ಬಸವರಾಜ್ ಶರಣಪ್ಪ ಜಿಳ್ಳೆ, ಹಂಜಾ ಹುಸೇನ್, ರೇಣುಕಾ ಕೆ ಸುಕುಮಾರ 
ರಾಜ್ಯ

ಗಣರಾಜ್ಯೋತ್ಸವ: ಬಸವರಾಜ್ ಶರಣಪ್ಪ ಜಿಳ್ಳೆ ಸೇರಿ ರಾಜ್ಯದ 21 ಪೋಲೀಸ್ ಅಧಿಕಾರಿಗಳಿಗೆ ರಾಷ್ಟ್ರಪತಿ ಪದಕ

ಶುಕ್ರವಾರ 76ನೇ ಗಣರಾಜ್ಯೋತ್ಸವ ಸಮಾರಂಭ ನಡೆಯಲಿದ್ದು, ಪದಕ ಪ್ರದಾನ ಮಾಡಲಾಗುತ್ತದೆ.

ನವದೆಹಲಿ: 2025ರ ಗಣರಾಜ್ಯೋತ್ಸವ ದಿನಾಚರಣೆ ಪ್ರಯುಕ್ತ ರಾಷ್ಟ್ರಪತಿ ಪದಕ ಘೋಷಣೆ ಮಾಡಲಾಗಿದ್ದು, ಕರ್ನಾಟಕದ 21 ಪೊಲೀಸ್ ಅಧಿಕಾರಿಗಳು ರಾಷ್ಟ್ರಪತಿ ಪದಕಕ್ಕೆ ಭಾಜನರಾಗಿದ್ದಾರೆ.

ಶುಕ್ರವಾರ 76ನೇ ಗಣರಾಜ್ಯೋತ್ಸವ ಸಮಾರಂಭ ನಡೆಯಲಿದ್ದು, ಪದಕ ಪ್ರದಾನ ಮಾಡಲಾಗುತ್ತದೆ. ವಿಶಿಷ್ಟ ಸೇವೆಗಾಗಿ KSRP DIGP ಬಸವರಾಜ್ ಶರಣಪ್ಪ ಜಿಳ್ಳೆ, ಮತ್ತು ಕೆಎಸ್ ಆರ್ ಪಿ ತುಮಕೂರಿನ ಕಮಾಂಡೆಂಟ್ ಹಂಜಾ ಹುಸೇನ್ ಅವರಿಗೆ ರಾಷ್ಟ್ರಪತಿ ಪದಕ ಘೋಷಣೆಯಾಗಿದೆ.

ಬೆಂಗಳೂರಿನ DCRI DIGP ರೇಣುಕಾ ಕೆ ಸುಕುಮಾರ, ಪೊಲೀಸ್ ಪ್ರಧಾನ ಕಚೇರಿಯ ಎಐಜಿಪಿ ಸಂಜೀವ ಎಂ. ಪಾಟೀಲ್ ಅವರ ಗಮನಾರ್ಹ ಸೇವೆ ಗುರುತಿಸಿ ರಾಷ್ಟ್ರಪತಿ ಪದಕ ಘೋಷಣೆ ಮಾಡಲಾಗಿದೆ.

ಕೊಪ್ಪಳದ ಮುನಿರಾಬದ್ ನ IRI ಕಮಾಂಡೆಂಟ್ ಬಿ.ಎಂ.ಪ್ರಸಾದ್, ಕೆಎಸ್ ಆರ್ ಪಿ ಹಾಸನ ಡೆಪ್ಯೂಟಿ ಕಮಾಂಡೆಂಟ್ ವೀರೇಂದ್ರ ನಾಯಕ್, ಬೆಂಗಳೂರು ಸಿಸಿಬಿ ಗೋಪಾಲ ಡಿ ಜೋಗಿನ, ಚಿಕ್ಕೋಡಿ ಉಪವಿಭಾಗದ ಡಿವೈಎಸ್ ಪಿ ಗೋಪಾಲಕೃಷ್ಣ ಬಿ ಗೌಡರ್, ಚಿತ್ರದುರ್ಗದ ಲೋಕಾಯುಕ್ತ ಪೊಲೀಸ್ ಇನ್ಸ್ ಪೆಕ್ಟರ್ ಹೆಚ್. ಗುರು ಬಸವರಾಜ, ಬೆಂಗಳೂರಿನ ಪೊಲೀಸ್ ಇನ್ಸ್ ಪೆಕ್ಟರ್ ಹೆಚ್. ಜಯರಾಜ್, ಹಾಸನದ ಸರ್ಕಲ್ ಇನ್ಸ್ ಪೆಕ್ಟರ್ ಪ್ರದೀಪ್, ಬೆಂಗಳೂರು ನಗರ ಸಿಸಿಪಿ ಪೊಲೀಸ್ ಇನ್ಸ್ ಪೆಕ್ಟರ್ ಮೊಹಮ್ಮದ್ ಮುಕರಮ್, ಬ್ಯೂರ್ ಆಫ್ ಇಮಿಗ್ ರೇಷನ್ ಪೊಲೀಸ್ ಇನ್ಸ್ ಪೆಕ್ಟರ್ ಎಂ.ಎ. ವಸಂತ್ ಕುಮಾರ್, ಸಿಐಡಿ ಎಎಸ್ ಐ ಮಂಜುನಾಥ ಅವರು ಶ್ಲಾಘನೀಯ ಸೇವಾ ಪದಕ ಪುರಸ್ಕೃತರಾಗಿದ್ದಾರೆ.

ಬೆಂಗಳೂರಿನ ವಿಲ್ಸನ್ ಗಾರ್ಡನ್ ಎಎಸ್ ಐ ಅಲ್ತಾಪ್ ಹುಸೇನ್, ಕೆ.ಎಸ್. ಆರ್.ಪಿ ಬಲೇಂದ್ರನ್, ಕಲಬುರಗಿ ಡಿಐಜಿಪಿ ಅರುಣ ಕುಮಾರ, ಚಿಕ್ಕಮಗಳೂರಿನ ನಯಾಜ್ ಅಂಜುಮ್, ಡಿಸಿಪಿ ಶ್ರೀನಿವಾಸ, ರಾಜ್ಯ ಗುಪ್ತವಾರ್ತೆಯ ಅಶ್ರಪ್, ಕುಂದಾಪುರ ಠಾಣೆಯ ಸಿಹೆಚ್ ಸಿ ಬಿ. ಶಿವಾನಂದ ಅವರು ರಾಷ್ಟ್ರಪತಿ ಪದಕಕ್ಕೆ ಭಾಜನರಾಗಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT