ಚನ್ನಬಸವ ಸ್ವಾಮೀಜಿ  
ರಾಜ್ಯ

ವಿಜಯಪುರ: ವಚನಶಿಲಾ ಮಂಟಪದ ಸ್ಥಾಪಕ ಚನ್ನಬಸವ ಸ್ವಾಮೀಜಿ ಲಿಂಗೈಕ್ಯ

ಪ್ರಸಾದವು ತುಪ್ಪವಿಲ್ಲದೆ ಅಪೂರ್ಣವೆಂದು ಅವರು ಪರಿಗಣಿಸಿದ್ದರಿಂದ, ಯಾವುದೇ ಪ್ರಸಾದ ವ್ಯವಸ್ಥೆ ಇದ್ದರೂ ತುಪ್ಪದ ವ್ಯವಸ್ಥೆ ಇರಲೇಬೇಕೆಂಬುದು ಕಡ್ಡಾಯವಾಗಿತ್ತು. ಹಾಗಾಗಿ ಭಕ್ತರು ಅವರನ್ನು ‘ತುಪ್ಪದ ಸ್ವಾಮೀಜಿ’ ಎಂತಲೂ ಭಕ್ತಿ, ಪ್ರೀತಿಯಿಂದ ಕರೆಯುತ್ತಿದ್ದರು.

ವಿಜಯಪುರ: ಇಂಗಳೇಶ್ವರ ವಚನ ಶಿಲಾ ಮಂಟಪದ ಸ್ಥಾಪಕ ಇಂಗಳೇಶ್ವರ ವಿರಕ್ತ ಮಠದ ಚನ್ನಬಸವ ಮಹಾಸ್ವಾಮಿಗಳು (94) ಗುರುವಾರ ಲಿಂಗೈಕ್ಯರಾಗಿದ್ದಾರೆ. . ಶ್ರೀಗಳ ನಿಧನವು ಲಿಂಗಾಯತ ಸಮುದಾಯದಲ್ಲಿ ಮತ್ತು ವಿಜಯಪುರ ಜಿಲ್ಲೆಯ ನಿವಾಸಿಗಳ ಆಧ್ಯಾತ್ಮಿಕ ಜೀವನದಲ್ಲಿ ದೊಡ್ಡ ಶೂನ್ಯವನ್ನು ಸೃಷ್ಟಿಸಿದೆ ಎಂದು ಅವರ ಅನುಯಾಯಿಗಳು ತಿಳಿಸಿದ್ದಾರೆ.

ಲಿಂಗೈಕ್ಯ ಶ್ರೀಗಳ ಅಂತಿಮ ಧಾರ್ಮಿಕ ವಿಧಿ ವಿಧಾನವು ಡಿ. 12ರಂದು ಇಂಗಳೇಶ್ವರ ಗ್ರಾಮದಲ್ಲಿ ಮೆರವಣಿಗೆ ಬಳಿಕ ಮಧ್ಯಾಹ್ನ 2 ಗಂಟೆಗೆ ವಚನಶಿಲಾ ಮಂಟಪದಲ್ಲಿ ಕ್ರಿಯಾ ಸಮಾಧಿ ಮಾಡಲಾಗುವುದು ಎಂದು ಬಸವನಬಾಗೇವಾಡಿ ವಿರಕ್ತಮಠದ ಸಿದ್ದಲಿಂಗ ಸ್ವಾಮೀಜಿ ತಿಳಿಸಿದ್ದಾರೆ.

ಶ್ರೀಗಳ ನಿಧನವು ತಮ್ಮನ್ನು ತೀವ್ರ ದುಃಖಿತರನ್ನಾಗಿಸಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸಂತಾಪ ಸೂಚಿಸಿದ್ದಾರೆ. ಶ್ರೀಗಳ ನಿಧನವು ವಿಶೇಷವಾಗಿ ವೀರಶೈವ-ಲಿಂಗಾಯತ ಸಮುದಾಯಕ್ಕೆ ಮತ್ತು ಒಟ್ಟಾರೆಯಾಗಿ ಇಡೀ ಸಮಾಜಕ್ಕೆ ತುಂಬಲಾರದ ನಷ್ಟವಾಗಿದೆ ಎಂದು ಸಕ್ಕರೆ ಸಚಿವ ಶಿವಾನಂದ ಪಾಟೀಲ್ ಹೇಳಿದರು.

