ಸಂಗ್ರಹ ಚಿತ್ರ 
ರಾಜ್ಯ

ಬೆಂಗಳೂರಿನಲ್ಲಿ 2,215 ಕೋಟಿ ರೂ. ಮೊತ್ತದ ಸುರಂಗ ಮಾರ್ಗ ನಿರ್ಮಾಣಕ್ಕೆ ಸಂಪುಟ ಅನುಮೋದನೆ!

ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸುವ ಮಾರ್ಗದಲ್ಲಿ ಟ್ರಾಫಿಕ್ ಜಾಮ್ ನಿಯಂತ್ರಿಸಲು 2,215 ಕೋಟಿ ರೂಪಾಯಿ ಮೊತ್ತದ ಅವಳಿ ಸುರಂಗ ರಸ್ತೆ ಮತ್ತು ಫ್ಲೈಓವರ್ ನಿರ್ಮಾಣಕ್ಕೆ ರಾಜ್ಯ ಸಚಿವ ಸಂಪುಟ ಅನುಮೋದನೆ ನೀಡಿದೆ.

ಬೆಂಗಳೂರು: ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸುವ ಮಾರ್ಗದಲ್ಲಿ ಟ್ರಾಫಿಕ್ ಜಾಮ್ ನಿಯಂತ್ರಿಸಲು 2,215 ಕೋಟಿ ರೂಪಾಯಿ ಮೊತ್ತದ ಅವಳಿ ಸುರಂಗ ರಸ್ತೆ ಮತ್ತು ಫ್ಲೈಓವರ್ ನಿರ್ಮಾಣಕ್ಕೆ ರಾಜ್ಯ ಸಚಿವ ಸಂಪುಟ ಅನುಮೋದನೆ ನೀಡಿದೆ. ಹೆಬ್ಬಾಳ ಫ್ಲೈಓವರ್-ಮೇಖ್ರಿ ವೃತ್ತದ ನಡುವೆ ಸುರಂಗ ರಸ್ತೆ ಹಾಗೂ ಎತ್ತರದ ಕಾರಿಡಾರ್ ನಿರ್ಮಾಣಕ್ಕೆ ಡಿಸಿಎಂ ಮತ್ತು ಬೆಂಗಳೂರು ಅಭಿವೃದ್ಧಿ ಸಚಿವ ಡಿಕೆ ಶಿವಕುಮಾರ್, ಆದೇಶದ ಬಳಿಕ ಅವಳಿ ಸುರಂಗ ರಸ್ತೆ ಮತ್ತು ಎತ್ತರದ ಕಾರಿಡಾರ್ ನಿರ್ಮಾಣಕ್ಕೆ ಅನುಮೋದನೆ ಸಿಕ್ಕಿದೆ.

ಈ ಯೋಜನೆಯನ್ನು ಗ್ರೇಟರ್ ಬೆಂಗಳೂರು ಪ್ರಾಧಿಕಾರ (GBA) ಮತ್ತು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (BDA) ಕಾರ್ಯಗತಗೊಳಿಸಲಿವೆ. ರಾಷ್ಟ್ರೀಯ ಹೆದ್ದಾರಿ (NH)ಯ ಭಾಗವಾಗಿರುವ ಈ ರಸ್ತೆಯನ್ನು ಇನ್ನು ಮುಂದೆ ಅಗಲೀಕರಣ ಮಾಡಲು ಸಾಧ್ಯವಿಲ್ಲ ಎಂಬ ಕಾರಣಕ್ಕೆ ಹೆಬ್ಬಾಳ ಕೆರೆ ಸುತ್ತಲೂ ಭೂಮಿಯ ಲಭ್ಯತೆಯನ್ನು ಗಮನದಲ್ಲಿಟ್ಟುಕೊಂಡು ಗಾಂಧಿ ಕೃಷಿ ವಿಜ್ಞಾನ ಕೇಂದ್ರ (GKVK) ಕ್ಯಾಂಪಸ್‌ನಲ್ಲಿರುವ ಭೂಮಿಯನ್ನು ಸಹ ಈ ಯೋಜನೆಯು ಬಳಸಿಕೊಳ್ಳಲು ನಿರ್ಧರಿಸಲಾಗಿದೆ.

ಈ ಸಣ್ಣ ಸುರಂಗ ರಸ್ತೆ ಯೋಜನೆಯು ಬಳ್ಳಾರಿ ರಸ್ತೆಯ ಮಧ್ಯದಲ್ಲಿ ಮೇಖ್ರಿ ವೃತ್ತದಲ್ಲಿ ವಾಹನಗಳ ಸಂಚಾರಕ್ಕೆ ತೊಂದರೆಯಾಗದಂತೆ ಅಂಡರ್‌ಪಾಸ್ ನಿರ್ಮಾಣ ಮತ್ತು ಹೆಬ್ಬಾಳ ಕೆರೆಯ ಎರಡೂ ಬದಿಗಳಲ್ಲಿ ರಸ್ತೆ ನಿರ್ಮಾಣದ ಜೊತೆಗೆ ಜಿಕೆವಿಕೆ ಆವರಣದಲ್ಲಿ ಸುರಂಗ ಮಾರ್ಗ ನಿರ್ಮಾಣವನ್ನು ಒಳಗೊಂಡಿರುತ್ತದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ಹಿಂದೂ ಬೆಳವಣಿಗೆ ದರ' ಧರ್ಮ ಕೆಣಕುವ ಒಂದು ಮಾರ್ಗವಾಗಿತ್ತು: ಪ್ರಧಾನಿ ಮೋದಿ

ದೆಹಲಿಯಲ್ಲಿ 2ನೇ ಮದುವೆಗೆ ಪತಿಯ ಸಿದ್ಧತೆ: ನ್ಯಾಯಕ್ಕಾಗಿ ಪ್ರಧಾನಿ ಮೋದಿ ಬೇಡಿದ ಪಾಕ್ ಮಹಿಳೆ!

'ಜನ ಸಾಮಾನ್ಯರಿಗಾಗಿ ಸುಪ್ರೀಂಕೋರ್ಟ್' : ಬಲವಾದ ಸಂದೇಶ ರವಾನಿಸಿದ CJI ಸೂರ್ಯಕಾಂತ್!

ದಕ್ಷಿಣ ಆಫ್ರಿಕಾ ವಿರುದ್ಧ ಭಾರತಕ್ಕೆ 9 ವಿಕೆಟ್ ಭರ್ಜರಿ ಜಯ: 2-1 ಅಂತರದಲ್ಲಿ ಸರಣಿ ಕೈ ವಶ!

Puri Jagannath Temple: ಒಡಿಶಾ ಅಲ್ಲದೇ ಇತರ ಆರು ರಾಜ್ಯಗಳಲ್ಲಿ ಎಕರೆಗಟ್ಟಲೇ ಜಮೀನು! ಒಟ್ಟು ಎಷ್ಟಿದೆ ಗೊತ್ತಾ?

SCROLL FOR NEXT