ಪುಸ್ತಕ ಮೇಳದಲ್ಲಿ ಡಿ.ಕೆ ಶಿವಕುಮಾರ್ 
ರಾಜ್ಯ

ನಾನು ಜೀವನದಲ್ಲಿ ಪುಸ್ತಕ ಹಿಡಿದು ಓದಿದವನಲ್ಲ, ಶಾಲೆಯಲ್ಲಿ ಹೇಗೋ ಅಲ್ಪ-ಸ್ವಲ್ಪ ಓದಿ ಪಾಸ್ ಆದೆ; ಡಿ.ಕೆ ಶಿವಕುಮಾರ್

ನಾನು ಮೊದಲ ಬಾರಿಗೆ ವಿಧಾನ ಸಭೆಗೆ ಬಂದಾಗ, ರಾಮಕೃಷ್ಣ ಹೆಗಡೆ, ವೀರೇಂದ್ರ ಪಾಟೀಲ್, ಬಂಗಾರಪ್ಪ, ಕಾಗೋಡು ತಿಮ್ಮಪ್ಪ, ನಾಣಯ್ಯ ಅವರಂತಹ ಘಟಾನುಘಟಿಗಳು ಮಾತನಾಡುವಾಗ ನಾನು ಹೆಚ್ಚು ಓದಬೇಕಿತ್ತು ಎಂದು ಅನ್ನಿಸಿತ್ತು ಎಂದು ಹೇಳಿದರು.

ಬೆಂಗಳೂರು: ವಿಧಾನಸೌಧದ ಆವರಣದಲ್ಲಿ ಪುಸ್ತಕ ಮೇಳ ಆಯೋಜಿಸುವ ಮೂಲಕ ವಿಧಾನಸಭೆ ಸ್ಪೀಕರ್ ಹಾಗೂ ವಿಧಾನ ಪರಿಷತ್ತಿನ ಸಭಾಪತಿಗಳು ಸೇರಿ ಹೊಸ ಅಧ್ಯಾಯ ಆರಂಭಿಸಿದ್ದಾರೆ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ತಿಳಿಸಿದರು.

ವಿಧಾನಸೌಧದಲ್ಲಿ ಆಯೋಜಿಸಿರುವ ಪುಸ್ತಕ ಮೇಳ ಉದ್ಘಾಟನಾ ಕಾರ್ಯಕ್ರಮಕದಲ್ಲಿ ಮಾತನಾಡಿದ ಅವರು, ನಮಗೆ ಅವಕಾಶ ಸಿಕ್ಕಾಗ ಅದನ್ನು ಹೇಗೆ ಬಳಸಿಕೊಳ್ಳಬೇಕು ಎಂದು ನಾವುಗಳು ನಮ್ಮ ಸ್ಪೀಕರ್ ಯು.ಟಿ ಖಾದರ್ ಹಾಗೂ ಸಭಾಪತಿ ಹೊರಟ್ಟಿ ಅವರನ್ನು ನೋಡಿ ಕಲಿಯಬೇಕು.

ಇವರಿಬ್ಬರೂ ಅನೇಕ ಬದಲಾವಣೆ ತಂದಿದ್ದು, ಸುವರ್ಣಸೌಧಕ್ಕೂ ಹೊಸ ರೂಪ ನೀಡುವ ಪ್ರಯತ್ನ ಮಾಡಿದ್ದಾರೆ. ಸರ್ಕಾರದ ಪರವಾಗಿ ಇಬ್ಬರಿಗೂ ಅಭಿನಂದನೆ ಸಲ್ಲಿಸಲು ಬಯಸುತ್ತೇನೆ. ಇದನ್ನು ಹೀಗೆ ಮುಂದುವರಿಸಿಕೊಂಡು ಹೋಗಬೇಕು"ಎಂದರು.

ಒಬ್ಬ ಓದುಗ, ನಾಯಕನಾಗುತ್ತಾನೆ ಎಂದು ನಮ್ಮ ಗುರುಗಳು ಹೇಳುತ್ತಿದ್ದರು. ಹೀಗಾಗಿ ಪುಸ್ತಕ ಓದುವ ಹವ್ಯಾಸಕ್ಕೆ ಪುಷ್ಟಿ ನೀಡುವ ಕೆಲಸ ನಡೆಯುತ್ತಿದೆ. ಪ್ರತಿ ವರ್ಷ ಇದನ್ನು ಮುಂದುವರಿಸಿಕೊಂಡು ಹೋಗಲು ಸರ್ಕಾರ ಆದೇಶ ಮಾಡಲಿದೆ ಎಂದು ಸಿಎಂ ಹೇಳಿದ್ದಾರೆ.

ಇಲ್ಲಿ ಪುಸ್ತಕ ಹಾಗೂ ಮಸ್ತಕದ ಜಾತ್ರೆ ಮಾಡುವುದಾಗಿ ಭರವಸೆ ನೀಡಿದ್ದಾರೆ. ಇದರಿಂದ ಎಲ್ಲರಿಗೂ ಒಳ್ಳೆಯದಾಗುತ್ತದೆ. ಪುಸ್ತಕಗಳ ಮೂಲಕ ಆಚಾರ ವಿಚಾರ ಪ್ರಚಾರ ಮಾಡಲು ನೆರವಾಗುತ್ತದೆ ಎಂದು ತಿಳಿಸಿದರು.

