ಸಾಂದರ್ಭಿಕ ಚಿತ್ರ 
ರಾಜ್ಯ

ಭ್ರಷ್ಟಾಚಾರ ಪ್ರಕರಣ: ಅಧಿಕಾರಿಗಳನ್ನು ಖುಲಾಸೆಗೊಳಿಸಿದ ಲೋಕಾಯುಕ್ತ ಕೋರ್ಟ್

ಆರೋಪಗಳನ್ನು ಸಾಬೀತುಪಡಿಸಲು ವಿಫಲವಾದ ಕಾರಣ ಅವರನ್ನು ಖುಲಾಸೆಗೊಳಿಸಲಾಗಿದೆ ಎಂದು ನ್ಯಾಯಾಧೀಶ ಕೆ.ಎಂ. ರಾಧಾಕೃಷ್ಣ ಅವರು ಹೇಳಿದ್ದಾರೆ.

ಬೆಂಗಳೂರು: 2018, 55,000 ರೂ. ಲಂಚ ಸ್ವೀಕರಿಸುತ್ತಿದ್ದ ವೇಳೆ ಭ್ರಷ್ಟಾಚಾರ ನಿಗ್ರಹ ದಳ(ACB)ಕ್ಕೆ ಸಿಕ್ಕಿಬಿದ್ದಿದ್ದ ಆಗಿನ ಹೆಚ್ಚುವರಿ ಸಹಕಾರಿ ಸಂಘಗಳ ನೋಂದಣಾಧಿಕಾರಿ ಆರ್. ಶ್ರೀಧರ್ ಮತ್ತು ಅವರ ಅಡಿಯಲ್ಲಿ ಕೆಲಸ ಮಾಡುತ್ತಿದ್ದ ಪ್ರಥಮ ದರ್ಜೆ ಸಹಾಯಕ ಪುಷ್ಪಲತಾ ಅವರನ್ನು ಲೋಕಾಯುಕ್ತ ಪ್ರಕರಣಗಳ ವಿಶೇಷ ನ್ಯಾಯಾಲಯ ಗುರುವಾರ ಖುಲಾಸೆಗೊಳಿಸಿದೆ.

“1973 ರ ಅಪರಾಧ ಪ್ರಕ್ರಿಯಾ ಸಂಹಿತೆಯ ಸೆಕ್ಷನ್ 248(1) ರ ಅಡಿಯಲ್ಲಿ ಆರೋಪಿ ನಂ.1 ಆರ್. ಶ್ರೀಧರ್ ಮತ್ತು ಆರೋಪಿ ನಂ.2 ಪುಷ್ಪಲತಾ ಅವರನ್ನು ಭ್ರಷ್ಟಾಚಾರ ತಡೆ ಕಾಯ್ದೆ, 1988 ರ(ತಿದ್ದುಪಡಿ ಕಾಯ್ದೆ, 2018) ರ ಸೆಕ್ಷನ್ 7(ಎ) ರ ಅಡಿಯಲ್ಲಿ ಅವರ ವಿರುದ್ಧದ ಆರೋಪಗಳನ್ನು ಸಾಬೀತುಪಡಿಸಲು ವಿಫಲವಾದ ಕಾರಣ ಅವರನ್ನು ಖುಲಾಸೆಗೊಳಿಸಲಾಗಿದೆ” ಎಂದು ನ್ಯಾಯಾಧೀಶ ಕೆ.ಎಂ. ರಾಧಾಕೃಷ್ಣ ಅವರು ಹೇಳಿದ್ದಾರೆ. ಅಲ್ಲದೆ ರಾಜ್ಯ ಸರ್ಕಾರ 55,000 ರೂ.ಗಳ ಕಳಂಕಿತ ಹಣವನ್ನು ಮುಟ್ಟುಗೋಲು ಹಾಕಿಕೊಳ್ಳಲು ಆದೇಶ ಹೊರಡಿಸಿದ್ದಾರೆ.

