ಫಲವಂತಿಕೆ ಕೇಂದ್ರದ ಉದ್ಘಾಟನೆ 
ರಾಜ್ಯ

ಸಂತಾನ ಭಾಗ್ಯಕ್ಕಾಗಿ ಸ್ಪರ್ಶ್ ಹಾಸ್ಪಿಟಲ್ಸ್ ಅತ್ಯಾಧುನಿಕ ಫಲವಂತಿಕೆ ರಕ್ಷಾ ಕೇಂದ್ರ ಆರಂಭ

ಐವಿಎಫ್ ಕೇಂದ್ರವು ಸುಧಾರಿತ ಭ್ರೂಣಶಾಸ್ತ್ರ ಪ್ರಯೋಗಾಲಯಗಳು ಮತ್ತು ಎಐ-ನೆರವಿನ ಭ್ರೂಣ ಆಯ್ಕೆ ಸೇರಿದಂತೆ ಇತ್ತೀಚಿನ ತಂತ್ರಜ್ಞಾನವನ್ನು ಹೊಂದಿದೆ.

ಅತ್ಯಾಧುನಿಕ ಆರೋಗ್ಯ ಸೇವೆಗಳನ್ನು ಒದಗಿಸುವಲ್ಲಿ ಸ್ಪರ್ಶ್ ಆಸ್ಪತ್ರೆ ಮುಂಚೂಣಿಯಲ್ಲಿದೆ. ಇದೀಗ ಬೆಂಗಳೂರಿನ ಆರ್ ಆರ್ ನಗರದಲ್ಲಿರುವ ಎಸ್ಎಸ್ ಆಸ್ಪತ್ರೆಯಲ್ಲಿ ಅತ್ಯಾಧುನಿಕ ಫರ್ಟಿಲಿಟಿ ರಕ್ಷಾ ಕೇಂದ್ರವನ್ನು ಆರಂಭಿಸಿದೆ.

ಆರೋಗ್ಯ ರಕ್ಷಣೆಯಲ್ಲಿ ಬದ್ಧತೆ, ಅರ್ಪಣೆ ಮತ್ತು ಅತ್ಯಾಧುನಿಕ ಸೌಲಭ್ಯಗಳ ಸಂಗಮ ಸ್ಥಾನದಂತಿರುವ ಸ್ಪರ್ಶ್ ಸಂತಾನಹೀನತೆಯನ್ನು ನಿವಾರಿಸಿ ಮಕ್ಕಳಿದ್ದರೆ ಸ್ವರ್ಗ ಎಂಬ ಭಾರತೀಯ ಮನೋಭಾವವನ್ನು ಸಾಕಾರಗೊಳಿಸಲು ಈ ಫಲವಂತಿಕೆ ಕೇಂದ್ರವನ್ನುಆರಂಭಿಸಿದೆ. ಇದರಲ್ಲಿ ತಜ್ಞವೈದ್ಯರು, ಸಂತಾನೋತ್ಪತ್ತಿ ಪ್ರಕ್ರಿಯೆಗಳಲ್ಲಿ ಅಪೂರ್ವ ಪರಿಣತಿ ಪಡೆದಿರುವ ತಂಡ ನಿಮ್ಮ ಮಡಿಲು ತುಂಬುತ್ತದೆ.

ಈ ಫಲವಂತಿಕೆ ಕೇಂದ್ರದ ಉದ್ಘಾಟನೆಯನ್ನು ಸ್ಪರ್ಶ್ ಗ್ರೂಪ್ ಆಫ್ ಹಾಸ್ಪಿಟಲ್ಸ್ ನ ಅಧ್ಯಕ್ಷ ಮತ್ತು ಮುಖ್ಯ ಮೂಳೆ ಶಸ್ತ್ರಚಿಕಿತ್ಸಕ ಡಾ. ಶರಣ್ ಶಿವರಾಜ್ ಪಾಟೀಲ್ ರವರು ನೆರವೇರಿಸಿದರು.

