ಸಾಂದರ್ಭಿಕ ಚಿತ್ರ 
ರಾಜ್ಯ

ಭಾರತದ ಕಾಫಿ ಪ್ರಮಾಣೀಕರಣ ಪ್ರಕ್ರಿಯೆ; ಮಾನದಂಡ ರೂಪಿಸಲು ಕಾಫಿ ಬೋರ್ಡ್ ಸಜ್ಜು!

ಈ ಮಾನದಂಡಗಳು ಕಾಫಿಯನ್ನು ಹೇಗೆ ಬೆಳೆಸಲಾಗುತ್ತದೆ, ಹೇಗೆ ಕೊಯ್ಲು ಮಾಡಲಾಗುತ್ತದೆ ಎಂಬುದರಿಂದ ಹಿಡಿದು ಅದನ್ನು ಹೇಗೆ ಸಂಸ್ಕರಿಸಲಾಗುತ್ತದೆ ಮತ್ತು ಪ್ಯಾಕ್ ಮಾಡಲಾಗುತ್ತದೆ ಎಂಬುದನ್ನು ಹೊಂದಿರುತ್ತದೆ.

ಬೆಂಗಳೂರು: ದೇಶದ ವಿಶಿಷ್ಠ ಕಾಫಿ ತಳಿಗಳನ್ನು ಗುರುತಿಸಲು ಭಾರತ ತನ್ನದೇ ಕಾಫಿ ಪ್ರಮಾಣೀಕರಣ ಪ್ರಕ್ರಿಯೆ ಮತ್ತು ಮಾನದಂಡ ರೂಪಿಸಲು ಸಜ್ಜಾಗಿದೆ. ಈ ಮಾನದಂಡಗಳು ಬೆಳೆದ ಉತ್ಪನ್ನ, ಸಂಸ್ಕರಣೆ ಮತ್ತು ಉತ್ತಮ ಗುಣಮಟ್ಟ ಮತ್ತು ಖುಷಿಯಾಗಿ ಕುಡಿಯುವ, ಮಾರಾಟದಲ್ಲಿ ಸ್ಥಿರತೆ ಖಾತ್ರಿಗೆ ನಿಯಮಗಳನ್ನು ಮಾಡಲಾಗುತ್ತಿದೆ.

ಈ ಮಾನದಂಡಗಳು ಕಾಫಿಯನ್ನು ಹೇಗೆ ಬೆಳೆಸಲಾಗುತ್ತದೆ, ಹೇಗೆ ಕೊಯ್ಲು ಮಾಡಲಾಗುತ್ತದೆ ಎಂಬುದರಿಂದ ಹಿಡಿದು ಅದನ್ನು ಹೇಗೆ ಸಂಸ್ಕರಿಸಲಾಗುತ್ತದೆ ಮತ್ತು ಪ್ಯಾಕ್ ಮಾಡಲಾಗುತ್ತದೆ ಎಂಬುದನ್ನು ಹೊಂದಿರುತ್ತದೆ. ರುಚಿ ಮತ್ತು ಪರಿಮಳವನ್ನು ಪರಿಶೀಲನೆ ಮಾಡಲಾಗುತ್ತದೆ. ಕಾಫಿ ಬೆಳೆಗಾರರು ಗುಣಮಟ್ಟ, ಪರಿಸರ ಮತ್ತು ಸಾಮಾಜಿಕ ಪದ್ಥತಿಗಳ ಮೇಲೆ ಗಮನ ಹರಿಸುವ ಮಾರ್ಗಸೂಚಿಗಳನ್ನು ಅನುಸರಿಸಿದ್ದಾರೆಯೇ ಎಂಬುದರ ಪರಿಶೀಲನೆಯನ್ನು ಪ್ರಮಾಣೀಕರಣ ಪ್ರಕ್ರಿಯೆ ಒಳಗೊಂಡಿರುತ್ತದೆ. ಇಲ್ಲಿಯವರೆಗೆ ಭಾರತೀಯ ಬೆಳೆಗಾರರು ಅಂತರಾಷ್ಟ್ರೀಯ ಮಾನದಂಡಗಳಿಗೆ ಬದ್ಧರಾಗಿದ್ದರು. ಇದು ಭಾರತದ ಪರಿಸ್ಥಿತಿಗೆ ಹೊಂದಾಣಿಕೆಯಾಗುವುದಿಲ್ಲ.

ಪ್ರಮಾಣೀಕರಣದ ಹೆಚ್ಚಿನ ವೆಚ್ಚಗಳಿಗೆ ಪ್ರತಿಕ್ರಿಯೆಯಾಗಿ ಮಂಡಳಿಯು ಈ ಯೋಜನೆಯನ್ನು ಪರಿಚಯಿಸಿದೆ. ಇದು ಅನೇಕ ಬೆಳೆಗಾರರು ತಮ್ಮ ಕಾಫಿಯನ್ನು ಅಂತರರಾಷ್ಟ್ರೀಯ ಮಟ್ಟದಲ್ಲಿ ಪ್ರದರ್ಶಿಸಲು ಅಡ್ಡಿಯಾಗಿದೆ. ಅಂತಾರಾಷ್ಟ್ರೀಯ ಪ್ರಮಾಣೀಕರಣಕ್ಕಾಗಿ ಲಕ್ಷಗಟ್ಟಲೆ ರೂ. ವೆಚ್ಚ ಮಾಡಬೇಕಾದ ಕಾರಣದಿಂದ ಸುಮಾರು ಶೇ. 85 ರಷ್ಟು ಭಾರತೀಯ ಕಾಫಿ ಪ್ರಮಾಣೀಕರಿಸದೆ ಉಳಿದಿದೆ, ಪ್ರಮಾಣೀಕರಣವು ಈಗ ಉಚಿತವಾಗಿರುವುದರಿಂದ ಹೊಸ ಭಾರತೀಯ ಮಾನದಂಡಗಳು ಸ್ವಾಗತಾರ್ಹ ಪರಿಹಾರವಾಗಿ ಬರಲಿದ್ದು, ಇದು ಬೆಳೆಗಾರರಿಗೆ ಮಹತ್ವದ ಅವಕಾಶವನ್ನು ನೀಡುತ್ತದೆ.

