ಸಂಗ್ರಹ ಚಿತ್ರ 
ರಾಜ್ಯ

ನಗರದಲ್ಲಿ ಫ್ಲೆಕ್ಸ್ ರಾಜಕಾರಣ: ಬೆಂಬಲಿಗರ ವಿರುದ್ಧ FIR ದಾಖಲು; ಪೊಲೀಸರ ವಿರುದ್ಧ BJP ನಾಯಕ ತೀವ್ರ ಕಿಡಿ

ಕಾಂಗ್ರೆಸ್ ಬೆಂಬಲಿಗರು ಹಾಕಿದ ಬೃಹತ್ ಪ್ರಮಾಣದ ಫ್ಲೆಕ್ಸ್‌ಗಳನ್ನು ಬಿಬಿಎಂಪಿ ತೆಗೆದುಹಾಕಿದೆ. ಆದರೆ, ಯಾವುದೇ ಕ್ರಮ ಕೈಗೊಂಡಿಲ್ಲ.

ಬೆಂಗಳೂರು: ನಗರದಲ್ಲಿ ಫ್ಲೆಕ್ಸ್ ವಾರ್ ಮತ್ತೆ ಶುರುವಾಗಿದೆ. ಫ್ಲೆಕ್ಸ್ ವಿಚಾರದಲ್ಲಿ ಬಿಬಿಎಂಪಿ ಹಾಗೂ ಪೊಲೀಸರು ತಾರತಮ್ಯ ಮಾಡುತ್ತಿದ್ದಾರೆಂದು ಶಾಂತಿನಗರ ವಿಧಾನಸಭಾ ಕ್ಷೇತ್ರದ ಬಿಜೆಪಿ ಮಾಜಿ ಅಭ್ಯರ್ಥಿ ಕೆ. ಶಿವಕುಮಾರ್ ಅವರು ಆರೋಪಿಸಿದ್ದಾರೆ.

ಕಾಂಗ್ರೆಸ್ ನಾಯಕರ ಬೆಂಬಲಿಗರು ಡಜನ್ಗಟ್ಟಲೆ ನಗರದಲ್ಲಿ ಫ್ಲೆಕ್ಸ್ ಗಳನ್ನು ಹಾಕುತ್ತಿದ್ದಾರೆ. ಆದರೆ, ಅವರ ವಿರುದ್ಧ ಯಾವುದೇ ಕ್ರಮಗಳಾಗುತ್ತಿಲ್ಲ. ಆದರೆ, ಮಂಗಳವಾರ ನನ್ನ ಬೆಂಬಲಿಗರು ಹಲಸೂರಿನಲ್ಲಿ ಫ್ಲೆಕ್ಸ್ ಹಾಕಿದ್ದಕ್ಕೆ ಅವರ ವಿರುದ್ಧ ಎಫ್ಐಆರ್ ದಾಖಲಾಗಿದೆ. ಅಧಿಕಾರಿಗಳು ಈ ನಡೆಯನ್ನು ಹೇಗೆ ಸಮರ್ಥಿಸಿಕೊಳ್ಳುತ್ತಾರೆ? ಎಂದು ಶಿವಕುಮಾರ್ ಅವರು ಕಿಡಿಕಾರಿದ್ದಾರೆ.

ಕಾಂಗ್ರೆಸ್ ಬೆಂಬಲಿಗರು ಹಾಕಿದ ಬೃಹತ್ ಪ್ರಮಾಣದ ಫ್ಲೆಕ್ಸ್‌ಗಳನ್ನು ಬಿಬಿಎಂಪಿ ತೆಗೆದುಹಾಕಿದೆ. ಆದರೆ, ಯಾವುದೇ ಕ್ರಮ ಕೈಗೊಂಡಿಲ್ಲ. ಇದೀಗ ಪಕ್ಷಪಾತ ಮಾಡಿದ ಸಹಾಯಕ ಕಂದಾಯ ಅಧಿಕಾರಿ ಮತ್ತು ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್‌ಗೆ ದಂಡ ವಿಧಿಸಬೇಕು ಇಲ್ಲವೇ ಅವರನ್ನು ಅಮಾನತುಗೊಳಿಸಬೇಕು ಎಂದು ಆಗ್ರಹಿಸಿದ್ದಾರೆ.

