ಸಾಂದರ್ಭಿಕ ಚಿತ್ರ 
ರಾಜ್ಯ

ಮದ್ಯ ಪ್ರಿಯರಿಗೆ ಶಾಕ್: ರಾಜ್ಯದಲ್ಲಿ ಮತ್ತೆ ಬಿಯರ್ ಬೆಲೆ ಏರಿಕೆ; ಸಕ್ಕರೆ ಅಂಶ ಕಡಿಮೆ ಮಾಡಲು ಬ್ರೂವರೀಸ್‌ಗಳಿಗೆ ಸೂಚನೆ!

ಇನ್ನು ಮುಂದೆ ಎಲ್ಲಾ ಬ್ರೂವರೀಸ್‌ಗಳು ಬಿಯರ್‌ ತಯಾರಿಕೆಗೆ ಬಳಸುವ ಅಂಶಗಳನ್ನು ಕಡ್ಡಾಯವಾಗಿ ಘೋಷಿಸಬೇಕಾಗುತ್ತದೆ.

ಬೆಂಗಳೂರು: ರಾಜ್ಯದಲ್ಲಿ ಬಿಯರ್ ಬೆಲೆಗಳನ್ನು ಪರಿಷ್ಕರಿಸಲಾಗಿದೆ. ಸೋಮವಾರದಿಂದಲೇ ಪರಿಷ್ಕೃತ ಬೆಲೆಗಳು ಸೋಮವಾರದಿಂದ ಜಾರಿಗೆ ಬಂದಿವೆ. ಬಿಯರ್ ಮೇಲಿನ ಸುಂಕ ಹೆಚ್ಚಳದ ಕುರಿತು ರಾಜ್ಯ ಸರ್ಕಾರ ಆಗಸ್ಟ್ 23, 2024 ರಂದು ಕರಡು ಅಧಿಸೂಚನೆಯನ್ನು ಹೊರಡಿಸಿತು. ಇದರ ಕುರಿತು ಅಂತಿಮ ಅಧಿಸೂಚನೆಯನ್ನು ಜನವರಿ 8 ರಂದು ಹೊರಡಿಸಲಾಗಿತ್ತು.

ಇನ್ನು ಮುಂದೆ ಬಿಯರ್ ಬೆಲೆಗಳು ಆಲ್ಕೋಹಾಲ್ ಅಂಶವನ್ನು ಅವಲಂಬಿಸಿರುತ್ತದೆ. ಆಲ್ಕೋಹಾಲ್ ಅಂಶವನ್ನು ಅವಲಂಬಿಸಿ ಇದನ್ನು ಎರಡು ಸ್ಲ್ಯಾಬ್‌ಗಳಾಗಿ ವರ್ಗೀಕರಿಸಲಾಗಿದೆ. ಅಲ್ಕೋಹಾಲ್ ಅಂಶ ಶೇ.5ಕ್ಕಿಂತ ಕಡಿಮೆ ಇರುವ ಅಥವಾ ಅದಕ್ಕೆ ಸಮಾನವಾಗಿರುವ ಮೈಲ್ಡ್ ಬಿಯರ್ ಬೆಲೆಯನ್ನು ಪ್ರತಿ ಬಲ್ಕ್ ಲೀಟರ್ (pbl) ಗೆ 12 ರೂ ಮತ್ತು ಶೇ 5-8 ರಷ್ಟು ಆಲ್ಕೋಹಾಲ್ ಹೊಂದಿರುವ ಸ್ಟ್ರಾಂಗ್ ಬಿಯರ್‌ಗಳಿಗೆ ರೂ. 20 (Pbl) ಎಂದು ನಿಗದಿಪಡಿಸಲಾಗಿದೆ.

ಈ ಹಿಂದೆ ಆಲ್ಕೋಹಾಲ್ ಅಂಶವನ್ನು ಲೆಕ್ಕಿಸದೆ ಎಲ್ಲಾ ಬಿಯರ್ ಮೇಲಿನ ಅಬಕಾರಿ ಸುಂಕ ರೂ. 10 pbl ಆಗಿತ್ತು. ಎಲ್ಲಾ ಸ್ಟ್ರಾಂಗ್ ಬಿಯರ್‌ಗಳ ಕನಿಷ್ಠ ಬೆಲೆ ರೂ. 145 ರೂ.ಗಿಂತ ಕಡಿಮೆ ಇರುವುದಿಲ್ಲ. ರೂ. 100 ಗೆ ಸಿಗುತ್ತಿದ್ದ Legend beer ಬೆಲೆ ಈಗ ರೂ.145 ಆಗಿದೆ.

ಸಕ್ಕರೆ ಬಳಕೆ ಅಥವಾ ಬಳಸದೆ ಮಾಲ್ಟ್ ಅಥವಾ ಧಾನ್ಯದಿಂದ ಹುದುಗಿಸಿದ ಮದ್ಯವನ್ನು ತಯಾರಿಸಬೇಕು. ಸಕ್ಕರೆ ಪ್ರಮಾಣ ಶೇ.25ಕ್ಕಿಂತ ಹೆಚ್ಚಿರಬಾರದು ಎಂಬುದನ್ನು ಖಾತ್ರಿಪಡಿಸಿಕೊಳ್ಳಬೇಕು ಎಂದು ಬ್ರೂವರೀಸ್‌ಗಳಿಗೆ ಸರ್ಕಾರ ಸೂಚನೆ ನೀಡಿದೆ. ಇನ್ನು ಮುಂದೆ ಎಲ್ಲಾ ಬ್ರೂವರೀಸ್‌ಗಳು ಬಿಯರ್‌ ತಯಾರಿಕೆಗೆ ಬಳಸುವ ಅಂಶಗಳನ್ನು ಕಡ್ಡಾಯವಾಗಿ ಘೋಷಿಸಬೇಕಾಗುತ್ತದೆ.

