ಸಾಂದರ್ಭಿಕ ಚಿತ್ರ  
ರಾಜ್ಯ

HMPV ಎಂದರೇನು? ಲಕ್ಷಣಗಳೇನು, ಮುಂಜಾಗ್ರತೆ ಏನು?

ಇತ್ತೀಚಿನ ದಿನಗಳಲ್ಲಿ ಗೋಚರವಾಗಿರುವ ಹ್ಯೂಮನ್ ಮೆಟಾಪ್ನ್ಯೂಮೋವೈರಸ್ (HMPV), ಭಾರತದಲ್ಲಿ ಕೆಲವೇ ಕೆಲವು ಪ್ರಕರಣಗಳು ವರದಿಯಾಗಿದ್ದರೂ ಆತಂಕವನ್ನು ಉಂಟುಮಾಡುತ್ತಿದೆ. ಆತಂಕ ಹೆಚ್ಚಾದಂತೆ, ಈ ವೈರಸ್‌ನ ವಾಸ್ತವತೆಯನ್ನು ಅರ್ಥಮಾಡಿಕೊಳ್ಳುವುದು ಅತ್ಯಗತ್ಯ.

ಬೆಂಗಳೂರು: ದೇಶಾದ್ಯಂತ ಈಗ HMPVಯದ್ದೇ ಸದ್ದು. ಕೋವಿಡ್-19 ವೈರಸ್ ನ ಪ್ರಭಾವವನ್ನು ಈ ದೇಶದ ಎಲ್ಲಾ ನಾಗರಿಕರು ಅನುಭವಿಸಿದ್ದಾರೆ. ಹೀಗಾಗಿ ಭಯ, ಆತಂಕ ಹೆಚ್ಚಾಗಿಯೇ ಇದೆ. ಹೆಚ್ ಎಂಪಿವಿ ಕೋವಿಡ್-19 ನ ಮತ್ತೊಂದು ರೂಪಾಂತರವೇ, ಇನ್ನೂ ಹೆಚ್ಚಿನ ಕಾಳಜಿ ಅಗತ್ಯವಿದೆಯೇ ಎಂಬಿತ್ಯಾದಿ ಪ್ರಶ್ನೆಗಳು ಸಹಜವಾಗಿ ಉದ್ಭವಿಸುತ್ತದೆ.

ಇತ್ತೀಚಿನ ದಿನಗಳಲ್ಲಿ ಗೋಚರವಾಗಿರುವ ಹ್ಯೂಮನ್ ಮೆಟಾಪ್ನ್ಯೂಮೋವೈರಸ್ (HMPV), ಭಾರತದಲ್ಲಿ ಕೆಲವೇ ಕೆಲವು ಪ್ರಕರಣಗಳು ವರದಿಯಾಗಿದ್ದರೂ ಆತಂಕವನ್ನು ಉಂಟುಮಾಡುತ್ತಿದೆ. ಆತಂಕ ಹೆಚ್ಚಾದಂತೆ, ಈ ವೈರಸ್‌ನ ವಾಸ್ತವತೆಯನ್ನು ಅರ್ಥಮಾಡಿಕೊಳ್ಳುವುದು ಅತ್ಯಗತ್ಯ.

ಇಂದಿನ ಪರಿಸ್ಥಿತಿಯ ಬಗ್ಗೆ ಬೆಳಕು ಚೆಲ್ಲಲು, ಸಿಟಿ ಎಕ್ಸ್ ಪ್ರೆಸ್ ನ ಪ್ರತಿನಿಧಿಗಳು ವೈರಸ್ ಬಗ್ಗೆ ಒಳನೋಟಗಳು ಮತ್ತು ಪ್ರಾಯೋಗಿಕ ಸಲಹೆಗಳ ಕುರಿತು ತಜ್ಞರೊಂದಿಗೆ ಮಾತನಾಡಿದ್ದಾರೆ.

HMPV ಎಂದರೇನು, ಇದರ ಬಗ್ಗೆ ಇರುವ ಆತಂಕಗಳೇನು?

