ಸಂಗ್ರಹ ಚಿತ್ರ 
ರಾಜ್ಯ

ವಾಹನ ಸವಾರರಿಗೆ ಗುಡ್ ನ್ಯೂಸ್: Bengaluru-Chennai Expressway 2026ಕ್ಕೆ ಉದ್ಘಾಟನೆ

ಹೆಚ್ಚುವರಿ ಸರ್ವೀಸ್ ರಸ್ತೆಗಳು, ಧಾರ್ಮಿಕ ಪ್ರದೇಶಗಳಲ್ಲಿ ಮಾರ್ಗ ಬದಲಾವಣೆ, ಹೈಟೆನ್ಷನ್‌ ವಿದ್ಯುತ್‌ ಮಾರ್ಗಗಳ ಸ್ಥಳಾಂತರ, ಭೂ ಪರಿಹಾರ ನೀಡಿಕೆ ಸಮಸ್ಯೆಯಿಂದ ಕಾಮಗಾರಿ ವಿಳಂಬವಾಗಿದೆ.

ಬೆಂಗಳೂರು: 15,188 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗುತ್ತಿರುವ ಬೆಂಗಳೂರು-ಚೆನ್ನೈ ಎಕ್ಸ್‌ಪ್ರೆಸ್‌ವೇ ಡಿಸೆಂಬರ್ 2025-ಮಾರ್ಚ್ 2026ರ ನಡುವೆ ಪೂರ್ಣಗೊಳ್ಳುವ ನಿರೀಕ್ಷೆಯಿದೆ.

ಲೋಕಸಭೆಯಲ್ಲಿ ಬೆಂಗಳೂರು ಕೇಂದ್ರ ಸಂಸದ ಪಿ.ಸಿ. ಮೋಹನ್ ಅವರ ಪ್ರಶ್ನೆಗೆ ಉತ್ತರಿಸಿದ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ, ಈ ಎಕ್ಸ್‌ಪ್ರೆಸ್‌ವೇ ಬೆಂಗಳೂರು–ಚೆನ್ನೈ ಕೈಗಾರಿಕಾ ಕಾರಿಡಾರ್‌ನ ಭಾಗವಾಗಿದ್ದು, ಕಾಮಗಾರಿ ಪೂರ್ಣಗೊಂಡ ಬಳಿಕ ಎರಡು ನಗರಗಳ ನಡುವಿನ ಪ್ರಯಾಣದ ಅವಧಿ ಎರಡೂವರೆ ಗಂಟೆಗಳಿಗೆ ಇಳಿಯಲಿದೆ. 262.4 ಕಿ.ಮೀ. ಉದ್ದದ ಮಾರ್ಗಕ್ಕೆ ರೂ.15,188 ಕೋಟಿ ವೆಚ್ಚ ಮಾಡಲಾಗುತ್ತಿದೆ. ಸದ್ಯ 4 ಪ್ಯಾಕೇಜ್‌ಗಳ ಕೆಲಸ ಮುಗಿದಿದ್ದು, ಎಲ್ಲ ಪ್ಯಾಕೇಜ್‌ಗಳ ಕಾಮಗಾರಿಗಳು 2026ಕ್ಕೆ ಮುಗಿಯಲಿವೆ ಎಂದು ಹೇಳಿದರು.

ಕರ್ನಾಟಕದಲ್ಲಿ ಭೂಸ್ವಾಧೀನಕ್ಕೆ ಅಡೆತಡೆ, ತಮಿಳುನಾಡಿನಲ್ಲಿ ಜನವಸತಿ ಪ್ರದೇಶದಲ್ಲಿ ಕಾಮಗಾರಿಗೆ ಅಡ್ಡಿ ಎದುರಾದ ಹಿನ್ನೆಲೆಯಲ್ಲಿ ಕಾಮಗಾರಿ ವಿಳಂಬವಾಗಿದೆ. ಹೆಚ್ಚುವರಿ ಸರ್ವೀಸ್ ರಸ್ತೆಗಳು, ಧಾರ್ಮಿಕ ಪ್ರದೇಶಗಳಲ್ಲಿ ಮಾರ್ಗ ಬದಲಾವಣೆ, ಹೈಟೆನ್ಷನ್‌ ವಿದ್ಯುತ್‌ ಮಾರ್ಗಗಳ ಸ್ಥಳಾಂತರ ಮತ್ತು ಭೂ ಪರಿಹಾರ ನೀಡಿಕೆ ಸಮಸ್ಯೆಯಿಂದ ಕಾಮಗಾರಿ ವಿಳಂಬವಾಗಿದೆ ಎಂದು ವಿವರಿಸಿದರು.

