ಚಿನ್ನಸ್ವಾಮಿ ಸ್ಟೇಡಿಯಂ ಬಳಿ ಹದಗೆಟ್ಟಿರುವ ಡ್ರೈನೇಜ್ ಕವರ್  
ರಾಜ್ಯ

ಬೆಂಗಳೂರು: ಕ್ವೀನ್ಸ್ ರಸ್ತೆಯಲ್ಲಿ ಹದಗೆಟ್ಟ ಡ್ರೈನೇಜ್ ಕವರ್; ದೂರು ನೀಡಿದರೂ ದುರಸ್ತಿ ಮಾಡದ ಬಿಬಿಎಂಪಿ!

ಈ ರಸ್ತೆಯಲ್ಲಿ ದೈನಂದಿನ ಪ್ರಯಾಣಿಕರ ಸಂಖ್ಯೆ ಹೆಚ್ಚಿದ್ದರೂ ಅಧಿಕಾರಿಗಳು ಇನ್ನೂ ದುರಸ್ತಿ ಕ್ರಮ ಕೈಗೊಂಡಿಲ್ಲ. ರಸ್ತೆಯ ಉದ್ದಕ್ಕೂ ಇರುವ 30 ಒಳಚರಂಡಿ ಹೊದಿಕೆಗಳಲ್ಲಿ, ನಾಲ್ಕು ಸಂಪೂರ್ಣವಾಗಿ ಮುರಿದುಹೋಗಿವೆ .

ಬೆಂಗಳೂರು: ಕಬ್ಬನ್ ಪಾರ್ಕ್ ಮೆಟ್ರೋ ನಿಲ್ದಾಣದಿಂದ ಎಂಜಿ ರಸ್ತೆ ವೃತ್ತದವರೆಗೆ (ಚಿನ್ನಸ್ವಾಮಿ ಕ್ರೀಡಾಂಗಣ ರಸ್ತೆಯ ಬಳಿ) ಕ್ವೀನ್ಸ್ ರಸ್ತೆಯ ಉದ್ದಕ್ಕೂ ಹದಗೆಟ್ಟ ಒಳಚರಂಡಿಗಳು ಒಂದು ತಿಂಗಳಿಗೂ ಹೆಚ್ಚು ಕಾಲದಿಂದ ಪಾದಚಾರಿಗಳು ಮತ್ತು ವಾಹನ ಚಾಲಕರಿಗೆ ಅಪಾಯವನ್ನುಂಟುಮಾಡುತ್ತಿವೆ.

ಈ ರಸ್ತೆಯಲ್ಲಿ ದೈನಂದಿನ ಪ್ರಯಾಣಿಕರ ಸಂಖ್ಯೆ ಹೆಚ್ಚಿದ್ದರೂ ಅಧಿಕಾರಿಗಳು ಇನ್ನೂ ದುರಸ್ತಿ ಕ್ರಮ ಕೈಗೊಂಡಿಲ್ಲ. ರಸ್ತೆಯ ಉದ್ದಕ್ಕೂ ಇರುವ 30 ಒಳಚರಂಡಿ ಹೊದಿಕೆಗಳಲ್ಲಿ, ನಾಲ್ಕು ಸಂಪೂರ್ಣವಾಗಿ ಮುರಿದುಹೋಗಿವೆ ಮತ್ತು ಮೂರು ಭಾಗಶಃ ಹಾನಿಗೊಳಗಾಗಿದ್ದು, ವಾಹನ ಬಳಕೆದಾರರಿಗೆ ಗಮನಾರ್ಹ ಅಪಾಯವನ್ನುಂಟುಮಾಡುತ್ತವೆ. ಚಿನ್ನಸ್ವಾಮಿ ಕ್ರೀಡಾಂಗಣದ ಬಸ್ ನಿಲ್ದಾಣದಲ್ಲಿ ಮುರಿದ ಹೊದಿಕೆಯ ಬಳಿ ಕೇವಲ ಒಂದು ಬ್ಯಾರಿಕೇಡ್ ಇರಿಸಲಾಗಿದೆ.

