ಕುಮಾರಸ್ವಾಮಿ ಮತ್ತು ರವಿಕುಮಾರ್ ಗಣಿಗ 
ರಾಜ್ಯ

'ಕಡತಗಳು ಟೇಬಲ್‌ನಿಂದ ಟೇಬಲ್‌ಗೆ ವರ್ಗವಾಗುತ್ತಿರುವಾಗಲೇ ಸುವರ್ಣ ಸಮಯ ಕಳೆದು ಹೋಗುತ್ತಿದೆ': HDKಗೆ ರವಿಕುಮಾರ್ ಟಾಂಗ್

ಕೇಂದ್ರ ಸರ್ಕಾರವು ಮೂಲತಃ ಮಂಡ್ಯಕ್ಕೆ ಲೆವೆಲ್-2 ಟ್ರಾಮಾ ಸೆಂಟರ್ ಮಂಜೂರು ಮಾಡಿತ್ತು. ಆದರೆ ಭೂಮಿ ಲಭ್ಯವಿಲ್ಲದ ಕಾರಣ, ಅವರು ಅದನ್ನು ಸುಮಾರು 35-40 ಕಿ.ಮೀ ದೂರದಲ್ಲಿರುವ ಮೈಸೂರಿಗೆ ಸ್ಥಳಾಂತರಿಸಲಾಗಿತ್ತು.

ಬೆಂಗಳೂರು: ಟ್ರಾಮಾ ಕೇರ್ ಸೆಂಟರ್‌ಗೆ ಮಂಡ್ಯದಲ್ಲಿ ಜಾಗ ಕೊಡಲು ಸಿದ್ಧರಿದ್ದೇವೆ ಎಂದು ಶಾಸಕ ಪಿ.ರವಿಕುಮಾರ್ ಗಣಿಗ ಪರೋಕ್ಷವಾಗಿ ಕೇಂದ್ರ ಮಂತ್ರಿ ಹೆಚ್.ಡಿ ಕುಮಾರಸ್ವಾಮಿಗೆ ಟಾಂಗ್ ಕೊಟ್ಟಿದ್ದಾರೆ.

ಟ್ರಾಮಾ ಕೇರ್ ಸೆಂಟರ್ ಸ್ಥಾಪನೆಗೆ ಜಾಗ ಕೊಡುವಂತೆ ಜಿಲ್ಲಾಧಿಕಾರಿಗೆ ಹೆಚ್.ಡಿ ಕುಮಾರಸ್ವಾಮಿ ಪತ್ರ ಬರೆದಿದ್ದಾರೆ. ಈಗ ಮಂಡ್ಯದಲ್ಲೇ ಟ್ರಾಮಾ ಕೇರ್ ಸೆಂಟರ್ ಮಾಡಲು ಸಂಸದರು ಜಾಗ ಕೇಳಿದರೆ ಕೊಡಲು ತಯಾರಿದ್ದೇವೆ ಎಂದಿದ್ದಾರೆ.

ಕೇಂದ್ರ ಸರ್ಕಾರವು ಮೂಲತಃ ಮಂಡ್ಯಕ್ಕೆ ಲೆವೆಲ್-2 ಟ್ರಾಮಾ ಸೆಂಟರ್ ಮಂಜೂರು ಮಾಡಿತ್ತು. ಆದರೆ ಭೂಮಿ ಲಭ್ಯವಿಲ್ಲದ ಕಾರಣ, ಅವರು ಅದನ್ನು ಸುಮಾರು 35-40 ಕಿ.ಮೀ ದೂರದಲ್ಲಿರುವ ಮೈಸೂರಿಗೆ ಸ್ಥಳಾಂತರಿಸಲಾಗಿತ್ತು. ಈ ನಿರ್ಧಾರದಿಂದಾಗಿ ಹೆಚ್ಚು ಜೀವಗಳನ್ನು ಬಲಿಯಾಗುತ್ತಿವೆ ಎಂದು ರವಿಕುಮಾರ್ ಮಾಹಿತಿ ನೀಡಿದ್ದಾರೆ.

ಎಕ್ಸ್ ಪ್ರೆಸ್ ಹೆದ್ದಾರಿಯು ಕರ್ನಾಟಕದ ಬೇರೆ ಎಲ್ಲಾ ರಸ್ತೆಗಿಂತ ಹೆಚ್ಚು ಜನರನ್ನು ಬಲಿ ತೆಗೆದುಕೊಂಡಿದೆ. ಹೀಗಾಗಿ ಸುವರ್ಣ ಸಮಯ ಕಳೆದುಹೋಗುತ್ತಿದೆ, ಆದರೆ ರೋಗಿಗಳನ್ನು ಮೈಸೂರು ಅಥವಾ ಬೆಂಗಳೂರಿಗೆ ಕರೆದೊಯ್ಯಲಾಗುತ್ತದೆ ಎಂದಿದ್ದಾರೆ.

ಎಕ್ಸ್ ಪ್ರೆಸ್ ವೇ ತೆರೆದ ಮೊದಲ ವರ್ಷದಲ್ಲಿ 550 ಅಪಘಾತಗಳು ಸಂಭವಿಸಿವೆ. ಅವುಗಳಲ್ಲಿ 188 ಮಾರಕವಾಗಿವೆ, ಮೊದಲ ಆರು ತಿಂಗಳಲ್ಲಿ 132 ಸಾವುಗಳು ಸಂಭವಿಸಿವೆ. ಅಪಘಾತಗಳು ಶೇ, 60 ರಷ್ಟು ಕಡಿಮೆಯಾಗಿ 50 ಕ್ಕಿಂತ ಕಡಿಮೆ ಸಾವುಗಳು ಸಂಭವಿಸಿವೆ.

