ಕಾಂಗ್ರೆಸ್ ಹಿರಿಯ ಶಾಸಕ ರಾಜು ಕಾಗೆ  
ರಾಜ್ಯ

ಬೆಳಗಾವಿ ಅಧಿವೇಶನ: ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯ ಬೇಡಿಕೆ; ಶಾಸಕ ರಾಜು ಕಾಗೆ ಮತ್ತೆ ಪ್ರಸ್ತಾಪ!

ಈ ಪ್ರದೇಶಕ್ಕೆ ಪ್ರತ್ಯೇಕ ರಾಜ್ಯ ಸ್ಥಾನಮಾನವನ್ನು ಪರಿಗಣಿಸುವಂತೆ ಪ್ರಧಾನಿ ನರೇಂದ್ರ ಮೋದಿ ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ಇಬ್ಬರಿಗೂ ಈಗಾಗಲೇ ಪತ್ರ ಬರೆದಿದ್ದೇನೆ.

ಬೆಳಗಾವಿ: ಇತ್ತೀಚೆಗೆ ಉತ್ತರ ಕರ್ನಾಟಕಕ್ಕೆ ಪ್ರತ್ಯೇಕ ರಾಜ್ಯ ಸ್ಥಾನಮಾನ ನೀಡುವಂತೆ ಒತ್ತಾಯಿಸಿ ಚರ್ಚೆಗೆ ಗ್ರಾಸವಾಗಿದ್ದ ಕಾಗವಾಡ ಶಾಸಕ ರಾಜು ಕಾಗೆ ಚಳಿಗಾಲದ ಅಧಿವೇಶನದಲ್ಲಿ ಮತ್ತೊಮ್ಮೆ ತಮ್ಮ ಬೇಡಿಕೆಯನ್ನು ಪುನರುಚ್ಚರಿಸಿದ್ದಾರೆ.

ಉತ್ತರ ಕರ್ನಾಟಕದ ಸಮಸ್ಯೆಗಳ ಕುರಿತು ನಡೆದ ಚರ್ಚೆಯ ಸಂದರ್ಭದಲ್ಲಿ ಮಾತನಾಡಿದ ಕಾಂಗ್ರೆಸ್ ಶಾಸಕ ರಾಜು ಕಾಗೆ, ಸರ್ಕಾರಗಳಿಂದ ದೀರ್ಘಕಾಲದ ನಿರ್ಲಕ್ಷ್ಯ ಮತ್ತು ತಾರತಮ್ಯವನ್ನು ಆರೋಪಿಸಿ ಪ್ರತ್ಯೇಕ ರಾಜ್ಯ ಸ್ಥಾನಮಾನಕ್ಕಾಗಿ ಒತ್ತಾಯಿಸುವುದನ್ನು ಮುಂದುವರಿಸುವುದಾಗಿ ಹೇಳಿದರು.

ಈ ಪ್ರದೇಶಕ್ಕೆ ಪ್ರತ್ಯೇಕ ರಾಜ್ಯ ಸ್ಥಾನಮಾನವನ್ನು ಪರಿಗಣಿಸುವಂತೆ ಪ್ರಧಾನಿ ನರೇಂದ್ರ ಮೋದಿ ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ಇಬ್ಬರಿಗೂ ಈಗಾಗಲೇ ಪತ್ರ ಬರೆದಿದ್ದೇನೆ. ಕೆಲವು ಮಾಧ್ಯಮ ಸಂಸ್ಥೆಗಳು ಮತ್ತು ಕನ್ನಡ ಪರ ಸಂಘಟನೆಗಳು ನನ್ನನ್ನು ಟೀಕಿಸಿವೆ. ಆದರೆ ಇನ್ನು ಕೆಲವರು ನನ್ನ ನಿಲುವನ್ನು ಬೆಂಬಲಿಸಿದ್ದಾರೆ. ಅವರು ಟೀಕಿಸಲಿ; ನಾನು ದೃಢವಾಗಿಯೇ ಇರುತ್ತೇನೆ. ನಾನು ಈ ಬೇಡಿಕೆಯನ್ನು ಮುಂದುವರಿಸುತ್ತೇನೆ ಎಂದು ಅವರು ಪ್ರತಿಪಾದಿಸಿದರು.

