ಬೆಂಗಳೂರು: ಇನ್‍ಸ್ಟಾಗ್ರಾಂನಲ್ಲಿ ರೀಲ್ಸ್ ನೋಡಿ ಪರಿಚಯವಾಗಿದ್ದ ಗೃಹಿಣಿಯೊಬ್ಬಳು ಪೊಲೀಸ್ ಕಾನ್ಸ್ ಟೇಬಲ್ ಜೊತೆ ಪರಾರಿಯಾಗಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ನಗರದ HSR ಪೊಲೀಸ್ ಠಾಣೆಯಲ್ಲಿ ಹೊಯ್ಸಳ ವಾಹನ ಚಲಾಯಿಸುತ್ತಿದ್ದ ಪೊಲೀಸ್ ಪೇದೆ ರಾಘವೇಂದ್ರ ಜೊತೆ ಎರಡು ಮದುವೆಯಾಗಿದ್ದ ಮೋನಿಕಾ ಪರಾರಿಯಾಗಿದ್ದಾಳೆ. ಪೇದೆ ರಾಘವೇಂದ್ರಗೆ ಮದುವೆಯಾಗಿ ಒಬ್ಬಳು ಮಗಳಿದ್ದರೇ ಮೋನಿಕಾಗೆ 12 ವರ್ಷದ ಓರ್ವ ಮಗನಿದ್ದಾನೆ.
ಇನ್‍ಸ್ಟಾಗ್ರಾಂನಲ್ಲಿ ಪರಿಚಯವಾದ ಬಳಿಕ ಇಬ್ಬರೂ ರೀಲ್ಸ್ ವಿಡಿಯೋಗಳನ್ನು ಹಾಕುತ್ತಿದ್ದರು. ದಿನ ಕಳೆದಂತೆ ಪರಿಚಯ ಪ್ರೀತಿಗೆ ತಿರುಗಿತ್ತು. ನಂತರ ಇಬ್ಬರು ಓಡಿ ಹೋಗುವುದಕ್ಕೆ ಪ್ಲಾನ್ ಮಾಡಿದ್ದರು. ಹೀಗಾಗಿ HSR ಲೇಔಟ್ ಠಾಣೆಯಲ್ಲಿ ಮೋನಿಕಾ ಎರಡನೇ ಗಂಡನ ವಿರುದ್ಧ ಕಿರುಕುಳ ಸಂಬಂಧ ದೂರು ನೀಡಿದ್ದಳು. ಮೋನಿಕಾ ದೂರಿನ ಮೇರೆಗೆ ಪೊಲೀಸರು ಮೋನಿಕಾ ಪತಿಯನ್ನು ಠಾಣೆಗೆ ಕರೆಸಿ ಬುದ್ಧಿ ಹೇಳಿದ್ದರು. ಇದೀಗ ಮೋನಿಕಾ ಮನೆಯಲ್ಲಿದ್ದ 160 ಗ್ರಾಂ ಚಿನ್ನಾಭರಣ, 1.80 ಲಕ್ಷ ಹಣದೋಚಿ ರಾಘವೇಂದ್ರ ಜೊತೆ ಪರಾರಿಯಾಗಿದ್ದಾಳೆ. ಈ ಬಗ್ಗೆ ಮೋನಿಕಾ ಪತಿ ಚಂದ್ರಾಲೇಔಟ್ ಠಾಣೆಗೆ ದೂರು ನೀಡಿದ್ದಾರೆ. ಈ ಸಂಬಂಧ ಪೇದೆ ರಾಘವೇಂದ್ರನನ್ನು ಅಮಾನತುಗೊಳಿಸಲಾಗಿದೆ.