ಬೆಂಗಳೂರು: ಯಲಹಂಕ ವಾಯುನೆಲೆಯಲ್ಲಿ ಫೆ.10 ರಿಂದ 14ರವರೆಗೆ ಏರೋ ಇಂಡಿಯಾ ವೈಮಾನಿಕ ಪ್ರದರ್ಶನ-2025 ನಡೆಯಲಿದ್ದು, ಈ ಹಿನ್ನೆಲೆಯಲ್ಲಿ ಫೆ.14ರವರೆಗೆ ನಗರದ ಹಲವು ರಸ್ತೆಗಳಲ್ಲಿ ಸಂಚಾರಕ್ಕೆ ನಿರ್ಬಂಧ ವಿಧಿಸಲಾಗಿದೆ.
ಪೆ.10ರಂದು ಏರೋ ಶೋ ಉದ್ಘಾಟನಾ ಸಮಾರಂಭ ನಡೆಯಲಿದ್ದು, ಕಾರ್ಯಕ್ರಮಕ್ಕೆ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದ ಹಲವು ಗಣ್ಯರು ಹಾಗೂ ಸಹಸ್ರಾರು ಸಂಖ್ಯೆಯಲ್ಲಿ ಸಾರ್ವಜನಿಕರು ಭಾಗವಹಿಸಲಿದ್ದಾರೆ.
ಕಾರ್ಯಕ್ರಮ ನಡೆಯುವ ಸ್ಥಳವು ಯಲಹಂಕ ವಾಯುಸೇನಾ ನೆಲೆಯ ಅಂತಾರಾಷ್ಟ್ರೀಯ ಏರ್‌ಪೋರ್ಟ್ ರಸ್ತೆಗೆ ಹೊಂದಿಕೊಂಡಿದೆ. ಈ ರಸ್ತೆಯಲ್ಲಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸಂಚರಿಸುವ ವಾಹನಗಳು, ತುರ್ತು ಸೇವಾ ವಾಹನಗಳು ಹೆಚ್ಚಿನ ಸಂಖ್ಯೆಯಲ್ಲಿ ಓಡಾಡಲಿವೆ. ಹೀಗಾಗಿ ಸಂಚಾರದಟ್ಟಣೆ ಆಗದಿರಲು ನಗರ ಸಂಚಾರ ಪೊಲೀಸರು ಮುಂಜಾಗ್ರತ ಕ್ರಮ ಕೈಗೊಂಡಿದ್ದಾರೆ.
ಸುಗಮ ಸಂಚಾರದ ದೃಷ್ಟಿಯಿಂದ ಫೆ.10ರ ಬೆಳಗ್ಗೆ 5ರಿಂದ ಫೆ. 14ರ ರಾತ್ರಿ 10ವರೆಗೆ ಈ ಕೆಳಕಂಡ ಸಂಚಾರ ವ್ಯವಸ್ಥೆಯನ್ನು ಮಾಡಲಾಗಿದ್ದು, ಏಕಮುಖ ಸಂಚಾರ, ಮಾರ್ಗ ಬದಲಾವಣೆ ಸೇರಿದಂತೆ ತಾತ್ಕಾಲಿಕ ಬದಲಿ ವ್ಯವಸ್ಥೆ ಬಳಸುವಂತೆ ಸವಾರರಿಗೆ ಮನವಿ ಮಾಡಿದ್ದಾರೆ.
ಏಕಮುಖ ಸಂಚಾರ ವ್ಯವಸ್ಥೆ...
