ಬೆಂಗಳೂರು: ನವವಿವಾಹಿತೆ ಘನವಿ ಆತ್ಮಹತ್ಯೆ ಪ್ರಕರಣ ಮಹತ್ತರ ತಿರುವು ಪಡೆದಿದ್ದು, ಆಕೆಯನ್ನು ಮದುವೆಯಾಗಿದ್ದ ಸೂರಜ್ ಗಂಡಸೇ ಅಲ್ಲ ಎಂದು ಆಕೆಯ ಪೋಷಕರು ಆರೋಪಿಸಿದ್ದಾರೆ.
ಬೆಂಗಳೂರಿನ ರಾಮಮೂರ್ತಿನಗರದಲ್ಲಿ ನವ ವಿವಾಹಿತೆ ಘಾನವಿ ಮದುವೆಯಾದ ಕೇವಲ ಒಂದೂವರೆ ತಿಂಗಳಿಗೇ ಆತ್ಮಹತ್ಯೆಗೆ ಶರಣಾಗಿದ್ದಾರೆ. ಈ ಪ್ರಕರಣ ವರದಕ್ಷಿಣೆ ಕಿರುಕುಳ ಮತ್ತು ಮಾನಸಿಕ ಹಿಂಸೆಯ ಆರೋಪಕ್ಕೆ ಸಂಬಂಧಿಸಿದೆ ಎಂದು ಆರೋಪಿಸಲಾಗಿದೆ.
ಬೆಂಗಳೂರಿನ ಪ್ಯಾಲೆಸ್ ಗ್ರೌಂಡ್‌ನಲ್ಲಿ ಅದ್ದೂರಿ ರಿಸೆಪ್ಷನ್ ಮಾಡಿಕೊಂಡು ಶ್ರೀಲಂಕಾಕ್ಕೆ ಹನಿಮೂನ್ ಹೋಗಿದ್ದ ನವದಂಪತಿ ಅರ್ಧದಲ್ಲೇ ಮನೆಗೆ ವಾಪಸ್ಸಾಗಿದ್ದು, ಬಳಿಕ ನವವಿವಾಹಿತೆ ಆತ್ಮಹತ್ಯೆಗೆ ಶರಣಾಗಿದ್ದಾಳೆ. ಅಕ್ಟೋಬರ್ 29ರಂದು ವೈವಾಹಿಕ ಜೀವನಕ್ಕೆ ಕಾಲಿಟ್ಟು, ಪ್ಯಾಲೆಸ್ ಗ್ರೌಂಡ್‌ನಲ್ಲಿ ಅದ್ದೂರಿಯಾಗಿ ರಿಸೆಪ್ಷನ್ ಮಾಡಿಕೊಂಡಿದ್ದರು.
ಕಳೆದ ಹತ್ತು ದಿನಗಳ ಹಿಂದೆ ಶ್ರೀಲಂಕಾಗೆ ಹನಿಮೂನ್‌ಗೆಂದು ಹೋಗಿದ್ದರು. ಆದ್ರೆ, ಅಲ್ಲಿ ಅದೇನಾಯ್ತೋ ಏನೋ ಅರ್ಧಕ್ಕೆ ಶ್ರೀಲಂಕಾದಿಂದ ಇಬ್ಬರು ವಾಪಸ್ಸಾಗಿದ್ದರು. ಬಳಿಕ ನೇಣಿಗೆ ಹಾಕಿಕೊಳ್ಳಲು ಯತ್ನಿಸಿದ್ದಾರೆ. ಕೂಡಲೇ ಕುಟುಂಬಸ್ಥರು ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದ್ರೆ, ಚಿಕಿತ್ಸೆ ಫಲಕಾರಿಯಾಗದೇ ಕೊನೆಯುಸಿರೆಳೆದಿದ್ದಾರೆ.
ಅವ್ನು ಗಂಡಸೇ ಅಲ್ಲ.. ತಿಂಗಳಾದ್ರೂ ಹೆಂಡ್ತಿ ಜತೆ ಮಲಗಿಲ್ಲ
ಇನ್ನು ಈ ಬಗ್ಗೆ ಮೃತ ಗಾನವಿ ದೊಡ್ಡಮ್ಮ ಮಾತನಾಡಿದ್ದು, ಘಾನವಿ ಗಂಡ ಸೂರಜ್ ಗಂಡಸ್ತನದ ಮೇಲೆ ಅನುಮಾನ ವ್ಯಕ್ತಪಡಿಸಿದ್ದಾರೆ. ಹನಿಮೂನ್‌ಗೆಂದು ಶ್ರೀಲಂಕಾಕ್ಕೆ ಹೋಗಿದ್ದರು. ಆದ್ರೆ, ಅಲ್ಲಿ ಹೆಂಡ್ತಿನ ಟಚ್ ಸಹ ಮಾಡಿಲ್ಲ. ನಪುಂಸಕ ಮಗನಿಗೆ ಮದುವೆ ಯಾಕೆ ಮಾಡಿದ್ರು ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಹನಿಮೂನ್ನಲ್ಲಿಯೇ ಗಂಡ ಹೆಂಡತಿ ನಡುವೆ ಜಗಳ ಶುರುವಾಗಿದ್ದು, ಮಾನಸಿಕ ಒತ್ತಡಕ್ಕೊಳಗಾದ ಆಕೆ, ಪಾಲಕರ ಮನೆಗೆ ಮರಳಿದ್ದರು. ಈ ವೇಳೆ ಆತ್ಮಹತ್ಯೆಗೆ ಯತ್ನಿಸಿದ್ದ ಘಾನವಿಯನ್ನು ಪಾಲಕರು ಆಸ್ಪತ್ರೆಗೆ ಸೇರಿಸಿದ್ದರೂ ಬ್ರೈನ್ ಡೆಡ್ ಆಗಿದ್ದ ಕಾರಣ ಮೃತಪಟ್ಟಿದ್ದರು. ಈ ಹಿನ್ನೆಲೆ ಆಕೆಯ ಪತಿ ಸೂರಜ್ ಮತ್ತು ಅವನ ಕುಟುಂಬದವರ ಮೇಲೆ ವರದಕ್ಷಿಣೆ ಕಿರುಕುಳದ ಆರೋಪ ಕೇಳಿಬಂದಿದ್ದು, ಅವರ ವಿರುದ್ಧ ರಾಮಮೂರ್ತಿನಗರ ಪೊಲೀಸರು ಎಫ್‌ಐಆರ್ ದಾಖಲಿಸಿಕೊಂಡಿದ್ದಾರೆ.
