ಹೈಕೋರ್ಟ್ ನ್ಯಾಯಾಧೀಶರಾದ ವಿ. ಶ್ರೀಶಾನಂದ ಮತ್ತು ಕೃಷ್ಣ ಎಸ್ ದೀಕ್ಷಿತ್ ಅವರ ಸಾಂದರ್ಭಿಕ ಚಿತ್ರ 
ರಾಜ್ಯ

ಸಂವಿಧಾನ ಕರಡು ರಚನೆಯಲ್ಲಿ ಬ್ರಾಹ್ಮಣರು ಮಹತ್ವದ ಕೊಡುಗೆ; ಅಂಬೇಡ್ಕರ್ ಅವರೇ ಹೇಳಿದ್ದರು: ನ್ಯಾ. ಕೃಷ್ಣ ಎಸ್ ದೀಕ್ಷಿತ್

ಸಂವಿಧಾನದ ಕರಡು ರಚನೆಯಲ್ಲಿ ಸಮಿತಿಯಲ್ಲಿದ್ದ ಏಳು ಸದಸ್ಯರಲ್ಲಿ ಮೂವರು - ಅಲ್ಲಾಡಿ ಕೃಷ್ಣಸ್ವಾಮಿ ಅಯ್ಯಂಗಾರ್, ಎನ್. ಗೋಪಾಲಸ್ವಾಮಿ ಅಯ್ಯಂಗಾರ್ ಮತ್ತು ಬಿ. ಎನ್. ರಾವ್ - ಬ್ರಾಹ್ಮಣರಾಗಿದ್ದರು..

ಬೆಂಗಳೂರು: ಭಾರತೀಯ ಸಂವಿಧಾನ ರಚನೆಯಲ್ಲಿ ಬ್ರಾಹ್ಮಣರು ಮಹತ್ವದ ಕೊಡುಗೆ ನೀಡಿದ್ದಾರೆ ಎಂದು ಅಂಬೇಡ್ಕರ್ ಅವರೇ ಹೇಳಿದ್ದರು ಎಂದು ಕರ್ನಾಟಕ ಹೈಕೋರ್ಟ್ ನ್ಯಾಯಾಧೀಶ ನ್ಯಾಯಮೂರ್ತಿ ಕೃಷ್ಣ ಎಸ್ ದೀಕ್ಷಿತ್ ತಿಳಿಸಿದರು.

ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ಸುವರ್ಣ ಮಹೋತ್ಸವದ ಅಂಗವಾಗಿ ಜನವರಿ 18-19 ರಂದು ನಡೆದ ಎರಡು ದಿನಗಳ ಬ್ರಾಹ್ಮಣ ಸಮಾವೇಶದಲ್ಲಿ ಮಾತನಾಡಿದ ನ್ಯಾಯಾಧೀಶರು, "ಬಿ. ಎನ್. ರಾವ್ ಅವರು ಸಂವಿಧಾನದ ಕರಡನ್ನು ಸಿದ್ಧಪಡಿಸದಿದ್ದರೆ, ಅದನ್ನು ರೂಪಿಸಲು ಇನ್ನೂ 25 ವರ್ಷಗಳು ಬೇಕಾಗುತ್ತಿತ್ತು ಎಂದು ಡಾ. ಅಂಬೇಡ್ಕರ್ ಒಮ್ಮೆ ಭಂಡಾರ್ಕರ್ ಸಂಸ್ಥೆಯಲ್ಲಿ ಹೇಳಿದ್ದರು ಎಂದು ತಿಳಿಸಿದರು.

ಸಂವಿಧಾನದ ಕರಡು ರಚನೆಯಲ್ಲಿ ಸಮಿತಿಯಲ್ಲಿದ್ದ ಏಳು ಸದಸ್ಯರಲ್ಲಿ ಮೂವರು - ಅಲ್ಲಾಡಿ ಕೃಷ್ಣಸ್ವಾಮಿ ಅಯ್ಯಂಗಾರ್, ಎನ್. ಗೋಪಾಲಸ್ವಾಮಿ ಅಯ್ಯಂಗಾರ್ ಮತ್ತು ಬಿ. ಎನ್. ರಾವ್ - ಬ್ರಾಹ್ಮಣರಾಗಿದ್ದರು ಎಂದು ತಿಳಿಸುವ ಮೂಲಕ ರಾಷ್ಟ್ರದ ಕಾನೂನು ಚೌಕಟ್ಟನ್ನು ರೂಪಿಸುವಲ್ಲಿ ಅವರ ಪಾತ್ರವನ್ನು ಒತ್ತಿ ಹೇಳಿದರು.

ಬ್ರಾಹ್ಮಣ ಪದವನ್ನು ಜಾತಿಗಿಂತ "ವರ್ಣ" ದೊಂದಿಗೆ ಸಂಯೋಜಿಸಬೇಕು ಎಂದು ಹೇಳಿದರು. ಆ ಮೂಲಕ ಬ್ರಾಹ್ಮಣ್ಯರ ಕುರಿತು ತನ್ನ ನಿಲುವನ್ನು ಸಮರ್ಥಿಸಿಕೊಂಡರು.