ನಿಟ್ಟೆ ಮೀನಾಕ್ಷಿ ಕಾಲೇಜ್ ರಸ್ತೆ (ಪೂರ್ವದಿಕ್ಕಿನಿಂದ ಪಶ್ಚಿಮ ದಿಕ್ಕಿನ ಕಡೆಗೆ)
ಬಾಗಲೂರು ಮುಖ್ಯರಸ್ತೆ: (ಪಶ್ಚಿಮದಿಂದ ಪೂರ್ವದಿಕ್ಕಿನ ಕಡೆಗೆ)
ಜಿ.ಕೆ.ವಿ.ಕೆ ಕ್ಯಾಂಪಸ್ನಲ್ಲಿ ಉಚಿತ ಪಾರ್ಕಿಂಗ್
ಜಿಕೆವಿಕೆ ಪಾರ್ಕಿಂಗ್ ಸ್ಥಳದಿಂದ ಅಡ್ವಾ ಪಾರ್ಕಿಂಗ್ ಹಾಗೂ ಡೊಮೆಸ್ಟಿಕ್ ಪಾರ್ಕಿಂಗ್ ಸ್ಥಳಕ್ಕೆ ತೆರಳಲು ಹಾಗೂ ವಾಪಸ್ ಜಿಕೆವಿಕೆ ಪಾರ್ಕಿಂಗ್ ಸ್ಥಳಕ್ಕೆ ಬರಲು ಬಿಎಂಟಿಸಿ ವತಿಯಿಂದ ಉಚಿತ ಎಸಿ ವಿಶೇಷ ಬಸ್ ವ್ಯವಸ್ಥೆ ಕಲ್ಪಿಸಲಾಗಿದೆ. ಅಡ್ವಾ ಪಾರ್ಕಿಂಗ್ಗಾಗಿ 08 & 09 ಹಾಗೂ ಡೊಮೆಸ್ಟಿಕ್ ಪಾರ್ಕಿಂಗ್ಗಾಗಿ ಗೇಟ್ ನಂ. 05ರ ಮೂಲಕ ಪ್ರವೇಶಿಸಿ ಹಣ ಪಾವತಿಸಿ ಪಾರ್ಕಿಂಗ್ ಮಾಡಬಹುದಾಗಿದೆ.
ಬೆಂಗಳೂರು ಪೂರ್ವ ದಿಕ್ಕಿನಿಂದ ಡೊಮೆಸ್ಟಿಕ್ ಪಾರ್ಕಿಂಗ್ ಕಡೆ ಬರುವವರಿಗೆ: ಕೆ.ಆರ್. ಪುರಂ ಬಾಗಲೂರು ಹೆಣ್ಣೂರು ಕ್ರಾಸ್ ಕೊತ್ತನೂರು - ಗುಬ್ಬಿ ಕ್ರಾಸ್ - ಕಣ್ಣೂರು ಬಾಗಲೂರು ಲೇಔಟ್ ರಜಾಕ್ ಪಾಳ್ಯ ವಿದ್ಯಾನಗರ ಕ್ರಾಸ್-ಡೊಮೆಸ್ಟಿಕ್ ಪಾರ್ಕಿಂಗ್.
ಬೆಂಗಳೂರು ಪಶ್ಚಿಮ ದಿಕ್ಕಿನಿಂದ ಅಡ್ವಾ ಪಾರ್ಕಿಂಗ್ ಕಡೆಗೆ ಬರುವವರಿಗೆ: ಗೊರಗುಂಟೆಪಾಳ್ಯ ಉನ್ನಿಕೃಷ್ಣನ್ ರಸ್ತೆ ದೊಡ್ಡಬಳ್ಳಾಪುರ ರಸ್ತೆ ಬಿ.ಇ.ಎಲ್ ವೃತ್ತ - ಗಂಗಮ್ಮ ವೃತ್ತ ಎಂ.ಎಸ್ ಪಾಳ್ಯ ಸರ್ಕಲ್-ಮದರ್ ಡೈರಿ ಜಂಕ್ಷನ್ ಉನ್ನಿ ಕೃಷ್ಣನ್ ಜಂಕ್ಷನ್ ಎಡ ತಿರುವು ನಾಗೇನಹಳ್ಳಿ ಗೇಟ್ ಬಲ ತಿರುವು ಗಂಟಿಗಾನಹಳ್ಳಿ ಸರ್ಕಲ್ ಬಲ ತಿರುವು ಪಡೆದು - ಅಡ್ವಾ ಪಾರ್ಕಿಂಗ್ ಹಾರೋಹಳ್ಳಿ.
ಬೆಂಗಳೂರು ಪಶ್ಚಿಮ ದಿಕ್ಕಿನಿಂದ ಡೊಮೆಸ್ಟಿಕ್ ಪಾರ್ಕಿಂಗ್ ಕಡೆಗೆ ಬರುವವರಿಗೆ: ಗೊರಗುಂಟೆಪಾಳ್ಯ ಬಿ.ಇ.ಎಲ್ ವೃತ್ತ ಗಂಗಮ್ಮ ವೃತ್ತ ಉನ್ನಿಕೃಷ್ಣನ್ ರಸ್ತೆ ಮದರ್ ಡೈರಿ ಜಂಕ್ಷನ್ – ಉನ್ನಿಕೃಷ್ಣನ್ ಜಂಕ್ಷನ್ ಎಡ ತಿರುವು ದೊಡ್ಡಬಳ್ಳಾಪುರ ರಸ್ತೆ ರಾಜಾನುಕುಂಟೆ ಡೊಮೆಸ್ಟಿಕ್ ಪಾರ್ಕಿಂಗ್. ಬಲ ತಿರುವು ಅದ್ದಿಗಾನಹಳ್ಳಿ ತಿಮ್ಮಸಂದ್ರ ವಿದ್ಯಾನಗರ ಕ್ರಾಸ್ ಯು ತಿರುವು-ಹುಣಸಮಾರನಹಳ್ಳಿ ಮೂಲಕ ಎಂ.ಎಸ್ ಪಾಳ್ಯ ಸರ್ಕಲ್.
ಬೆಂಗಳೂರು ದಕ್ಷಿಣ ದಿಕ್ಕಿನಿಂದ ಆಡ್ವಾ ಪಾರ್ಕಿಂಗ್ ಕಡೆಗೆ ಬರುವವರಿಗೆ: ಮೈಸೂರು ರಸ್ತೆ-ನಾಯಂಡನಹಳ್ಳಿ-ಚಂದ್ರಾ ಲೇಔಟ್-ಗೊರಗುಂಟೆಪಾಳ್ಯ-ಬಿ.ಇ.ಎಲ್ ವೃತ್ತ-ಗಂಗಮ್ಮ ವೃತ್ತ-ಎಂ.ಎಸ್ ಪಾಳ್ಯ ಸರ್ಕಲ್-ಮದರ್ ಡೈರಿ ಜಂಕ್ಷನ್ ಉನ್ನಿ ಕೃಷ್ಣನ್ ಜಂಕ್ಷನ್ – ದೊಡ್ಡಬಳ್ಳಾಪುರ ಮುಖ್ಯ ರಸ್ತೆ ನಾಗೇನಹಳ್ಳಿ ಗೇಟ್ -ಬಲ ತಿರುವು -ಹಾರೋಹಳ್ಳಿ - ಅಡ್ವಾ ಪಾರ್ಕಿಂಗ್.
ಬೆಂಗಳೂರು ದಕ್ಷಿಣ ದಿಕ್ಕಿನಿಂದ ಡೊಮೆಸ್ಟಿಕ್ ಪಾರ್ಕಿಂಗ್ ಕಡೆಗೆ ಬರುವವರಿಗೆ : ಮೈಸೂರು ರಸ್ತೆ-ನಾಯಂಡನಹಳ್ಳಿ -ಚಂದ್ರಾ ಲೇಔಟ್- ಗೊರಗುಂಟೆಪಾಳ್ಯ -ಬಿ.ಇ.ಎಲ್. ವೃತ್ತ-ಗಂಗಮ್ಮ ವೃತ್ತ ಎಂ.ಎಸ್ ಪಾಳ್ಯ ಸರ್ಕಲ್- ಮದರ್ ಡೈರಿ-ಉನ್ನಿ ಕೃಷ್ಣನ್ ಜಂಕ್ಷನ್ ತಿರುವು ದೊಡ್ಡಬಳ್ಳಾಪುರ ರಸ್ತೆ- ರಾಜಾನುಕುಂಟೆ ಬಲ ತಿರುವು ಅಡ್ಡಿಗಾನಹಳ್ಳಿ ಎಂ.ವಿ.ಐ.ಟಿ ಕ್ರಾಸ್- ವಿದ್ಯಾನಗರ ಕ್ರಾಸ್-ಯು ತಿರುವು ಪಡೆದು ಡೊಮೆಸ್ಟಿಕ್ ಹುಣಸಮಾರನಹಳ್ಳಿ.