ನಾನು ಜೀವನದಲ್ಲಿ ಪುಸ್ತಕ ಹಿಡಿದು ಓದಿದವನಲ್ಲ, ಶಾಲೆಯಲ್ಲಿ ಹೇಗೋ ಅಲ್ಪಸ್ವಲ್ಪ ಓದಿ ಪಾಸ್ ಆದೆ. ಡಿಗ್ರಿಯಲ್ಲಿರುವಾಗ ಓದಲೇ ಇಲ್ಲ. ನಾನು ಮಂತ್ರಿಯಾದ ನಂತರ ಮುಕ್ತ ವಿವಿಯಲ್ಲಿ ಪದವಿ ಪಡೆದೆ. ನಾನು ಮೊದಲ ಬಾರಿಗೆ ವಿಧಾನ ಸಭೆಗೆ ಬಂದಾಗ, ರಾಮಕೃಷ್ಣ ಹೆಗಡೆ, ವೀರೇಂದ್ರ ಪಾಟೀಲ್, ಬಂಗಾರಪ್ಪ, ಕಾಗೋಡು ತಿಮ್ಮಪ್ಪ, ನಾಣಯ್ಯ ಅವರಂತಹ ಘಟಾನುಘಟಿಗಳು ಮಾತನಾಡುವಾಗ ನಾನು ಹೆಚ್ಚು ಓದಬೇಕಿತ್ತು ಎಂದು ಅನ್ನಿಸಿತ್ತು ಎಂದು ಹೇಳಿದರು.

ನಾನು ಓದಬೇಕು ಎಂದು ಪುಸ್ತಕ ಖರೀದಿ ಮಾಡುತ್ತೇನೆ. ಆದರೆ ಒಂದು ಪುಟ ಓದುವುದರೊಳಗೆ ಸುಸ್ತಾಗುತ್ತೇನೆ. ನಮ್ಮ ಮುಖ್ಯಮಂತ್ರಿಗಳು ದಿನ ಬೆಳಗ್ಗೆ ಪತ್ರಿಕೆ ಹಾಗೂ ಹೆಚ್ಚು ಪುಸ್ತಕ ಓದುತ್ತಾರೆ ಎಂದು ಕೇಳಿದ್ದೇನೆ. ಪುಸ್ತಕಗಳು ಜ್ಞಾನದ ಭಂಡಾರ. ಈಗ ಮೊಬೈಲ್ ಫೋನ್ ಗಳು ಬಂದಿದ್ದು, ಎಲ್ಲಾ ಮಾಹಿತಿಗಳು ಅಂಗೈಯಲ್ಲಿ ಲಭ್ಯವಿದೆ. ಅಷ್ಟರ ಮಟ್ಟಿಗೆ ತಂತ್ರಜ್ಞಾನ ಮುಂದುವರಿದಿದೆ. ಆದರೂ ಪುಸ್ತಕಗಳನ್ನು ಓದುವ ಹವ್ಯಾಸ ಇಟ್ಟುಕೊಳ್ಳಬೇಕು. ವಿಧಾನಸೌಧದ ಆವರಣದಲ್ಲಿ ಈ ಪುಸ್ತಕ ಮೇಳ ಮುಂದಿನ ಪ್ರತಿ ವರ್ಷವೂ ನಡೆಯುವ ರೀತಿ ಮುಖ್ಯಮಂತ್ರಿಗಳ ಜತೆ ಚರ್ಚೆ ಮಾಡಿ ತೀರ್ಮಾನ ಮಾಡಬೇಕು ಎಂದು ತಿಳಿಸಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಸಿದ್ದರಾಮಯ್ಯ 2 ಬಾರಿ ಸಿಎಂ ಆಗಿದ್ದಾರೆ; ಡಿಕೆಶಿ ಹಲವು ಮುಖ್ಯಮಂತ್ರಿಗಳ ಜತೆ ಸಚಿವರಾಗಿ ಕೆಲಸ ಮಾಡಿದ್ದಾರೆ: ಸುರ್ಜೇವಾಲ ಮಾತಿನ ಅರ್ಥವೇನು?

IPL 2026 Eliminator: ವೈಭವ್ ಸೂರ್ಯವಂಶಿ ಸ್ಫೋಟಕ ಬ್ಯಾಟಿಂಗ್, SRHಗೆ 244 ರನ್ ಬೃಹತ್ ಗುರಿ ನೀಡಿದ RR

ಹೊಸದಾಗಿ ನೇಮಕಗೊಂಡಿದ್ದ Hamas ಮಿಲಿಟರಿ ನಾಯಕನನ್ನೂ ಹೊಡೆದುರುಳಿಸಿದ Israel!

IPL 2026 Eliminator: ವಿಶ್ವದಾಖಲೆಯ ಹೊಸ್ತಿಲಲ್ಲಿ ಎಡವಿದ Vaibhav Suryavanshi, ಮತ್ತೊಂದು ರೆಕಾರ್ಡ್ ಜಸ್ಟ್ ಮಿಸ್!

ಬೆಂಗಳೂರು: ಮಾಜಿ ಪ್ರೇಯಸಿ ಕರೆದಳೆಂದು ಮನೆಗೆ ಹೋದ ಪ್ರಿಯಕರ ದುರಂತ ಸಾವು: ಅಷ್ಟಕ್ಕೂ ಆಗಿದ್ದೇನು?

SCROLL FOR NEXT