ಸಂಗ್ರಹ ಚಿತ್ರ 
ರಾಜ್ಯ

ದೇಶಾದ್ಯಂತ ಗಣೇಶ ಚತುರ್ಥಿ ಸಂಭ್ರಮ: ದೇವಾಲಯಗಳಲ್ಲಿ ವಿಶೇಷ ಪೂಜೆ; ರಾಷ್ಟ್ರಪತಿ, ಪ್ರಧಾನಿ, ಮುಖ್ಯಮಂತ್ರಿಗಳಿಂದ ಶುಭಾಶಯ

ಗಣೇಶ ಚತುರ್ಥಿ ಹಬ್ಬವು ಅಡೆತಡೆಗಳನ್ನು ನಿವಾರಿಸುವ ಗಣೇಶನ ಜನ್ಮ ದಿನವನ್ನು ಸೂಚಿಸುತ್ತದೆ. ಗಣೇಶ ಚತುರ್ಥಿ ಹಬ್ಬವನ್ನು ಭಾದ್ರಪದ ಮಾಸದಲ್ಲಿ ಆಚರಿಸಲಾಗುವ ಪ್ರಮುಖ ಹಬ್ಬವಾಗಿದೆ.

ನವದೆಹಲಿ/ಬೆಂಗಳೂರು: ದೇಶಾದ್ಯಂತ ಗೌರಿ-ಗಣೇಶ ಹಬ್ಬವನ್ನು ಸಡಗರದಿಂದ ಆಚರಣೆ ಮಾಡಲಾಗುತ್ತಿದ್ದು, ಈ ಹಿನ್ನೆಲೆಯಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು, ಪ್ರಧಾನಮಂತ್ರಿ ನರೇಂದ್ರ ಮೋದಿ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಜನತೆಗೆ ಶುಭಾಶಯಗಳನ್ನು ಕೋರಿದ್ದಾರೆ.

ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು, ಭಾರತ ಮತ್ತು ವಿದೇಶಗಳಲ್ಲಿ ವಾಸಿಸುವ ಎಲ್ಲಾ ಭಾರತೀಯರಿಗೆ ಗಣೇಶ ಚತುರ್ಥಿಯ ಹೃತ್ಪೂರ್ವಕ ಶುಭಾಶಯಗಳು. ಈ ಹಬ್ಬವನ್ನು ಗಣೇಶನ ಜನ್ಮದಿನ ಅಂಗವಾಗಿ ಬಹಳ ಸಂತೋಷದಿಂದ ಆಚರಿಸಲಾಗುತ್ತದೆ. ಅಡೆತಡೆಗಳನ್ನು ನಾಶಮಾಡುವ ಗಣೇಶನು ರಾಷ್ಟ್ರ ನಿರ್ಮಾಣದ ಹಾದಿಯಲ್ಲಿರುವ ಎಲ್ಲಾ ಅಡೆತಡೆಗಳನ್ನು ತೆಗೆದುಹಾಕುವುದನ್ನು ಮುಂದುವರಿಸಲಿ. ತನ್ನ ಆಶೀರ್ವಾದದೊಂದಿಗೆ ಎಲ್ಲಾ ದೇಶವಾಸಿಗಳು ಪರಿಸರ ಸ್ನೇಹಿ ಜೀವನಶೈಲಿಯನ್ನು ಅಳವಡಿಸಿಕೊಂಡು, ಬಲಿಷ್ಠ ಭಾರತವನ್ನು ನಿರ್ಮಿಸುವತ್ತ ಭಕ್ತಿಯಿಂದ ಕೆಲಸ ಮಾಡುವುದನ್ನು ಮುಂದುವರಿಸಲಿ ಎಂದು ಪ್ರಾರ್ಥಿಸುತ್ತೇನೆಂದು ಹೇಳಿದ್ದಾರೆ,

ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಪೋಸ್ಟ್ ಮಾಡಿ, ನಿಮ್ಮೆಲ್ಲರಿಗೂ ಗಣೇಶ ಚತುರ್ಥಿಯ ಶುಭಾಶಯಗಳು. ನಂಬಿಕೆ ಮತ್ತು ಭಕ್ತಿಯಿಂದ ತುಂಬಿರುವ ಈ ಶುಭ ಸಂದರ್ಭದಲ್ಲಿ ಎಲ್ಲರಿಗೂ ಶುಭವಾಗಲಿ ಎಂದು ಆಶಿಸುತ್ತೇನೆ. ಗಜಾನನನು ತನ್ನ ಎಲ್ಲಾ ಭಕ್ತರಿಗೆ ಸಂತೋಷ, ಶಾಂತಿ ಮತ್ತು ಉತ್ತಮ ಆರೋಗ್ಯವನ್ನು ದಯಪಾಲಿಸಲಿ ಎಂದು ನಾನು ಪ್ರಾರ್ಥಿಸುತ್ತೇನೆ. ಗಣಪತಿ ಬಪ್ಪಾ ಮೋರೆಯಾ ಎಂದು ತಿಳಿಸಿದ್ದಾರೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪೋಸ್ಟ್ ಮಾಡಿ, ನಾಡಿನ ಸಮಸ್ತ ಜನತೆಗೆ ಗೌರಿ - ಗಣೇಶ ಹಬ್ಬದ ಶುಭಾಶಯಗಳು. ಬಡವ ಬಲ್ಲಿದರೆನ್ನದೆ, ಜಾತಿ ಮತಗಳ ಭೇದವಿಲ್ಲದ ಸರ್ವರೂ ಜೊತೆಗೂಡಿ ಆಚರಿಸುವ ಈ ಹಬ್ಬವು ನಾಡಿನಲ್ಲಿ ಸ್ನೇಹ - ಸೌಹಾರ್ದತೆಗಳು ನೆಲೆಸಲು ಪ್ರೇರಣೆಯಾಗಲಿ ಎಂದು ಹಾರೈಸುತ್ತೇನೆಂದು ಹೇಳಿದ್ದಾರೆ.

