ರಾಜ್ಯ

ನನಗೆ ಹಣದ ಆಮಿಷವೊಡ್ಡಿ ಕರೆಸಿಕೊಂಡರು; ನಾನಿಲ್ಲಿ ಪಾತ್ರಧಾರನಷ್ಟೆ, ಸೂತ್ರಧಾರರು ಬೇರೆಯವರು: ಮಾಸ್ಕ್‏ಮ್ಯಾನ್ ಚಿನ್ನಯ್ಯ ಪ್ರತಿಕ್ರಿಯೆ

ಅನಾಮಿಕ ಮೂಲತಃ ಮಂಡ್ಯ ಜಿಲ್ಲೆಯವನು ಎನ್ನಲಾಗಿದ್ದು, ತಮಿಳುನಾಡಿನಲ್ಲಿದ್ದ ಚಿನ್ನಯ್ಯಗೆ ಹಣದ ಆಮಿಷವೊಡ್ಡಿ ಧರ್ಮಸ್ಥಳ ವಿರೋಧಿ ಗ್ಯಾಂಗ್‌ ಕರೆದುಕೊಂಡು ಬಂದಿತ್ತು ಎನ್ನಲಾಗುತ್ತಿದೆ.

ಬೆಂಗಳೂರು: ಧರ್ಮಸ್ಥಳ ಆಸುಪಾಸಿನಲ್ಲಿ ನೂರಾರು ಶವಗಳನ್ನು ಹೂತಿರುವುದಾಗಿ ಹೇಳಿಕೊಂಡಿದ್ದ ಅನಾಮಿಕನ ಮುಖ ಈಗ ಅನಾವರಣಗೊಂಡಿದೆ. ಎಸ್​ಐಟಿ ಅಧಿಕಾರಿಗಳು ಮಾಸ್ಕ್​​​ಮ್ಯಾನ್​​ನನ್ನು ಬಂಧಿಸಿ ಬೆಳ್ತಂಗಡಿಯ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.

ಅನಾಮಿಕ ಮೂಲತಃ ಮಂಡ್ಯ ಜಿಲ್ಲೆಯವನು ಎನ್ನಲಾಗಿದ್ದು, ತಮಿಳುನಾಡಿನಲ್ಲಿದ್ದ ಚಿನ್ನಯ್ಯಗೆ ಹಣದ ಆಮಿಷವೊಡ್ಡಿ ಧರ್ಮಸ್ಥಳ ವಿರೋಧಿ ಗ್ಯಾಂಗ್‌ ಕರೆದುಕೊಂಡು ಬಂದಿತ್ತು ಎನ್ನಲಾಗುತ್ತಿದೆ. ಸದ್ಯ ಆತ ಎಸ್​​ಐಟಿ ವಶದಲ್ಲಿದ್ದು, ತನಿಖೆ ನಡೆಯುತ್ತಿರುವ ಕಾರಣ ಹೆಚ್ಚಿನ ಮಾಹಿತಿ ನೀಡಲಾಗದು ಎಂದು ಗೃಹ ಸಚಿವ ಡಾ. ಜಿ ಪರಮೇಶ್ವರ ಪ್ರತಿಕ್ರಿಯಿಸಿದ್ದಾರೆ.

ಚಿನ್ನಯ್ಯ ಹೇಳಿದ್ದೇನು?

ಡಿಸೆಂಬರ್ ಕೊನೆಯ ವಾರದಲ್ಲಿ ತಮಿಳುನಾಡಿನಲ್ಲಿದ್ದ ನನ್ನನ್ನು ಧರ್ಮಸ್ಥಳ ದೇವಸ್ಥಾನದ ವಿರೋಧಿ ಗ್ಯಾಂಗ್‌ ಸಂಪರ್ಕಿಸಿತ್ತು. ಮಾತುಕತೆ ನಡೆಸುವ ವೇಳೆ ಹಣದ ಆಮಿಷ ಒಡ್ಡಿದ್ದರು. ಈ ಪ್ರಕರಣದ ಮುಖ್ಯ ನಾಯಕ ನೀನು. ನಿನ್ನಿಂದಲೇ ಈ ಪ್ರಕರಣಕ್ಕೆ ರೋಚಕ ತಿರುವು ಸಿಗುತ್ತದೆ ಎಂದು ಹೇಳಿದ್ದರು.