ನಾನು ವಾರಗಳಿಂದ ಈ ಸಮಸ್ಯೆಯನ್ನು ಗಮನಿಸುತ್ತಿದ್ದೇನೆ. ರಾತ್ರಿಯಲ್ಲಿ, ಇದು ಹೆಚ್ಚು ಅಪಾಯಕಾರಿಯಾಗಿದೆ. ಮನೆಗೆ ತೆರಳುವ ಬೈಕ್ ಸವಾರರು ಮುರಿದ ಮುಚ್ಚಳಗಳನ್ನು ಗುರುತಿಸದೇ ಇರಬಹುದು, ಇದು ಗಂಭೀರ ಅಪಘಾತಗಳಿಗೆ ಕಾರಣವಾಗಬಹುದು ಎಂದು ಅವರು ಹೇಳಿದರು, ಪಾದಚಾರಿಗಳು ಸಹ ಅಪಾಯದಲ್ಲಿದ್ದಾರೆ.

ಚಿನ್ನಸ್ವಾಮಿ ಕ್ರೀಡಾಂಗಣ ಮತ್ತು ಕಬ್ಬನ್ ಪಾರ್ಕ್ ಹತ್ತಿರದಲ್ಲಿ ಇರುವುದರಿಂದ, ಅನೇಕ ಪಾದಚಾರಿಗಳು ಈ ಮಾರ್ಗವನ್ನು ಬಳಸುತ್ತಾರೆ ಮತ್ತು ರಸ್ತೆ ದಾಟಲು ಪ್ರಯತ್ನಿಸುವವರು ವಿಶೇಷವಾಗಿ ಹಿರಿಯ ನಾಗರಿಕರು ಹಾನಿಗೊಳಗಾದ ಒಳಚರಂಡಿ ಹೊದಿಕೆಯ ಮೇಲೆ ಹೆಜ್ಜೆ ಹಾಕಿದರೆ ಗಾಯವಾಗುವ ಸಾಧ್ಯತೆಯಿದೆ ಎಂದು ಟಿಎನ್‌ಐಇ ಜೊತೆ ಮಾತನಾಡಿದ ಐಟಿ ಸಂಸ್ಥೆಯಲ್ಲಿ ಕೆಲಸ ಮಾಡುವ ದೈನಂದಿನ ಪ್ರಯಾಣಿಕ ಥಲನ್ ತಮ್ಮಯ್ಯ ತಮ್ಮ ಕಳವಳ ವ್ಯಕ್ತಪಡಿಸಿದರು.

ಅಧಿಕಾರಿಗಳು ಯಾವುದೇ ರೀತಿಯ ಮುನ್ನೆಚ್ಚರಿಕೆ ಕ್ರಮ ತೆಗೆದುಕೊಂಡಿಲ್ಲ ಎಂದು ಇನ್ನೋರ್ವ ಪ್ರಯಾಣಿಕ ನಿತೀಶ್ ಎಂಬುವರು ತಿಳಿಸಿದ್ದಾರೆ. ನಾಲ್ಕು ಮುರಿದ ಡ್ರೈನೇಜ್ ಕವರ್‌ಗಳಿವೆ, ಆದರೆ ಒಂದಕ್ಕೆ ಮಾತ್ರ ಬ್ಯಾರಿಕೇಡ್ ಹಾಕಲಾಗಿದೆ, ಅದನ್ನು ಸಾರ್ವಜನಿಕರು ಹಾಕಿರಬಹುದು. ಯಾರಾದರೂ ಬಿದ್ದು ಗಾಯಗೊಂಡ ನಂತರವೇ ಅಧಿಕಾರಿಗಳು ಕ್ರಮ ಕೈಗೊಳ್ಳುತ್ತಾರೆ, ಅಲ್ಲಿಯವರೆಗೆ ಅವರು ಕಣ್ಣು ಮುಚ್ಚಿಕೊಂಡಿರುತ್ತಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇದಲ್ಲದೆ, ಹಲಸೂರು ರಸ್ತೆ ಜಂಕ್ಷನ್ ಬಳಿ ಮುರಿದ ಒಳಚರಂಡಿ ಹೊದಿಕೆಯ ಚಿತ್ರವನ್ನು ಬೆಂಗಳೂರು ಪೋಸ್ಟ್ ತಮ್ಮ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದೆ, ಹಲಸೂರು ರಸ್ತೆ ಜಂಕ್ಷನ್‌ನಲ್ಲಿ ಸವೆದಿರುವ ಡ್ರೈನ್ ಕವರ್ ರಸ್ತೆ ಬಳಕೆದಾರರಿಗೆ, ವಿಶೇಷವಾಗಿ ಕತ್ತಲೆಯಲ್ಲಿ ಗಂಭೀರ ಅಪಾಯವನ್ನುಂಟುಮಾಡುತ್ತವೆ.

