ಬೆಂಗಳೂರು: ಕೋಟ್ಯಂತರ ರೂಪಾಯಿ ಮೌಲ್ಯದ ಚಿನ್ನಾಭರಣ ವಂಚನೆ ಪ್ರಕರಣದಲ್ಲಿ ಐಶ್ವರ್ಯಾ ಗೌಡ ಮತ್ತು ಅವರ ಪತಿ ಕೆ. ಎನ್. ಹರೀಶ್ ಅವರನ್ನು ಸೋಮವಾರ ಬೆಂಗಳೂರು ಪೊಲೀಸರು ಮತ್ತೆ ಬಂಧಿಸಿದ್ದಾರೆ.
ಶಿಲ್ಪಾ ಗೌಡ ಎಂಬುವವರಿಂದ 430 ಗ್ರಾಂ ಚಿನ್ನ ಪಡೆದಿದ್ದ ಐಶ್ವರ್ಯಾ ಗೌಡ, ಅದರ ಹಣ ನೀಡದೆ ವಂಚಿಸಿದ್ದರು. ಹಣ ಕೇಳಿದ ಶಿಲ್ಪಾ ಗೌಡ ಅವರಿಗೆ ಧಮ್ಕಿ ಹಾಕಿರುವ ಆಡಿಯೋ ಇಂದು ಬೆಳಗ್ಗೆ ವೈರಲ್ ಆಗಿತ್ತು.
ಇದೀಗ ಶಿಲ್ಪಾ ಗೌಡ ಅವರು ನೀಡಿದ ದೂರಿನನ್ವಯ ಐಶ್ವರ್ಯಾ ಗೌಡ ಮತ್ತು ಅವರ ಪತಿಯನ್ನು ಆರ್ ಆರ್ ನಗರ ಪೊಲೀಸರು ಬಂಧಿಸಿದ್ದಾರೆ.
ಚಿನ್ನದಂಗಡಿ ಮಾಲೀಕರಿಗೆ ವಂಚನೆ: ಐಶ್ವರ್ಯಾ ಗೌಡ -ಹರೀಶ್ ಗೆ ಜಾಮೀನು430 ಗ್ರಾಂ ಚಿನ್ನದ ಬೆಲೆ 3.50 ಕೋಟಿಯಾಗಿದ್ದು, ಹಣ ನೀಡದ ಐಶ್ವರ್ಯಾ ಗೌಡ ವಿರುದ್ಧ ಶಿಲ್ಪಾ ಗೌಡ ಅವರು ಆರ್ ಆರ್ ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಮಾಜಿ ಸಂಸದ ಡಿ ಕೆ ಸುರೇಶ್ ಅವರ ತಂಗಿ ಎಂದು ಹೇಳಿಕೊಂಡು ಕೋಟ್ಯಾಂತರ ರೂಪಾಯಿ ವಂಚನೆ ಮಾಡಿರುವ ಪ್ರಕರಣ ರಾಜ್ಯದಲ್ಲಿ ಸಾಕಷ್ಟು ಸದ್ದು ಮಾಡುತ್ತಿದ್ದೆ. ಐಶ್ವರ್ಯ ಗೌಡ ಅವರು 8.41 ಕೋಟಿ ರೂಪಾಯಿ ಮೌಲ್ಯದ ಚಿನ್ನ ಖರೀದಿಸಿ ವಂಚನೆ ಮಾಡಿದ್ದಾರೆ ಎಂದು ವಾರಾಹಿ ವರ್ಲ್ಡ್ ಆಫ್ ಗೋಲ್ಡ್ ಶಾಪ್ ಮಾಲೀಕರು ದೂರು ನೀಡಿದ್ದರು.
ಈ ದೂರಿನನ್ವಯ ಐಶ್ವರ್ಯಾ ಗೌಡ ಮತ್ತು ಪತಿ ಹರೀಶ್‌ನನ್ನು ಬಂಧಿಸಲಾಗಿತ್ತು. ಆದರೆ ಕೆಲದಿನಗಳ ಹಿಂದಷ್ಟೇ ಹೈಕೋರ್ಟ್ ಇವರಿಬ್ಬರಿಗೆ ಮಧ್ಯಂತರ ಜಾಮೀನು ನೀಡಿತ್ತು.