ಬೆಂಗಳೂರಿನ ಯಶವಂತಪುರ ರೈಲು ನಿಲ್ದಾಣ  
ರಾಜ್ಯ

ಕ್ರಿಸ್‌ಮಸ್‌, ಹೊಸವರ್ಷ ರಜೆ: ಯಶವಂತಪುರ-ಕಾರವಾರ ನಡುವೆ ವಿಶೇಷ ರೈಲು; ವೇಳಾಪಟ್ಟಿ ಹೀಗಿದೆ...

ಕ್ರಿಸ್‌ಮಸ್‌ ರಜೆಗೆ ಯಶವಂತಪುರ - ಉಡುಪಿ - ಕಾರವಾರ ನಡುವೆ 2 ಟ್ರಿಪ್ ವಿಶೇಷ ರೈಲು ಓಡಿಸಲು ರೈಲ್ವೆ ಇಲಾಖೆ ಮುಂದಾಗಿದೆ. ಈ ರೈಲು ಹಬ್ಬದ ಆಸುಪಾಸಿನ ದಿನಗಳಂದು ಸಂಚಾರ ನಡೆಸಲಿದೆ.

ಬೆಂಗಳೂರು: ಈ ವರ್ಷಾಂತ್ಯ ಕ್ರಿಸ್ ಮಸ್, ಹೊಸವರ್ಷ ಎಂದು ಸಾಲುಸಾಲು ರಜೆ ಇರುವುದರಿಂದ ಊರು, ಪರವೂರುಗಳಿಗೆ, ಪ್ರವಾಸ ಹೋಗುವವರ ಸಂಖ್ಯೆ ಅಧಿಕವಾಗಿರುತ್ತದೆ.

ಕ್ರಿಸ್‌ಮಸ್‌ ರಜೆಗೆ ಯಶವಂತಪುರ - ಉಡುಪಿ - ಕಾರವಾರ ನಡುವೆ 2 ಟ್ರಿಪ್ ವಿಶೇಷ ರೈಲು ಓಡಿಸಲು ರೈಲ್ವೆ ಇಲಾಖೆ ಮುಂದಾಗಿದೆ. ಈ ರೈಲು ಹಬ್ಬದ ಆಸುಪಾಸಿನ ದಿನಗಳಂದು ಸಂಚಾರ ನಡೆಸಲಿದೆ.

ಈ ಬಗ್ಗೆ ರೈಲ್ವೆ ಇಲಾಖೆ ಮಾಹಿತಿ ನೀಡಿದ್ದು, ಕ್ರಿಸ್‌ಮಸ್‌ ಹಾಗೂ ಹೊಸ ವರ್ಷದ ಸಂದರ್ಭದಲ್ಲಿ ಹೆಚ್ಚಿದ ಪ್ರಯಾಣಿಕರ ಬೇಡಿಕೆಯನ್ನು ಪೂರೈಸಲು, ನೈಋತ್ಯ ರೈಲ್ವೆಯು ಯಶವಂತಪುರ ಮತ್ತು ಕಾರವಾರ ನಡುವೆ ಪ್ರತಿಯೊಂದು ದಿಕ್ಕಿನಲ್ಲಿ ಎರಡು ಟ್ರಿಪ್’ಗಳೊಂದಿಗೆ ವಿಶೇಷ ರೈಲುಗಳನ್ನು ಕಾರ್ಯಾಚರಣೆ ಮಾಡಲಿದೆ.

ನೈಋತ್ಯ ರೈಲ್ವೆ (South Western Railway) ಯಶವಂತಪುರ – ಕಾರವಾರ – ಯಶವಂತಪುರ ಮಾರ್ಗದಲ್ಲಿ ವಿಶೇಷ ರೈಲು ಸಂಚಾರ ಘೋಷಿಸಿದೆ. ಡಿಸೆಂಬರ್ 24 ರಿಂದ 28 ರವರೆಗೆ ನಾಲ್ಕು ದಿನಗಳಲ್ಲಿ ಎರಡೂ ಕಡೆಗೆ ರೈಲುಗಳು ಸಂಚರಿಸಲಿವೆ.

ವೇಳಾಪಟ್ಟಿ ಏನು?

ರೈಲು ಸಂಖ್ಯೆ 06267 ಯಶವಂತಪುರ – ಕಾರವಾರ ವಿಶೇಷ ಎಕ್ಸ್‌ಪ್ರೆಸ್‌ ರೈಲು ಡಿಸೆಂಬರ್ 24 ಮತ್ತು 27 ರಂದು ಮಧ್ಯಾಹ್ನ 12 ಗಂಟೆಗೆ ಯಶವಂತಪುರದಿಂದ ಹೊರಟು, ಮರುದಿನ ಬೆಳಿಗ್ಗೆ 6.10 ಗಂಟೆಗೆ ಕಾರವಾರವನ್ನು ತಲುಪಲಿದೆ.

