ಪ್ರಲ್ಹಾದ ಜೋಶಿ  
ರಾಜ್ಯ

ಭಾರತದ ಕಾಫಿಗೆ ಹೆಚ್ಚಿದ ಜಾಗತಿಕ ಬೇಡಿಕೆ; ವಿದೇಶಗಳಿಂದ 'ಫ್ರೀ ಟ್ರೇಡಿಂಗ್‌' ಅಗ್ರಿಮೆಂಟ್‌!

ಭಾರತ ಇಂದು 4 ಲಕ್ಷ ಟನ್‌ ಕಾಫಿಯನ್ನು ಉತ್ಪಾದಿಸುತ್ತಿದ್ದು, ಶೇ.70ರಷ್ಟು ಕಾಫಿ ರಫ್ತು ಮಾಡುತ್ತಿದೆ. ಶೇ.30ರಷ್ಟು ಮಾತ್ರ ಸ್ಥಳೀಯವಾಗಿ ಬಳಕೆಯಾಗುತ್ತಿದೆ ಎಂದು ಕೇಂದ್ರ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಪ್ರಲ್ಹಾದ ಜೋಶಿ ತಿಳಿಸಿದರು.

ಬಾಳೆಹೊನ್ನೂರು: ದೇಶದ ಕಾಫಿಗೆ ಜಾಗತಿಕವಾಗಿ ಬಹು ದೊಡ್ಡ ಪ್ರಮಾಣದಲ್ಲಿ ಬೇಡಿಕೆಯಿದ್ದು, ಅನೇಕ ದೇಶಗಳು ಇಂದು ಭಾರತದೊಂದಿಗೆ ಫ್ರೀ ಟ್ರೇಡಿಂಗ್‌ ಅಗ್ರಿಮೆಂಟ್‌ ಮಾಡಿಕೊಳ್ಳುತ್ತಿವೆ ಎಂದು ಕೇಂದ್ರ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಪ್ರಲ್ಹಾದ ಜೋಶಿ ಹೇಳಿದರು.

ಬಾಳೆಹೊನ್ನೂರು ಕೇಂದ್ರೀಯ ಕಾಫಿ ಸಂಶೋಧನಾ ಸಂಸ್ಥೆಯಲ್ಲಿ ಶನಿವಾರ, ಕಾಫಿ ಮಂಡಳಿ ಹಾಗೂ ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯ ಆಯೋಜಿಸಿದ್ದ ಕೇಂದ್ರೀಯ ಕಾಫಿ ಸಂಶೋಧನಾ ಸಂಸ್ಥೆ (ಸಿಸಿಆ‌ರ್ಐ) ಶತಮಾನೋತ್ಸವ ಸಮಾರಂಭದಲ್ಲಿ ಮಾತನಾಡಿ, ಈ ಸಂಸ್ಥೆ 100ನೇ ವರ್ಷ ಪೂರೈಸಿರುವುದು ಸಂತಸದ ಸಂಗತಿ ಎಂದು ಹರ್ಷ ವ್ಯಕ್ತಪಡಿಸಿದರು.

ಭಾರತ ಇಂದು 4 ಲಕ್ಷ ಟನ್‌ ಕಾಫಿಯನ್ನು ಉತ್ಪಾದಿಸುತ್ತಿದ್ದು, ಶೇ.70ರಷ್ಟು ಕಾಫಿ ರಫ್ತು ಮಾಡುತ್ತಿದೆ. ಶೇ.30ರಷ್ಟು ಮಾತ್ರ ಸ್ಥಳೀಯವಾಗಿ ಬಳಕೆಯಾಗುತ್ತಿದೆ. ಚಿಕ್ಕಮಗಳೂರು ಕಾಫಿ, ಅರೋಕೋ ಕಾಫಿ ಸೇರಿದಂತೆ ದೇಶದೆಲ್ಲೆಡೆ ಕಾಫಿ ಬೆಳೆಗೆ ಕೇಂದ್ರ ಸರ್ಕಾರ ಉತ್ತೇಜನ ನೀಡುತ್ತಿದೆ ಎಂದರು.

ಮುಂಬರುವ ಕೆಲ ವರ್ಷಗಳಲ್ಲಿ ಭಾರತದ ಕಾಫಿ ಉತ್ಪಾದನೆಯನ್ನು 4 ಲಕ್ಷ ಟನ್‌ನಿಂದ 9 ಲಕ್ಷ ಟನ್‌ಗೆ ಹೆಚ್ಚಿಸಲು ಪ್ರಧಾನಿ ನರೇಂದ್ರ ಮೋದಿ ಅವರು ಕರೆ ಕೊಟ್ಟಿದ್ದಾರೆ. ಈ ನಿಟ್ಟಿನಲ್ಲಿ ಸಂಶೋಧನಾ ಕೇಂದ್ರಗಳೂ ಕೂಡ ಹೆಚ್ಚಿನ ಇಳುವರಿಯ ಕಾಫಿ ತಳಿ ಅಭಿವೃದ್ಧಿಗೆ ಒತ್ತು ನೀಡಬೇಕಿದೆ. ವಿದೇಶಗಳಿಗೆ ರಫ್ತು ಮಾಡುವಲ್ಲಿ ಉತ್ತಮ ಪ್ಯಾಕೇಜಿಂಗ್‌ ಹಾಗೂ ಗುಣಮಟ್ಟದ ಕಾಫಿಗೆ ಆದ್ಯತೆ ನೀಡಬೇಕಿದೆ ಎಂದು ಅಭಿಪ್ರಾಯಪಟ್ಟರು.

ಇಂದು ಉತ್ಪಾದನಾ ವಲಯ ಮತ್ತು ರಫ್ತು ವಲಯದಲ್ಲಿ ಭಾರತ ಛಾಪು ಮೂಡಿಸುತ್ತಿದ್ದು, ಭಾರತದೊಂದಿಗೆ ಅನೇಕ ದೇಶಗಳು ತಾವಾಗೇ ಮುಂದೆ ಬಂದು ಫ್ರೀ ಟ್ರೇಡ್‌ ಅಗ್ರಿಮೆಂಟ್‌ ಮಾಡಿಕೊಳ್ಳುತ್ತಿವೆ. ಯುರೋಪಿಯನ್‌ ರಾಷ್ಟ್ರಗಳು ಸಹ ಮುಂದೆ ಬಂದಿವೆ. ನಿನ್ನೆ ಕ್ಯಾಬಿನೆಟ್‌ ಅಲ್ಲಿ ಫ್ರೀ ಟ್ರೇಡ್‌ ಅಗ್ರಿಮೆಂಟ್‌ ಆಗಿದೆ ಎಂದು ಸಚಿವ ಜೋಶಿ ಮಾಹಿತಿ ನೀಡಿದರು.

ಭಾರತದ ಕಾಫಿಗೆ ಜಾಗತಿಕ ಮನ್ನಣೆ: ಕರ್ನಾಟಕದ ಕಾಫಿ ಒಳಗೊಂಡಂತೆ ʼಭಾರತದ ಕಾಫಿʼ ಜಾಗತಿಕವಾಗಿ ಹೆಸರು ಮಾಡುತ್ತಿದ್ದು, ವಿದೇಶಗಳಿಗೆ ಹೆಚ್ಚು ಹೆಚ್ಚು ರಫ್ತು ಮಾಡುವ ನಿಟ್ಟಿನಲ್ಲಿ ಗುಣಮಟ್ಟದೊಂದಿಗೆ ಹೊಸ ಹೊಸ ಮಾರುಕಟ್ಟೆಗಳನ್ನು ಕಂಡುಕೊಳ್ಳಲು ಆದ್ಯತೆ ನೀಡಬೇಕಿದೆ. ಈ ನಿಟ್ಟಿನಲ್ಲಿ ವಿಶ್ವದ ಮಾರುಕಟ್ಟೆಗಳನ್ನು ಅಧ್ಯಯನ ಮಾಡುವ ಮೂಲಕ ಹೆಚ್ಚು ರಾಷ್ಟ್ರಗಳಿಗೆ ಭಾರತದ ಕಾಫಿ ರಫ್ತಾಗುವಂತೆ ನೋಡಿಕೊಳ್ಳಬೇಕಿದೆ ಎಂದರು.

ಭಾರತ ಇಂದು ಜಗತ್ತಿನ 7ನೇ ಅತಿದೊಡ್ಡ ಕಾಫಿ ಉತ್ಪಾದಕ ರಾಷ್ಟ್ರವಾಗುವ ಜತೆಗೆ 5ನೇ ಪ್ರಮುಖ ರಫ್ತು ದೇಶವಾಗಿದೆ. 2024-25ರಲ್ಲಿ 3.63 ಲಕ್ಷ ಟನ್‌ ಉತ್ಪಾದನೆಯಾಗಿದ್ದು, ಶೇ.70ರಷ್ಟು ರಫ್ತು ಮಾಡಿದ್ದೇವೆ. ಬಾಬಾ ಬುಡನ್‌ನ 7 ಪ್ಲ್ಯಾಂಟೇಶನ್‌ ನಿಂದ ಶುರುವಾದ ಕಾಫಿ ಇಂದು ಬಹುದೊಡ್ಡ ಇಂಡಸ್ಟ್ರಿಯಾಗಿ ಬೆಳೆದಿದೆ ಎಂದು ಹೇಳಿದರು.

