ಚಿಕ್ಕಮಗಳೂರು: ಚಿಕ್ಕಮಗಳೂರಿನ ಅರೇನೂರು ಗ್ರಾಮದಲ್ಲಿ ಮೂರು ಮಕ್ಕಳ ತಾಯಿಯನ್ನು ಬರ್ಬರವಾಗಿ ಹತ್ಯೆಯಾಗಿದ್ದಾರೆ. ಗಂಡನನ್ನು ಬಿಟ್ಟು ಮೂವರು ಮಕ್ಕಳೊಂದಿಗೆ ತಾಯಿ ಮನೆ ಸೇರಿದ್ದ ಚಿಕ್ಕಮಗಳೂರಿನ ಅರೇನೂರು ಗ್ರಾಮದ 32 ವರ್ಷದ ಸಂಧ್ಯಾ ಎಂಬಾಕೆಯ ಕತ್ತು ಸೀಳಿ ಬರ್ಬರವಾಗಿ ಹತ್ಯೆ ಮಾಡಲಾಗಿದೆ.
ಶಿರಗೋಳ ಗ್ರಾಮದ ರವಿ ಎಂಬುವರನ್ನು 10 ವರ್ಷಗಳ ಹಿಂದೆ ಸಂಧ್ಯಾ ವಿವಾಹವಾಗಿದ್ದರು. ದಂಪತಿಗೆ ಮೂವರು ಮಕ್ಕಳಿದ್ದರು. ಆದರೆ ಕಳೆದ ಮೂರು ವರ್ಷಗಳ ಹಿಂದೆ ಸಂಧ್ಯಾ ಗಂಡನನ್ನು ಬಿಟ್ಟು ತಾಯಿ ಮನೆ ಸೇರಿದ್ದರು. ಕಾಫಿತೋಟದಲ್ಲಿ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದರು. ಆದರೆ ಕೆಲ ದಿನಗಳಿಂದ ಸಂಧ್ಯಾ ಮಕ್ಕಳೊಂದಿಗೆ ನಾಪತ್ತೆಯಾಗಿದ್ದರು. ಹೀಗಾಗಿ ಪೋಷಕರು ಆಲ್ದೂರು ಪೊಲೀಸ್ ಠಾಣೆಯಲ್ಲಿ ನಾಪತ್ತೆ ದೂರು ದಾಖಲಿಸಿದ್ದರು. ಪೊಲೀಸರು ದೂರು ದಾಖಲಾಗಿರುವ ವಿಚಾರ ತಿಳಿಯುತ್ತಿದ್ದಂತೆ ಸೋಮವಾರ ಸಂಜೆ ಸಂಧ್ಯಾ ತಾಯಿ ಮನೆಗೆ ಮರಳಿದ್ದರು. ಈ ವೇಳೆ ತಾನೂ ಸಂಬಂಧಿಕರೊಬ್ಬರ ಮನೆಗೆ ಹೋಗಿದ್ದಾಗಿ ಪೋಷಕರಿಗೆ ತಿಳಿಸಿದ್ದಳು.
ಸಂಧ್ಯಾ ಸಂಬಂಧಿಯೊಬ್ಬರ ಜೊತೆ ಪ್ರೀತಿಯಲ್ಲಿ ಬಿದ್ದಿದ್ದು ಮದುವೆಯಾಗುವ ತೀರ್ಮಾನಕೈಗೊಂಡಿದ್ದರು. ಈ ಸಲುವಾಗಿಯೇ ಆಕೆ ಮಕ್ಕಳೊಂದಿಗೆ ಮನೆಬಿಟ್ಟು ಹೋಗಿದ್ದರು. ಆದರೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದರಿಂದ ಆತಂಕಗೊಂಡು ಮನೆ ಸೇರಿದ್ದರು. ಇದರಿಂದ ಕುಪಿತಗೊಂಡ ಪ್ರೇಮಿ ನಿನ್ನೆ ಬೆಳಗ್ಗೆ ಮನೆಯ ಹೊರಗೆ ಬಟ್ಟೆ ಹೊಗೆಯುತ್ತಿದ್ದ ಸಂಧ್ಯಾಳ ಕತ್ತು ಕುಯ್ದು ಹತ್ಯೆ ಮಾಡಿದ್ದಾರೆ ಎಂದು ಪೊಲೀಸರು ಶಂಕಿಸಿದ್ದಾರೆ. ಈ ಸಂಬಂಧ ಆಲ್ದೂರು ಪೊಲೀಸ್ ಠಾಣೆಯಲ್ಲಿ FIR ದಾಖಲಾಗಿದೆ.