ಬೆಂಗಳೂರು ದಕ್ಷಿಣ ಸಂಸದ ತೇಜಸ್ವಿ ಸೂರ್ಯ ಅವರು ಪ್ರತಿಕ್ರಿಯೆ ನೀಡಿ, ಫ್ಲೆಕ್ಸ್ ಹಾಗೂ ಬ್ಯಾನರ್ ಗಳು ನಗರದ ಅಂದವನ್ನು ಹಾಳು ಮಾಡುತ್ತದೆ. ವೈಯಕ್ತಿಕವಾಗಿ ಈ ಫ್ಲೆಕ್ಸ್-ಬ್ಯಾನರ್ ಗಳನ್ನು ನಾವು ವಿರೋಧಿಸುತ್ತೇನೆ. ಇವುಗಳು ನಗರದ ಸುಂದರತೆಯನ್ನು ಹಾಳು ಮಾಡುವುದಲ್ಲದೆ, ಪ್ಲಾಸ್ಟಿಕ್ ತ್ಯಾಜ್ಯ ಹೆಚ್ಚಳಕ್ಕೆ ಕಾರಣವಾಗುತ್ತವೆ ಎಂದು ಹೇಳಿದ್ದಾರೆ.

ಬಿಜೆಪಿ ಎಂಎಲ್‌ಸಿ ರವಿಕುಮಾರ್ ಅವರು ಮಾತನಾಡಿ, ಸರ್ಕಾರ ಎರಡು ರೀತಿಯ ನಿಯಮವನ್ನು ಹೇಗೆ ಹೇರುತ್ತದೆ ಎಂದು ಪ್ರಶ್ನಿಸಿದ್ದಾರೆ.

ಈ ನಡುವೆ ಶಿವಕುಮಾರ್ ಅವರ ಬೆಂಬಲಿಗರು ಮೇಯೊ ಹಾಲ್‌ನಲ್ಲಿ ಪ್ರತಿಭಟನೆ ನಡೆಸಿ, ನ್ಯಾಯಕ್ಕಾಗಿ ಆಗ್ರಹಿಸಿದರು. ಈ ಬೆಳವಣಿಗೆ ಸೂಕ್ಷ್ಮತೆಯನ್ನು ಅರಿತ ಬಿಬಿಎಂಪಿ ಆಯುಕ್ತ ತುಷಾರ್ ಗಿರಿನಾಥ್ ಅವರು, ಮಧ್ಯಪ್ರವೇಶಿಸಿ ಫ್ಲೆಕ್ಸ್‌, ಪೋಸ್ಟರ್‌ ಮತ್ತು ಬ್ಯಾನರ್‌ಗಳಿಗೆ ಅನುಮೋದನೆ ನೀಡುವ ವಿಷಯಕ್ಕೆ ಬಂದಾಗ ರಾಜಕೀಯ ಪಕ್ಷಗಳನ್ನು ಸಮಾನವಾಗಿ ಪರಿಗಣಿಸಲಾಗುವುದು ಎಂದು ಭರವಸೆ ನೀಡಿದರು.