“ಈ ಅತ್ಯಾಧುನಿಕ ಕೇಂದ್ರವು ಸುಧಾರಿತ ಚಿಕಿತ್ಸೆಯಿಂದ ಅಸಾಂಖ್ಯಾತ ಕುಟುಂಬಗಳ ಕುಡಿ ಕನಸನ್ನು ಚಿಗುರೊಡೆಸುತ್ತದೆ. ತಜ್ಞವೈದ್ಯರ ತಂಡ ದಂಪತಿಗೆ ಪಿತೃ ಮತ್ತು ಮಾತೃ ಪಾತ್ರವನ್ನು ನಲುಮೆಯಿಂದ ನೀಡುತ್ತದೆ. ಸಹಜವಾಗಿಯೇ ಪೋಷಕತ್ವವನ್ನು ಪ್ರದಾನಮಾಡುತ್ತದೆ. ಜಾಗತಿಕ ಮಟ್ಟದ ರಕ್ಷೆಯನ್ನು ಒದಗಿಸಬೇಕು ಎಂಬುದು ನಮ್ಮ ಗುರಿಯಾಗಿದೆ. ಸ್ಪರ್ಶ್ ಆಸ್ಪತ್ರೆಗಳು ಆರೋಗ್ಯ ಉತ್ಕೃಷ್ಟತೆಯ ದಾರಿದೀಪವಾಗಬೇಕೆಂದು ನಾವು ಬಯಸುತ್ತೇವೆ,’’ ಎಂದು ಹೇಳಿದರು.

ಐವಿಎಫ್ ಕೇಂದ್ರವು ಸುಧಾರಿತ ಭ್ರೂಣಶಾಸ್ತ್ರ ಪ್ರಯೋಗಾಲಯಗಳು ಮತ್ತು ಎಐ-ನೆರವಿನ ಭ್ರೂಣ ಆಯ್ಕೆ ಸೇರಿದಂತೆ ಇತ್ತೀಚಿನ ತಂತ್ರಜ್ಞಾನವನ್ನು ಹೊಂದಿದೆ.

ಸ್ಪರ್ಶ್ ಹಾಸ್ಪಿಟಲ್ಸ್ ಗ್ರೂಪ್ ಸಿಒಒ ಜೋಸೆಫ್ ಪಸಂಗಾ ಮಾತನಾಡಿ, "ನಮ್ಮ ಪರಿಣತಿ, ಕೌಶಲ ಮತ್ತು ಅತ್ಯಾಧುನಿಕ ಸೌಲಭ್ಯಗಳ ಒತ್ತಾಸೆಯಿಂದ ಸಂತಾನ ಭಾಗ್ಯದ ಸವಾಲುಗಳನ್ನು ಎದುರಿಸುತ್ತಿರುವ ದಂಪತಿಗಳಿಗೆ ವಿಶ್ವದರ್ಜೆಯ ಚಿಕಿತ್ಸೆಯ ಆಯ್ಕೆಗಳನ್ನು ಖಚಿತಪಡಿಸುತ್ತೇವೆ.. ತಾಯಿ ಮತ್ತು ಮಗುವಿನ ಆರೋಗ್ಯವು ರಾಷ್ಟ್ರದ ಅಭಿವೃದ್ಧಿಯೊಂದಿಗೆ ನಂಟನ್ನು ಹೊಂದಿದೆ. ಆದ್ದರಿಂದ ಈ ಕ್ರಮವು ಆರೋಗ್ಯಕರ ಶಿಶುಗಳು ಮತ್ತು ಆರೋಗ್ಯಕರ ಭಾರತವನ್ನು ಖಚಿತಪಡಿಸುತ್ತದೆ" ಎಂದು ಹೇಳಿದರು.

ಮುಖ್ಯಅತಿಥಿಯಾಗಿದ್ದ ನಟಿ ಹರ್ಷಿಕಾ ಪೂಣಚ್ಚ ಮಾತನಾಡಿ, "ಫಲವಂತಿಕೆ ಆರೈಕೆ ಕ್ಷೇತ್ರದಲ್ಲಿ ಅತ್ಯಾಧುನಿಕ ಸೌಲಭ್ಯದ ಮೂಲಕ ಸಂತಾನ ಭಾಗ್ಯವನ್ನು ಖಾತ್ರಿಗೊಳಿಸುವ ಸ್ಪರ್ಶ್ ಆಸ್ಪತ್ರೆಯ ಈ ಉಪಕ್ರಮದಲ್ಲಿ ಪಾಲ್ಗೊಳ್ಳುವುದು ದೊಡ್ಡ ಗೌರವ ಎಂದು ಭಾವಿಸುವೆ. ತಾಯ್ತನ ನೀಡುವ ಧನ್ಯತೆ, ಸಂತಸಕ್ಕೆ ಬದಲಿಯೇ ಇಲ್ಲ. ಇದು ಎಲ್ಲ ವಿವಾಹಿತೆಯರ ಕನಸು. ಈ ಕೇಂದ್ರ ಭರವಸೆಯ ಕೇಂದ್ರ, ಅಗಾಧ ಸಂಖ್ಯೆಯ ದಂಪತಿಗಳ ಕನಸು ನನಸಾಗಿಸುವ ತಾಣ. ದಂಪತಿಗಳ ಕನಸು ನನಸಾಗುವ ಕೇಂದ್ರವಿದು ಎಂದು ಬಣ್ಣಿಸಿದರು.