ವೇದಗಳನ್ನು ವರ್ಗೀಕರಿಸಿದ ವೇದವ್ಯಾಸ ಮೀನುಗಾರ ಮಹಿಳೆಯ ಮಗ ಆಗಿದ್ದರು. ರಾಮಾಯಣದ ಕರ್ತೃ ವಾಲ್ಮೀಕಿ ಪರಿಶಿಷ್ಟ ಜಾತಿ ಅಥವಾ ಪರಿಶಿಷ್ಟ ಪಂಗಡಕ್ಕೆ ಸೇರಿದವರು ಎಂದ ಮಾತ್ರಕ್ಕೆ "ನಾವು (ಬ್ರಾಹ್ಮಣರು) ಅವರನ್ನು ಕೀಳಾಗಿ ನೋಡಿದ್ದೇವೆಯೇ? ಶತಮಾನಗಳಿಂದ ಶ್ರೀರಾಮನನ್ನು ಪೂಜಿಸುತ್ತಿದ್ದೇವೆ ಮತ್ತು ಅವರ ಮೌಲ್ಯಗಳನ್ನು ಸಂವಿಧಾನದಲ್ಲಿ ಸೇರಿಸಲಾಗಿದೆ ಎಂದು ಅವರು ಹೇಳಿದರು.

ಬ್ರಾಹ್ಮಣೇತರ ರಾಷ್ಟ್ರೀಯತಾವಾದಿ ಹೋರಾಟಗಳಲ್ಲಿ ತಮ್ಮ ಹಿಂದಿನ ಸಂಬಂಧವನ್ನು ಉಲ್ಲೇಖಿಸಿದ ಅವರು, ನ್ಯಾಯಾಧೀಶರಾದ ನಂತರ ಇತರ ಎಲ್ಲಾ ಚಟುವಟಿಕೆಗಳಿಂದ ದೂರವಿದ್ದು, ನ್ಯಾಯಾಂಗ ಸ್ಥಾನದ ಇತಿಮಿತಿಗಳಲ್ಲಿ ಮಾತನಾಡುತ್ತಿದ್ದಾಗಿ ತಿಳಿಸಿದರು.

ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ನ್ಯಾಯಮೂರ್ತಿ ವಿ. ಶ್ರೀಶಾನಂದ ಅವರು, ಜನರು ಆಹಾರ ಅಥವಾ ಶಿಕ್ಷಣಕ್ಕಾಗಿ ಹೆಣಗಾಡುತ್ತಿರುವಾಗ ಇಂತಹ ದೊಡ್ಡ ಕಾರ್ಯಕ್ರಮಗಳು ಏಕೆ ಬೇಕು ಎಂದು ಹಲವರು ಕೇಳುತ್ತಾರೆ. ಆದರೆ ಸಮುದಾಯವನ್ನು ಒಟ್ಟುಗೂಡಿಸಲು ಮತ್ತು ಅದರ ಸಮಸ್ಯೆಗಳನ್ನು ಚರ್ಚಿಸಲು ಈ ಸಮಾವೇಶಗಳು ಅತ್ಯಗತ್ಯ. ಅಂತಹ ಕಾರ್ಯಕ್ರಮಗಳನ್ನು ಏಕೆ ನಡೆಸಬಾರದು?" ಎಂದು ಪ್ರಶ್ನಿಸಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

'ಸದನದಲ್ಲಿ ಹುಲಿ, ಹೈಕಮಾಂಡ್‌ ಮುಂದೆ ಇಲಿ'.. 'ಅಧಿಕಾರದಲ್ಲಿ ಉಳಿಯಲು DK Shivakumar ಕ್ಷಮೆಯಾಚನೆ': BJP-JDS ಟೀಕಾ ಪ್ರಹಾರ!

RSS ಅನ್ನು ಯಾರೂ "ಸಮರ್ಥಿಸಿಕೊಳ್ಳಬಾರದು": ಡಿಕೆಶಿ ಕ್ಷಮೆಯಾಚನೆ ಸ್ವಾಗತಿಸಿದ ಬಿ.ಕೆ ಹರಿಪ್ರಸಾದ್

'ನನ್ನ ಕುರ್ಚಿ'ಗೆ ಪ್ರಧಾನಿ ಮೋದಿ ಗೌರವ ನೀಡಬೇಕು: ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಕಿಡಿ!

Indian Navy ಗೆ ಮತ್ತಷ್ಟು ಬಲ: INS Udaygiri, INS Himgiri ಯುದ್ಧನೌಕೆಗಳು ಸೇರ್ಪಡೆ! Video

Idre Nemdiyaag Irbek: ಯೂ ಟ್ಯೂಬ್ ನಲ್ಲಿ ಧೂಳೆಬ್ಬಿಸುತ್ತಿರುವಂತೆ ವಿವಾದಕ್ಕೆ ಗುರಿಯಾದ Devil ಸಾಂಗ್! ಟ್ಯೂನ್ ಕದ್ದ ಆರೋಪ!

SCROLL FOR NEXT