ಯಾವುದೇ ಕಾರಣಕ್ಕೂ ನೀನು ಭಯ ಪಡುವ ಅಗತ್ಯವಿಲ್ಲ. ತನಿಖೆಯಾದ ನಂತರ ಹಲವು ಜನ ದೂರುದಾರರು ಬರುತ್ತಾರೆ. ಎಲ್ಲ ತನಿಖೆ ನಡೆಯುತ್ತದೆ ಎಂದು ಭರವಸೆ ನೀಡಿದ್ದರು.

ಆರಂಭದಲ್ಲಿ ಬೆಂಗಳೂರಿನಲ್ಲಿ ನನಗೆ ಸ್ವಲ್ಪ ತರಬೇತಿ ನೀಡಲಾಗಿತ್ತು. ಪೊಲೀಸರು ಕೇಳಿದಾಗ ಯಾವ ರೀತಿ ಉತ್ತರ ಹೇಳಬೇಕು ಎನ್ನುವುದನ್ನು ತಿಳಿಸಲಾಗಿತ್ತು. ನಂತರ ಸೂತ್ರಧಾರರು ಹೇಳಿದಂತೆ ನಾನು ಪಾತ್ರ ಮಾಡುತ್ತಿದ್ದೆ. ಅವರು ಹೇಳಿದಂತೆ ನಾನು ಮಾಹಿತಿ ನೀಡುತ್ತಿದ್ದೆ, ನಾನಿಲ್ಲಿ ಪಾತ್ರಧಾರನಷ್ಟೆ, ಸೂತ್ರಧಾರರು ಬೇರೆಯವರಿದ್ದರು ಎಂದಿದ್ದಾನೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

Cabinet reshuffle: ಡಿಸೆಂಬರ್ ನಲ್ಲಿ ಸಚಿವ ಸಂಪುಟ ಪುನಾರಚನೆ; ಸಿಎಂ ಸಿದ್ದರಾಮಯ್ಯ ಸುಳಿವು ನೀಡಿದ್ರಾ?

ಸಚಿವ ಸಂಪುಟ ಪುನರಾಚನೆ: ಸಿದ್ದುಗೆ ಬೆಂಬಲ, ಸಿಎಂ ಆಗಿ ಮುಂದುವರೆಯುತ್ತಾರೆಂದರೆ ಸ್ಥಾನ ತ್ಯಾಗಕ್ಕೂ ಸಿದ್ಧ ಎಂದ ಸಚಿವರು

ಡಿಸೆಂಬರ್ 8 ರಿಂದ ಬೆಳಗಾವಿಯಲ್ಲಿ ಚಳಿಗಾಲ ಅಧಿವೇಶನ

ಕ್ಷುಲಕ ಕಾರಣಕ್ಕೆ ದಂಪತಿ ನಡುವೆ ಜಗಳ, ತವರು ಮನೆ ಸೇರಿದ ಪತ್ನಿ, ಅವಳಿ ಹೆಣ್ಣು ಮಕ್ಕಳ 'ಕತ್ತು ಸೀಳಿ' ಕೊಂದ ಕಟುಕ ತಂದೆ!

ಶಿವಮೊಗ್ಗ: ಹೋರಿ ಬೆದರಿಸುವ ಸ್ಪರ್ಧೆ, ಮಾಜಿ ಶಾಸಕನಿಗೆ ತಿವಿದ ಹೋರಿ! Video ವೈರಲ್

SCROLL FOR NEXT