ರೈಲು ಸಂಖ್ಯೆ 06268 ಕಾರವಾರ–ಯಶವಂತಪುರ ವಿಶೇಷ ಎಕ್ಸ್‌ಪ್ರೆಸ್‌ ರೈಲು ಡಿಸೆಂಬರ್ 25 ಮತ್ತು 28 ರಂದು ಮಧ್ಯಾಹ್ನ 12 ಗಂಟೆಗೆ ಕಾರವಾರದಿಂದ ಹೊರಟು, ಮರುದಿನ ಬೆಳಗಿನ ಜಾವ 4.30 ಗಂಟೆಗೆ ಯಶವಂತಪುರವನ್ನು ತಲುಪಲಿದೆ.

ಎಲ್ಲೆಲ್ಲಿ ನಿಲುಗಡೆ?

ಈ ರೈಲುಗಳು ಮಾರ್ಗಮಧ್ಯೆ ಚಿಕ್ಕಬಾಣಾವರ, ಕುಣಿಗಲ್, ಚನ್ನರಾಯಪಟ್ಟಣ, ಹಾಸನ, ಸಕಲೇಶಪುರ, ಸುಬ್ರಹ್ಮಣ್ಯ ರೋಡ್, ಕಬಕ ಪುತ್ತೂರು, ಬಂಟ್ವಾಳ, ಸುರತ್ಕಲ್, ಮುಲ್ಕಿ, ಉಡುಪಿ, ಬಾರ್ಕೂರು, ಕುಂದಾಪುರ, ಬೈಂದೂರು, ಭಟ್ಕಳ, ಮುರ್ಡೇಶ್ವರ, ಹೊನ್ನಾವರ, ಕುಮಟಾ, ಗೋಕರ್ಣ ರೋಡ್ ಮತ್ತು ಅಂಕೋಲಾ ನಿಲ್ದಾಣಗಳಲ್ಲಿ ನಿಲ್ಲಲಿವೆ.

ಎಷ್ಟು ಬೋಗಿಗಳು ಇರಲಿವೆ?

ರೈಲು ಒಂದು ಎಸಿ 2 - ಟೈರ್, ಮೂರು ಎಸಿ 3-ಟೈರ್, ಹನ್ನೆರಡು ಸ್ಲೀಪರ್ ಕ್ಲಾಸ್, ಮೂರೂ ಸಾಮಾನ್ಯ ದ್ವಿತೀಯ ದರ್ಜೆ ಮತ್ತು ಎರಡು ದ್ವಿತೀಯ ದರ್ಜೆ - ಕಮ್ - ಲಗೇಜ್ ಬ್ರೇಕ್ ವ್ಯಾನ್/ವಿಕಲಚೇತನರ ಸಂಯೋಜನೆಯೊಂದಿಗೆ ಕಾರ್ಯನಿರ್ವಹಿಸಲಿದೆ.

ಪ್ರಯಾಣಿಕರು ತಮ್ಮ ಟಿಕೆಟ್‌ಗಳನ್ನು IRCTC ವೆಬ್‌ಸೈಟ್, ರೈಲು ನಿಲ್ದಾಣ ಕೌಂಟರ್‌ಗಳು ಅಥವಾ NTES ಆಪ್ ಮೂಲಕ ಪರಿಶೀಲಿಸಿ ಬುಕ್ ಮಾಡಬಹುದು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

WPL 2026: ನೇರವಾಗಿ ಫೈನಲ್ ಪ್ರವೇಶಿಸಿದ ಸ್ಮೃತಿ ಮಂದಾನ ನಾಯಕತ್ವದ RCB ಪಡೆ!

17ನೇ ಬೆಂಗಳೂರು ಅಂತರರಾಷ್ಟ್ರೀಯ ಚಲನಚಿತ್ರೋತ್ಸವ: ಸಿಎಂ ಸಿದ್ದರಾಮಯ್ಯ ಉದ್ಘಾಟನೆ

ಟ್ರಂಪ್ ದಾಳಿ ಬೆದರಿಕೆ ಬೆನ್ನಲ್ಲೇ ಇರಾನ್‌ಗೆ ಶಾಕ್: ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್‌ ಉಗ್ರ ಸಂಘಟನೆ ಎಂದು ಪಟ್ಟಿ ಮಾಡಿದ EU!

ಒಟ್ಟಾರೆ 320 ಕೋಟಿ ಆಸ್ತಿ ಮುಟ್ಟುಗೋಲು: ಕರ್ನಾಟಕ Congress ಶಾಸಕ, ಸಹಚರರು ಅಕ್ರಮ ಬೆಟ್ಟಿಂಗ್ ಜಾಲದ 'ಮಾಸ್ಟರ್ ಮೈಂಡ್'; ED

Indian Armyಗೆ 2 ದೀರ್ಘ-ಶ್ರೇಣಿಯ 'Suryastra' ರಾಕೆಟ್ ಲಾಂಚರ್‌ ಸೇರ್ಪಡೆ, ಶೀಘ್ರ live-fire ಪ್ರಯೋಗ!

SCROLL FOR NEXT