ಈ ಕುರಿತು TNIE ಜೊತೆಗೆ ಮಾತನಾಡಿದ ಕಾಫಿ ಬೋರ್ಡ್ ಆಫ್ ಇಂಡಿಯಾದ ಕಾರ್ಯದರ್ಶಿ ಮತ್ತು ಸಿಇಒ ಡಾ.ಕೆ.ಜಿ.ಜಗದೀಶ, ಈ ಪ್ರಕ್ರಿಯೆಯು ಸದ್ಯ ಮೊದಲ ಹಂತದಲ್ಲಿದ್ದು, ಭಾರತೀಯ ಕಾಫಿಯನ್ನು ತನ್ನದೇ ಆದ ವಿಶಿಷ್ಟ ಗುರುತನ್ನು ಹೊಂದಿರುವ ವಿಶಿಷ್ಟ ಉತ್ಪನ್ನವಾಗಿ ಮಾಡುವ ಗುರಿ ಹೊಂದಲಾಗಿದೆ. ಇಲ್ಲಿಯವರೆಗೆ, ಹೆಚ್ಚಿನ ಕಾಫಿ ತಳಿಗಳು ಅಂತರರಾಷ್ಟ್ರೀಯ ಮಾನದಂಡಗಳ ಅಡಿಯಲ್ಲಿ ಪ್ರಮಾಣೀಕರಿಸಲ್ಪಟ್ಟಿವೆ, ಇದು ಎಲ್ಲಾ ರೀತಿಯ ಕಾಫಿಗಳನ್ನು ಒಂದೇ ಪರಿಸ್ಥಿತಿಗಳಲ್ಲಿ ಒಟ್ಟಿಗೆ ಸೇರಿಸುತ್ತದೆ. ಆದಾಗ್ಯೂ, ದೇಶದಲ್ಲಿ ಕಾಫಿಯನ್ನು ವಿಶೇಷ ಪರಿಸ್ಥಿತಿಗಳಲ್ಲಿ ಬೆಳೆಯಲಾಗುತ್ತದೆ. ಈ ಪ್ರಮಾಣೀಕರಣ ಪ್ರಕ್ರಿಯೆ ಭಾರತೀಯ ಕಾಫಿ ಎದ್ದು ಕಾಣಲು ಮತ್ತು ತನ್ನದೇ ಆದ ಜಾಗತಿಕ ಮನ್ನಣೆಯನ್ನು ಪಡೆಯಲು ಸಹಾಯ ಮಾಡುತ್ತದೆ ಎಂದು ತಿಳಿಸಿದರು.

ಅಂತಾರಾಷ್ಟ್ರೀಯ ಮಾನದಂಡಗಳ ಪ್ರಕಾರ ಐದು ಎಕರೆಯ ಸಣ್ಣ ಎಸ್ಟೇಟ್‌ಗೆ ಪ್ರಮಾಣೀಕರಣದ ವೆಚ್ಚವು 3-4 ಲಕ್ಷ ರೂಪಾಯಿಗಳವರೆಗೆ ಇರುತ್ತದೆ, ಆದರೆ ಮಂಡಳಿಯ ಪ್ರಮಾಣೀಕರಣವು ಶೂನ್ಯ ವೆಚ್ಚವಾಗಿರುತ್ತದೆ. ಬೆಳೆಗಾರರು ಕಟ್ಟುನಿಟ್ಟಾದ ಅವಶ್ಯಕತೆಗಳನ್ನು ಪೂರೈಸಬೇಕು. ಉದ್ಯಮದ ವೃತ್ತಿಪರರು ಪ್ರಸ್ತುತ ಅನುಷ್ಠಾನ ಮಾಡ್ಯೂಲ್‌ಗಳನ್ನು ರಚಿಸುತ್ತಿದ್ದಾರೆ, ಇದು ನಾಲ್ಕು ತಿಂಗಳಲ್ಲಿ ಪೂರ್ಣಗೊಳ್ಳಲಿದೆ. ಬಳಿಕ ಕಾರ್ಯವಿಧಾನಗಳು ಕಾರ್ಯಸಾಧ್ಯವೇ ಎಂಬುದನ್ನು ನಿರ್ಣಯಿಸಲು ತಾಂತ್ರಿಕ ತಂಡವು ಮಧ್ಯಸ್ಥಗಾರರು ಮತ್ತು ಹೊಸ ಬೆಳೆಗಾರರೊಂದಿಗೆ ಸಮಾಲೋಚನೆಗಳನ್ನು ನಡೆಸುತ್ತದೆ ಎಂದು ಡಾ ಜಗದೀಶ ಹೇಳಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT