ಎಂ.ಜಿ ರಸ್ತೆ 
ರಾಜ್ಯ

MG ರಸ್ತೆಯ ಪೈಪ್‌ಲೈನ್ ಕಾಮಗಾರಿ: 40 ವರ್ಷಗಳಲ್ಲಿ ಮೊದಲ ಬಾರಿ ರಸ್ತೆ ಅಗೆತ; ವ್ಯಾಪಾರಿಗಳಿಂದ ಮಿಶ್ರ ಪ್ರತಿಕ್ರಿಯೆ

ಎಂಜಿ ರಸ್ತೆ ಒಂದು ಪ್ರಮುಖ ವ್ಯಾಪಾರ ಕಾರಿಡಾರ್ ಆಗಿದೆ, ಮತ್ತು ಸಂಚಾರ ನಿರ್ವಹಣೆಯನ್ನು ಸರಿಯಾಗಿ ಯೋಜಿಸಿದರೆ, ವ್ಯವಹಾರವು ಸ್ಥಗಿತಗೊಳ್ಳುವುದಿಲ್ಲ ಎಂದು ಅವರು ಹೇಳಿದರು.

ಬೆಂಗಳೂರು: ನಗರದ ಪ್ರತಿಷ್ಠಿತ ರಸ್ತೆಗಳಲ್ಲಿ ಎಂಜಿ ರಸ್ತೆ (ಮಹಾತ್ಮ ಗಾಂಧಿ ರಸ್ತೆ)ಯೂ ಒಂದು. ನಗರದ ಹಲವು ರಸ್ತೆಗಳಲ್ಲಿ ಜಲಮಂಡಳಿ ಕಾಮಗಾರಿಗಳು ನಡೆಯುತ್ತಿವೆ. ಈಗ ಎಂಜಿ ರಸ್ತೆಯಲ್ಲಿಯೂ ಕಾಮಗಾರಿ ನಡೆಸಲು ತೀರ್ಮಾನಿಸಲಾಗಿದೆ. 40 ವರ್ಷಗಳಲ್ಲಿ ಮೊದಲ ಬಾರಿಗೆ ಈ ರಸ್ತೆಯನ್ನು ಅಗೆಯಲಾಗುತ್ತದೆ.

ನಗರದ ವಾಣಿಜ್ಯ ಕಾರಿಡಾರ್ ಆಗಿರುವ ಎಂಜಿ ರಸ್ತೆಯನ್ನು ಅಗೆಯಲು ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ (ಬಿಡಬ್ಲ್ಯೂಎಸ್ಎಸ್ಬಿ) ಸಿದ್ಧತೆ ನಡೆಸುತ್ತಿರುವುದರಿಂದ, ಈ ಮಾರ್ಗದಲ್ಲಿ ವ್ಯವಹಾರಗಳು, ಕಚೇರಿ ಬಾಡಿಗೆದಾರರು ಮತ್ತು ಕೈಗಾರಿಕಾ ಸಂಸ್ಥೆಗಳಿಗೆ ಅಡಚಣೆಗಯಾಗುವುದು ಖಚಿತ, ಪೈಪ್ ಹಾಕುವ ಸಮಯ ನಿಗದಿಯಾದರೆ ಪ್ರವೇಶಸಾಧ್ಯತೆ, ಸಂಚಾರ ದಟ್ಟಣೆ ಮತ್ತು ಮುಂದಾಗುವ ನಷ್ಟಗಳ ಬಗ್ಗೆ ಕಳವಳ ವ್ಯಕ್ತವಾಗುತ್ತಿದೆ.

ಕೆಲವು ವ್ಯಾಪಾರ ಮಾಲೀಕರು ಕೆಲಸ ಅತ್ಯಗತ್ಯ ಎಂದು ಹೇಳಿದ್ದಾರೆ. ಆದರೆ ಅದು ಸ್ಪಷ್ಟ ಸಮಯ ಮಿತಿ, ಪರಿಣಾಮಕಾರಿ ಸಂಚಾರ ಹಾಗೂ ಪ್ರವೇಶ ನಿರ್ವಹಣೆ ಇರಬೇಕು ಎಂದಿದ್ದಾರೆ.

ಎಂಜಿ ರಸ್ತೆಯಲ್ಲಿರುವ ಬಿಹೆಚ್ಐವಿಇ ಕೋ-ವರ್ಕಿಂಗ್ ಸ್ಪೇಸ್‌ನ ಮಾಲೀಕ ಶೇಶ್ ಪಾಪ್ಲಿಕರ್, ಮಾತನಾಡಿ, ಅಂತಹ ಮಹತ್ವದ ರಸ್ತೆಯಲ್ಲಿ ಮೂಲಸೌಕರ್ಯ ನವೀಕರಣಗಳು ಅಗತ್ಯವೆಂದು ಹೇಳಿದರು.

ಎಂಜಿ ರಸ್ತೆ ಒಂದು ಪ್ರಮುಖ ವ್ಯಾಪಾರ ಕಾರಿಡಾರ್ ಆಗಿದೆ, ಮತ್ತು ಸಂಚಾರ ನಿರ್ವಹಣೆಯನ್ನು ಸರಿಯಾಗಿ ಯೋಜಿಸಿದರೆ, ವ್ಯವಹಾರವು ಸ್ಥಗಿತಗೊಳ್ಳುವುದಿಲ್ಲ ಎಂದು ಅವರು ಹೇಳಿದರು.

ತಮ್ಮ ಬಳಕೆದಾರರಲ್ಲಿ ಹೆಚ್ಚಿನವರು ಮೆಟ್ರೋ ಮೂಲಕ ಪ್ರಯಾಣಿಸುತ್ತಾರೆ, ಇದು ರಸ್ತೆ ಮುಚ್ಚುವುದರಿಂದ ಆಗುವ ಪರಿಣಾಮವನ್ನು ಕಡಿಮೆ ಮಾಡುತ್ತದೆ ಎಂದು ಅವರು ಹೇಳಿದರು.

ಪ್ರಯಾಣಿಕರಿಗೆ ಈಗಾಗಲೇ ತೊಂದರೆ ಪ್ರಾರಂಭವಾಗಿದೆ ಎಂದು ಎಂಜಿ ರಸ್ತೆಯಲ್ಲಿರುವ ಕಚೇರಿಯೊಂದರಲ್ಲಿ ಕೆಲಸ ಮಾಡುವ ಆರ್ಯಮನ್ ಲಕ್ಷ್ಮಣನ್ ಹೇಳಿದ್ದಾರೆ. ಆದರೆ ರಸ್ತೆ ಮಾರ್ಗ ಬದಲಾವಣೆಗಳು ಅನಿರೀಕ್ಷಿತವಾಗಿಸಿದೆ ಎಂದು ಹೇಳಿದರು.

ಚಿಲ್ಲರೆ ವ್ಯಾಪಾರಿಗಳು ಮತ್ತು ಆಹಾರ ಮಳಿಗೆಗಳು ವಿಶೇಷವಾಗಿ ವಾಕ್-ಇನ್ ಗ್ರಾಹಕರ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ. ಎಂಜಿ ರಸ್ತೆಯಲ್ಲಿ ಔಟ್‌ಲೆಟ್ ಹೊಂದಿರುವ ಆಬ್ರೀ ಮಾಲೀಕ ಕಿಶೋರ್ ಕುಮಾರ್, ಇದು ಪ್ರಮುಖ ಸ್ಥಳವಾಗಿದೆ, ಆದರೆ ಒಮ್ಮೆ ಅಗೆಯಲು ಪ್ರಾರಂಭವಾದರೆ, ವಾಕ್-ಇನ್ ಗಳು ತಕ್ಷಣವೇ ಕಡಿಮೆಯಾಗುತ್ತವೆ” ಎಂದು ಅವರು ಹೇಳಿದರು.

ವ್ಯಾಪಾರಿಗಳು ಸ್ವಿಗ್ಗಿ ಮತ್ತು ಜೊಮಾಟೊವನ್ನು ಹೆಚ್ಚಾಗಿ ಅವಲಂಬಿಸಿರುವುದರಿಂದ, ದಟ್ಟಣೆಯಿಂದಾಗಿ ವಿತರಣಾ ವಿಳಂಬವು ದೈನಂದಿನ ಆದಾಯದ ಮೇಲೆ ನೇರವಾಗಿ ಪರಿಣಾಮ ಬೀರುತ್ತದೆ ಎಂದು ಅವರು ಹೇಳಿದರು.

"2 ಕಿ.ಮೀ. ಉದ್ದದ ಈ ಕಾಮಗಾರಿಯನ್ನು 15 ದಿನಗಳಲ್ಲಿ ಪೂರ್ಣಗೊಳಿಸುವುದು ಒಂದು "ಪವಾಡ". ಇಲ್ಲದಿದ್ದರೆ, ಎಂ.ಜಿ. ರಸ್ತೆ ಮತ್ತು ಸಂಪರ್ಕಿತ ಕೇಂದ್ರ ವ್ಯಾಪಾರ ಜಿಲ್ಲಾ ರಸ್ತೆಗಳು ತೊಂದರೆಗೊಳಗಾಗುತ್ತವೆ," ಎಂದು ಅವರು ಹೇಳಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

MGNREGA ಬದಲಿಗೆ ಕೇಂದ್ರದ ಹೊಸ ಮಸೂದೆ: ರಾಜ್ಯಗಳ ಮೇಲೆ ಶೇ. 40ರಷ್ಟು ಹೊರೆ! ವಿಶೇಷತೆ ಏನು?

ಮಂಡ್ಯ To ಮಡಿಕೇರಿ: Facebook ಗೆಳತಿ ಭೇಟಿಗೆ ಹೋಗಿದ್ದ ಉದ್ಯಮಿಯ ಸುಲಿಗೆ ಹಾಗೂ ಹಲ್ಲೆ ಕೇಸ್; ನಾಲ್ವರು ಬಂಧನ!

ನಿತಿನ್ ನಬಿನ್ ನೇರವಾಗಿ ಬಿಜೆಪಿ ರಾಷ್ಟ್ರಾಧ್ಯಕ್ಷರ ಹುದ್ದೆಗೆ ನೇಮಕ ಆಗಲಿಲ್ಲ ಏಕೆ?: ಕಾರ್ಯಾಧ್ಯಕ್ಷರ ಪಾತ್ರವೇನು?

Video: ಧಾರ್ಮಿಕ ಆಚರಣೆ ವೇಳೆ ಗುರಾಣಿಯಿಂದ ಬಾರಿಸಿದ ತೆಯ್ಯಂ, ಕುಸಿದು ಪ್ರಜ್ಞೆ ತಪ್ಪಿದ ಯುವಕ, ಇಷ್ಟಕ್ಕೂ ಆಗಿದ್ದೇನು?

ಉದ್ಧವ್‌ ಠಾಕ್ರೆಗೆ ಭಾರೀ ಹಿನ್ನಡೆ; ಬಿಜೆಪಿ ಸೇರಿದ ತೇಜಸ್ವಿ ಘೋಸಲ್ಕರ್

SCROLL FOR NEXT