ಸುಜಾತಾ ಭಟ್ ಮತ್ತು ವಾಸಂತಿ ಸಹೋದರ ವಿಜಯ್ 
ರಾಜ್ಯ

Dharmasthala: ವಾಸಂತಿ ಸಾವು ಪ್ರಕರಣದಲ್ಲಿ ಸುಜಾತ ಭಟ್ ಕೈವಾಡ? ಸಹೋದರ ವಿಜಯ್ ಸ್ಫೋಟಕ ಆರೋಪ!

'ಮಗಳು ಅನನ್ಯ ಭಟ್ ನಾಪತ್ತೆ ಆಗಿದ್ದಾಳೆ ಎಂದು ಹೇಳುತ್ತಿದ್ದ ಸುಜಾತ ಭಟ್ ದಿನವೊಂದು ಹೇಳಿಕೆ ನೀಡಿ ಇಡೀ ರಾಜ್ಯಕ್ಕೆ ಮಂಕುಬೂದಿ ಎರಚುತ್ತಿದ್ದಾಳೆ. ನನ್ನ ತಂಗಿ ವಾಸಂತಿ ಸಾವಿನಲ್ಲಿ ಸುಜಾತ ಭಟ್ ಕೈವಾಡ ಇದೆ...'

ಧರ್ಮಸ್ಥಳ: ಧರ್ಮಸ್ಥಳ ಪ್ರಕರಣದಲ್ಲಿ ದಿನಕ್ಕೊಂದು ತಿರುವು ದೊರೆಯುತ್ತಿದ್ದು, ಅನನ್ಯ ಭಟ್ ನನ್ನ ಮಗಳು ಎಂದು ಹೇಳಿಕೊಂಡಿದ್ದ ಸುಜಾತ್ ಭಟ್ ಮತ್ತೆ ಸಂಕಷ್ಟಕ್ಕೆ ಸಿಲುಕಿದ್ದಾರೆ.

ಹೌದು.. ಮಗಳು ಅನನ್ಯ ಭಟ್ ನಾಪತ್ತೆ ಆಗಿದ್ದಾಳೆ ಎಂದು ಹೇಳುತ್ತಿದ್ದ ಸುಜಾತ ಭಟ್ ದಿನವೊಂದು ಹೇಳಿಕೆ ನೀಡುತ್ತಿದ್ದು, ಇದೀಗ ಸರಣಿ ಸಾವು ಪ್ರಕರಣದಲ್ಲಿ ಸುಜಾತಾ ಭಟ್ ಕೈವಾಡವಿದೆ ಎಂದು ಹೇಳಲಾಗಿದೆ.

ಈ ಬಗ್ಗೆ ಸ್ವತಃ ವಾಸಂತಿ (ಅನನ್ಯ ಭಟ್ ಎಂದು ಹೇಳಲಾಗುತ್ತಿರುವ ಮಹಿಳೆ) ಸಹೋದರ ವಿಜಯ್ ಗಂಭೀರ ಆರೋಪ ಮಾಡಿದ್ದು, 'ಮಗಳು ಅನನ್ಯ ಭಟ್ ನಾಪತ್ತೆ ಆಗಿದ್ದಾಳೆ ಎಂದು ಹೇಳುತ್ತಿದ್ದ ಸುಜಾತ ಭಟ್ ದಿನವೊಂದು ಹೇಳಿಕೆ ನೀಡಿ ಇಡೀ ರಾಜ್ಯಕ್ಕೆ ಮಂಕುಬೂದಿ ಎರಚುತ್ತಿದ್ದಾಳೆ. ನನ್ನ ತಂಗಿ ವಾಸಂತಿ ಸಾವಿನಲ್ಲಿ ಸುಜಾತ ಭಟ್ ಕೈವಾಡ ಇದೆ' ಎಂದು ಸ್ಫೋಟಕ ಆರೋಪ ಮಾಡಿದ್ದಾರೆ.

ಖಾಸಗಿ ವಾಹಿನಿಯೊಂದಿಗೆ ಮಾತನಾಡಿರುವ ವಿಜಯ್, 'ಸುಜಾತ ಭಟ್ ರಾತ್ರಿ ಆದರೆ ಅನನ್ಯ ಭಟ್ ನನ್ನ ಮಗಳು ಅಲ್ಲ ಅಂತಾಳೆ. ಬೆಳಗ್ಗೆ ಆದರೆ ಅನನ್ಯ ನನ್ನ ಮಗಳು ಅಂತಾಳೆ. ಇಲ್ಲಿ ತುಂಬಾ ಸಂಶಯ ಇದೆ. ಒಂದೊಂದು ದಿನ ಒಂದೊಂದು ಹೇಳಿಕೆ ಕೊಡುತ್ತಿದ್ದಾಳೆ. ಇವಳು ನಾಟಕ ಆಡುತ್ತಿದ್ದಾಳೆ. ಆದರೆ ಸುಜಾತ ಭಟ್ ಹೋದ ಕಡೆಗೆಲ್ಲ ಸಾವೇ ಆಗಿವೆ ಎಂದು ಹೇಳಿದ್ದಾರೆ.