ಸಕ್ಕರೆ ಅಂಶ ಶೂನ್ಯವಾಗಿರಬಹುದು ಆದರೆ ಶೇ.25ಕ್ಕಿಂತ ಹೆಚ್ಚು ಇರಬಾರದು. ಹೊಸ ದರಗಳು ಸೋಮವಾರದಿಂದ ಜಾರಿಗೆ ಬಂದಿವೆ. ಹೊಸ ಲೇಬಲ್‌ಗಳಿಗಾಗಿ ಬ್ರೂವರೀಸ್‌ಗಳಿಗೆ ಅಬಕಾರಿ ಇಲಾಖೆ ಫೆಬ್ರವರಿ 1 ರವರೆಗೆ ಸಮಯ ನೀಡಿದೆ ಎಂದು ಮೂಲಗಳು ತಿಳಿಸಿವೆ.

ಯುವಕರು ಸಾಮಾನ್ಯವಾಗಿ ಬಿಯರ್‌ನಿಂದ ಪ್ರಾರಂಭವಾಗುವ ಮದ್ಯಪಾನಕ್ಕೆ ಧುಮುಕುವುದನ್ನು ನಿರ್ಬಂಧಿಸುವುದು ದರ ಏರಿಕೆಗೆ ಪ್ರಮುಖ ಕಾರಣವಾಗಿದೆ. ರಾಜ್ಯದಲ್ಲಿ ಒಟ್ಟು ಬಿಯರ್ ಮಾರಾಟದಲ್ಲಿ ಸ್ಟ್ರಾಂಗ್ ಬಿಯರ್ ಗಳು ಶೇ. 75 ರಷ್ಟು ಮಾರಾಟವಾಗುತ್ತಿವೆ. ಅವುಗಳಲ್ಲಿ ಕೆಲವು ಮಾಲ್ಟ್ ಬದಲಿಗೆ ಹೆಚ್ಚಿನ ಸಕ್ಕರೆ ಅಂಶ ಹೊಂದಿದ್ದು, ಇದು ಆರೋಗ್ಯಕ್ಕೆ ಹಾನಿಕಾರಕವಾಗಿದೆ ಎಂದು ಮೂಲಗಳು ತಿಳಿಸಿವೆ. ಕಾಂಗ್ರೆಸ್ ಸರ್ಕಾರ ರಾಜ್ಯದಲ್ಲಿ ಜುಲೈ 2023 ರಂದು ಅಧಿಕಾರಕ್ಕೆ ಬಂದ ನಂತರ ಮೂರನೇ ಬಾರಿಗೆ ಮದ್ಯ ದರವನ್ನು ಏರಿಕೆ ಮಾಡಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಭಾರತದ ಮೇಲೆ ಶೇ.50 ರಷ್ಟು ಸುಂಕ ನಾಳೆ ಜಾರಿ: ಕರಡು ಸೂಚನೆ ಹೊರಡಿಸಿದ ಅಮೆರಿಕ

ಧರ್ಮಸ್ಥಳ ಬುರುಡೆ ಕೇಸು: ಮಹೇಶ್ ತಿಮರೋಡಿ ನಿವಾಸದಲ್ಲಿ ಆರೋಪಿ ಚಿನ್ನಯ್ಯನ ಮೊಬೈಲ್ ಪತ್ತೆ

Gaza Hospital Strike: ಹಮಾಸ್ ಸೋಲಿಸುವುದಷ್ಟೇ ನಮ್ಮ ಗುರಿ, ನಾಗರೀಕರನ್ನು ಗೌರವಿಸುತ್ತೇವೆ; ದಾಳಿ ಕುರಿತು ಮೊದಲ ಬಾರಿಗೆ ಇಸ್ರೇಲ್ ವಿಷಾದ

ವಿಧಾನಪರಿಷತ್'ಗೆ ನಾಮನಿರ್ದೇಶನ: ನಾಲ್ವರು MLC ಅಭ್ಯರ್ಥಿಗಳು ಹೆಸರು ಬದಲು, ಪಟ್ಟಿಯಲ್ಲಿ TNIE ಮೈಸೂರು ವಿಭಾಗದ ಮುಖ್ಯಸ್ಥನಿಗೆ ಸ್ಥಾನ

ಬಾನು ಮುಷ್ತಾಕ್‌ ದಸರಾ ಉದ್ಘಾಟನೆಗೆ ಆಕ್ಷೇಪ; ಮುಸ್ಲಿಂ ದ್ವೇಷ ಮನಸ್ಥಿತಿಯನ್ನು ಬದಿಗಿಟ್ಟು, ಸಂವಿಧಾನದ ಆಶಯ ಅರ್ಥ ಮಾಡಿಕೊಳ್ಳಿ: ಸಚಿವ ಹೆಚ್.ಸಿ.ಮಹದೇವಪ್ಪ

SCROLL FOR NEXT