ಹೈದರ್ ಅಲಿ 
ರಾಜ್ಯ

ಬೆಂಗಳೂರು: ರೌಡಿಶೀಟರ್ ಕೊಲೆ ಪ್ರಕರಣ; ಶಿವಮೊಗ್ಗದ 4 ಮಂದಿ ಸೇರಿದಂತೆ ಏಳು ಆರೋಪಿಗಳ ಬಂಧನ

ಬಂಧಿತರ ಪೈಕಿ ನಾಲ್ವರು ಶಿವಮೊಗ್ಗ ಹಾಗೂ ಮೂವರು ಆನೆಪಾಳ್ಯ, ಬೈಯಪ್ಪನಹಳ್ಳಿಯ ನಿವಾಸಿಗಳು. ಬಂಧಿತರ ಪೈಕಿ ಮೂವರು ರೌಡಿಶೀಟರ್‌ಗಳು ಆಗಿದ್ದಾರೆ.

ಬೆಂಗಳೂರು: ಅಶೋಕನಗರ ಪೊಲೀಸ್ ಠಾಣೆ ವ್ಯಾಪ್ತಿಯ ಗರುಡಾ ಮಾಲ್ ಬಳಿ ರೌಡಿಶೀಟರ್ ಹೈದರ್ ಅಲಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಏಳು ಜನರನ್ನು ಬಂಧಿಸಲಾಗಿದೆ. ಕೊಲೆಗೆ ಹಳೆಯ ದ್ವೇಷವೇ ಕಾರಣ ಎಂದು ಹೇಳಲಾಗುತ್ತಿದೆ.

ಬಂಧಿತರ ಪೈಕಿ ನಾಲ್ವರು ಶಿವಮೊಗ್ಗ ಹಾಗೂ ಮೂವರು ಆನೆಪಾಳ್ಯ, ಬೈಯಪ್ಪನಹಳ್ಳಿಯ ನಿವಾಸಿಗಳು. ಬಂಧಿತರ ಪೈಕಿ ಮೂವರು ರೌಡಿಶೀಟರ್‌ಗಳು ಆಗಿದ್ದಾರೆ. ನಯಾಜ್‌ ಪಾಷಾ, ನಾಜುದ್ದೀನ್‌, ರಿಜ್ವಾನ್‌, ಮತೀನ್‌, ಸದ್ದಾಂ, ದರ್ಶನ್‌ ಅಲಿಯಾಸ್ ಶಿವದರ್ಶನ್‌, ರಾಹಿದ್, ವಸೀಂ ಬಂಧಿತ ಆರೋಪಿಗಳು. ನಯಾಜ್‌ ಪಾಷಾ ವಿರುದ್ಧ ಅಶೋಕ ನಗರ ಪೊಲೀಸ್ ಠಾಣೆಯಲ್ಲಿ 8 ಪ್ರಕರಣಗಳು ದಾಖಲಾಗಿವೆ.

ಪ್ರಾಥಮಿಕ ತನಿಖೆಯ ಪ್ರಕಾರ, ಪ್ರಕರಣದ ಪ್ರಮುಖ ಆರೋಪಿ ಪಾಷಾ ತನ್ನ ಗ್ಯಾಂಗ್‌ನೊಂದಿಗೆ ಅಲಿಯನ್ನು ಕೊಲ್ಲಲು ಸಂಚು ರೂಪಿಸಿದ್ದ. ಪಾಷಾ ಮತ್ತು ಅಲಿ ನಡುವೆ ದೀರ್ಘಕಾಲದ ದ್ವೇಷವಿತ್ತು, ಇಬ್ಬರೂ ವರ್ಷಗಳಿಂದ ಪರಸ್ಪರ ಕೊಲ್ಲಲು ಹಲವು ಬಾರಿ ಪ್ರಯತ್ನಿಸಿದ್ದರು. ಈ ಹಿಂದೆ ಎದುರಾಳಿ ಗ್ಯಾಂಗ್‌ಗಳಿಂದ ಇಬ್ಬರ ಮೇಲೂ ಎರಡು ಬಾರಿ ದಾಳಿ ನಡೆದಿತ್ತು ಎಂದು ತನಿಖೆಯಲ್ಲಿ ತಿಳಿದುಬಂದಿದೆ.