ಎಲ್ಲೆಡೆ ಗಣೇಶ ಚತುರ್ಥಿ ಸಂಭ್ರಮ ಮನೆ ಮಾಡಿದ್ದು, ವಿನಾಯ ಮೂರ್ತಿ ಪ್ರತಿಷ್ಠಾಪನೆ ಮಾಡಿ ವಿಶೇಷ ಪೂಜೆಗಳನ್ನು ಸಲ್ಲಿಸುತ್ತಿದ್ದಾರೆ. ಅಲ್ಲದೆ, ದೇಶದ ವಿವಿಧ ದೇವಾಲಯಗಳಲ್ಲಿ ಗಜಾನನನಿಗೆ ವಿಶೇಷ ಪೂಜೆಗಳು ಸಲ್ಲಿಸಲಾಗುತ್ತಿದೆ.

ಗಣೇಶ ಚತುರ್ಥಿ ಹಬ್ಬವು ಅಡೆತಡೆಗಳನ್ನು ನಿವಾರಿಸುವ ಗಣೇಶನ ಜನ್ಮ ದಿನವನ್ನು ಸೂಚಿಸುತ್ತದೆ. ಗಣೇಶ ಚತುರ್ಥಿ ಹಬ್ಬವನ್ನು ಭಾದ್ರಪದ ಮಾಸದಲ್ಲಿ ಆಚರಿಸಲಾಗುವ ಪ್ರಮುಖ ಹಬ್ಬವಾಗಿದೆ. ಈ ದಿನದಂದು ಭಕ್ತರು ತಮ್ಮ ಮನೆಗೆ ಗಣೇಶನ ವಿಗ್ರಹಗಳನ್ನು ತಂದು ನೈವೇದ್ಯ ಮತ್ತು ವಿಧಿ-ವಿಧಾನಗಳೊಂದಿಗೆ ಪೂಜೆಯನ್ನು ಮಾಡುತ್ತಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಇಂದು ಸಂಜೆ ರಷ್ಯಾ ಅಧ್ಯಕ್ಷ Vladimir Putin ಭಾರತಕ್ಕೆ ಆಗಮನ: ರಾತ್ರಿ ಪ್ರಧಾನಿ ಮೋದಿಯಿಂದ ಖಾಸಗಿ ಔತಣಕೂಟ

IndiGo: ಬರೊಬ್ಬರಿ 200 ವಿಮಾನಗಳ ಹಾರಾಟ ರದ್ದು, 'ಮುಚ್ಕೊಂಡ್ ಮನೆಗೆ ಹೋಗಿ..' 'crew shortage'ಗೆ ಪ್ರಯಾಣಿಕರ ಆಕ್ರೋಶ!

ದರ್ಶನ್ ಲಾಕಪ್ ಡೆತ್: 'ಸಿಐಡಿ ಅಲ್ಲ.. ನ್ಯಾಯಾಂಗ ತನಿಖೆಗೆ ಒಪ್ಪಿಸಿ': PUCL ಪ್ರತಿಭಟನೆ, ಪೊಲೀಸರಿಂದ ಹಣದ ಆಮಿಷ ಎಂದ ಪತ್ನಿ

2nd ODI: 'ಟಾಸ್, ಇಬ್ಬನಿ, 20 ರನ್ ಗಳ ಕೊರತೆ'..: ದಕ್ಷಿಣ ಆಫ್ರಿಕಾ ವಿರುದ್ಧ ಸೋಲಿಗೆ ಕಾರಣ ನೀಡಿದ ನಾಯಕ KL Rahul

2nd ODI: ಸತತ 20ನೇ ಪಂದ್ಯದಲ್ಲೂ Toss ಸೋತ ಭಾರತ, ಜಗತ್ತಿನ ಮೊದಲ ತಂಡ, ಸುನಿಲ್ ಗವಾಸ್ಕರ್ ಗೂ ಆಘಾತ! video

SCROLL FOR NEXT