ಚನ್ನಬಸವ ಮಹಾಸ್ವಾಮಿಗಳು 1948 ರಲ್ಲಿ ಇಂಗಳೇಶ್ವರ ವಿರಕ್ತ ಮಠದ ಅಧಿಕಾರ ವಹಿಸಿಕೊಂಡರು. ಸತತ 32 ವರ್ಷಗಳ ಕಾಲ, ಅವರು ವಿವಿಧ ಧಾರ್ಮಿಕ ಸ್ಥಳಗಳಿಗೆ ಪಾದಯಾತ್ರೆ ಮಾಡಿ, ಅನೇಕ ಅನುಯಾಯಿಗಳನ್ನು ಆಕರ್ಷಿಸುವ ಭಕ್ತಿ ಸಂಪ್ರದಾಯವನ್ನು ಎತ್ತಿಹಿಡಿದರು. ಎಲ್ಲಾ ಶಿಷ್ಯರಿಗೆ ಆಹಾರವನ್ನು ವ್ಯವಸ್ಥೆ ಮಾಡುವ ಮೂಲಕ ಜನಪ್ರಿಯತೆ ಮತ್ತು ಅಸಂಖ್ಯಾತ ಅನುಯಾಯಿಗಳ ಪ್ರೀತಿಯನ್ನು ಗಳಿಸಿದರು.

ಪ್ರಸಾದವು ತುಪ್ಪವಿಲ್ಲದೆ ಅಪೂರ್ಣವೆಂದು ಅವರು ಪರಿಗಣಿಸಿದ್ದರಿಂದ, ಯಾವುದೇ ಪ್ರಸಾದ ವ್ಯವಸ್ಥೆ ಇದ್ದರೂ ತುಪ್ಪದ ವ್ಯವಸ್ಥೆ ಇರಲೇಬೇಕೆಂಬುದು ಕಡ್ಡಾಯವಾಗಿತ್ತು. ಹಾಗಾಗಿ ಭಕ್ತರು ಅವರನ್ನು ‘ತುಪ್ಪದ ಸ್ವಾಮೀಜಿ’ ಎಂತಲೂ ಭಕ್ತಿ, ಪ್ರೀತಿಯಿಂದ ಕರೆಯುತ್ತಿದ್ದರು. ಈ ಸರಳ ಸೇವೆಯು ಭಕ್ತರಿಂದ ಹೆಚ್ಚಿನ ಗೌರವ ಮತ್ತು ಪ್ರೀತಿಯನ್ನು ಗಳಿಸಿತು. ಅವರು ಪ್ರಬಲ ವಾಗ್ಮಿಯಾಗಿದ್ದರು ಮತ್ತು ಬಸವಾದಿ ಶರಣರ ವಚನಗಳ ಪಠಣದ ಮೂಲಕ ದೊಡ್ಡ ಜನಸಮೂಹವನ್ನು ಆಕರ್ಷಿಸಿದರು.

ಚನ್ನಬಸವ ಸ್ವಾಮೀಜಿಯವರು ಬಸವಣ್ಣನವರ ತಾಯಿ ತವರೂರು ಇಂಗಳೇಶ್ವರ ಗ್ರಾಮದ ವಿರಕ್ತಮಠದಲ್ಲಿ 1967ರಲ್ಲಿ ವಚನ ಶಿಲಾಮಂಟಪ ನಿರ್ಮಾಣಕ್ಕೆ ಭೂಮಿ ಪೂಜೆ ನೆರವೇರಿಸಿದ್ದರು. ಈ ಕಾರ್ಯ ಅರ್ಧ ಶತಮಾನದ ಬಳಿಕ ಸಾಕಾರಗೊಂಡಿದೆ.

