ಸಾಂದರ್ಭಿಕ ಚಿತ್ರ 
ರಾಜ್ಯ

ಬೆಳಗಾವಿ: ಗಣಿ ಉದ್ಯಮಿಗಳಾದ ದೊಡ್ಡಣ್ಣವರ್ ಬ್ರದರ್ಸ್ ಮನೆ, ಕಚೇರಿ ಮೇಲೆ ಐಟಿ ದಾಳಿ

ದೊಡ್ಡಣ್ಣವರ್ ಬ್ರದರ್ಸ್​ ಗಣಿ, ಸಕ್ಕರೆ ಕಾರ್ಖಾನೆ ಮಾಲೀಕರಾಗಿದ್ದಾರೆ. ಗೋವಾದಿಂದ ಆಗಮಿಸಿರುವ ಐಟಿ ಅಧಿಕಾರಿಗಳು ಒಟ್ಟು 5 ತಂಡಗಳಾಗಿ ಸೋಮವಾರ ಮಧ್ಯರಾತ್ರಿ ಮೂರು ಕಡೆಗಳಲ್ಲಿ ಏಕಕಾಲಕ್ಕೆ ದಾಳಿ ಮಾಡಿದ್ದಾರೆ.

ಬೆಳಗಾವಿ : ಬೆಳಗಾವಿಯ ಖ್ಯಾತ ಉದ್ಯಮಿಗಳಾದ ವಿನೋದ್ ದೊಡ್ಡಣ್ಣವರ್, ಪುರುಷೋತ್ತಮ ದೊಡ್ಡಣ್ಣವರ್ ಒಡೆತನದ ಕಂಪನಿಗಳ ಮೇಲೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ಮಾಡಿದ್ದಾರೆ.

ದೊಡ್ಡಣ್ಣವರ್ ಬ್ರದರ್ಸ್​ ಗಣಿ, ಸಕ್ಕರೆ ಕಾರ್ಖಾನೆ ಮಾಲೀಕರಾಗಿದ್ದಾರೆ. ಗೋವಾದಿಂದ ಆಗಮಿಸಿರುವ ಐಟಿ ಅಧಿಕಾರಿಗಳು ಒಟ್ಟು 5 ತಂಡಗಳಾಗಿ ಸೋಮವಾರ ಮಧ್ಯರಾತ್ರಿ ಮೂರು ಕಡೆಗಳಲ್ಲಿ ಏಕಕಾಲಕ್ಕೆ ದಾಳಿ ಮಾಡಿದ್ದಾರೆ. ಐಟಿ ಅಧಿಕಾರಿಗಳು ಅಧಿಕಾರಿಗಳು ದಾಖಲೆ ಪರಿಶೀಲನೆ ನಡೆಸುತ್ತಿದ್ದಾರೆ. ಕಚೇರಿಗೆ ದೊಡ್ಡಣ್ಣವರ್ ಕುಟುಂಬಸ್ಥರನ್ನು ಕರೆಸಿಕೊಂಡು ವಿಚಾರಣೆ ನಡೆಸುತ್ತಿದ್ದಾರೆ.

ಉದ್ಯಮಿಗಳಾದ ವಿನೋದ್ ದೊಡ್ಡಣ್ಣವರ, ಪುಷ್ಪದಂತ ದೊಡ್ಡಣ್ಣವರ ಮನೆ, ಕಚೇರಿ ಮೇಲೆ, ಬೆಳಗಾವಿಯ ಕ್ಯಾಂಪ್ ಪ್ರದೇಶದಲ್ಲಿರುವ ಉದ್ಯಮಿ ಅಜಿತ್ ಪಟೇಲ, ಗಣೇಶ ಪುರದಲ್ಲಿರುವ ಅಶೋಕ ಐರಾನ್ ಕಂಪನಿ ಮಾಲೀಕ ಅಶೋಕ ಹುಂಬರವಾಡಿ ಮನೆ ಮೇಲೂ ದಾಳಿ ನಡೆದಿದೆ.

ದೊಡ್ಡಣ್ಣವರ ಕುಟುಂಬದವರು ಎರಡು ಸಕ್ಕರೆ ಕಾರ್ಖಾನೆ, ಐರನ್ ಹಾಗೂ ಗ್ರೈನೆಟ್ ಉದ್ಯಮದಲ್ಲಿ ದೊಡ್ಡ ಹೆಸರು ಮಾಡಿದ್ದಾರೆ‌. ಅವರ ಉತ್ಪನ್ನಗಳು ವಿದೇಶಗಳಿಗೂ ರಪ್ತಾಗುತ್ತವೆ. ಬೆಳಿಗ್ಗೆಯಿಂದಲೇ ಅಧಿಕಾರಿಗಳ ತಂಡ ದಾಖಲೆಗಳು, ಆಸ್ತಿಪಾಸ್ತಿ ಪರಿಶೀಲನೆ‌ ಶುರು ಮಾಡಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಜ್ಞಾನೇಶ್ ಕುಮಾರ್ ನೆರವಿನಿಂದ ದೇಶವನ್ನು 'ಹೈಜಾಕ್' ಮಾಡಿದ ಮೋದಿ, ಶಾ, ಭಾಗವತ್‌ರನ್ನು ಸುಮ್ಮನೆ ಬಿಡಲ್ಲ; ರಾಹುಲ್ ಗಾಂಧಿ ಗುಡುಗು!

'ನಾವು ಒಂದೂವರೆ ವರ್ಷ ಪ್ರೀತಿಸುತ್ತಿದ್ದೆವು': ಲಂಡನ್ ಲವ್​ ಕಹಾನಿ ನೆನೆದು ಭಾವುಕರಾದ CM ವಿಜಯ್​ ಪುತ್ರ ಜೇಸನ್!

SIR ವಿವಾದ: 'ಶಾಸಕ ಯತ್ನಾಳ್ ಬಣ್ಣ ಬಯಲು'; ವಿಜಯಪುರದಲ್ಲಿ ಬದುಕಿರುವ 8 ಮುಸ್ಲಿಂ ಮತದಾರರು 'ಸತ್ತಿದ್ದಾರೆ' ಎಂದು ಅರ್ಜಿ!

ಪಶ್ಚಿಮ ಬಂಗಾಳ ಉಪ ಚುನಾವಣೆ: ಪೊಲೀಸರೊಂದಿಗೆ ಮಾತಿನ ಚಕಮಕಿ: ಶಾಸಕ ಹುಮಾಯೂನ್ ಕಬೀರ್ ಬಂಧನ

ಹೆದ್ದಾರಿಗಳಲ್ಲಿ ನಿಲ್ಲಿಸಿರುವ ವಾಹನಗಳ ಎಲೆಕ್ಟ್ರಾನಿಕ್ ಟ್ರ್ಯಾಕಿಂಗ್ ಸಾಧ್ಯವಾಗುತ್ತಿಲ್ಲವೇಕೆ- NHAI ಗೆ ಸುಪ್ರೀಂ ಕೋರ್ಟ್