ಕೌಶಲ್ಯಗಳನ್ನು ಬೆಳೆಸುತ್ತದೆ" ಎಂದು ಹೇಳಿದರು.
ಬೋಯಿಂಗ್ ಇಂಡಿಯಾ ಮತ್ತು ದಕ್ಷಿಣ ಏಷ್ಯಾದ ಅಧ್ಯಕ್ಷ ಸಲೀಲ್ ಗುಪ್ತೆ ಮಾತನಾಡಿ, ವಿಶ್ವದ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ವಾಯುಯಾನ ಮಾರುಕಟ್ಟೆಗಳಲ್ಲಿ ಒಂದಾಗಿರುವ ಭಾರತವು ತನ್ನ ಏರೋಸ್ಪೇಸ್ ಕಾರ್ಯಪಡೆಯನ್ನು ವೇಗವಾಗಿ ನಿರ್ಮಿಸುತ್ತಿದೆ ಎಂದು ತಿಳಿಸಿದರು.
ಬೋಯಿಂಗ್ ರಾಷ್ಟ್ರೀಯ ಏರೋಮಾಡೆಲಿಂಗ್ ಸ್ಪರ್ಧೆಯು ಪ್ರತಿಭಾನ್ವಿತ ಎಂಜಿನಿಯರ್‌ಗಳಿಗೆ ಏರೋಸ್ಪೇಸ್ ಉದ್ಯಮದಲ್ಲಿ ಪ್ರತಿಭೆಯನ್ನು ಪ್ರದರ್ಶಿಸಲು ವೇದಿಕೆಯನ್ನು ಒದಗಿಸಿದೆ. ಇದಕ್ಕೆ ನಾವು ಹೆಮ್ಮೆಪಡುತ್ತೇವೆಂದು ಹೇಳಿದ್ದಾರೆ.
ಏರೋಸ್ಪೇಸ್ ಎಂಜಿನಿಯರಿಂಗ್ ಮತ್ತು ಸಂಬಂಧಿತ ಕ್ಷೇತ್ರಗಳಲ್ಲಿ ತೀವ್ರ ಆಸಕ್ತಿ ಹೊಂದಿರುವ ವಿದ್ಯಾರ್ಥಿಗಳಿಗೆ ರಾಷ್ಟ್ರ ವ್ಯಾಪಿ ವೇದಿಕೆಯನ್ನು ಒದಗಿಸಲು ಈ ಸ್ಪರ್ಧೆಯನ್ನು 2013 ರಲ್ಲಿ ವಾರ್ಷಿಕ ಕಾರ್ಯಕ್ರಮವಾಗಿ ಪ್ರಾರಂಭಿಸಲಾಗಿದೆ.