ಕಲ್ಲಿನಲ್ಲಿ ಬರೆದ ವಚನಗಳು ಯುಗ ಯುಗ ಕಳೆದರೂ ಶಾಶ್ವತವಾಗಿ ಓದಲು ಸಾಧ್ಯವಾಗುವಂತೆ ಷಟ್ಕೋನಾಕೃತಿಯ ವಚನಶಿಲಾ ಮಂಟಪದಲ್ಲಿ ಬಸವಣ್ಣನವರ 1300 ವಚನಗಳು ಸೇರಿ ಸುಮಾರು 1700ಕ್ಕೂ ಅಧಿಕ ಬಸವಾದಿ ಶರಣರ ವಚನಗಳನ್ನು ಶಿಲೆಗಳಲ್ಲಿ ಕೆತ್ತಿಸಿದ್ದಾರೆ. ಚನ್ನಬಸವ ಸ್ವಾಮೀಜಿಯವರು ಜೋಳಿಗೆ ಹಿಡಿದು ನಾಡಿನಾದ್ಯಂತ ಪಾದಯಾತ್ರೆ ಮೂಲಕ ಸಂಚರಿಸಿ, ಸಂಗ್ರಹಿಸಿದ ಹಣದಲ್ಲಿ ಈ ಮಹತ್ಕಾರ್ಯ ಸಲ್ಲಿಸಿದ್ದು, ಗಿನ್ನಿಸ್ ದಾಖಲೆ ಸೇರ್ಪಡೆಯಾಗಿದೆ.

2022ರ ಜೂನ್‌ನಲ್ಲಿ ರಾಜ್ಯಪಾಲರಾದ ಥಾವರಚಂದ್ ಗೆಹ್ಲೋಟ್‌ ಲೋಕಾರ್ಪಣೆಗೊಳಿಸಿದರು. ಶರಣ ಸಾಹಿತ್ಯ ಪ್ರಚಾರ ಕಾರ್ಯಕ್ಕೆ‌ ವಚನಶಿಲಾ ಮಂಟಪ ದೊಡ್ಡ ಕೊಡುಗೆಯಾಗಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಇಂಡಿಗೋ ಬಿಕ್ಕಟ್ಟು: ನಾಲ್ವರು ವಿಮಾನ ಕಾರ್ಯಾಚರಣೆ ನಿರೀಕ್ಷಕರನ್ನು ಅಮಾನತುಗೊಳಿಸಿದ DGCA!

ಬೆಂಗಳೂರು: ನಾಲ್ಕು ಅಂತಸ್ತಿನ ಕಟ್ಟಡ ಬೆಂಕಿಗೆ ಆಹುತಿ; ನಿವಾಸಿಗಳನ್ನು ರಕ್ಷಿಸಿದ ಮೂವರು ಪೊಲೀಸರು!

ಆಂಧ್ರಪ್ರದೇಶ: ಚಿಂತೂರು-ಮರೇಡುಮಿಲ್ಲಿ ಘಾಟ್ ರಸ್ತೆಯಲ್ಲಿ ಬಸ್ ಕಂದಕಕ್ಕೆ ಉರುಳಿಬಿದ್ದು 9 ಯಾತ್ರಿಕರು ಸಾವು, 22 ಮಂದಿಗೆ ಗಾಯ-Video

ಬೆಳಗಾವಿ ಅಧಿವೇಶನ ಮಧ್ಯೆ ಡಿನ್ನರ್ ಪಾಲಿಟಿಕ್ಸ್: ಸಿಎಂ ಬೆನ್ನಲ್ಲೇ 30ಕ್ಕೂ ಹೆಚ್ಚು ಶಾಸಕರ ಜೊತೆ ಡಿಸಿಎಂ ಮೀಟಿಂಗ್

ನೀವು ಫುಟ್ಬಾಲ್ ದಿಗ್ಗಜ ಲಿಯೋನೆಲ್ ಮೆಸ್ಸಿ ಭೇಟಿ ಮಾಡಬೇಕೆ? ಹಾಗಾದ್ರೆ 10 ಲಕ್ಷ ರೂ. ಪಾವತಿಸಿ; ಇಲ್ಲಿದೆ ಮಾಹಿತಿ

SCROLL FOR NEXT