ಫ್ಲೆಕ್ಸ್, ಬ್ಯಾನರ್ ಅಳವಡಿಸುವುದನ್ನು ನಿಷೇಧಿಸಿ ಎಂದು ಹೈಕೋರ್ಟ್ ಹಿಂದೆ ಆದೇಶ ಹೊರಡಿಸಿತ್ತು. ಬಿಬಿಎಂಪಿ ಕಾಯ್ದೆ 2020, ಬಿಬಿಎಂಪಿ ಹೊರಾಂಗಣ ಜಾಹೀರಾತು ಮತ್ತು ಸಾರ್ವಜನಿಕ ಸಂದೇಶ ಉಪ ವಿಧಿಗಳು 2018 ಹಾಗೂ ಕರ್ನಾಟಕ ಮುಕ್ತ ಸ್ಥಳಗಳ (ವಿರೂಪಗೊಳಿಸುವಿಕೆ) ತಡೆ ಕಾಯ್ದೆ 1981 ಅನುಸಾರ ಅನಗತ್ಯ ಬ್ಯಾನರ್ ಅಳವಡಿಸುವವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಹೇಳಿತ್ತು. ಬಿಬಿಎಂಪಿ ಮಾರ್ಷಲ್ಸ್, ಕಂದಾಯ ಮೌಲ್ಯಮಾಪಕರು, ನಿರೀಕ್ಷಕರು, ಸಹಾಯಕರು, ಕಿರಿಯ ಎಂಜಿನಿಯರ್‌ಗಳಿಗೆ ನಗರದಲ್ಲಿರುವ ಫ್ಲೆಕ್ಸ್ ಅಳವಡಿಸಿರುವುದರ ಕುರಿತು ಸರ್ವೆ ನಡೆಸಿ, ಎಫ್‌ಐಆರ್ ದಾಖಲಿಸಿ, ಫ್ಲೆಕ್ಸ್ ತೆರವುಗೊಳಿಸಲು ವೆಚ್ಚವಾಗುವ ಹಣವನ್ನು ಅವರಿಂದಲೇ ವಸೂಲಿ ಮಾಡಬೇಕೆಂದು ಪಾಲಿಕೆಗೆ ಹೈಕೋರ್ಟ್ ಸೂಚನೆ ನೀಡಿತ್ತು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

Asia Cup 20225: Operation Sindoor ಬಳಿಕ ಪಾಕಿಸ್ತಾನಕ್ಕೆ ಮತ್ತೆ ಸೋಲಿನ ರುಚಿ ತೋರಿಸಿದ ಭಾರತ!

ಭಾರತಕ್ಕೆ ಕಷ್ಟದ ದಿನಗಳು ಶುರು: 1.4 ಬಿಲಿಯನ್ ಜನರಿದ್ದರೂ ನಮ್ಮಿಂದ ಜೋಳ ಖರೀದಿಸಲ್ಲ; ಮತ್ತೆ ಕೆಂಡಕಾರಿದ ಅಮೆರಿಕ ಸಚಿವ ಲುಟ್ನಿಕ್!

2025 ಮಹಿಳಾ ಹಾಕಿ ಏಷ್ಯಾ ಕಪ್‌: ಚೀನಾ ವಿರುದ್ಧ ಸೋತ ಭಾರತ ಬೆಳ್ಳಿಗೆ ತೃಪ್ತಿ; ಪ್ರಧಾನಿ ಮೋದಿ ಅಭಿನಂದನೆ!

ಹಣಕ್ಕಾಗಿ ರಾಷ್ಟ್ರೀಯತೆ ಬಲಿ: ಭಾರತ-ಪಾಕಿಸ್ತಾನ ಏಷ್ಯಾ ಕಪ್ ಪಂದ್ಯಕ್ಕೆ BJP ವಿರುದ್ಧ ವಿರೋಧ ಪಕ್ಷಗಳ ಆಕ್ರೋಶ!

ಉತ್ತರ ಪ್ರದೇಶ: ಲಾಠಿ ಚಾರ್ಜ್ ನಲ್ಲಿ ಬಿಜೆಪಿ ಕಾರ್ಯಕರ್ತನ ಸಾವು; ತನಿಖೆಗೆ ಎಸ್‌ಐಟಿ

SCROLL FOR NEXT