ಹೆಬ್ಬಾಳ ಮೇಲ್ಸೇತುವೆ 
ರಾಜ್ಯ

ವಾಹನ ಸವಾರರಿಗೆ ಗುಡ್‌ನ್ಯೂಸ್‌: ಹೆಬ್ಬಾಳ ಮೇಲ್ಸೆತುವೆ ಹೊಸ ಲೂಪ್ ಸಂಚಾರಕ್ಕೆ ಮುಕ್ತ

ಹೆಬ್ಬಾಳ ಮೇಲ್ಸೆತುವೆಯ ಹೊಸ ಲೂಪ್ ರ‍್ಯಾಂಪ್‌ ಸಂಚಾರಕ್ಕೆ ಮುಕ್ತವಾಗಿದ್ದು, ಯಲಹಂಕ, ಸಹಕಾರನಗರ, ಜಕ್ಕೂರು, ತುಮಕೂರು ರಸ್ತೆಯ ವಾಹನಗಳು ನಗರ ಪ್ರವೇಶಿಲು ಅನುಕೂಲ ಆಗಿದೆ‌

ಬೆಂಗಳೂರು: ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ಎರಡನೇ ಲೂಪ್‌ನ ಕೆಲಸವನ್ನು ಪೂರ್ಣಗೊಳಿಸಿ ಪ್ರಾಯೋಗಿಕ ವಾಹನ ಸಂಚಾರಕ್ಕೆ ಮುಕ್ತಗೊಳಿಸುವುದರಿಂದ ಜನದಟ್ಟಣೆ ಕಡಿಮೆಯಾಗುವ ನಿರೀಕ್ಷೆಯಿದೆ

ಹೆಬ್ಬಾಳ ಮೇಲ್ಸೆತುವೆಯ ಹೊಸ ಲೂಪ್ ರ‍್ಯಾಂಪ್‌ ಸಂಚಾರಕ್ಕೆ ಮುಕ್ತವಾಗಿದ್ದು, ಯಲಹಂಕ, ಸಹಕಾರನಗರ, ಜಕ್ಕೂರು, ತುಮಕೂರು ರಸ್ತೆಯ ವಾಹನಗಳು ನಗರ ಪ್ರವೇಶಿಲು ಅನುಕೂಲ ಆಗಿದೆ‌. ಹೊಸ ಲೂಪ್ ರ‍್ಯಾಂಪ್‌ ಓಪನ್‌ಗೆ ವಾಹನ ಸವಾರರು ಖುಷಿಯಾಗಿದ್ದಾರೆ.

ಹೆಬ್ಬಾಳ ಮೇಲ್ಸೆತುವೆಯ ಮತ್ತೊಂದು ಹೊಸ ಲೂಪ್‌ ರ‍್ಯಾಂಪ್‌ ಸಂಚಾರಕ್ಕೆ ಮುಕ್ತ ಆಗಿದೆ. ಎಸ್ಟಿಮ್ ಮಾಲ್ ಮತ್ತು ತುಮಕೂರು ರಸ್ತೆ ವಾಹನ ಸವಾರರು ಮೇಖ್ರಿ ಸರ್ಕಲ್ ಪ್ರವೇಶಕ್ಕೆ ತುಂಬಾ ಅನುಕೂಲಕರ ಮತ್ತು ಯಲಹಂಕ, ಜಕ್ಕೂರು, ಸಹಕಾರನಗರದಿಂದ ನಗರದ ಪ್ರವೇಶಕ್ಕೆ ತುಂಬಾ ಅನುಕೂಲ ಈ ಹೊಸ ಲೂಪ್ ರ‍್ಯಾಂಪ್‌.

