ಸಾಂದರ್ಭಿಕ ಚಿತ್ರ 
ರಾಜ್ಯ

ಬೆಂಗಳೂರು: ಫೇಸ್‌ಬುಕ್‌ನಲ್ಲಿ ಫ್ರೆಂಡ್‌ ರಿಕ್ವೆಸ್ಟ್‌ ಕಳುಹಿಸಿ 1.5 ಲಕ್ಷ ರೂ ವಂಚನೆ; 7 ಮಂದಿ ಬಂಧನ

ಆರೋಪಿಗಳು ಸಾಮಾಜಿಕ ಜಾಲತಾಣದಲ್ಲಿ ಸಂತ್ರಸ್ತೆಯ ಹಳೆಯ ಸ್ನೇಹಿತನ ನಕಲಿ ಪ್ರೊಫೈಲ್ ಚಿತ್ರವನ್ನು ಬಳಸಿ ಫ್ರೆಂಡ್ ರಿಕ್ವೆಸ್ಟ್ ಕಳುಹಿಸಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ಬೆಂಗಳೂರು: ಫೇಸ್‌ಬುಕ್‌ನಲ್ಲಿ ನಕಲಿ ಖಾತೆ ಸೃಷ್ಟಿಸಿ ವಂಚಿಸುತ್ತಿದ್ದ 7 ಮಂದಿ ಆರೋಪಿಗಳನ್ನು ಆಡುಗೋಡಿ ಠಾಣೆಯ ಪೊಲೀಸರು ಬಂಧಿಸಿದ್ದಾರೆ.

ಆರೋಪಿಗಳನ್ನು ಅಜರುದ್ದೀನ್, ಮೊಹಮ್ಮದ್ ಮುದಾಸೀರ್, ಇಮ್ತಿಯಾಜ್ ಪಾಷಾ, ಶಶಿ ಕುಮಾರ್, ಸೈಯದ್ ಖಾಸಿಫ್, ಸೈಯದ್ ಡ್ಯಾನಿಶ್ ಮತ್ತು ಶಫಿಯುಲ್ಲಾ ಷರೀಫ್ ಎಂದು ಗುರುತಿಸಲಾಗಿದ್ದು, ಇವರೆಲ್ಲರೂ ಮೈಸೂರಿನ ನಿವಾಸಿಗಳಾಗಿದ್ದು, 30ರ ಆಸುಪಾಸಿನವರು.

ಆರೋಪಿಗಳು ಸಾಮಾಜಿಕ ಜಾಲತಾಣದಲ್ಲಿ ಸಂತ್ರಸ್ತೆಯ ಹಳೆಯ ಸ್ನೇಹಿತನ ನಕಲಿ ಪ್ರೊಫೈಲ್ ಚಿತ್ರವನ್ನು ಬಳಸಿ ಫ್ರೆಂಡ್ ರಿಕ್ವೆಸ್ಟ್ ಕಳುಹಿಸಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ತನ್ನ ಹಳೇಯ ಸ್ನೇಹಿತ ರಿಕ್ವೆಸ್ಟ್ ಕಳುಹಿಸಿದ್ದಾನೆಂದು ನಂಬಿದ ಸಂತ್ರಸ್ತ ವ್ಯಕ್ತಿ ಅದನ್ನು ಸ್ವೀಕರಿಸಿದರು. ವಂಚಕ ದುಬೈನಲ್ಲಿರುವುದಾಗಿ ಹೇಳಿಕೊಂಡು, ತಾನು ಶೀಘ್ರದಲ್ಲೇ ಭಾರತಕ್ಕೆ ಮರಳುವುದಾಗಿ ತಿಳಿಸಿದ್ದಾನೆ.

ತನ್ನ ಬಳಿ ಇರುವ ಅಪಾರವಾದ ಹಣ ತೆಗೆದುಕೊಂಡು ಭಾರತಕ್ಕೆ ಬಂದರೆ ಹೆಚ್ಚಿನ ತೆರಿಗೆಯನ್ನು ನೀಡಬೇಕಾಗಿರುತ್ತದೆ. ಹೀಗಾಗಿ ತನ್ನ ಬಳಿ ಇರುವ ಹಣವನ್ನು ನಿಮ್ಮ ಬ್ಯಾಂಕ್‌ ಖಾತೆಗೆ ಜಮಾ ಮಾಡಿ, ವಾಪಸ್‌ ಬೆಂಗಳೂರಿಗೆ ಬಂದ ನಂತರ ನಿಮ್ಮ ಬಳಿಯಿಂದ ವಾಪಸ್‌ ಪಡೆಯುವುದಾಗಿ ಸಂತ್ರಸ್ತನಿಗೆ ಹೇಳಿದ್ದ. ಇದನ್ನು ನಂಬಿದ ಸಂತ್ರಸ್ತ ವ್ಯಕ್ತಿ ಬ್ಯಾಂಕ್‌ ಖಾತೆಯ ನಂಬರ್‌ ನೀಡಿದ್ದರು.