2025 ರಲ್ಲಿ ಇಲ್ಲಿಯವರೆಗೆ, ಕ್ಯಾಮೆರಾಗಳು ಮತ್ತು ಸುಧಾರಿತ ಸಂಚಾರ ನಿರ್ವಹಣಾ ವ್ಯವಸ್ಥೆಗಳಿಂದಾಗಿ ಯಾವುದೇ ಸಾವುನೋವುಗಳು ಸಂಭವಿಸಿಲ್ಲ. ಆದರೆ ಗಂಭೀರವಾಗಿ ಗಾಯಗೊಂಡವರು ಇನ್ನೂ ರಸ್ತೆಯಲ್ಲೇ ಸಾವನ್ನಪ್ಪುತ್ತಿದ್ದಾರೆ.

2023 ರ ಮೊದಲಾರ್ಧದಲ್ಲಿ ಮಂಡ್ಯ ಜಿಲ್ಲೆಯಲ್ಲಿ ಮಾತ್ರ 65 ಸಾವುಗಳು ಸಂಭವಿಸಿವೆ. ಇಂದಿಗೂ, ಅಪಘಾತದಲ್ಲಿ ಗಾಯಗೊಂಡವರು ಮೈಸೂರಿಗೆ ಪ್ರಯಾಣಿಸುವ ವೇಳೆ ಸುವರ್ಣ ಸಮಯವನ್ನು ಕಳೆದುಕೊಳ್ಳುತ್ತಾರೆ" ಎಂದು ಅವರು ಹೇಳಿದರು.

ರಾಜ್ಯವು ಭೂಮಿ ನೀಡುವವರೆಗೆ ಕೇಂದ್ರ ಸರ್ಕಾರವು ಕಟ್ಟಡ ನಿರ್ಮಾಣ ಮಾಡಲು ಸಾಧ್ಯವಿಲ್ಲ ಎಂದು ಕುಮಾರಸ್ವಾಮಿ ಈ ಹಿಂದೆ ಹೇಳಿದ್ದರು. ಅದಕ್ಕೆ ಪ್ರತಿಕ್ರಿಯಿಸಿರುವ ರವಿಕುಮಾರ್, "ಭೂಮಿ ಸಿದ್ಧವಾಗಿದೆ. ದಯವಿಟ್ಟು ಟ್ರಾಮಾ ಕೇಂದ್ರವನ್ನು ಸ್ಥಾಪಿಸಬಹುದೇ? ಕಡತಗಳು ಟೇಬಲ್‌ನಿಂದ ಟೇಬಲ್‌ಗೆ ಚಲಿಸುವ ಸಮಯದಲ್ಲೇ ಜನರು ಸಾಯುತ್ತಿದ್ದಾರೆ ಎಂದು ಹೇಳಿದ್ದಾರೆ.

ಮಿಮ್ಸ್ ಪಕ್ಕದಲ್ಲಿರುವ ತಮಿಳು ಕಾಲೋನಿ ಜಾಗ ವಿವಾದ ನ್ಯಾಯಾಲಯದಲ್ಲಿದೆ. ಡಿಎಚ್‌ಓ ಕಚೇರಿ ಆವರಣದಲ್ಲಿ ಟ್ರಾಮಾ ಕೇರ್ ಸೆಂಟರ್ ತೆರೆಯಲು ಜಾಗದ ಲಭ್ಯತೆ ಇದೆ. ಹಾಗಾಗಿ ಜಿಲ್ಲಾ ಆರೋಗ್ಯಾಧಿಕಾರಿ ಕಚೇರಿ ಆವರಣದಲ್ಲಿ ಜಾಗ ನೀಡುತ್ತೇವೆ ಎಂದು ಹೇಳಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

17ನೇ ಬೆಂಗಳೂರು ಅಂತರರಾಷ್ಟ್ರೀಯ ಚಲನಚಿತ್ರೋತ್ಸವ: ಸಿಎಂ ಸಿದ್ದರಾಮಯ್ಯ ಉದ್ಘಾಟನೆ

ಟ್ರಂಪ್ ದಾಳಿ ಬೆದರಿಕೆ ಬೆನ್ನಲ್ಲೇ ಇರಾನ್‌ಗೆ ಶಾಕ್: ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್‌ ಉಗ್ರ ಸಂಘಟನೆ ಎಂದು ಪಟ್ಟಿ ಮಾಡಿದ EU!

ಒಟ್ಟಾರೆ 320 ಕೋಟಿ ಆಸ್ತಿ ಮುಟ್ಟುಗೋಲು: ಕರ್ನಾಟಕ Congress ಶಾಸಕ, ಸಹಚರರು ಅಕ್ರಮ ಬೆಟ್ಟಿಂಗ್ ಜಾಲದ 'ಮಾಸ್ಟರ್ ಮೈಂಡ್'; ED

Indian Armyಗೆ 2 ದೀರ್ಘ-ಶ್ರೇಣಿಯ 'Suryastra' ರಾಕೆಟ್ ಲಾಂಚರ್‌ ಸೇರ್ಪಡೆ, ಶೀಘ್ರ live-fire ಪ್ರಯೋಗ!

ಈಕ್ವಿಟಿಯತ್ತ ಭಾರತೀಯ ಕುಟುಂಬಗಳ ಚಿತ್ತ: 5 ವರ್ಷದಲ್ಲಿ 53 ಟ್ರಿಲಿಯನ್ ಗೇರಿಕೆ, ಮ್ಯೂಚುಯಲ್ ಫಂಡ್ ಜನಪ್ರಿಯತೆ ಹೆಚ್ಚಳ!

SCROLL FOR NEXT