ಸಿದ್ದರಾಮಯ್ಯ ಭೇಟಿ ಮಾಡಿದ ರೇಣುಕಾಸ್ವಾಮಿ ತಂದೆ, ತಾಯಿ(ಸಂಗ್ರಹ ಚಿತ್ರ) 
ರಾಜ್ಯ

ನಟ ದರ್ಶನ್ ಪ್ರಕರಣ: ರೇಣುಕಾಸ್ವಾಮಿ ತಂದೆ, ತಾಯಿಗೂ ಸಮನ್ಸ್ ಜಾರಿ ಮಾಡಿದ ಕೋರ್ಟ್!

ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರಿನ ಸ್ಥಳೀಯ ನ್ಯಾಯಾಲಯದಲ್ಲಿ ನಡೆದ ವಿಚಾರಣೆಯ ನಂತರ ನ್ಯಾಯಾಧೀಶರು ಮೃತ ದುರ್ದೈವಿ ರೇಣುಕಾಸ್ವಾಮಿಯವರ ತಂದೆ ಹಾಗೂ ತಾಯಿಗೂ ಸಮನ್ಸ್ ಜಾರಿಗೊಳಿಸಿದ್ದಾರೆ.

ಬೆಂಗಳೂರು: ನಟ ದರ್ಶನ್ ಎರಡನೇ ಆರೋಪಿಯಾಗಿರುವ ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದ ಸಾಕ್ಷಿಗಳ ವಿಚಾರಣೆಗೆ ದಿನಾಂಕ ನಿಗದಿ ಆಗಿದ್ದು, ಡಿಸೆಂಬರ್ 17ರಿಂದ ಸಾಕ್ಷ್ಯ ವಿಚಾರಣೆ ಆರಂಭವಾಗಲಿದೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರಿನ ಸ್ಥಳೀಯ ನ್ಯಾಯಾಲಯದಲ್ಲಿ ನಡೆದ ವಿಚಾರಣೆಯ ನಂತರ ನ್ಯಾಯಾಧೀಶರು ಮೃತ ದುರ್ದೈವಿ ರೇಣುಕಾಸ್ವಾಮಿಯವರ ತಂದೆ ಹಾಗೂ ತಾಯಿಗೂ ಸಮನ್ಸ್ ಜಾರಿಗೊಳಿಸಿದ್ದಾರೆ.

ಡಿಸೆಂಬರ್ 17ರಿಂದ ಪ್ರಕರಣದ ಸಾಕ್ಷಿಗಳ ವಿಚಾರಣೆ ಆರಂಭವಾಗುತ್ತಿದ್ದು, ಸಹಾಯಕ ಎಸ್​ಪಿಪಿ ಸಚಿನ್ ಅವರು ಸಾಕ್ಷಿಗಳ ಪಟ್ಟಿಯನ್ನು ಕೋರ್ಟ್​​ಗೆ ಸಲ್ಲಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಮೊದಲ ಹಂತದಲ್ಲಿ ರೇಣುಕಾಸ್ವಾಮಿಯವರ ತಂದೆ, ತಾಯಿ ಹಾಗೂ ರೇಣುಕಾಸ್ವಾಮಿಯ ಮೃತದೇಹವನ್ನು ಮೊದಲು ನೋಡಿದ್ದ ಬೆಂಗಳೂರಿನ ವಾಚ್ ಮ್ಯಾನ್ ಗೆ ಕೋರ್ಟ್ ಸಮನ್ಸ್ ಜಾರಿ ಮಾಡಿದೆ.

ಪಟ್ಟಿಯಲ್ಲಿರುವ ಮೂವರಿಗೆ ಸಾಕ್ಷಿಗಳಿಗೆ ಸಮನ್ಸ್ ಜಾರಿಗೊಳಿಸಲಾಗಿದೆ. ಇನ್ನೂ ಯಾರಿಗೆ ಸಮನ್ಸ್ ಜಾರಿಗೊಳಿಸಬೇಕು ಎಂಬುದನ್ನು ಡಿ. 4ರಂದು ತೀರ್ಮಾನಿಸಲಾಗುತ್ತದೆ ಎಂದು ಹೇಳಿದ ನ್ಯಾಯಮೂರ್ತಿಗಳು ಪ್ರಕರಣದ ಮುಂದಿನ ವಿಚಾರಣೆಯನ್ನು ಡಿ. 17ಕ್ಕೆ ಮುಂದೂಡಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ನನ್ನ ಸ್ನೇಹಿತ ಪುಟಿನ್‌ರನ್ನು ಸ್ವಾಗತಿಸಲು ತುಂಬಾ ಸಂತೋಷವಾಗುತ್ತಿದೆ: ಪ್ರಧಾನಿ ಮೋದಿ

ಸ್ನೇಹ, ನಂಬಿಕೆ: ಮೋದಿ ಜೊತೆ ಸಾಮಾನ್ಯ Fortuner ಕಾರಿನಲ್ಲಿ Putin ಪ್ರಯಾಣ! Video

ಸಮಸ್ಯೆ ಉಲ್ಬಣ, ಮತ್ತೆ 550 ವಿಮಾನಗಳು ರದ್ದು; IndiGo 20 ವರ್ಷದ ಇತಿಹಾಸದಲ್ಲಿ ಇದೇ ಮೊದಲು!

'ಅಮೆರಿಕವೇ ನಮ್ಮಿಂದ ಪರಮಾಣು ಇಂಧನ ಖರೀದಿಸುತ್ತಿದೆ..' 'ರಷ್ಯಾ-ಭಾರತ ಸಂಬಂಧ' ಯಾರ ವಿರುದ್ಧದ ಗುರಿ ಹೊಂದಿಲ್ಲ: Putin

ವಿಶ್ವದ ಶ್ರೀಮಂತ ವ್ಯಕ್ತಿಯ ಬ್ರಿಟೀಷ್ ಕಾಲದ ಅರಮನೆ: Putin ಗೆ ಆತಿಥ್ಯ ವಹಿಸಿರುವ Hyderabad House ವಿಶೇಷತೆಗಳೇನು? ನಿರ್ಮಾಣ ಆಗಿದ್ದು ಹೇಗೆ?

SCROLL FOR NEXT