'ಅವನು ಗಂಡಸೇ ಅಲ್ಲ ಎಂದು ಆಕೆಗೆ ಫಸ್ಟ್ ನೈಟ್ ದಿನವೇ ಗೊತ್ತಾಗಿತ್ತು. ಮದುವೆಗೆ ಬರೋಬ್ಬರಿ 50 ಲಕ್ಷ ರೂ. ಖರ್ಚು ಮಾಡಲಾಗಿತ್ತು ಮತ್ತು ಪ್ಯಾಲೇಸ್ ಗ್ರೌಂಡ್‌ನಲ್ಲಿ ಅದ್ಧೂರಿ ಆರತಕ್ಷತೆ ಏರ್ಪಡಿಸಲಾಗಿತ್ತು. ಮದುವೆಗೂ ಮುನ್ನ ವರದಕ್ಷಿಣೆ ಬಗ್ಗೆ ಯಾವುದೇ ಬೇಡಿಕೆ ಸೂರಜ್ ಕುಟುಂಬ ಯಾವುದೇ ಬೇಡಿಕೆ ಇಡಲಿಲ್ಲ. ಆದರೆ ಮದುವೆಯಾದ ಮರುದಿನದಿಂದಲೇ ಚಿನ್ನ, ಸೈಟ್, ಕಾರು ಹಾಗೂ ಪ್ರತಿ ತಿಂಗಳು ಹಣಕ್ಕಾಗಿ ಘಾನವಿಗೆ ಕಿರುಕುಳ ನೀಡಲು ಆರಂಭಿಸಿದ್ದರು' ಎಂದು ಗಂಭೀರ ಆರೋಪ ಮಾಡಿದ್ದಾರೆ.
ವರದಕ್ಷಿಣೆ ಕಿರುಕುಳ
ಘಾನವಿ ಅವರ ಚಿಕ್ಕಪ್ಪ ಕಾರ್ತಿಕ್ ನೀಡಿರುವ ಹೇಳಿಕೆ ಪ್ರಕಾರ, ಮದುವೆಯಾದ ಮರುದಿನದಿಂದಲೇ ಘಾನವಿ ಪತಿ ಸೂರಜ್ ಆಭರಣ, ಆಸ್ತಿ ಹಾಗೂ ಕಾರಿಗಾಗಿ ನಿರಂತರ ಕಿರುಕುಳ ನೀಡುತ್ತಿದ್ದರು. ಅಲ್ಲದೆ, ಸೂರಜ್ ಅವರು ಘಾನವಿ ಜೊತೆ ದೈಹಿಕ ಸಂಪರ್ಕ ಹೊಂದಲು ನಿರಾಕರಿಸಿ, ಮಾನಸಿಕ ಹಿಂಸೆ ನೀಡುತ್ತಿದ್ದರು ಎಂದು ಆರೋಪಿಸಿದ್ದಾರೆ.
ಮದುವೆಗೂ ಮುನ್ನ ವರದಕ್ಷಿಣೆ ಕೇಳಿರಲಿಲ್ಲ, ಆದರೆ ಮದುವೆಯ ನಂತರ ಕಿರುಕುಳ ಶುರುವಾಗಿದೆ. ಗಾನವಿ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದ್ದು, ಕುಟುಂಬಸ್ಥರು ಆಸ್ಪತ್ರೆ ಬಳಿ ಪ್ರತಿಭಟನೆ ನಡೆಸಿದ್ದಾರೆ. ಪತಿ ಸೂರಜ್, ಅವರ ಅಣ್ಣ ಸಂಜಯ್ ಮತ್ತು ತಾಯಿ ಜಯಂತಿ ವಿರುದ್ಧ ದೂರು ದಾಖಲಾಗಿದ್ದು, ಮೂವರೂ ತಲೆಮರೆಸಿಕೊಂಡಿದ್ದಾರೆ. ಅವರ ಬಂಧನಕ್ಕೆ ಕುಟುಂಬಸ್ಥರು ಆಗ್ರಹಿಸಿದ್ದಾರೆ.