ಜನರು ಭಯಭೀತರಾಗುವುದು ಬೇಡ. ಇಲ್ಲಿಯವರೆಗೆ ಯಾವುದೇ ತೊಂದರೆಯಿಲ್ಲ. HMPV ವೈದ್ಯಕೀಯ ಸಮುದಾಯಕ್ಕೆ ಹೊಸದಲ್ಲ. ಇದು ವರ್ಷಗಳಿಂದಲೂ ಇದೆ. ಮಾಧ್ಯಮ ಮತ್ತು ಸಾರ್ವಜನಿಕರಿಗೆ ಹೊಸದಾಗಿರುವುದರಿಂದ ಈಗ ಹೆಚ್ಚು ಸುದ್ದಿಯಾಗುತ್ತಿದೆ ಎನ್ನುತ್ತಾರೆ ಹಿರಿಯ ವೈದ್ಯ, ಮಧುಮೇಹ ತಜ್ಞ ಮತ್ತು ಆಂತರಿಕ ಔಷಧ ತಜ್ಞ ಡಾ. ಜಗದೀಶ್ ಕುಮಾರ್ ವಿ,

ಈ ವೈರಸ್ ಇತರ ವೈರಲ್ ಜ್ವರಗಳಂತೆಯೇ ಇರುತ್ತದೆ. ಸಾಮಾನ್ಯವಾಗಿ ಶೀತವಾಗಿ ಮೂಗು ಸೋರುವಿಕೆ, ತಲೆನೋವು, ಜ್ವರ ಮತ್ತು ಒಣ ಕೆಮ್ಮಿನಂತಹ ಲಕ್ಷಣಗಳನ್ನು ಉಂಟುಮಾಡುತ್ತದೆ. ರೋಗಲಕ್ಷಣಗಳು ಸಾಮಾನ್ಯವಾಗಿ 5–7 ದಿನಗಳು ಅಥವಾ ಕೆಲವು ಸಂದರ್ಭಗಳಲ್ಲಿ 10 ದಿನಗಳವರೆಗೆ ಇರುತ್ತವೆ. ಅಪರೂಪಕ್ಕೆ, ಅಲರ್ಜಿ ಇರುವವರು ಎರಡು ವಾರಗಳವರೆಗೆ ರೋಗಲಕ್ಷಣಗಳನ್ನು ಅನುಭವಿಸಬಹುದು.

ಇಂತಹ ಲಕ್ಷಣಗಳು ಕಂಡುಬಂದರೆ ಹೆಚ್ಚಿನ ಆತಂಕ ಬೇಡ, ಆರೋಗ್ಯ ಸ್ಥಿರವಾಗಿದ್ದರೆ ಅನಗತ್ಯ ಪರೀಕ್ಷೆಗಳಿಗೆ ಹಣವನ್ನು ವ್ಯರ್ಥ ಮಾಡಬೇಡಿ. ವೈರಲ್ ಜ್ವರಗಳು ಬರುತ್ತವೆ ಮತ್ತು ಹೋಗುತ್ತವೆ, ಇದು ಕೂಡ ಹಾಗೆಯೇ. ಮಾಸ್ಕ್ ಧರಿಸುವುದು ಮತ್ತು ನೈರ್ಮಲ್ಯವನ್ನು ಕಾಪಾಡುವಂತಹ ಸರಳ ಕ್ರಮಗಳಿದ್ದರೆ ಸಾಕು.

HMPV ಉಸಿರಾಟದ ಸಿನ್ಸಿಟಿಯಲ್ ವೈರಸ್ (RSV) ಮತ್ತು ಮೆಟಾಪ್ನ್ಯೂಮೋವೈರಸ್‌ನಂತಹ ಉಸಿರಾಟದ ವೈರಸ್‌ಗಳಿಗೆ ಹೋಲುತ್ತದೆ ಎನ್ನುತ್ತಾರೆ ಡಾ ಕುಮಾರ್. ಇದಕ್ಕೆ ಯಾವುದೇ ನಿರ್ದಿಷ್ಟ ಚಿಕಿತ್ಸೆಯ ಅಗತ್ಯವಿಲ್ಲ.

HMPV vs COVID-19

ಈ ವೈರಸ್ ನ್ನು ಕೋವಿಡ್-19ಗೆ ಹೋಲಿಕೆಗಳು ಅನಿವಾರ್ಯವಾದರೂ, ಹೆಚ್ ಎಂಪಿವಿ ಮತ್ತು ಎಸ್ ಎಆರ್ ಎಸ್-ಕೋವ್-2 ಸಾಕಷ್ಟು ವ್ಯತ್ಯಾಸಗಳನ್ನು ಹೊಂದಿವೆ ಎಂದು ಡಾ. ರೆಡ್ಡಿ ವಿವರಿಸುತ್ತಾರೆ:

ತೀವ್ರತೆ: ಹೆಚ್ ಎಂಪಿವಿ ಸಾಮಾನ್ಯವಾಗಿ ಸೌಮ್ಯ ರೋಗಲಕ್ಷಣಗಳನ್ನು ಉಂಟುಮಾಡುತ್ತದೆ ಮತ್ತು ಕಡಿಮೆ ಸಾಂಕ್ರಾಮಿಕವಾಗಿದೆ.

