ತಡರಾತ್ರಿ ಕಾರ್ಯಾಚರಣೆ ನಡೆಸಿದ ದೆಹಲಿ ಪೊಲೀಸರು. 
ರಾಜ್ಯ

Operation Aaghat 3.0: ದೆಹಲಿಯಲ್ಲಿ ಖಾಕಿ ಭರ್ಜರಿ ಕಾರ್ಯಾಚರಣೆ, ಒಂದೇ ದಿನ 285 ಮಂದಿ ಬಂಧನ, ರಾಶಿ ರಾಶಿ ಶಸ್ತ್ರಾಸ್ತ್ರ-ಮಾದಕ ವಸ್ತುಗಳು ವಶಕ್ಕೆ..!

ಆಪರೇಷನ್ ಆಘಾತ್ 3.0 ಹೆಸರಿನಲ್ಲಿ ದೆಹಲಿ ಪೊಲೀಸರು ಶುಕ್ರವಾರ ರಾತ್ರಿಯಿಡೀ ಕಾರ್ಯಾಚರಣೆ ನಡೆಸಿ, ಅಬಕಾರಿ ಕಾಯ್ದೆ, ಎನ್‌ಡಿಪಿಎಸ್ ಕಾಯ್ದೆ ಮತ್ತು ಜೂಜಾಟ ಕಾಯ್ದೆಗಳ ಅಡಿಯಲ್ಲಿ 285 ಜನರನ್ನು ಬಂಧನಕ್ಕೊಳಪಡಿಸಿದ್ದಾರೆ.

ನವದೆಹಲಿ: ಹೊಸ ವರ್ಷಾಚರಣೆಗೆ ದಿನಗಣನೆ ಆರಂಭವಾಗಿದ್ದು, ಈ ನಡುವೆ ಭದ್ರತೆಗೆ ಸಿದ್ಧತೆ ಆರಂಭಿಸಿರುವ ದೆಹಲಿ ಪೊಲೀಸರು ಶನಿವಾರ ಮಹತ್ವದ ಕಾರ್ಯಾಚರಣೆ ನಡೆಸಿದ್ದಾರೆ.

ಆಪರೇಷನ್ ಆಘಾತ್ 3.0 ಹೆಸರಿನಲ್ಲಿ ದೆಹಲಿ ಪೊಲೀಸರು ಶುಕ್ರವಾರ ರಾತ್ರಿಯಿಡೀ ಕಾರ್ಯಾಚರಣೆ ನಡೆಸಿ, ಅಬಕಾರಿ ಕಾಯ್ದೆ, ಎನ್‌ಡಿಪಿಎಸ್ ಕಾಯ್ದೆ ಮತ್ತು ಜೂಜಾಟ ಕಾಯ್ದೆಗಳ ಅಡಿಯಲ್ಲಿ 285 ಜನರನ್ನು ಬಂಧನಕ್ಕೊಳಪಡಿಸಿದ್ದಾರೆ.

ದೆಹಲಿ ಆಗ್ನೇಯ ಜಿಲ್ಲೆಯ ಪೊಲೀಸರು ಸುಮಾರು ಎರಡು ಡಜನ್ ಅಕ್ರಮ ಶಸ್ತ್ರಾಸ್ತ್ರಗಳು, ಲಕ್ಷಾಂತರ ನಗದು, ಅಕ್ರಮ ಮದ್ಯ, ಮಾದಕ ವಸ್ತುಗಳು ಮತ್ತು ಕದ್ದ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.

ಹೊಸ ವರ್ಷದ ಆಚರಣೆಗೆ ಮುಂಚಿತವಾಗಿ ದೆಹಲಿ ಪೊಲೀಸರು ಶುಕ್ರವಾರ ನೂರಾರು ಜನರನ್ನು ಬಂಧಿಸಿದ್ದು, ಅವರ ಬಳಿಯಿಂದ ಶಸ್ತ್ರಾಸ್ತ್ರಗಳು, ಮಾದಕ ದ್ರವ್ಯಗಳು ಮತ್ತು ದೊಡ್ಡ ಮೊತ್ತದ ಹಣವನ್ನು ವಶಪಡಿಸಿಕೊಂಡಿದ್ದಾರೆ.

