ಅಂಗಡಿ ಸಿಬ್ಬಂದಿಗೆ ಚಾಕು ತೋರಿಸಿದ ಪುಡಿ ರೌಡಿ 
ರಾಜ್ಯ

Video: 'ಏಯ್.. ಸಿಗರೇಟ್ ಕೊಡೋ...'; ಅಂಗಡಿ ಸಿಬ್ಬಂದಿಗೆ ಚಾಕು ತೋರಿಸಿದ ಪುಡಿ ರೌಡಿ ಬಂಧನ!

ಆಡುಗೋಡಿಯ ರಾಜೇಂದ್ರ ನಗರದ 80 ಅಡಿ ರಸ್ತೆಯ ಪೆಟ್ಟಿಗೆ ಅಂಗಡಿಗೆ ಬಂದ ಗೌತಮ್, ಒಂದು ಪ್ಯಾಕ್ ಸಿಗರೇಟ್ ಮತ್ತು ಬೆಂಕಿ ಪೊಟ್ಟಣ ಪಡೆದುಕೊಂಡಿದ್ದ.

ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಮತ್ತೆ ಪುಡಿರೌಡಿಗಳ ಅಟ್ಟಹಾಸ ಮುಂದುವರೆದಿದ್ದು, ಅಂಗಡಿ ಸಿಬ್ಬಂದಿಗೆ ಚಾಕು ತೋರಿಸಿ ಸಿಗರೇಟ್ ವಸೂಲಿ ಮಾಡಿದ್ದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ.

ನಗರದ ಆಡುಗೋಡಿಯ ರಾಜೇಂದ್ರ ನಗರದ 80 ಅಡಿ ರಸ್ತೆಯಲ್ಲಿ ಈ ಘಟನೆ ನಡೆದಿದ್ದು, ಪೆಟ್ಟಿಗೆ ಅಂಗಡಿ ವ್ಯಾಪಾರಿಯೊಬ್ಬರಿಗೆ ಚಾಕು ತೋರಿಸಿ, ಹೆದರಿಸಿ ಪುಡಿರೌಡಿಯೋರ್ವ ಉಚಿತವಾಗಿ ಸಿಗರೇಟ್‌ ಪ್ಯಾಕೆಟ್‌ ಪಡೆದಿದ್ದಾನೆ. ಆರೋಪಿಯನ್ನು ಗೌತಮ್‌ ಎಂದು ಗುರುತಿಸಲಾಗಿದ್ದು, ಈ ಘಟನೆ ಬೆಳಕಿಗೆ ಬಂದ ಬೆನ್ನಲ್ಲೇ ಆರೋಪಿಯನ್ನು ಆಡುಗೋಡಿ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಏನಿದು ಘಟನೆ?

ಕೆಲವು ದಿನಗಳ ಹಿಂದೆ ಆಡುಗೋಡಿಯ ರಾಜೇಂದ್ರ ನಗರದ 80 ಅಡಿ ರಸ್ತೆಯ ಪೆಟ್ಟಿಗೆ ಅಂಗಡಿಗೆ ಬಂದ ಗೌತಮ್, ಒಂದು ಪ್ಯಾಕ್ ಸಿಗರೇಟ್ ಮತ್ತು ಬೆಂಕಿ ಪೊಟ್ಟಣ ಪಡೆದುಕೊಂಡಿದ್ದ. ವ್ಯಾಪಾರಿ ಹಣ ಕೇಳಿದಾಗ, ನಾನು ಯಾರು ಗೊತ್ತಾ? ನನ್ನ ಬಳಿಯೇ ಹಣ ಕೇಳುತ್ತೀಯಾ? ನಾನು ಕೇಳುವುದನ್ನು ಕೊಡಬೇಕು ಎಂದು ಚಾಕು ತೋರಿಸಿ ಬೆದರಿಕೆ ಹಾಕಿದ್ದ. ಗೌತಮ್‌ ಹೆದರಿಸುತ್ತಿರುವ ಮತ್ತು ಮಾಲೀಕ ಸಿಗರೇಟ್‌ ನೀಡುತ್ತಿರುವ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿತ್ತು.

ಇದರ ಜತೆಗೆ ಅಂಗಡಿ ಮಾಲೀಕ ಆಡುಗೋಡಿ ಪೊಲೀಸ್‌ ಠಾಣೆಗೆ ದೂರು ನೀಡಿದ್ದರು. ಈ ದೂರಿನನ್ವಯ ಮತ್ತು ವಿಡಿಯೋ ಪರಿಶೀಲಿಸಿ ಪೊಲೀಸರು ಆರೋಪಿಯನ್ನು ಬಂಧಿಸಿ ಆತನ ಬಳಿಯಿದ್ದ ಒಂದೂವರೆ ಅಡಿ ಉದ್ದದ ಚಾಕುವನ್ನು ಕೂಡ ವಶಪಡಿಸಿಕೊಂಡಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಪ್ರತಿಪಕ್ಷಗಳು ಸಂಪುಟದಿಂದ ವಜಾಕ್ಕೆ ಆಗ್ರಹಿಸುತ್ತಿರುವ ಮಧ್ಯೆ ಸಚಿವ ಬಿ. ನಾಗೇಂದ್ರಗೆ ಹೈಕೋರ್ಟ್ ಬಿಗ್ ರಿಲೀಫ್!

ರಾಂಚಿ ಪರೀಕ್ಷೆ ವಿವಾದ: ಬ್ಯಾರಿಕೇಡ್ ಮುರಿದು ವಿಧಾನಸೌಧದತ್ತ ನುಗ್ಗಿದ ವಿದ್ಯಾರ್ಥಿಗಳು! ಜಲಫಿರಂಗಿ ಬಳಸಿದ ಪೊಲೀಸರು, Video

'ಬಸವಣ್ಣನನ್ನೇ ಬಿಡಲಿಲ್ಲ.. ನಾನ್ಯಾರು..'; ‘ಅವರಿಗೆ ಸಚಿವ ಸ್ಥಾನ ಸಿಗದಿರಲು ನಾನು ಕಾರಣ ಅಲ್ಲ’ ಎಂದ ಎಂಬಿ ಪಾಟೀಲ್ ಸ್ಪಷ್ಟನೆ, Video

'JDS ಪಾದಯಾತ್ರೆಯ ಬಂಡವಾಳ ಬಯಲು ಮಾಡಿದ ವಿಜಯೇಂದ್ರ': ಕಾಂಗ್ರೆಸ್​​ನಿಂದ ವಿಡಿಯೋ ಬಿಡುಗಡೆ!

ವಿದ್ಯಾರ್ಥಿಗಳ ಪ್ರತಿಭಟನೆಯ ಕುರಿತು ಚರ್ಚೆಗೆ ಅಮಿತ್ ಶಾ ಉತ್ತರಿಸುತ್ತಾರೆ, ಆದರೆ...: ಕಿರಣ್ ರಿಜಿಜು