ಕೌಂಡಿನ್ಯ ವನ್ಯಜೀವಿ ಅಭಯಾರಣ್ಯದ 10 ಕಿ.ಮೀ. ಪರಿಸರ-ಸೂಕ್ಷ್ಮ ವಲಯದೊಳಗೆ ಕೆಲಸ ಮಾಡಲು ರಾಷ್ಟ್ರೀಯ ವನ್ಯಜೀವಿ ಮಂಡಳಿಯ ಸ್ಥಾಯಿ ಸಮಿತಿಯಿಂದ ಅನುಮತಿ ಅಗತ್ಯವಿರುವುದರಿಂದ ಆಂಧ್ರಪ್ರದೇಶದಲ್ಲಿ ಯೋಜನೆಯು ಆರಂಭಿಕ ಹಿನ್ನಡೆ ಎದುರಿಸುತ್ತಿದೆ.

ಏತನ್ಮಧ್ಯೆ, ತಮಿಳುನಾಡು ತನ್ನದೇ ಆದ ಸವಾಲುಗಳನ್ನು ಒಡ್ಡಿದೆ. ದೊಡ್ಡ ಪ್ರಮಾಣದ ಮಣ್ಣಿನ ಕೆಲಸ ಮತ್ತು ವಸತಿ ಪ್ರದೇಶಗಳ ಬಳಿ ಬಂಡೆಗಳ ಬ್ಲಾಸ್ಟಿಂಗ್‌ ಅಗತ್ಯವಿದೆ. ಜತೆಗೆ, ರೈಲ್ವೆ ಮೇಲ್ಸೇತುವೆ ಅನುಮೋದನೆಯಲ್ಲಿನ ವಿಳಂಬ ಕೂಡ ಕಾಮಗಾರಿ ಹಿನ್ನಡೆಗೆ ಕಾರಣವಾಗಿದೆ ಎಂದು ತಿಳಿಸಿದರು

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

TNIE Exclusive | Air India ವಿಮಾನದಲ್ಲಿ ಭಾರೀ ತಾಂತ್ರಿಕ ದೋಷ..! Phuket-Delhi ವಿಮಾನ 300 ಅಡಿ ಕುಸಿತಕ್ಕೆ Triple hydraulic systems ವೈಫಲ್ಯ ಕಾರಣ..?

ಸಂಪುಟ ವಿಸ್ತರಣೆ ಬಿಕ್ಕಟ್ಟು ಶಮನಕ್ಕೆ ಸಿಎಂ ಡಿಕೆ.ಶಿವಕುಮಾರ್ ದೆಹಲಿಗೆ ದೌಡು: ಹೈಕಮಾಂಡ್‌ ಜೊತೆ ಮಹತ್ವದ ಚರ್ಚೆ..!

Maharashtra: ಶಾಲಾ ಹಾಸ್ಟೆಲ್‌ನಲ್ಲಿ ಭೀಕರ ದುರಂತ: ಮಲಗಿದ್ದ 6 ಬಾಲಕಿಯರಿಗೆ ಹಾವು ಕಡಿತ, ಮೂವರ ಸಾವು!

ಶಾಲೆಗಳಿಗೆ ಯೂಟ್ಯೂಬರ್‌ಗಳು, ಸೋಷಿಯಲ್ ಮೀಡಿಯಾ ಮಂದಿಗೆ ನೋ ಎಂಟ್ರಿ: ಉತ್ತರ ಪ್ರದೇಶ ಸರ್ಕಾರದ ಖಡಕ್ ಆದೇಶ

'ಬಿಜೆಪಿಗೆ ಖುಷಿ ಕೊಡುವ ಹೇಳಿಕೆ ನೀಡಬೇಡಿ': Rahul Gandhi ಕುರಿತ ಕಾಂಗ್ರೆಸ್ ಸಂಸದ ಶಶಿತರೂರ್ ಹೇಳಿಕೆಗೆ KC ವೇಣುಗೋಪಾಲ್ ಖಡಕ್ ವಾರ್ನಿಂಗ್