ಪಾರ್ಕಿಂಗ್ ನಿಷೇಧ...
ಈ ಕೆಳಗಿನ ಮಾರ್ಗಗಳಲ್ಲಿ ಎಲ್ಲಾ ವಾಹನಗಳನ್ನು ರಸ್ತೆಯ ಎರಡೂ ಬದಿಗಳಲ್ಲಿ ನಿಲ್ಲಿಸುವುದನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ.
ನಾಗೇನಹಳ್ಳಿಯಿಂದ ಗಂಟಿಗಾನಹಳ್ಳಿ ವೃತ್ತದ ಮೂಲಕ ಫೋರ್ಡ್ ಶೋ ರೂಮ್ (ಬಿಬಿ ರಸ್ತೆ),
ಮೇಖ್ರಿ ವೃತ್ತದಿಂದ ದೇವನಹಳ್ಳಿಗೆ ಕಡೆಯಿಂದ.
ಬಾಗಲೂರು ಮುಖ್ಯರಸ್ತೆಯ ಮೂಲಕ ಸಾತನೂರಿನ ಕಡೆಗೆ ಬಾಗಲೂರು ಕ್ರಾಸ್,ನಾಗವಾರ ಜಂ. ಮೂಲಕ ಥಣಿಸಂದ್ರ ಮುಖ್ಯ ರಸ್ತೆಯಿಂದ ರೇವಾ ಕಾಲೇಜಿಗೆ
FTI ಜಂಕ್ಷನ್ ನಿಂದ ಹೆಣ್ಣೂರು ಕ್ರಾಸ್,
ಹೆಣ್ಣೂರು ಕ್ರಾಸ್ ನಿಂದ ಬೇಗೂರು ಹಿಂಭಾಗದ ಗೇಟ್,
ನಾಗೇನಹಳ್ಳಿ ಗೇಟ್ ನಿಂದ ಯಲಹಂಕ ವೃತ್ತಕ್ಕೆ,
MVIT ಕ್ರಾಸ್ ನಿಂದ ನಾರಾಯಣಪುರ ರೈಲ್ವೆ ಕ್ರಾಸ್ ವರೆಗೆ,
ಕೋಗಿಲು ಕ್ರಾಸ್ ನಿಂದ ಕಣ್ಣೂರು ಜಂಕ್ಷನ್ ವರೆಗೆ,
ಮತ್ತಿಕೆರೆ ಕ್ರಾಸ್‌ನಿಂದ ಉಣ್ಣಿಕೃಷ್ಣನ್ ಜಂಕ್ಷನ್,
ಜಾಲಹಳ್ಳಿ ಕ್ರಾಸ್ ನಿಂದ ಗಂಗಮ್ಮ ವೃತ್ತ.
ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಪರ್ಯಾಯ ಮಾರ್ಗಗಳು...
ಪೂರ್ವದಿಂದ: ಕೆಆರ್ ಪುರಂ ನಿಂದ ಹೆಣ್ಣೂರು ಕ್ರಾಸ್ -ಕಣ್ಣೂರು -ಬೇಗೂರು (ಹಿಂದಿನ ಗೇಟ್) -ಕೆಐಎಎಲ್.
ಪಶ್ಚಿಮದಿಂದ: ಗೊರಗುಂಟೆಪಾಳ್ಯ -ಬಿಇಎಲ್ ಸರ್ಕಲ್ - ರಾಜನಕುಂಟೆ -ಎಂವಿಐಟಿ -ಕೆಐಎಎಲ್.
ದಕ್ಷಿಣ: ಮೈಸೂರು ರಸ್ತೆ -ಗೊರಗುಂಟೆಪಾಳ್ಯ -ರಾಜನಕುಂಟೆ -MVIT ಕ್ರಾಸ್ -KIAL.