ಜನಸಂಖ್ಯೆ: ಹೆಚ್ ಎಂಪಿವಿ ಪ್ರಾಥಮಿಕವಾಗಿ ಮಕ್ಕಳು ಮತ್ತು ವೃದ್ಧರ ಮೇಲೆ ಪರಿಣಾಮ ಬೀರುತ್ತದೆ, ಕೋವಿಡ್-19, ಎಲ್ಲಾ ವಯೋಮಾನದ ಜನರ ಮೇಲೆ ಪರಿಣಾಮ ಬೀರುತ್ತದೆ. ಮೂಲಭೂತ ನೈರ್ಮಲ್ಯವನ್ನು ಅಭ್ಯಾಸ ಮಾಡಿ, ಅನಗತ್ಯ ಭಯ ತಪ್ಪಿಸಿ.

ಮುನ್ನೆಚ್ಚರಿಕೆಗಳು

  • ಕೆಮ್ಮುವಾಗ ಅಥವಾ ಸೀನುವಾಗ ನಿಮ್ಮ ಬಾಯಿ ಮತ್ತು ಮೂಗನ್ನು ಕರವಸ್ತ್ರ ಅಥವಾ ಕೈಗಳಿಂದ ಮುಚ್ಚಿ.

  • ನಿಮ್ಮ ಕೈಗಳನ್ನು ನಿಯಮಿತವಾಗಿ ತೊಳೆಯುತ್ತಿರಿ.

  • ಜನಸಂದಣಿ ಇರುವಲ್ಲಿ ಸಂಚರಿಸಬೇಡಿ. ನಿಮಗೆ ಜ್ವರ, ಕೆಮ್ಮು ಅಥವಾ ಸೀನುವಿಕೆ ಇದ್ದರೆ ಮನೆಯಲ್ಲಿಯೇ ಇರಿ

  • ಸಾಕಷ್ಟು ನೀರು ಕುಡಿಯಿರಿ ಮತ್ತು ಪೌಷ್ಟಿಕ ಆಹಾರವನ್ನು ಸೇವಿಸಿ

  • ನಿರಂತರ ರೋಗಲಕ್ಷಣಗಳಿಗೆ ಸ್ವಯಂ-ಔಷಧಿ ಮಾಡುವುದನ್ನು ತಪ್ಪಿಸಿ - ನಿಖರವಾದ ರೋಗನಿರ್ಣಯ ಮತ್ತು ಚಿಕಿತ್ಸೆಗಾಗಿ ವೈದ್ಯರನ್ನು ಭೇಟಿ ಮಾಡಿ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಭ್ರಷ್ಟರಿಗೆ ಬೆಳ್ಳಂಬೆಳಗ್ಗೆ ಲೋಕಾಯುಕ್ತ ಶಾಕ್: ಏಕ ಕಾಲದಲ್ಲಿ ರಾಜ್ಯದ 10 ಕಡೆ ದಾಳಿ- ಪರಿಶೀಲನೆ

Kabaddi World Cup 2025: ಭಾರತದ ಸಿಂಹಿಣಿಯರ ಮುಡಿಗೇರಿದ ವಿಶ್ವಕಪ್‌ ಕಿರೀಟ, ಸತತ 2ನೇ ಬಾರಿಗೆ ಪ್ರಶಸ್ತಿ ಗೆದ್ದ ಭಾರತ

ಬ್ರಾಹ್ಮಣನೊಬ್ಬ ತನ್ನ ಮಗಳನ್ನು ನನ್ನ ಮಗನಿಗೆ ದಾನ ಮಾಡುವವರೆಗೆ ಮೀಸಲಾತಿ ಮುಂದುವರೆಯಲಿ: IAS ಅಧಿಕಾರಿ ವಿವಾದಾತ್ಮಕ ಹೇಳಿಕೆ

ಆಫ್ರಿಕಾದಲ್ಲಿ ಜ್ವಾಲಾಮುಖಿ ಸ್ಫೋಟ: ಭಾರತದತ್ತ ಬರುತ್ತಿರುವ ಬೂದಿ ಹೊಗೆ, ವಿಮಾನಗಳ ಹಾರಾಟಕ್ಕೆ ಅಡ್ಡಿ

ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ಫೈಟ್: ಮಲ್ಲಿಕಾರ್ಜುನ ಖರ್ಗೆಗೆ ಪ್ರಾಫಿಟ್; CM ಹುದ್ದೆ ನೀಡುವಂತೆ ಸೋನಿಯಾಗೆ ದಲಿತ ನಾಯಕರ ಪತ್ರ!

SCROLL FOR NEXT