CCRI ಶತಮಾನೋತ್ಸವದ ಹೆಮ್ಮೆ: ‎1925ರಲ್ಲಿ ಪ್ರಾರಂಭವಾದ ಸಿಸಿಆರ್‌ಐ ಭಾರತೀಯ ಕಾಫಿ ಕ್ಷೇತ್ರದ ವೈಜ್ಞಾನಿಕ ಸಂಶೋಧನೆಗೆ ಸದೃಢ ಅಡಿಪಾಯ ಹಾಕಿದ ಪ್ರತಿಷ್ಠಿತ ಸಂಸ್ಥೆಯಾಗಿದೆ. ಕಾಫಿ ಬೆಳೆಯ ಸುಧಾರಿತ ಜಾತಿಗಳ ಅಭಿವೃದ್ಧಿ, ರೋಗ–ಕೀಟ ನಿಯಂತ್ರಣ, ಮಣ್ಣಿನ ಆರೋಗ್ಯ, ಬೆಳೆ ಉತ್ಪಾದಕತೆ ಹೆಚ್ಚಳ ಹಾಗೂ ಗುಣಮಟ್ಟ ಸುಧಾರಣೆ ಕ್ಷೇತ್ರಗಳಲ್ಲಿ ಈ ಸಂಸ್ಥೆ ಕಳೆದೊಂದು ಶತಮಾನದಿಂದ ನಿರಂತರ ಸಂಶೋಧನಾ ಸೇವೆ ಸಲ್ಲಿಸುತ್ತಿದೆ ಎಂದು ಸಚಿವ ಪ್ರಲ್ಹಾದ ಜೋಶಿ ಹೆಮ್ಮೆ ವ್ಯಕ್ತಪಡಿಸಿದರು.

ಇದೇ ವೇಳೆ ಕೇಂದ್ರ ಕಾಫಿ ಸಂಶೋಧನಾ ಸಂಸ್ಥೆಯಿಂದ ರೋಗ ನಿರೋಧಕ ಮತ್ತು ಹೆಚ್ಚಿನ ಇಳುವರಿ ನೀಡುವ ಎರಡು ಹೊಸ ಕಾಫಿ ತಳಿಗಳನ್ನು ಬಿಡುಗಡೆ ಮಾಡಲಾಯಿತು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಕದ್ದುಮುಚ್ಚಿ ದೆಹಲಿಗೆ ಹೋಗಲ್ಲ; ಸೂಕ್ತ ಸಮಯದಲ್ಲಿ ಹೈಕಮಾಂಡ್ ನಮ್ಮನ್ನು ಕರೆಯುತ್ತದೆ: ಡಿಕೆಶಿ

ಒಳನುಸುಳುವವರನ್ನು ಹೊರಗಿಡಲು SIR; ಆದ್ರೆ ದಶಕಗಳಿಂದ ಕಾಂಗ್ರೆಸ್ ಅವರನ್ನು ರಕ್ಷಿಸಿತ್ತು: ಪ್ರಧಾನಿ ಮೋದಿ

BMC election: ಕಾಂಗ್ರೆಸ್ ಏಕಾಂಗಿ ಸ್ಪರ್ಧೆ; ಉದ್ಧವ್ ಠಾಕ್ರೆ, ಶರದ್ ಪವಾರ್ ಜತೆ ಮೈತ್ರಿ ಇಲ್ಲ

ಬುರುಡೆ ಗ್ಯಾಂಗ್ ವಿರುದ್ಧ ತಿರುಗಿಬಿದ್ದ ಚಿನ್ನಯ್ಯ: ಜೀವ ಬೆದರಿಕೆ ಆರೋಪ ಮಾಡಿ ಐವರ ವಿರುದ್ಧ ಪೊಲೀಸರಿಗೆ ದೂರು!

'ಜಗತ್ತಿನಲ್ಲಿ ಅಧಿಕಾರದ ಅರ್ಥ ಈಗ ಬದಲಾಗಿದೆ...'; ಅಮೆರಿಕ-ಚೀನಾ ಜೊತೆ ಸಂಬಂಧ ವೃದ್ಧಿ ಮತ್ತಷ್ಟು ಜಟಿಲ: ಜೈಶಂಕರ್

SCROLL FOR NEXT