ಹೊಸ ವರ್ಷದ ಹಬ್ಬಗಳು ಪ್ರಾರಂಭವಾಗುವ ಮೊದಲು ಸಂಘಟಿತ ಅಪರಾಧಗಳ ಮೇಲೆ ನಿಗಾ ಇಡುವ ಪ್ರಯತ್ನದಲ್ಲಿ, ಆಗ್ನೇಯ ದೆಹಲಿ ಪೊಲೀಸರು ರಾತ್ರಿಯಿಡೀ ಅನೇಕ ಸ್ಥಳಗಳಲ್ಲಿ ಸಂಘಟಿತ ದಾಳಿ ನಡೆಸಿದ್ದಾರೆ.

ಪೂರ್ವ ತಡೆ ಕ್ರಮವಾಗಿ 504 ಜನರನ್ನು ವಶಕ್ಕೆ ತೆಗೆದುಕೊಳ್ಳಲಾಗಿದ್ದು, ಅಪರಾಧ ಹಿನ್ನೆಲೆಯುಳ್ಳ116 ಮಂದಿಯನ್ನು ಕೂಡ ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಕಾರ್ಯಾಚರಣೆ ವೇಳೆ 21 ದೇಶೀ ಪಿಸ್ತೂಲ್‌ಗಳು, 20 ಜೀವಂತ ಗುಂಡುಗಳು, 27 ಚಾಕುಗಳು, 12,258 ಅಕ್ರಮ ಮದ್ಯದ ಕ್ವಾರ್ಟರ್‌ಗಳು, 6.01 ಕೆಜಿ ಗಾಂಜಾ ಮತ್ತು ರೂ.2.30 ಲಕ್ಷ ನಗದು ವಶಪಡಿಸಿಕೊಳ್ಳಲಾಗಿದೆ. ಇದಲ್ಲದೆ 310 ಮೊಬೈಲ್‌ ಫೋನ್‌ಗಳು, 231 ದ್ವಿಚಕ್ರ ವಾಹನಗಳು ಮತ್ತು ಒಂದು ನಾಲ್ಕು ಚಕ್ರ ವಾಹನವನ್ನು ವಶಪಡಿಸಿಕೊಳ್ಳಲಾಗಿದೆ. ಒಟ್ಟು 1,306 ಜನರನ್ನು ಪೂರ್ವತಡೆ ಕ್ರಮದಡಿ ಬಂಧಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.

ಡಿಸಿಪಿ ಹೆಮಂತ್ ತಿವಾರಿ ಮಾತನಾಡಿ, ಹೊಸ ವರ್ಷ ಆಚರಣೆಗೂ ಮುನ್ನ ಕಾನೂನು ಮತ್ತು ಸುವ್ಯವಸ್ಥೆ ಬಲಪಡಿಸುವ ಉದ್ದೇಶದಿಂದ ಈ ಕಾರ್ಯಾಚರಣೆ ನಡೆಸಲಾಗಿದೆ” ಎಂದು ಹೇಳಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಬಹಿರಂಗವಾಗಿ BJP- RSS ಹೊಗಳಿ, 'ವಿವಾದದ ಕಿಡಿ' ಹೊತ್ತಿಸಿದ ದಿಗ್ವಿಜಯ್ ಸಿಂಗ್!

ಅನಧಿಕೃತ ಮನೆ ಕಳೆದುಕೊಂಡ ಮುಸ್ಲಿಂ ಜನರಿಗಾಗಿ ಮಿಡಿದ ಕೇರಳ ಸರ್ಕಾರ, ಬೆಂಗಳೂರಿನ ಕೋಗಿಲು ಲೇಔಟ್‌ಗೆ ಭೇಟಿ ಕೊಟ್ಟ MP ಎಎ ರಹೀಮ್!

ಐಪಿಎಲ್ ಆರಂಭಕ್ಕೂ ಮುನ್ನವೇ RCBಗೆ ಆಘಾತ, ತಂಡದ ಸ್ಟಾರ್ ಆಲ್ರೌಂಡರ್ ಗಾಯ, ಟೂರ್ನಿ ಆಡೋದೇ ಡೌಟ್!

ಆಪರೇಷನ್ ಆಘಾತ್ 3.0: ಹೊಸ ವರ್ಷಾಚರಣೆಗೂ ಮುನ್ನ ಪೊಲೀಸ್ ಕಾರ್ಯಾಚರಣೆ, 24 ಗಂಟೆಗಳಲ್ಲಿ 660 ಮಂದಿ ಬಂಧನ!

CWC meet: 2026 ರ ಚುನಾವಣೆ ಕಾರ್ಯತಂತ್ರ, G-RAM G ಕಾನೂನು ಚರ್ಚೆ, ಇಂದಿನ ಸಭೆಯ ಅಜೆಂಡಾ...

SCROLL FOR NEXT