ಮರುದಿನ, ವಂಚಕನು ಅಬುಧಾಬಿಯ ಪೊಲೀಸ್ ಠಾಣೆಯಲ್ಲಿದ್ದು, ತೊಂದರೆಯಲ್ಲಿದ್ದೇನೆ ಎಂದು ಹೇಳಿ ಸಂತ್ರಸ್ತೆಗೆ ಪಠ್ಯ ಸಂದೇಶ ಕಳುಹಿಸಿದನು. ಏಜೆಂಟ್ ಖಾತೆಗೆ 1.9 ಲಕ್ಷ ರೂ.ಗಳನ್ನು ವರ್ಗಾಯಿಸಲು ಅವನು ವಿನಂತಿಸಿದನು. ಅವನನ್ನು ನಂಬಿದ ಸಂತ್ರಸ್ತ ತಕ್ಷಣದ ಪಾವತಿ ಸೇವೆಯ ಮೂಲಕ 1.5 ಲಕ್ಷ ರೂ.ಗಳನ್ನು ವರ್ಗಾಯಿಸಿದ್ದನು. ನಂತರ, ಬ್ಯಾಂಕ್ ಸ್ಟೇಟ್ ಮೆಂಟ್ ಪರಿಶೀಲಿಸಿದಾಗ, ಖಾತೆಗೆ ಯಾವುದೇ ಹಣ ಜಮಾ ಆಗಿಲ್ಲ ಎಂಬುದನ್ನು ಸಂತ್ರಸ್ತ ಅರಿತು ದೂರು ದಾಖಲಿಸಿದನು ಎಂದು ಪೊಲೀಸರು ತಿಳಿಸಿದ್ದಾರೆ.

ಬ್ಯಾಂಕ್ ವಹಿವಾಟುಗಳು ಮತ್ತು ಇತರ ತಾಂತ್ರಿಕ ಸಾಕ್ಷಿಗಳನ್ನು ವಿಶ್ಲೇಷಿಸಿದ ನಂತರ, ಮೈಸೂರಿನಲ್ಲಿ ಒಬ್ಬ ಆರೋಪಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ವಿಚಾರಣೆಯ ನಂತರ, ಅವನು ಇತರ ಆರು ಜನರ ಭಾಗಿಯಾಗಿರುವುದನ್ನು ಬಹಿರಂಗಪಡಿಸಿದನು, ನಂತರ ಅವರನ್ನು ಬಂಧಿಸಲಾಯಿತು ಮತ್ತು 31 ಎಟಿಎಂ ಕಾರ್ಡ್‌ಗಳು, ಒಂಬತ್ತು ಆಧಾರ್ ಕಾರ್ಡ್‌ಗಳು ಮತ್ತು 11 ಪಾಸ್‌ಬುಕ್ ಮತ್ತು ಆರು ಚೆಕ್‌ಬುಕ್‌ಗಳನ್ನು ವಶಪಡಿಸಿಕೊಂಡಿದ್ದದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಭಾರತದ ನೆಲದಲ್ಲೇ ಸ್ತ್ರೀದ್ವೇಷ ಪ್ರದರ್ಶಿಸಿದ ತಾಲೀಬಾನ್ ವಿದೇಶಾಂಗ ಸಚಿವ!; ಸುದ್ದಿಗೋಷ್ಠಿಗೆ ಮಹಿಳೆಯರಿಗಿಲ್ಲ ಪ್ರವೇಶ; ಭುಗಿಲೆದ್ದ ಅಸಮಾಧಾನ!

'ನನ್ನ ಪ್ರಶಸ್ತಿ ಟ್ರಂಪ್‌ಗೆ ಸಮರ್ಪಿತ...' Noble ಶಾಂತಿ ಪ್ರಶಸ್ತಿ ಗೆದ್ದ ಬೆನ್ನಲ್ಲೇ ಮಾರಿಯಾ ಶಾಕಿಂಗ್ ಹೇಳಿಕೆ!

ಚಿಕ್ಕಬಳ್ಳಾಪುರ: 'Miss U Chinna'; ಅಪ್ರಾಪ್ತ ಪ್ರೇಯಸಿಯ ದುಪ್ಪಟ್ಟದಿಂದಲೇ ಯುವಕ ನೇಣಿಗೆ ಶರಣು; Instagram Post Viral

ಬೆಂಗಳೂರಿನಲ್ಲೊಂದು ಹೃದಯ ವಿದ್ರಾವಕ ಘಟನೆ: ಇಬ್ಬರು ಮಕ್ಕಳನ್ನು ಕೊಂದು ತಾಯಿ ಆತ್ಮಹತ್ಯೆ

'ಶಾಂತಿಗಿಂತ ರಾಜಕೀಯವೇ ಹೆಚ್ಚಾಯಿತು': ನೊಬೆಲ್ ಸಮಿತಿ ವಿರುದ್ಧ ಶ್ವೇತಭವನ ಕೆಂಡಾಮಂಡಲ!

SCROLL FOR NEXT