ಕೊಲೆ ಪ್ರಕರಣದಲ್ಲಿ ಸುಜಾತಾ ಕೈವಾಡ?

ಅಂತೆಯೇ, 'ಸೇಟು ಅಂತಾ ಇದ್ದರು ಅವ್ರು ಸತ್ತು ಹೋಗಿದ್ದಾರೆ. ರಂಗ ಪ್ರಸಾದ್, ರಂಗ ಪ್ರಸಾದ್ ಮಗ, ನನ್ನ ತಂಗಿ ವಾಸಂತಿ ಎಲ್ಲರೂ ಜೀವ ಬಿಟ್ಟಿದ್ದಾರೆ. ಇದರಿಂದ ಸುಜಾತ್ ಭಟ್ ಮೇಲೆ ನಮಗೆ ಸಂಶಯ ಇದೆ. ಸುಜಾತ ಬಗ್ಗೆ ಸೂಕ್ತ ತನಿಖೆ ಆಗಬೇಕು. ವೀರಾಜಪೇಟೆಯಿಂದ ಬೆಂಗಳೂರಿಗೆ ಆಗಾಗ ಓಡಾಡುತ್ತಿರುತ್ತಾರೆ. ನಮ್ಮ ವಾಸಂತಿಯ ಡೆತ್ ಸರ್ಟಿಫಿಕೆಟ್​ ತಗಳೋಕೆ ಬಂದಿದ್ದಳಂತೆ ಹೇಳಿದ್ದಾರೆ.

ಹೀಗಾಗಿ ಸುಜಾತ್ ಭಟ್ ಬಗ್ಗೆ ಸರ್ಕಾರ ಸೂಕ್ತ ತನಿಖೆ ಮಾಡಬೇಕು. ವಾಸಂತಿ ಸಾವಿನ ಹಿಂದೆಯೂ ಯಾರಿದ್ದಾರೆ ಎನ್ನುವುದನ್ನ ತನಿಖೆಯಿಂದ ಹೊರ ಬರಬೇಕು. ವಾಸಂತಿ ಸಾವಿನಲ್ಲಿ ಸುಜಾತ ಭಟ್ ಕೈವಾಡ ಇದೆ ಅಂತ ತನಿಖೆ ಮಾಡಬೇಕು ಎಂದು ವಿಜಯ್ ಆಗ್ರಹಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ವೀರೇಂದ್ರ ಪಪ್ಪಿ ಕರ್ಮಕಾಂಡ ನೋಡುತ್ತಿದ್ದರೆ CM- DCM ಇನ್ಯಾವ ಪರಿ ಲೂಟಿ ಮಾಡಿ ಹೈಕಮಾಂಡ್ ಗೆ ಕಪ್ಪ ನೀಡುತ್ತಿರಬೇಡಾ?

BDA ಯೋಜನಾ ಪ್ರಾಧಿಕಾರದ ಜವಾಬ್ದಾರಿ ಹಸ್ತಾಂತರ: GBA ವಿರೋಧಿಸುವವರು ಪಾಲಿಕೆ ಚುನಾವಣೆ ಬಹಿಷ್ಕರಿಸಲಿ; ಡಿಕೆಶಿ ಸವಾಲು

ಮೈಸೂರು ಪೊಲೀಸರಿಗೆ CM ಪುತ್ರನ ಕಾಟ: ಯಾವುದೇ ವರ್ಗಾವಣೆಯಾಗಬೇಕಾದರೂ ಯತೀಂದ್ರಗೆ ಟ್ಯಾಕ್ಸ್ ಕಟ್ಟಬೇಕು; ಪ್ರತಾಪ್ ಸಿಂಹ

ಬಾಂಬೆ ಮಾದರಿಯಲ್ಲಿ ಕೊಳಗೇರಿ ಪುನಶ್ಚೇತನಕ್ಕೆ ಸಮಿತಿ ರಚನೆ: GBA ವ್ಯಾಪ್ತಿಗೆ ಆನೇಕಲ್ ಸೇರಿಸುವುದು ಕಷ್ಟ; ಡಿಕೆ ಶಿವಕುಮಾರ್

'ನನ್ನ ಪ್ರಶಸ್ತಿ ಟ್ರಂಪ್‌ಗೆ ಸಮರ್ಪಿತ...' Noble ಶಾಂತಿ ಪ್ರಶಸ್ತಿ ಗೆದ್ದ ಬೆನ್ನಲ್ಲೇ ಮಾರಿಯಾ ಶಾಕಿಂಗ್ ಹೇಳಿಕೆ!

SCROLL FOR NEXT