ಕಳೆದ ಆಗಸ್ಟ್ ನಲ್ಲಿ ಕೆ.ಆರ್ ಪುರಂನಿಂದ ಮೇಖ್ರಿ ಸರ್ಕಲ್ ಕಡೆಗೆ ಲೂಪ್ ರ‍್ಯಾಂಪ್‌ ಓಪ‌ನ್ ಆಗಿತ್ತು. ಇನ್ನೊಂದು ಮೂರು ದಿನಗಳಲ್ಲಿ ಹೊಸ ರ‍್ಯಾಂಪ್‌‌ಗೂ, ವಿಮಾನ ನಿಲ್ದಾಣದಿಂದ ಬರುವ ವಾಹನಗಳ ಹಳೆಯ ಫ್ಲೈಓವರ್‌ಗೂ ನಡುವೆ ಬೇರ್ಪಡಿಸುವ ಬ್ಯಾರಿಕೇಡ್ ನಿರ್ಮಾಣವಾಗಲಿದೆ.

ಇದರಿಂದ ಸಂಚಾರ ಸುಗಮವಾಗಲಿದ್ದು, ಟ್ರಾಫಿಕ್ ಜಾಮ್ ಸಮಸ್ಯೆ ಕಡಿಮೆಯಾಗಲಿದೆ. ಈ ಹೊಸ ರ‍್ಯಾಂಪ್‌‌ನಿಂದ ಯಲಹಂಕ, ಜಕ್ಕೂರು, ಸಂಜಯನಗರ, ಕೆಂಪಾಪುರ ಕಡೆಯಿಂದ ಬರುವ ವಾಹನ ಸವಾರರಿಗೆ ಅನುಕೂಲವಾಗಲಿದೆ. ಮೊದಲ ಹಂತದ ರ‍್ಯಾಂಪ್‌ ಉದ್ಘಾಟನೆ ಬಳಿಕ ಹೆಬ್ಬಾಳ ಜಂಕ್ಷನ್‌ನಲ್ಲಿ ಟ್ರಾಫಿಕ್ ಶೇ. 25-30 ಕಡಿಮೆಯಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

BJPಗೆ ಶೆಹಜಾದ್ ಪೂನಾವಾಲಾ ಶಾಕ್‌: ಪಕ್ಷದ ಹುದ್ದೆ, ಸದಸ್ಯತ್ವಕ್ಕೆ ಮತ್ತೊಮ್ಮೆ ರಾಜೀನಾಮೆ; ‘ಯಾರನ್ನೂ ದೂಷಿಸುತ್ತಿಲ್ಲ, ವೈಯಕ್ತಿಕ ಕಾರಣಗಳೇ ನಿರ್ಧಾರಕ್ಕೆ ಕಾರಣ’ ಎಂದ ಫೈರ್‌ಬ್ರಾಂಡ್..!

ನಿನ್ನಿಂದಲೇ ಇಡೀ ಇಲಾಖೆ ಮರ್ಯಾದೆ ಹೋಯಿತು: ಪ್ರಜ್ವಲ್ ರೇವಣ್ಣಗೆ ಅಲೋಕ್ ಕುಮಾರ್ 'ಸ್ಪೆಷಲ್ ಕ್ಲಾಸ್'

‘ಸಮಸ್ಯೆ ಬಗೆಹರಿಸಿ, ಇಲ್ಲದಿದ್ದರೆ ಮತ್ತೆ ಪ್ರತಿಭಟನೆ!’: ಕೇಂದ್ರಕ್ಕೆ ಬಾಬಾ ರಾಮದೇವ್ ಖಡಕ್ ಎಚ್ಚರಿಕೆ

ಬಿಹಾರದ ಲಖಿಸರಾಯಿ ದೇವಾಲಯದ ಬಳಿ ಭೀಕರ ಕಾಲ್ತುಳಿತ: 7 ಭಕ್ತರ ಸಾವು, ಹಲವರಿಗೆ ಗಾಯ

ಪಶ್ಚಿಮ ಬಂಗಾಳ: ದೇವಸ್ಥಾನ ಸಮೀಪದ ಹೋಟೆಲ್‌ನಲ್ಲಿ ಭಾರೀ ಅಗ್ನಿ ಅವಘಡ: 7 ಯಾತ್ರಿಕರು ಸಜೀವ ದಹನ