ಸಿಎಂ ಸಿದ್ದರಾಮಯ್ಯ 
ರಾಜ್ಯ

ಸಿಎಂ ಸಿದ್ದರಾಮಯ್ಯ ವಿಮಾನ ಪ್ರಯಾಣ: 'ರಾಜ್ಯದ ಬೊಕ್ಕಸ'ದಿಂದ ಆದ ಖರ್ಚು ಎಷ್ಟು ಗೊತ್ತಾ?

ಬೆಳಗಾವಿ ಚಳಿಗಾಲದ ಅಧಿವೇಶನದಲ್ಲಿ ಬಿಜೆಪಿ ಎಂಎಲ್‌ಸಿ ರವಿಕುಮಾರ್ ಅವರ ಪ್ರಶ್ನೆಗೆ ಹಣಕಾಸು ಖಾತೆಯನ್ನು ಹೊಂದಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಮಾಹಿತಿ ನೀಡಿದ್ದಾರೆ.

ಬೆಳಗಾವಿ: ಕಳೆದ ಎರಡು ವರ್ಷಗಳಲ್ಲಿ (2023 ರಿಂದ 2025 ನವೆಂಬರ್ ವರೆಗೆ )ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿಶೇಷ ವಿಮಾನ ಹೆಲಿಕಾಪ್ಟರ್ ಪ್ರಯಾಣದ ವೆಚ್ಚವು 47 ಕೋಟಿ ರೂ. ಆಗಿದೆ.

ಬೆಳಗಾವಿ ಚಳಿಗಾಲದ ಅಧಿವೇಶನದಲ್ಲಿ ಬಿಜೆಪಿ ಎಂಎಲ್‌ಸಿ ರವಿಕುಮಾರ್ ಅವರ ಪ್ರಶ್ನೆಗೆ ಹಣಕಾಸು ಖಾತೆಯನ್ನು ಹೊಂದಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಮಾಹಿತಿ ನೀಡಿದ್ದಾರೆ.

ಕಳೆದ ಎರಡೂವರೆ ವರ್ಷಗಳಲ್ಲಿ ಸಿಎಂ ಸಿದ್ದರಾಮಯ್ಯ ಯಾವ ವಿಮಾನಗಳನ್ನು ಬಾಡಿಗೆಗೆ ಪಡೆದಿದ್ದಾರೆ ಎಂಬ ವಿವರಗಳನ್ನು ರವಿಕುಮಾರ್ ತಮ್ಮ ಪ್ರಶ್ನೆಯಲ್ಲಿ ಕೇಳಿದ್ದರು. ಮುಖ್ಯಮಂತ್ರಿ ಮತ್ತು ಮುಖ್ಯ ನ್ಯಾಯಮೂರ್ತಿಗಳಿಗೆ ಸಾರ್ವಜನಿಕ ತೆರಿಗೆ ಸಂಗ್ರಹದಲ್ಲಿ ಕರ್ನಾಟಕ ಪಾರದರ್ಶಕತೆ ಕಾಯ್ದೆಯ ನಿಬಂಧನೆಗಳಿಂದ ವಿನಾಯಿತಿ ನೀಡಲಾಗಿದೆ.

ಮೈಸೂರಿಗೂ 22 ಬಾರಿ ವಿಮಾನದಲ್ಲಿ ಪ್ರಯಾಣ: ಕಳೆದ ಎರಡೂವರೆ ವರ್ಷಗಳಲ್ಲಿ ಸಿದ್ದರಾಮಯ್ಯ ಅವರು ಬೆಂಗಳೂರಿನಿಂದ ತಮ್ಮ ಹುಟ್ಟೂರಾದ ಮೈಸೂರಿಗೆ ವಿಮಾನದಲ್ಲಿ ಬರಲು 5 ಕೋಟಿಗೂ ಹೆಚ್ಚು ಖರ್ಚು ಮಾಡಿದ್ದಾರೆ. ಬೆಂಗಳೂರಿಗೆ ಮೈಸೂರಿಗೆ ರಸ್ತೆ ಮೂಲಕ ತೆರಳಿದರೆ ಕೇವಲ 2 ಗಂಟೆಗಳಲ್ಲಿ ತೆರಳಬಹುದು. ಆದರೂ ಮೈಸೂರಿಗೆ ಅವರು 22 ಬಾರಿ ವಿಮಾನದಲ್ಲಿಯೇ ತೆರಳಿದ್ದಾರೆ. ಒಂದು ಸಂದರ್ಭದಲ್ಲಿ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರ ಬೆಂಗಳೂರು-ಮೈಸೂರು ವಿಮಾನ ಪ್ರಯಾಣಕ್ಕೆ 23.18 ಲಕ್ಷ ರೂ. ವೆಚ್ಚ ಆಗಿದೆ.