ಖುಲಾಸೆಗೆ ಕಾರಣಗಳನ್ನು ನೀಡುತ್ತಾ, ಪ್ರಾಸಿಕ್ಯೂಷನ್ ತನ್ನ ಆರೋಪಗಳನ್ನು ಸಾಬೀತುಪಡಿಸಲು ಮತ್ತು ಆರೋಪಿ ಸಂಖ್ಯೆ 1 ಮತ್ತು 2 ರ ತಪ್ಪಿತಸ್ಥರ ಅಪರಾಧವನ್ನು ಸಾಬೀತುಪಡಿಸಲು ವಿಫಲವಾಗಿದೆ. ಆದ್ದರಿಂದ, ಇದು ಖುಲಾಸೆಗೊಳಿಸಲು ಸೂಕ್ತವಾದ ಪ್ರಕರಣವಾಗಿದೆ ಎಂದು ನ್ಯಾಯಾಲಯ ಹೇಳಿದೆ.

ದೂರುದಾರ ಲಕ್ಷ್ಮಣ್ ಎಲಿಗೇರ ಅವರು, ಉದ್ದೇಶಿತ ಭಾರತೀಯ ಸಹಕಾರ ಸಂಘ ನಿಯಮಿತವನ್ನು ನೋಂದಾಯಿಸಲು ಮೊದಲ ಆರೋಪಿಯು 5 ಲಕ್ಷ ರೂ. ತನಗೆ ಮತ್ತು ಎರಡನೇ ಆರೋಪಿಗೆ 50,000 ರೂ. ಲಂಚ ಕೇಳಿದ್ದರು ಎಂದು ಆರೋಪಿಸಲಾಗಿದೆ. ನಂತರ, ಅದನ್ನು 3 ಲಕ್ಷ ರೂ. ಮತ್ತು 50,000 ರೂ.ಗಳಿಗೆ ಇಳಿಸಲಾಯಿತು ಎಂದು ಹೇಳಿದ್ದಾರೆ.

ಲಂಚವನ್ನು ಪಾವತಿಸಲು ಸಾಧ್ಯವಾಗದ ಕಾರಣ, ದೂರುದಾರರು ಎಸಿಬಿಯನ್ನು ಸಂಪರ್ಕಿಸಿದರು. ಡಿಸೆಂಬರ್ 12, 2018 ರಂದು, ದೂರುದಾರರಿಂದ 55,000 ರೂ.ಗಳನ್ನು ಪಡೆಯುವ ಸಂದರ್ಭದಲ್ಲಿ ಎಸಿಬಿ ಈ ಇಬ್ಬರೂ ಆರೋಪಿಗಳನ್ನು ಬಂಧಿಸಿತ್ತು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ನನಗೆ ರಾಜಕೀಯ ನಿಶ್ಯಕ್ತಿ ಎಂಬುದೇ ಇಲ್ಲ, 5 ವರ್ಷ ನಾನೇ ಸಿಎಂ': ಬೆಳಗಾವಿ ಅಧಿವೇಶನದಲ್ಲಿ ಸಿದ್ದರಾಮಯ್ಯ ಪುನರುಚ್ಛಾರ

ಸಂಸತ್ ಅಧಿವೇಶನಕ್ಕೆ ತೆರೆ: ಲೋಕಸಭೆ, ರಾಜ್ಯಸಭೆ ಕಲಾಪ ಅನಿರ್ದಿಷ್ಟಾವಧಿಗೆ ಮುಂದೂಡಿಕೆ

Gold Smuggling Case: ನಟಿ ರನ್ಯಾ ರಾವ್​ಗಿಲ್ಲ ರಿಲೀಫ್; ಹೇಬಿಯಸ್ ಕಾರ್ಪಸ್ ಅರ್ಜಿ ವಜಾಗೊಳಿಸಿದ ಹೈಕೋರ್ಟ್

G Ram G ಮಸೂದೆ 'ಗ್ರಾಮ ವಿರೋಧಿ'; ಮೋದಿ ಸರ್ಕಾರದಿಂದ 20 ವರ್ಷಗಳ MGNREGA ನಾಶ

Video: ಬುರ್ಜ್ ಖಲೀಫಾಗೆ ಬಡಿದ ಸಿಡಿಲು; ಅದ್ಭುತ ವಿಡಿಯೋ ಹಂಚಿಕೊಂಡ ದುಬೈ ಕ್ರೌನ್ ಪ್ರಿನ್ಸ್; ಸಿಕ್ಕಾಪಟ್ಟೆ ವೈರಲ್!

SCROLL FOR NEXT