ಜಿಮ್‌ ಮಾಲೀಕನೂ ಆಗಿರುವ ಸ್ನೇಹಿತನ ಜತೆಗೆ ಶುಕ್ರವಾರ ಮಧ್ಯರಾತ್ರಿವರೆಗೂ ಅಶೋಕನಗರ ಪೊಲೀಸ್ ಠಾಣಾ ವ್ಯಾಪ್ತಿಯ ಪಬ್‌ವೊಂದರಲ್ಲಿ ಹೈದರ್‌ ಅಲಿ ಪಾರ್ಟಿ ನಡೆಸಿದ್ದ. ಹೊರಗೆ ಬರುವುದನ್ನೇ ಆರೋಪಿಗಳು ಕಾದಿದ್ದರು. ಹೊರಗೆ ಬರುತ್ತಿದ್ದಂತೆಯೇ ಬೈಕ್‌ನಲ್ಲಿ ಹಿಂಬಾಲಿಸಿಕೊಂಡು ಹೋಗಿ ಫುಟ್‌ಬಾಲ್‌ ಮೈದಾನ ಬಳಿ ಮಾರಕಾಸ್ತ್ರಗಳಿಂದ ಕೊಚ್ಚಿ, ಕೊಲೆ ಮಾಡಿ ಪರಾರಿ ಆಗಿದ್ದರು. ಅದೇ ವೇಳೆ ಕಾರಿನಲ್ಲಿ ಬಂದಿದ್ದ ಇನ್ನೂ ಕೆಲವು ಆರೋಪಿಗಳು ಮೈದಾನ ಬಳಿ ಕಾದಿದ್ದರು. , ಪ್ರಕರಣದ ತನಿಖೆಗಾಗಿ ಕಬ್ಬನ್ ಪಾರ್ಕ್ ಉಪವಿಭಾಗದ ಸಹಾಯಕ ಪೊಲೀಸ್ ಆಯುಕ್ತರ ಅಡಿಯಲ್ಲಿ ವಿಶೇಷ ತಂಡವನ್ನು ರಚಿಸಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಭಾರತ-ರಷ್ಯಾ ಆರ್ಥಿಕ ಬಾಂಧವ್ಯಕ್ಕೆ ಹೊಸ ಬಲ; ಪುಟಿನ್ ಭೇಟಿಯಾದ ಜೈಶಂಕರ್, ಪರಮಾಣು ಸಹಕಾರ ಸೇರಿ ಹಲವು ಅಂಶಗಳ ಕುರಿತು ಚರ್ಚೆ!

3 ದಿನ ಮೊದಲೇ ಮುಂಗಾರು ಅಧಿವೇಶನಕ್ಕೆ ತೆರೆ: 'ವಿರೋಧ ಪಕ್ಷಕ್ಕೆ ಹೆದರಿ ಅಧಿವೇಶನ ರದ್ದು'; ರಾಜ್ಯಪಾಲರಿಗೆ BJP ದೂರು!

Video: ಕುದಿಯುತ್ತಿದ್ದ ಬೆಲ್ಲದ ಪಾಕಕ್ಕೆ ಬಿದ್ದ ಯುವಕ; ಅಣ್ಣನ ಸಾಲ ತೀರಿಸಲು ಕೆಲಸಕ್ಕೆ ಹೋಗಿದ್ದವನ ದಾರುಣ ಅಂತ್ಯ

'ಕಿವಿಲಿ ಹೊಗೆ ಬರುವಂತಿದೆ': ಲಂಕಾ-ಭಾರತ ಟೆಸ್ಟ್ ಪಂದ್ಯದಲ್ಲಿ ಮತ್ತೊಂದು ವಿವಾದ, ಗ್ಲೌಸ್ ಕಿತ್ತೆಸೆದ ಬ್ಯಾಟರ್, ಆಗಿದ್ದೇನು?

ಬಿಜೆಪಿ MLC ಎನ್. ರವಿಕುಮಾರ್‌ ವಿರುದ್ಧ ಜಾಮೀನು ರಹಿತ ಬಂಧನ ವಾರಂಟ್