ತಮ್ಮ ಬೇಡಿಕೆಗೆ ಕಾರಣಗಳನ್ನು ನೀಡಿದ ಶಾಸಕರು, ಸರ್ಕಾರವು ಕಾಗವಾಡ ಸೇರಿದಂತೆ ಐದು ಹೊಸ ತಾಲ್ಲೂಕುಗಳನ್ನು ಘೋಷಿಸಿದ್ದರೂ, ಆಡಳಿತ ಕಚೇರಿಗಳು ಬಾಡಿಗೆ ಕಟ್ಟಡಗಳಿಂದ ಕಾರ್ಯನಿರ್ವಹಿಸುತ್ತಿವೆ. ಸರ್ಕಾರವು ವರ್ಷಗಳ ಹಿಂದೆಯೇ ಹೊಸ ತಾಲ್ಲೂಕು ಕಚೇರಿ ಕಟ್ಟಡಗಳಿಗೆ 8 ಕೋಟಿ ರೂಪಾಯು ಮಂಜೂರು ಮಾಡಿತ್ತು, ಆದರೆ ಯಾವುದೇ ಪ್ರಗತಿ ಕಂಡುಬಂದಿಲ್ಲ ಎಂದರು.

ಕಡೂರು ತಾಲ್ಲೂಕಿಗೆ 16 ಕೋಟಿ ರೂಪಾಯಿ ನೀಡಲಾಗಿದೆ. ನಿರ್ಮಾಣಕ್ಕಾಗಿ 8 ಕೋಟಿ ರೂ.ಗಳ ಹಂಚಿಕೆಯನ್ನು 20% ರಷ್ಟು ಪರಿಷ್ಕರಿಸಬೇಕೆಂಬ ನಮ್ಮ ವಿನಂತಿಯನ್ನು ನಿರ್ಲಕ್ಷಿಸಲಾಗಿದೆ. ಪ್ರಮುಖ ಮೂಲಸೌಕರ್ಯ ಯೋಜನೆಗಳು ಸ್ಥಗಿತಗೊಂಡಿವೆ ಎಂದು ಶಾಸಕರು ಹೇಳಿದರು.

ಸಂಘಟನೆಗಳು ಅಥವಾ ಶಾಸಕರು ನನ್ನನ್ನು ದೂಷಿಸಲಿ - ಈ ಎಲ್ಲಾ ಕಾರಣಗಳಿಗಾಗಿ ನಾನು ಉತ್ತರ ಕರ್ನಾಟಕಕ್ಕೆ ಪ್ರತ್ಯೇಕ ರಾಜ್ಯ ಸ್ಥಾನಮಾನ ಬೇಕೆಂದು ಒತ್ತಾಯಿಸುವುದನ್ನು ಮುಂದುವರಿಸುತ್ತೇನೆ ಎಂದು ತಿಳಿಸಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

KJ George: ಸಿಎಂ ಪುತ್ರನ ಹಸ್ತಕ್ಷೇಪ; ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಲು ಕೆಜೆ ಜಾರ್ಜ್ ಮುಂದು? ಸದನದಲ್ಲಿ ಸಚಿವ ಸ್ಪಷ್ಟನೆ; Video

ಅಜಿತ್ ಪವಾರ್ ಪಂಚಭೂತಗಳಲ್ಲಿ ಲೀನ: ಅಮಿತ್ ಶಾ, ಫಡ್ನವೀಸ್‌ ಭಾಗಿ; ಸಕಲ ಸರ್ಕಾರಿ ಗೌರವದೊಂದಿಗೆ ಭಾವಪೂರ್ಣ ವಿದಾಯ

ಭಿನ್ನಾಭಿಪ್ರಾಯದ ನಡುವೆ ರಾಹುಲ್ ಗಾಂಧಿ, ಖರ್ಗೆ ಭೇಟಿ ಮಾಡಿದ ಶಶಿ ತರೂರ್; ಬಳಿಕ ಹೇಳಿದ್ದೇನು?

ಅಜಿತ್ ಪವಾರ್ ದುರಂತ ಅಂತ್ಯ: ಪವಾರ್ ಸಾಮ್ರಾಜ್ಯದ ಚುಕ್ಕಾಣಿ ಹಿಡಿಯುತ್ತಾರಾ ಸುನೇತ್ರಾ? ದಾದಾ ಪತ್ನಿಗೆ NCP ಸಾರಥ್ಯ!

AI ಬಳಸಿ ನನ್ನ ತೇಜೋವಧೆ: ವೈರಲ್ ಆಡಿಯೋ ಬಗ್ಗೆ ಮಾಜಿ ಸಂಸದ LR ಶಿವರಾಮೇಗೌಡ ಸ್ಪಷ್ಟೀಕರಣ

SCROLL FOR NEXT