180 ಬಾರಿ ವಿಮಾನ, ಹೆಲಿಕಾಪ್ಟರ್ ಬುಕ್ಕಿಂಗ್: ಸಿದ್ದರಾಮಯ್ಯ ನವದೆಹಲಿ, ಹೈದರಾಬಾದ್ ಮತ್ತು ಚೆನ್ನೈಗೆ ವಿಮಾನದಲ್ಲಿ ತೆರಳಿರುವ ಮಾಹಿತಿ ನೀಡಲಾಗಿದೆ. ಅಂಕಿಅಂಶಗಳ ವಿಶ್ಲೇಷಣೆಯ ಪ್ರಕಾರ, ಸಿದ್ದರಾಮಯ್ಯ ಸರಾಸರಿ ಐದು ದಿನಗಳಿಗೊಮ್ಮೆ ಹೆಲಿಕಾಪ್ಟರ್ ಅಥವಾ ವಿಶೇಷ ವಿಮಾನವನ್ನು ಬುಕ್ ಮಾಡುತ್ತಾರೆ. ಈಬಾರಿ ಅವರು 180 ಬಾರಿ ವಿಮಾನಗಳು ಮತ್ತು ಹೆಲಿಕಾಪ್ಟರ್‌ಗಳನ್ನು ಬುಕ್ ಮಾಡಿದ್ದಾರೆ.

2023-24ರಲ್ಲಿ ಸಿದ್ದರಾಮಯ್ಯ 48 ಬಾರಿ ವಿಮಾನಯಾನ ಮಾಡಿದ್ದು, ಇದಕ್ಕೆ 12.23 ಕೋಟಿ ರೂ. 2024-25ರಲ್ಲಿ 84 ಬಾರಿ ವಿಮಾನದಲ್ಲಿ ತೆರಳಿದ್ದು, ಅದಕ್ಕೆ 20.88 ಕೋಟಿ ರೂ. ವೆಚ್ಚವಾಗಿತ್ತು. ಈ ಹಣಕಾಸು ವರ್ಷದಲ್ಲಿ 48 ಬಾರಿ ವಿಮಾನ ಮತ್ತು ಹೆಲಿಕಾಪ್ಟರ್‌ಗಳನ್ನು ಬುಕ್ ಮಾಡಲಾಗಿದ್ದು, 14.03 ಕೋಟಿ ರೂ. ವೆಚ್ಚವಾಗಿದೆ. 181 ಬುಕಿಂಗ್‌ಗಳಲ್ಲಿ 180 ಜಿಎಂಪಿ ಏರ್ ಚಾರ್ಟರ್‌ಗಳ ಮೂಲಕ ಆಗಿದೆ. ಉಳಿದದ್ದು ಗೋಜೆಟ್ಸ್ ಏವಿಯೇಷನ್‌ನಿಂದ ಆಗಿದೆ. ಸಿಎಂ ಅಧಿಕೃತ ಭೇಟಿಗೆ ಮಾತ್ರ ವಿಶೇಷ ವಿಮಾನ, ವಿಮಾನ, ಹೆಲಿಕಾಪ್ಟರ್ ಬಳಸಿಕೊಂಡಿದ್ದಾರೆ ಎಂದು ಮಾಹಿತಿ ನೀಡಲಾಗಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಇಕ್ಬಾಲ್ ಹುಸೇನ್ ಮಾತು ನಂಬಬೇಡಿ, ಅವನಿಗೆ ಮಾತಾಡೋ ಚಟ: 'ಮಾನಸಪುತ್ರ'ನ ವಿರುದ್ಧ ಡಿಕೆಶಿ ಸಿಡಿಮಿಡಿ

Video: ಜ. 6 ರಂದು ಮುಖ್ಯಮಂತ್ರಿಯಾಗಿ ಡಿಕೆ ಶಿವಕುಮಾರ್ ಪ್ರಮಾಣ: ಡಿಕೆಶಿ ‘ಮಾನಸಪುತ್ರ’ನಿಂದ ಸ್ಫೋಟಕ ಹೇಳಿಕೆ

ಕೇರಳ ಸ್ಥಳೀಯ ಸಂಸ್ಥೆ ಚುನಾವಣೆ: ನಗರ, ಪಂಚಾಯಿತಿಯನ್ನು ಕ್ಲೀನ್‌ ಸ್ವೀಪ್‌ ಮಾಡಿದ ಯುಡಿಎಫ್, ತಿರುವನಂತಪುರಂನಲ್ಲಿ NDA ಭದ್ರ!

Lionel Messi: ಮೆಸ್ಸಿ ಫ್ಯಾನ್ಸ್ ದಾಂಧಲೆ; ಆಯೋಜಕರ ಬಂಧನ, ಹಣ ವಾಪಸ್​ಗೆ ಸೂಚನೆ

ಮೇಕೆದಾಟು ಅಣೆಕಟ್ಟು ಯೋಜನೆ: ಇದೇ ಕರ್ನಾಟಕದ ಪ್ರಮುಖ ಗುರಿ! ಡಿಎಂಕೆಯ ದ್ರೋಹವನ್ನು ಕ್ಷಮಿಸಲು ಸಾಧ್ಯವಿಲ್ಲ- ಪಳನಿಸ್ವಾಮಿ

SCROLL FOR NEXT