ನಟಿ ಹರ್ಷಿಕಾ ಪೂಣಚ್ಚ

ಸಂತಾನ ಭಾಗ್ಯಕ್ಕಾಗಿ ದೊಡ್ಡ ರಕ್ಷೆ ನೀಡುವ ಭಾಗವಾಗಿ ನಾವು ಸ್ಪರ್ಶ್ ನ ಶ್ರೇಷ್ಠತೆಯ ಪರಂಪರೆಯನ್ನು ನಾವು ಮುಂದುವರಿಸುತ್ತೇವೆ. ಈ ಹೊಸ ಸೌಲಭ್ಯದೊಂದಿಗೆ, ಆಸ್ಪತ್ರೆಯು ಜೀವನವನ್ನು ಸ್ಪರ್ಶಿಸುವ ಮತ್ತು ಕನಸುಗಳಿಗೆ ಜೀವ ನೀಡುವ ಬದ್ಧತೆಯನ್ನು ಸಾಕ್ಷೀಕರಿಸುತ್ತದೆ ಎಂದು ಆರ್ ಆರ್ ನಗರದ ಎಸ್ಎಸ್ ಸ್ಪರ್ಶ್ ಆಸ್ಪತ್ರೆಯ ಸಿಒಒ ಶ್ರೀ ಸುಧೀಂದ್ರ ಜಿ ಭಟ್ ಹೇಳಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

'ಪಾಕಿಸ್ತಾನದೊಂದಿಗೆ ಯುದ್ಧ ನಿಲ್ಲಿಸಲು ಟ್ರಂಪ್ 24 ಗಂಟೆ ಕಾಲಾವಕಾಶ ನೀಡಿದ್ದರು, ಮೋದಿ ಕೇವಲ 5 ಗಂಟೆಗಳಲ್ಲಿ ಪಾಲಿಸಿದರು': ರಾಹುಲ್ ಗಾಂಧಿ

Dharmasthala: Mahesh Shetty Thimarodi ಮನೆ ಮಹಜರು, ಪತ್ನಿ-ಮಕ್ಕಳ ಮೊಬೈಲ್ ವಶಕ್ಕೆ, 3 ತಲ್ವಾರ್ ಕೂಡ ಪತ್ತೆ!

ಕಟ್ಟಡ ಕುಸಿತಕ್ಕೂ ಕೆಲವೇ ಕ್ಷಣಗಳ ಮುನ್ನ 22 CRPF ಸೈನಿಕರ ರಕ್ಷಣೆ; Indian Army ಹೆಲಿಕಾಪ್ಟರ್ ರೋಚಕ ಕಾರ್ಯಾಚರಣೆ! Video

ಡಿ ಕೆ ಶಿವಕುಮಾರ್ ಹಿಂದೂ ಜನರ ಭಾವನೆಗಳಿಗೆ ನೋವುಂಟುಮಾಡಿದ್ದು ಕ್ಷಮೆಯಾಚಿಸಬೇಕು: ಶೋಭಾ ಕರಂದ್ಲಾಜೆ

Tamil Nadu: ನಟ-ರಾಜಕಾರಣಿ ದಳಪತಿ ವಿಜಯ್ ಬೌನ್ಸರ್ ಗಳಿಂದ ವ್ಯಕ್ತಿಯ ಮೇಲೆ ಹಲ್ಲೆ ಆರೋಪ! ಕೇಸ್ ದಾಖಲು, ವಿಡಿಯೋದಲ್ಲಿ ಏನಿದೆ?

SCROLL FOR NEXT