ನಿವಾಸಿಗಳು ದೂರುಗಳನ್ನು ನೀಡುತ್ತಿದ್ದರೂ, ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಯಾವುದೇ ಕ್ರಮ ಕೈಗೊಂಡಿಲ್ಲ. ಅಪಘಾತ ಸಂಭವಿಸುವ ಮೊದಲು ಬಿಬಿಎಂಪಿ ಎಚ್ಚೆತ್ತುಕೊಳ್ಳುವುದೇ ಎಂದು ಪ್ರಶ್ನಿಸಿದ್ದಾರೆ, ಈ ಸಂಬಂಧ ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಪತ್ರಿಕೆ ಬಿಬಿಎಂಪಿ ಅಧಿಕಾರಿಗಳನ್ನು ಸಂಪರ್ಕಿಸಲು ಪ್ರಯತ್ನಿಸಿದರೂ ಲಭ್ಯವಾಗಲಿಲ್ಲ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

Gaza Hospital Strike: ಹಮಾಸ್ ಸೋಲಿಸುವುದಷ್ಟೇ ನಮ್ಮ ಗುರಿ, ನಾಗರೀಕರನ್ನು ಗೌರವಿಸುತ್ತೇವೆ; ಮೊದಲ ಬಾರಿಗೆ ದಾಳಿ ಕುರಿತು ಇಸ್ರೇಲ್ ವಿಷಾದ

ವಿಧಾನಪರಿಷತ್'ಗೆ ನಾಮನಿರ್ದೇಶನ: ನಾಲ್ವರು MLC ಅಭ್ಯರ್ಥಿಗಳು ಹೆಸರು ಬದಲು, ಪಟ್ಟಿಯಲ್ಲಿ TNIE ಮೈಸೂರು ವಿಭಾಗದ ಮುಖ್ಯಸ್ಥನಿಗೆ ಸ್ಥಾನ

ಬಾನು ಮುಷ್ತಾಕ್‌ ದಸರಾ ಉದ್ಘಾಟನೆಗೆ ಆಕ್ಷೇಪ; ಮುಸ್ಲಿಂ ದ್ವೇಷ ಮನಸ್ಥಿತಿಯನ್ನು ಬದಿಗಿಟ್ಟು, ಸಂವಿಧಾನದ ಆಶಯ ಅರ್ಥ ಮಾಡಿಕೊಳ್ಳಿ: ಸಚಿವ ಹೆಚ್.ಸಿ.ಮಹದೇವಪ್ಪ

ಚಾಮುಂಡೇಶ್ವರಿ ದೇವಿ ಬಗ್ಗೆ ಗೌರವವಿದ್ದು, ಧಾರ್ಮಿಕ ಭಾವನೆಗಳ ಗೌರವಿಸುತ್ತೇನೆ; ಬಾನು ಮುಷ್ತಾಕ್

JC ರಸ್ತೆಯಲ್ಲಿ White-topping ಕಾಮಗಾರಿ: ಆ.30ರವರೆಗೆ ಭಾರಿ ಗಾತ್ರದ ವಾಹನಗಳ ಸಂಚಾರಕ್ಕೆ ನಿರ್ಬಂಧ

SCROLL FOR NEXT